For Quick Alerts
ALLOW NOTIFICATIONS  
For Daily Alerts

ನಳನಳಿಸುವ ನಿಮ್ಮ ಮೊಗಕ್ಕೆ ಎಗ್ ವೈಟ್, ಪಪಾಯ ಮಾಸ್ಕ್‌ಗಳು

By Deepak M
|

ಅಂದದ ಮುಖದ ಸೌಂದರ್ಯವನ್ನು ಹೊಂದಿರಬೇಕೆಂಬ ಕೋರಿಕೆ ಯಾರಿಗಿರುವುದಿಲ್ಲ? ಅದರಲ್ಲೂ ಕೆಲಸಕ್ಕೆ ಹೋಗುವವರಲ್ಲಿ ಇದರ ಕುರಿತಾಗಿ ಆಸೆಯಿದ್ದರು, ಅವರ ವಿಪರೀತ ಕಾರ್ಯದ ಒತ್ತಡದಿಂದಾಗಿ ಸ್ಪಾಗೆ ಹೋಗಿ ಮಾಸ್ಕ್ ಮಾಡಿಸಿಕೊಳ್ಳಲು ಪುರುಸೊತ್ತು ಸಿಗುವುದಿಲ್ಲ.

ಒಂದು ವೇಳೆ ಬಿಡುವು ಸಿಕ್ಕರು ಅದಕ್ಕೆ ಅವರು ವಿಪರೀತ ದುಡ್ಡನ್ನು ತೆರಬೇಕಾಗಿರುತ್ತದೆ. ಅಂತಹವರಿಗಾಗಿ ನಾವು ಕಡಿಮೆ ಖರ್ಚಿನಲ್ಲಿ ಮುಖದ ಕಾಂತಿಯನ್ನು ಹೆಚ್ಚಿಸುವ ಕೆಲವೊಂದು ಉಪಾಯಗಳನ್ನು ಹೇಳುತ್ತಿದ್ದೇವೆ, ಓದಿ ಬಳಸಿಕೊಳ್ಳಿ.

ಕಾಂತಿಯುತ ತ್ವಚೆಗಾಗಿ ಇಲ್ಲಿದೆ ಪರಿಣಾಮಕಾರಿ ಸಲಹೆ

ಜಿಡ್ಡು ತ್ವಚೆ:

ಜಿಡ್ಡು ತ್ವಚೆ:

ಇಂತಿಪ್ಪ ತ್ವಚೆಗಳಿಗೆ ಇದೇ ಪರಿಹಾರವೆಂದು ಯಾರು ಸೂತ್ರ ಬರೆದಿಟ್ಟಿಲ್ಲ, ಹಾಗೆಂದು ನಿಮ್ಮ ತ್ವಚೆಗಳನ್ನು ಹಾಗೆಯೇ ಸುಕ್ಕು ಗಟ್ಟಿಕೊಂಡು ಒಣಗುವಂತೆ ಸಹ ಬಿಡಲಾಗುವುದಿಲ್ಲ ಅಥವಾ ನಿಮ್ಮ ಸೆಬಶಿಯಸ್ ಗ್ಲಾಂಡ್‍ಗಳು ಇನ್ನು ಪಸರಿಸಲು ಸಹ ಬಿಡಲಾಗುವುದಿಲ್ಲ. ಇಂತಹ ಜಿಡ್ಡು ತ್ವಚೆಗಳು ಪ್ರತಿ ಹುಡುಗಿಯರಿಗು ಸಹ ಸವಾಲೆಸೆಯುತ್ತವೆ. ಹಾಗೆಂದು ಇದರ ಬಗ್ಗೆ ಹೆಚ್ಚಿಗೆ ಯೋಚಿಸಬೇಡಿ. ಇದರಲ್ಲಿ ಸಹ ಕೆಲವೊಂದು ಧನಾತ್ಮಕ ವಿಚಾರಗಳು ಇರುತ್ತವೆ. ಜಿಡ್ಡು ತ್ವಚೆಯು ಸಾಧಾರಣ ತ್ವಚೆಗಿಂತ ಹೆಚ್ಚಿಗೆ ಹೊಳೆಯುತ್ತದೆ. ಅದಕ್ಕೆ ಹಲವಾರು ಹುಡುಗಿಯರು ಮೊಯಿಶ್ಚರೈಸರ್ ಬಳಸುವುದನ್ನು ತಡೆಯುತ್ತಾರೆ. ಏಕೆಂದರೆ ಜಿಡ್ಡಿನ ಮೇಲೆ ಮೊಯಿಶ್ಚರೈಸರ್ ಮತ್ತಷ್ಟು ಜಿಡ್ಡನ್ನುಂಟು ಮಾಡುತ್ತದೆ. ಇದರ ಜೊತೆಗೆ ಜಿಡ್ಡು ತ್ವಚೆಯು ಧೂಳು ಮತ್ತು ಮುಖದ ಕುಳಿಗಳನ್ನು ಆಕರ್ಷಿಸುತ್ತದೆ. ಅದಕ್ಕಾಗಿ ಪರಿಹಾರ ಇಲ್ಲಿದೆ...........

