For Quick Alerts
ALLOW NOTIFICATIONS  
For Daily Alerts

10 ದಿನಗಳಲ್ಲಿ ಸುಂದರ ತ್ವಚೆ ಪಡೆಯಿರಿ!

|

ಬಿಳುಪುಳ್ಳ ಮತ್ತು ಸುಂದರ ತ್ವಚೆ ಪಡೆಯುವುದು ಎಲ್ಲಾ ಹೆಂಗಳೆಯರ ಬಯಕೆಯಾಗಿರುತ್ತದೆ. ಆದರೂ ಕೆಲವು ಮಹಿಳೆಯರಲ್ಲಿ, ಮೊಡವೆ, ಕಪ್ಪು ವರ್ತುಲಗಳು ತಲೆನೋವಾಗಿ ಇದ್ದೇ ಇರುತ್ತವೆ. ಇಂತಹ ಕೆಲವೊಂದು ತ್ವಚೆಯ ಸಮಸ್ಯೆಗಳು ಮುಖದಲ್ಲಿ ಭಯ ಹಾಗೂ ಬೇಸರವನ್ನು ಹಾಗೆಯೇ ಉಳಿಸುತ್ತವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮೊಡವೆ ಮುಕ್ತ ತ್ವಚೆಗಾಗಿ ಸರಳ ಪರಿಹಾರಗಳು
/beauty/skin-care/2014/home-remedies-acne-006917.html

ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ನಾವು ಹಲವಾರು ಕ್ರೀಂಗಳು, ಲೇಪನಗಳು ಆರ್ಯರ್ವೇದಿಕ್ ಔಷಧಗಳ ಮೊರೆಹೋಗುತ್ತೇವೆ ಆದರೆ ಪರಿಣಾಮ ನಮಗೆ ತೃಪ್ತಿ ನೀಡುವುದಿಲ್ಲ. ಚಿಂತಿಸದಿರಿ ನಾವಿಂದು ನಿಮಗಾಗಿ ನೀಡುತ್ತಿರುವ ಈ ಲೇಖನವು ಕೇವಲ ಹತ್ತು ದಿನಗಳಲ್ಲಿ ನೈಸರ್ಗಿಕ ಔಷಧದ ಚಮತ್ಕಾರದಿಂದ ನಿಮ್ಮ ತ್ವಚೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ಸುಂದರ ತ್ವಚೆ ಹಾಗೂ ಕಲೆಗಳಿಲ್ಲದ ಹೊಳೆಯುವ ಮುಖ ಸೌಂದರ್ಯ ನಿಮ್ಮದಾಗಬೇಕಿದ್ದರೆ ಈ ವಿಧಾನಗಳನ್ನು ನೀವು ಅನುಸರಿಸಲೇಬೇಕು. ನೀವು ಕೆಲವೊಂದು ಮೂಲ ಸಲಹೆಗಳನ್ನು ಪಾಲಿಸುತ್ತಾ ಬಂದರೆ ಸಾಕು ಕೆಲವೇ ಕೆಲವು ದಿನಗಳಲ್ಲಿ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಪುರುಷರಿಗೆ ಸಲಹೆಗಳು

1.ನಿಮ್ಮ ಮುಖವನ್ನು ತೊಳೆದುಕೊಳ್ಳಿ:

1.ನಿಮ್ಮ ಮುಖವನ್ನು ತೊಳೆದುಕೊಳ್ಳಿ:

ಸುಂದರ ಹೊಳೆಯುವ ಸ್ವಚ್ಛ ಮುಖಕ್ಕಾಗಿ ಇದೊಂದು ಸರಳ ವಿಧಾನವಾಗಿದೆ. ನಿಮ್ಮ ಮುಖವನ್ನು ಆಗಾಗ್ಗೆ ನೀರಿನಿಂದ ತೊಳೆದುಕೊಳ್ಳುವುದು ಕೊಳೆ, ವಾತಾವರಣದ ಮಾಲಿನ್ಯ ಮತ್ತು ಬ್ಯಾಕ್ಟೀರಿಯಾದಿಂದ ಚರ್ಮವನ್ನು ರಕ್ಷಿಸುತ್ತದೆ. ಮತ್ತು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ.

