ಮೊಡವೆ ಮುಕ್ತ ತ್ವಚೆಗಾಗಿ ಸರಳ ಪರಿಹಾರಗಳು

Posted By:
Subscribe to Boldsky

ಮೊಡವೆ ಇರುವ ತ್ವಚೆ ನಮ್ಮಲ್ಲಿ ಕೀಳರಿಮೆಯನ್ನು ಉಂಟುಮಾಡುತ್ತದೆ. ಇದರಿಂದ ಮುಕ್ತಿ ಪಡೆಯಲು ನಾವು ಹಲವಾರು ವೈದ್ಯರನ್ನು ಕಾಣುತ್ತೇವೆ, ಹಲವಾರು ಆರೈಕೆಗಳನ್ನು ಮಾಡುತ್ತೇವೆ. ಎಷ್ಟೇ ಪ್ರಯತ್ನಪಟ್ಟರೂ ಫಲ ಮಾತ್ರ ಶೂನ್ಯವಾಗಿರುತ್ತದೆ.

ಬೇಸಿಗೆಯಲ್ಲಿ ಮೊಡವೆ ಸಮಸ್ಯೆ ಹೆಚ್ಚಾಗಿರುತ್ತದೆ. ಮೊಡವೆ ಅನೇಕ ಕಾರಣಗಳಿಂದ ಬರುತ್ತದೆ, ಹಾರ್ಮೋನ್‌ಗಳಲ್ಲಿ ವ್ಯತ್ಯಾಸವಾದಾಗ, ಕ್ರೀಮ್ ನಮ್ಮ ತ್ವಚೆಗೆ ಹೊಂದದಿದ್ದರೆ, ದೂಳು, ಆಹಾರ ಇವುಗಳಿಂದ ಮೊಡವೆ ಉಂಟಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಪುರುಷರಿಗೆ ಸಲಹೆಗಳು

ಮೊಡವೆಯ ಸಮಸ್ಯೆಯನ್ನು ತಡೆಯಲು ನಾವು ದುಬಾರಿ ಕಾಸ್ಮೆಟಿಕ್ ಅಥವಾ ರಾಸಾಯನಿಕ ಚಿಕಿತ್ಸೆಕ್ಕೆ ಮೊರೆ ಹೋಗುವುದು ಸಾಮಾನ್ಯವಾಗಿದೆ ಇದು ಅನಿವಾರ್ಯವಲ್ಲ. ಮನೆಮದ್ದು ಕೂಡ ಮೊಡವೆಗೆ ಪರಿಹಾರ ಒದಗಿಸಬಲ್ಲದು. ನಿಮ್ಮ ತ್ವಚೆ ಕೂಡ ಉಸಿರಾಡುತ್ತದೆ ಮತ್ತು ಅದಕ್ಕೂ ಜೀವವಿದೆ.

ತ್ವಚೆಯನ್ನು ತುಂಬಾ ಎಚ್ಚರಿಕೆಯಿಂದ ಆರೈಕೆ ಮಾಡಿ. ಈ ಸಮಸ್ಯೆಯನ್ನು ಹೋಗಲಾಡಿಸಲು ಕೆಲವೊಂದು ಪರಿಹಾರಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ. ಅವುಗಳು ನಿಮ್ಮ ತ್ವಚೆಯ ಮೊಡವೆ ಸಮಸ್ಯೆಯನ್ನು ನಿವಾರಿಸಿ ಉತ್ತಮ ಪರಿಹಾರವನ್ನು ನಿಮಗೆ ನೀಡುತ್ತವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸುಕ್ಕು ರಹಿತ ಚರ್ಮಕ್ಕಾಗಿ ಸೆಲ್ಫಿಲ್ ಪ್ಲಾಸ್ಮಾ ಫೇಸ್‍ಲಿಫ್ಟ್

ನಿಮ್ಮ ಮೇಕಪ್ ಅನ್ನು ತೆಗೆಯಿರಿ:

ನಿಮ್ಮ ಮೇಕಪ್ ಅನ್ನು ತೆಗೆಯಿರಿ:

ತಾವು ಅಂದವಾಗಿ ಕಾಣಬೇಕೆಂದು ಹೆಚ್ಚಿನ ಮಹಿಳೆಯರು ಮೇಕಪ್‌ನ ಮೊರೆ ಹೋಗುತ್ತಾರೆ. ಮೇಕಪ್ ಅನ್ನು ಮುಖದಿಂದ ಸರಿಯಾಗಿ ತೆಗೆಯದಿದ್ದರೆ ಮೊಡವೆ ತ್ವಚೆ ನಿಮ್ಮದಾಗುತ್ತದೆ. ನೀವು ಮಲಗುವ ಮುನ್ನ ಯಾವಾಗಲೂ ಮೇಕಪ್ ಅನ್ನು ತೆಗೆಯಿರಿ.

ದಯವಿಟ್ಟು ಧೂಮಪಾನ ತ್ಯಜಿಸಿ:

ದಯವಿಟ್ಟು ಧೂಮಪಾನ ತ್ಯಜಿಸಿ:

ಮೊಡವೆಗಳಿಂದ ಮುಕ್ತಿ ನಿಮಗೆ ಸಿಗಬೇಕೆಂದರೆ ನೀವು ಧೂಮಪಾನವನ್ನು ತ್ಯಜಿಸಲೇಬೇಕು. ಧೂಮಪಾನ ಕೂಡ ಮೊಡವೆ ಸಮಸ್ಯೆಯನ್ನು ತಂದೊಡ್ಡುತ್ತವೆ.

ಸ್ವಚ್ಛ ನೀರಿನಿಂದ ಮುಖ ತೊಳೆಯಿರಿ:

ಸ್ವಚ್ಛ ನೀರಿನಿಂದ ಮುಖ ತೊಳೆಯಿರಿ:

ಆಗಾಗ್ಗೆ ಮುಖವನ್ನು ತೊಳೆದುಕೊಳ್ಳುವುದೂ ಕೂಡ ಮೊಡವೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಸ್ವಚ್ಛ ಎಣ್ಣೆ ಪಸೆ ಇಲ್ಲದ ಮುಖ ನೀವು ಪಡೆಯಬೇಕೆಂದರೆ ಮುಖದ ಸ್ವಚ್ಛತೆ ಅತೀ ಆವಶ್ಯಕ.

ಎಣ್ಣೆ ಅಂಶಗಳಿರುವ ಆಹಾರವನ್ನು ದೂರವಿರಿಸಿ:

ಎಣ್ಣೆ ಅಂಶಗಳಿರುವ ಆಹಾರವನ್ನು ದೂರವಿರಿಸಿ:

ಎಣ್ಣೆ ಅಂಶಗಳಿರುವ ಆಹಾರವನ್ನು ನಿಮ್ಮಿಂದ ದೂರವಿರಿಸುವುದು ಮೊಡವೆ ತ್ವಚೆಯಿಂದ ನಿಮಗೆ ಮುಕ್ತಿ ನೀಡುತ್ತದೆ.

ನೈಸರ್ಗಿಕ ಫೇಶಿಯಲ್:

ನೈಸರ್ಗಿಕ ಫೇಶಿಯಲ್:

ರಾಸಾಯನಿಕ ಫೇಶಿಯಲ್‌ಗಳನ್ನು ಮುಖದ ಅಂದಕ್ಕಾಗಿ ಮಾಡಿಕೊಳ್ಳುವುದರಿಂದ ತಾಜಾ ತರಕಾರಿ ಹಾಗೂ ಹಣ್ಣುಗಳ ಫೇಸ್ ಪ್ಯಾಕ್ ,ಫೇಶಿಯಲ್ ನಿಮ್ಮದಾಗಿಸಿಕೊಳ್ಳಿ.

WHAT OTHERS ARE READING
Story first published: Wednesday, January 29, 2014, 14:02 [IST]
English summary

Home remedies for acne

Home remedies for acne work against this process and attempt to mitigate the potential for clogged pores to happen in the first place. Some natural ingredients have antibacterial properties that help reduce bacteria count while others have properties to reduce swelling.
Please Wait while comments are loading...
Subscribe Newsletter