ಎಗ್ ವೈಟ್ ಮಾಸ್ಕ್:

ಎಗ್ ವೈಟ್ ಮಾಸ್ಕ್:

ಮೊಟ್ಟೆಯ ಬಿಳಿಯ ಭಾಗವೇ ಏಕೆ; ಮೊಟ್ಟೆಯ ಬಿಳಿ ಭಾಗವು ಯಥೇಚ್ಛವಾದ ಪ್ರೋಟಿನ್‍ನ್ನು ಹೊಂದಿರುತ್ತದೆ. ಅದರಿಂದ ಇದರಲ್ಲಿ ಉಪಶಮನಾಕಾರಿ ಗುಣಗಳು ಹೆಚ್ಚಿದ್ದು, ಮೊಡವೆಗಳು ಬರದಂತೆ ತಡೆಯುತ್ತದೆ. ಇವುಗಳು ತ್ವಚೆಯ ಸ್ಥಿತಿಸ್ಥಾಪಕಕತ್ತೆಯನ್ನು ಹೆಚ್ಚಿಸಲು ಸಂಕೋಚಕದಂತೆ ಕೆಲಸ ಮಾಡಿ ಕುಳಿಗಳನ್ನು ಮುಚ್ಚುತ್ತದೆ. ಮೊಟ್ಟೆಯ ಬಿಳಿ ಭಾಗವು ತ್ವಚೆಯಲ್ಲಿರುವ ಹೆಚ್ಚಿನ ಪ್ರಮಾಣದ ಜಿಡ್ಡನ್ನು ಹೀರಿಕೊಳ್ಳುತ್ತದೆ ಮತ್ತು ತ್ವಚೆಯನ್ನು ಒಣಗಲು ಬಿಡುವುದಿಲ್ಲ. ಇದು ಜಿಡ್ಡು ಚರ್ಮವನ್ನು ಹೊಂದಿರುವ ಪ್ರತಿ ಹುಡುಗಿಯರ ಪಾಲಿಗೆ ರಾಮ ಬಾಣದಂತೆ ಕಾರ್ಯ ನಿರ್ವಹಿಸುತ್ತದೆ.

ವಿಧಾನ;

*ಮೊಟ್ಟೆಯ ಬಿಳಿಭಾಗವನ್ನು ಒಂದು ಟೀ- ಚಮಚ ನಿಂಬೆ ರಸದೊಂದಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

*ನಂತರ ಇದನ್ನು ಚೆನ್ನಾಗಿ ತೊಳೆದು ಒರೆಸಿದ ಮುಖಕ್ಕೆ ಹಚ್ಚಿ, 10-15 ನಿಮಿಷ ಬಿಡಿ ಅಥವಾ ಒಣಗಲು ಬಿಡಿ.