2.ಸಕ್ಕರೆ ಮತ್ತು ಲಿಂಬೆ:

2.ಸಕ್ಕರೆ ಮತ್ತು ಲಿಂಬೆ:

ಹತ್ತು ದಿನಗಳಲ್ಲಿ ಸುಂದರ ಮುಖ ಸೌಂದರ್ಯವನ್ನು ಪಡೆಯುವಲ್ಲಿ ಈ ವಿಧಾನ ಸಹಕಾರಿಯಾಗಿದೆ. ಲಿಂಬೆಯು ಒಂದು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿದ್ದು ಸಕ್ಕರೆ ನೈಸರ್ಗಿಕ ಎಕ್ಸೋಫೋಲಿಯೇಟ್ ಆಗಿದೆ. ಸ್ನಾನಕ್ಕಿಂತ ಮುಂಚೆ ಇವೆರಡನ್ನೂ ಮುಖಕ್ಕೆ ಮಿಶ್ರ ಮಾಡಿಕೊಂಡು ಉಜ್ಜುವುದರಿಂದ ಫಲ ಖಂಡಿತ ನಿಮ್ಮದಾಗುತ್ತದೆ.

3.ಎಕ್ಸೋಫೋಲಿಯೇಟ್ :

3.ಎಕ್ಸೋಫೋಲಿಯೇಟ್ :

ವಾರಕ್ಕೆ ಮೂರು ಬಾರಿಯಾದರೂ ನಿಮ್ಮ ಮುಖವನ್ನು ಎಕ್ಸೋಫೋಲಿಯೇಟ್ ಮಾಡುವುದು ಸುಂದರ ತ್ವಚೆಯನ್ನು 10 ದಿನಗಳಲ್ಲಿ ಪಡೆದುಕೊಳ್ಳುವಲ್ಲಿ ಸಹಕಾರಿಯಾಗಿದೆ. ನಿಮ್ಮ ಮುಖವನ್ನು ವಾರದಲ್ಲಿ ಹಲವಾರು ಬಾರಿ ಎಕ್ಸೋಫೋಲಿಯೇಟ್ ಮಾಡುವುದು ತ್ವಚೆಯನ್ನು ಸ್ವಚ್ಛಗೊಳಿಸುತ್ತದೆ. ಮೃತ ಚರ್ಮ ಕೋಶಗಳನ್ನು ತೊಡೆದು ಸ್ವಚ್ಛವಾದ ಶುಭ್ರ ಕಾಂತಿಯುಕ್ತ ತ್ವಚೆ ನಿಮ್ಮದಾಗುತ್ತದೆ.

4.ಹಾಲಿನೊಂದಿಗೆ ಸ್ವಚ್ಛ ಮಾಡುವುದು:

4.ಹಾಲಿನೊಂದಿಗೆ ಸ್ವಚ್ಛ ಮಾಡುವುದು:

ಇದೊಂದು ಚಾಲ್ತಿಯಲ್ಲಿರುವ ವಿಧಾನವಾಗಿದೆ. ಪ್ರತಿಯೊಬ್ಬರೂ ಸುಂದರ ತ್ವಚೆಯನ್ನು ಪಡೆಯಲು ಈ ವಿಧಾನವನ್ನು ಅನುಸರಿಸುತ್ತಿದ್ದು ಮುಖವನ್ನು ಹಾಲಿನಿಂದ ತೊಳೆದುಕೊಳ್ಳುವುದು ಮುಖದ ಕಾಂತಿಯನ್ನು ಮರಳಿಸುತ್ತದೆ. ಕಪ್ಪು ಕಲೆಗಳು, ಕಪ್ಪು ವರ್ತುಲಗಳು, ಮತ್ತು ಸನ್ ಟ್ಯಾನ್ ಅನ್ನು ಕಡಿಮೆ ಮಾಡುತ್ತದೆ.

5.ಸ್ಟೀಮಿಂಗ್:

5.ಸ್ಟೀಮಿಂಗ್:

ತ್ವಚೆಯ ರಂಧ್ರಗಳನ್ನು ಸ್ಟೀಮಿಂಗ್ ಪ್ರಕ್ರಿಯೆ ತೆರೆಯುವುದರಿಂದ ಶುಭ್ರ ತ್ವಚೆಯನ್ನು ಪಡೆಯಲು ಇದೊಂದು ಒಳ್ಳೆಯ ವಿಧಾನವಾಗಿದೆ. ನಿಮಗೆ ಸ್ಟೀಮ್ ಪಡೆದುಕೊಳ್ಳಲು ಸಮಯ ಇಲ್ಲವಾದಲ್ಲಿ ಸ್ವಚ್ಛ ಟವೆಲ್ ಒಂದನ್ನು ಬಿಸಿ ನೀರಿನಲ್ಲಿ ಅದ್ದಿ ನೀರನ್ನು ಹಿಂಡಿ ತೆಗೆದು ನಿಮ್ಮ ಮುಖಕ್ಕೆ ಕವರ್ ಮಾಡಿ. 10-15 ನಿಮಿಷದ ನಂತರ ಟವೆಲ್ ಅನ್ನು ಮುಖದಿಂದ ತೆಗೆಯಿರಿ.