*ಈ ಫೇಸ್ ಪ್ಯಾಕ್ ಮಾಡಿಕೊಂಡಾಗ ತಿನ್ನುವುದು, ಮಾತನಾಡುವುದು ಮುಂತಾದವನ್ನು ಮಾಡಬೇಡಿ.

*ಈ ಫೇಸ್ ಪ್ಯಾಕ್ ಒಣಗಿದ ಮೇಲೆ ಅಥವಾ ಬಿರುಕು ಬಿಡಲು ಆರಂಭಿಸಿದಾಗ ಬೆಚ್ಚನೆಯ ನೀರಿನಿಂದ ಇದನ್ನು ತೊಳೆಯಿರಿ.

ಅಸ್ಪಿರಿನ್ ಮಾಸ್ಕ್:

ಅಸ್ಪಿರಿನ್ ಮಾಸ್ಕ್:

ಅಸ್ಪಿರಿನ್ ಅತ್ಯುತ್ತಮವಾದ ಬಾವು ನೀರೋಧಕ ಗುಣಗಳನ್ನು ಹೊಂದಿರುತ್ತದೆ. ಅಸ್ಪಿರಿನ್ ಒಂದು ಅತ್ಯುತ್ತಮವಾದ ಸ್ಕ್ರಬ್ ಆಗಿ ಸಹ ಕೆಲಸ ಮಾಡುತ್ತದೆ ಮತ್ತು ನಿರ್ಜೀವ ಕೋಶಗಳನ್ನು ಹೋಗಲಾಡಿಸುತ್ತದೆ. ಇದು ಮೊಡವೆ, ಜಿಡ್ಡು ತ್ವಚೆ ಮತ್ತು ಉರಿಯೂತಗಳನ್ನು ಹೊಂದಿರುವ ತ್ವಚೆಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ವಿಧಾನ:

*ಅಸ್ಪಿರಿನ್ ಮಾತ್ರೆಗಳನ್ನು ಅದರ ಸ್ಟ್ರಿಪ್‍ನಿಂದ ಬಿಡಿಸಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ.

*ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಪೇಸ್ಟ್ ರೀತಿ ತಯಾರಿಸಿಕೊಳ್ಳಿ. ಒಂದು ವೇಳೆ ಈ ಪೇಸ್ಟ್ ಸ್ವಲ್ಪ ಡ್ರೈ ಎನಿಸಿದರೆ ಇದರ ಜೊತೆಗೆ ಬೇಕಾದರೆ ಸ್ವಲ್ಪ ಪ್ರಮಾಣದ ಯೋಗರ್ಟ್ ಬೇಕಾದರು ಬೆರೆಸಬಹುದು ಅಥವಾ ಕೆನೆಯನ್ನು ಬೆರೆಸಬಹುದು. ಇದನ್ನು ಶುಭ್ರವಾದ,

*ಒರೆಸಿದ ನಿಮ್ಮ ಮುಖಕ್ಕೆ ಲೇಪಿಸಿ. ಕಣ್ಣು ಮತ್ತು ಮೂಗಿನ ಹೊಳ್ಳೆಗಳಿಗೆ ತಾಗಿಸದಂತೆ ಎಚ್ಚರವಹಿಸಿ. 10 ನಿಮಿಷ ಬಿಟ್ಟು, ಬೆಚ್ಚನೆಯ ನೀರಿನಿಂದ ಇದನ್ನು ತೊಳೆಯಿರಿ.