6.ಫೇಸ್‌ಪ್ಯಾಕ್ಸ್:

6.ಫೇಸ್‌ಪ್ಯಾಕ್ಸ್:

ಕೆಲವೊಂದು ಚರ್ಮದ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಫಲಪ್ರದವಾಗಿರುವ ನಿರ್ದಿಷ್ಟ ಫೇಸ್‌ಪ್ಯಾಕ್‌ಗಳನ್ನು ನಿಮಗೆ ಬಳಸಬಹುದು. ಉದಾಹರಣೆಗೆ ಬೆರ್ರಿ, ಟೊಮೇಟೊ, ಲಿಂಬೆ ಮತ್ತು ಗ್ರೇಪ್‌ಫ್ರುಟ್ ಇವುಗಳನ್ನು ಹಲವಾರು ತ್ವಚೆಯ ಸಮಸ್ಯೆಗಳಾದ ಮೊಡವೆ, ಕಲೆಗಳು ಮತ್ತು ಸನ್ ಟ್ಯಾನ್ ಅನ್ನು ಹೋಗಲಾಡಿಸಲು ಬಳಸಲಾಗುತ್ತದೆ.

7.ಮೇಕಪ್ ತೆಗೆಯಿರಿ:

7.ಮೇಕಪ್ ತೆಗೆಯಿರಿ:

ಮನೆಗೆ ಬರುವಾಗ ನೀವು ತುಂಬಾ ಆಯಾಸಗೊಂಡಿಗಿದ್ದರೆ, ನಿದ್ದೆ ಬರುತ್ತಿದ್ದರೆ ನೀವು ಮೇಕಪ್ ಅನ್ನು ತೊಡೆದುಹಾಕಲೇ ಬೇಕು. ತಾಜಾ ಮೇಕಪ್ ಮತ್ತು ಸ್ವಚ್ಛ ಬ್ರಶ್‌ಗಳನ್ನು ಬಳಸಿ.

8.ಚಿವುಟಬೇಡಿ:

8.ಚಿವುಟಬೇಡಿ:

ಮೊಡವೆ ಅಥವಾ ಪಿಂಪಲ್ ಮುಖದಲ್ಲಿ ಉಂಟಾದಾಗ ಹೆಚ್ಚಿನ ಜನರು ಅದನ್ನು ಚಿವುಟುತ್ತಾರೆ.ಹೀಗೆ ಮಾಡುವುದು ಮೊಡವೆಯಲ್ಲಿರುವ ಪಸ್ ಅನ್ನು ಹೊರಹಾಕಿ ಮುಖದಲ್ಲಿ ಕಪ್ಪು ಕಲೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಅವುಗಳನ್ನು ಸ್ಪರ್ಶಿಸಬೇಡಿ ಚಿವುಟಬೇಡಿ.

9.ತಪ್ಪು ಸಲಹೆಗಳನ್ನು ಪ್ರಯೋಗಿಸದಿರಿ:

9.ತಪ್ಪು ಸಲಹೆಗಳನ್ನು ಪ್ರಯೋಗಿಸದಿರಿ:

ಮೊಡವೆಯನ್ನು ಚಿವುಟುವುದು ಅಥವಾ ಅದಕ್ಕೆ ಟೂತ್‌ಪೇಸ್ಟ್ ಹಚ್ಚುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ನಾವು ನಂಬುತ್ತೇವೆ. ಈ ರೀತಿಯ ಚರ್ಮದ ಬಗೆಗೆ ತಪ್ಪುಗಳನ್ನು ಅನುಸರಿಸದಿರಿ. ಇವುಗಳು ಖಂಡಿತವಾಗಿಯೂ ನಿಮ್ಮ ಮುಖದ ಸೌಂದರ್ಯವನ್ನು ಹಾಳುಗೆಡವುತ್ತದೆ.

10.ಸಾಕಷ್ಟು ನೀರು ಕುಡಿಯಿರಿ:

10.ಸಾಕಷ್ಟು ನೀರು ಕುಡಿಯಿರಿ:

ಹತ್ತು ದಿನಗಳಲ್ಲಿ ಸುಂದರ ಮುಖಾರವಿಂದವನ್ನು ಹೊಳೆಯುವ ತ್ವಚೆಯನ್ನು ಪಡೆಯಲು ನೀವು ಮಾಡಲೇಬೇಕಾದ ಒಂದು ಕಾರ್ಯವೆಂದರೆ ಸಾಕಷ್ಟು ನೀರು ಕುಡಿಯುವುದಾಗಿದೆ. ದೇಹದಲ್ಲಿನ ವಿಷಕಾರಿ ಅಂಶಗಳು ಮತ್ತು ಹಾನಿಕಾರಕ ಕೆಮಿಕಲ್ಸ್‌ಗಳನ್ನು ನೀರು ಹೊರಹಾಕುತ್ತದೆ.