ಒಣ ತ್ವಚೆ;

ಒಣ ತ್ವಚೆ;

ಒಣ ತ್ವಚೆಯು ನೋಡಲು ಭಯನಕವಾಗಿ ಕಾಣಿಸುತ್ತದೆ. ಇದು ಸುಕ್ಕು, ಉರಿಯೂತ ಮುಂತಾದ ಚರ್ಮದ ಸಮಸ್ಯೆಗಳಿಗೆ ಸುಲಭವಾಗಿ ತುತ್ತಾಗುತ್ತದೆ. ಈ ಫೇಸ್ ಪ್ಯಾಕ್ ತ್ವಚೆಯ ಮೇಲೆ ಅದ್ಭುತವಾಗಿ ಕೆಲಸ ಮಾಡಿ, ತ್ವಚೆಯನ್ನು ಮೊಯಿಶ್ಚರೈಸ್ ಮಾಡುತ್ತದೆ ಮತ್ತು ತ್ವಚೆಯಲ್ಲಿ ನೀರಿನಂಶವನ್ನು ಕಾಯ್ದುಕೊಳ್ಳುತ್ತದೆ.

ಅವೊಕ್ಯಾಡೊ ಮಾಸ್ಕ್

ಅವೊಕ್ಯಾಡೊ ಮಾಸ್ಕ್

ಅವೊಕ್ಯಾಡೊದಲ್ಲಿರುವ ಆರೋಗ್ಯಕಾರಿ ಕೊಬ್ಬು ಮತ್ತು ಫೈಟೋನ್ಯೂಟ್ರಿಯೆಂಟ್ಸ್‌ಗಳು ಇದನ್ನು ತ್ವಚೆ ಮತ್ತು ಕೇಶಕ್ಕೆ ಅತ್ಯುತ್ತಮವಾದ ಮೊಯಿಶ್ಚರೈಸರನ್ನಾಗಿ ಮಾಡಿವೆ. ಜೊತೆಗೆ ಇದರಲ್ಲಿ ಯಥೇಚ್ಛವಾಗಿರುವ ಮೊನೊಅನ್‍ಸ್ಯಾಚುರೇಟೇಡ್ ಕೊಬ್ಬುಗಳು ಮತ್ತು ಅಂಟಿ ಆಕ್ಸಿಡೆಂಟ್‍ಗಳು ಉರಿಯೂತವನ್ನು ಕಡಿಮೆ ಮಾಡುತ್ತವೆ ಮತ್ತು ತ್ವಚೆಯಲ್ಲಿನ ಜೀವಕೋಶಗಳ ಹಾನಿಯನ್ನು ತಪ್ಪಿಸುತ್ತದೆ. ಹೀಗೆ ಇದು ತ್ವಚೆಗೆ ಆರಾಮವನ್ನುಂಟು ಮಾಡುತ್ತದೆ.

ವಿಧಾನ;

*ಒಂದು ಅವೊಕ್ಯಾಡೊವನ್ನು ಉತ್ತಮ ರೀತಿಯ ಪಲ್ಪ್‌ ಆಗಿ ತಯಾರಿಸಿಕೊಳ್ಳಿ.

*ಒಂದು ವೇಳೆ ನಿಮಗೆ ತುರಿಕೆ ತರುವಂತಹ ತ್ವಚೆ ಇದ್ದಲ್ಲಿ, ಒಂದು ಚಮಚ ಜೇನು ತುಪ್ಪವನ್ನು ಹಾಗು ಸ್ವಲ್ಪ ಪ್ರಮಾಣದ ಯೋಗರ್ಟ್‌ನ್ನು ಬೆರೆಸಿ. ಇದರ ಜೊತೆಗೆ ಕಾಲು ಭಾಗ ವರ್ಜಿನ್ ಆಲೀವ್ ಎಣ್ಣೆಯನ್ನು ಬೆರೆಸಿ.

*ಈ ಮಿಶ್ರಣವನ್ನು ನಿಮ್ಮ ಕುತ್ತಿಗೆ ಮತ್ತು ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಬಿಡಿ.

*ನಂತರ ಇದನ್ನು ಬೆಚ್ಚನೆಯ ನೀರಿನಿಂದ ತೊಳೆಯಿರಿ.