11.ಒಳ್ಳೆಯ ನಿದ್ರೆ:

11.ಒಳ್ಳೆಯ ನಿದ್ರೆ:

ನಿದ್ರಾಹೀನತೆ ತ್ವಚೆಯ ಮೇಲೆ ದುಷ್ಪರಿಣಾಮವನ್ನು ಬೀರಬಹುದು. ಹತ್ತು ದಿನಗಳಲ್ಲಿ ಸುಂದರ ತ್ವಚೆ ಪಡೆಯಲು ಮತ್ತು ಅದನ್ನು ನಿರ್ವಹಿಸಲು ಸರಿಯಾದ ನಿದ್ದೆ ನಿಮಗೆ ಅತ್ಯವಶ್ಯಕ. ನಿಮ್ಮ ಕೂದಲಿನ ಎಣ್ಣೆಯು ತಲೆದಿಂಬಿಗೆ ಆಗುವುದರಿಂದ ಕನಿಷ್ಟ ಪಕ್ಷ ವಾರದಲ್ಲಿ ಒಂದು ಬಾರಿ ತಲೆದಿಂಬನ್ನು ಬದಲಾಯಿಸಿ. ಈ ದಿಂಬಿನಲ್ಲಿರುವ ಎಣ್ಣೆಯು ನಿಮ್ಮ ಚರ್ಮವನ್ನು ಒಡೆಯುವಂತೆ ಮಾಡುತ್ತದೆ.

12.ಸನ್‌ಸ್ಕ್ರೀನ್ ಬಳಸಿ:

12.ಸನ್‌ಸ್ಕ್ರೀನ್ ಬಳಸಿ:

ಯುವಿ ಕಿರಣಗಳು ಚರ್ಮಕ್ಕೆ ಹಾನಿಯನ್ನುಂಟು ಮಾಡಿ ಕಪ್ಪು ಕಲೆಗಳನ್ನು ಉಳಿಸುತ್ತವೆ. ನಿಮ್ಮ ಚರ್ಮವನ್ನು ಸೂರ್ಯನ ಬಿಸಿಲಿಗೆ ಹೆಚ್ಚು ಪ್ರದರ್ಶಿಸದಿರಿ. ಹೊರಹೋಗುವ ಸಂದರ್ಭದಲ್ಲಿ ಸನ್‌ಸ್ಕ್ರೀನ್ ಬಳಸಿ, ಇದು ನಿಮ್ಮ ತ್ವಚೆಯನ್ನು ರಕ್ಷಿಸುತ್ತದೆ.

13.ಟೋನಿಂಗ್:

13.ಟೋನಿಂಗ್:

ಫೇಸ್‌ವಾಶ್‌ನೊಂದಿಗೆ ನೀವು ಟೋನರ್ ಅನ್ನು ಬಳಸಬೇಕು. ಇದು ತ್ವಚೆಯಲ್ಲಿನ ಬ್ಯಾಕ್ಟೀರಿಯಾವನ್ನು ತೊಡೆದುಹಾಕಿ ಕೊಳೆಯನ್ನು ಹೊರಹಾಕುವಲ್ಲಿ ಸಹಕಾರಿಯಾಗಿದೆ.

14.ಫಾಸ್ಟ್‌ಫುಡ್ ಸೇವನೆ ಬೇಡ:

14.ಫಾಸ್ಟ್‌ಫುಡ್ ಸೇವನೆ ಬೇಡ:

ಎಣ್ಣೆ ಆಹಾರ ಮತ್ತು ಫಾಸ್ಟ್‌ಫುಡ್ ತ್ವಚೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ತ್ವಚೆಯು ಒಡೆಯುವುದಕ್ಕೆ ಫಾಸ್ಟ್‌ಫುಡ್ ಮತ್ತು ಎಣ್ಣೆಯುಕ್ತ ಆಹಾರ ಕಾರಣವಾಗಿದೆ.

English summary

Get Clear Skin In Just 10 Days!

Every woman desires for a fair and flawless skin. However, most of the women become victims of skin problems like acne, dark circles and blemishes. These are some of the skin problems that leaves behind scars and spots on the face.
Story first published: Monday, February 3, 2014, 13:50 [IST]
X
Desktop Bottom Promotion