ಬಾಳೆಹಣ್ಣೀನ ಮಾಸ್ಕ್

ಬಾಳೆಹಣ್ಣೀನ ಮಾಸ್ಕ್

ಬಾಳೆ ಹಣ್ಣು ಏಕೆ: ಇವುಗಳು ಉರಿಯೂತವಿರುವ ತ್ವಚೆಗೆ ತಮ್ಮ ತಂಪಾದಲ್ ಆರಾಮವನ್ನು ನೀಡುವ ಗುಣಗಳನ್ನು ಹೊಂದಿವೆ. ಜೊತೆಗೆ ಬಾಳೆಹಣ್ಣುಗಳು ಮೊಡವೆ ಮತ್ತು ಕಲೆಗಳನ್ನು ಹೋಗಲಾಡಿಸುವ ಗುಣಗಳನ್ನು ಹೊಂದಿವೆ. ತನ್ನಲ್ಲಿರುವ ಪೊಟಾಶಿಯಂನಿಂದ ಬಾಳೆಹಣ್ಣುಗಳು ತ್ವಚೆಯನ್ನು ಮೃದುಗೊಳಿಸುತ್ತವೆ.

ವಿಧಾನ;

*ಬಾಳೆ ಹಣ್ಣಿನ ಸಿಪ್ಪೆಯನ್ನು ಸುಲಿದು ಗಟ್ಟಿಯಾದ ಪೇಸ್ಟ್‌ನಂತೆ ಮಾಡಿ.

*ಇದಕ್ಕೆ ಎರಡು ಚಮಚ ಜೇನು ತುಪ್ಪ ಬೆರೆಸಿ ಫೇಸ್ಟನ್ನು ಮತ್ತಷ್ಟು ಮೃದುಗೊಳಿಸಿ. ನಂತರ ಇದನ್ನು ನಿಮ್ಮ ಶುಭ್ರವಾದ ಮುಖಕ್ಕೆ ಲೇಪಿಸಿ.

*ಇದನ್ನು 10-20 ನಿಮಿಷ ಹಾಗೆ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಮಂಕಾದ ತ್ವಚೆ;

ಮಂಕಾದ ತ್ವಚೆ;

ಒತ್ತಡದಿಂದ ಕೂಡಿದ ಬಿಡುವಿಲ್ಲದ ಜೀವನಶೈಲಿ, ಪರಿಸರ ಮಾಲಿನ್ಯ ಮತ್ತು ಅಸಮತೋಲನ ಹಾಗು ಅನಾರೋಗ್ಯಕಾರಿ ಆಹಾರ ಪದ್ಧತಿಗಳು ನಿಮ್ಮ ತ್ವಚೆಯನ್ನು ಮಂಕಾಗಿ ಕಾಣುವಂತೆ ಮಾಡುತ್ತವೆ. ಈ ಸುಲಭವಾದ ಮಾಸ್ಕ್‌ಗಳನ್ನು ಪ್ರಯೋಗಿಸಿ ಬಿಳಿಚಿಕೊಂಡಿರುವ ನಿಮ್ಮ ತ್ವಚೆಯಲ್ಲಿ ಮಿಂಚಿನ ಸಂಚಲನವನ್ನು ತನ್ನಿ.

ಪರಂಗಿ ಹಣ್ಣಿನ ಮಾಸ್ಕ್:

ಪರಂಗಿ ಹಣ್ಣಿನ ಮಾಸ್ಕ್:

ಪರಂಗಿ ಹಣ್ಣು ಏಕೆ; ಪರಂಗಿಹಣ್ಣಿನಲ್ಲಿರುವ ಪ್ರಬಲ ವಿಟಮಿನ್ ಎ ಮತ್ತು ಅಂಟಿ ಆಕ್ಸಿಡೆಂಟ್‍ಗಳು ಫ್ರೀ ರಾಡಿಕಲ್ಸ್‌ಗಳ ಮೇಲೆ ಹೋರಾಡುತ್ತವೆ. ಹೀಗಾಗಿ ಇವು ತ್ವಚೆಯಲ್ಲಿರುವ ನಿರ್ಜೀವ ಕೋಶಗಳನ್ನು ಹೋಗಲಾಡಿಸಿ, ತ್ವಚೆಯನ್ನು ಮೃದುಗೊಳಿಸುತ್ತದೆ.

ವಿಧಾನ;

*ಪರಂಗಿಹಣ್ಣಿನ ಸಿಪ್ಪೆಯನ್ನು ತೆಗೆದು ಸಣ್ಣ ಸಣ್ಣ ಹೋಳುಗಳಾಗಿ ಕತ್ತರಿಸಿ.

*ಇದಕ್ಕೆ ಕಾಲು ಕಪ್ ಜೇನು ತುಪ್ಪವನ್ನು ಸೇರಿಸಿ, ಬ್ಲೆಂಡರ್‌ನಲ್ಲಿ ಹಾಕಿ ಉತ್ತಮವಾದ ಪೇಸ್ಟ್ ಮಾಡಿಕೊಳ್ಳಿ.

*ಈ ಮಿಶ್ರಣವನ್ನು ಚೆನ್ನಾಗಿ ತೊಳೆದು ಒರೆಸಿದ ನಿಮ್ಮ ಮುಖಕ್ಕೆ ಲೇಪಿಸಿ, ಕಣ್ಣುಗಳ ಭಾಗವನ್ನು ಹೊರತುಪಡಿಸಿ.

*10-15 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ಇದನ್ನು ತೊಳೆಯಿರಿ.

ನಿಂಬೆ ರಸ ಮತ್ತು ಸೀ ಸಾಲ್ಟ್ ಮಾಸ್ಕ್:

ನಿಂಬೆ ರಸ ಮತ್ತು ಸೀ ಸಾಲ್ಟ್ ಮಾಸ್ಕ್:

ನಿಂಬೆ ರಸ ಮತ್ತು ಸೀ ಸಾಲ್ಟ್ ಏಕೆ; ಇದೊಂದು ಉತ್ತೇಜನಕಾರಿ ಮಾಸ್ಕ್. ಸೀ ಸಾಲ್ಟ್ ( ಸಮುದ್ರ ಜನ್ಯ ಉಪ್ಪು) ಒಂದು ಉತ್ತಮ ನಂಜು ನಿವಾರಕವಾಗಿ ನಿರ್ಜೀವ ಕೋಶಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ, ಜೊತೆಗೆ ನಿಂಬೆರಸವು ಅತ್ಯುತ್ತಮವಾದ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ನಿಂಬೆಯು ತನ್ನಲ್ಲಿರುವ ನಂಜು ನಿವಾರಕ ಗುಣಗಳಿಂಆಗಿ ತರಚಿದ ಗಾಯಗಳನ್ನು ಮತ್ತು ಕಲೆಗಳನ್ನು ಹೋಗಲಾಡಿಸುತ್ತದೆ. ಜೊತೆಗೆ ಇದು ಧೂಳು ಮತ್ತು ಬ್ಯಾಕ್ಟೀರಿಯಾಗಳನ್ನು ಸಹ ಹೋಗಲಾಡಿಸಿ ಮೊಡವೆ ಹಾಗು ಒಡೆತ ಉಂಟಾಗದಂತೆ ತಡೆಯುತ್ತದೆ.

ವಿಧಾನ:

*ಕಾಲು ಕಪ್ ಸೀ ಸಾಲ್ಟನ್ನು ಸ್ವಲ್ಪ ನಿಂಬೆರಸದೊಂದಿಗೆ ಬೆರೆಸಿ.

*ನಂತರ ಇದನ್ನು ವೃತ್ತಾಕಾರವಾಗಿ ನಿಮ್ಮ ಕುತ್ತಿಗೆ ಮತ್ತು ಮುಖಕ್ಕೆ ಹಚ್ಚಿ.

English summary

Egg white, papaya masks for your face

There might be times when you just can't fit in a spa session in your hectic schedule. And then there are times when you want to pamper yourself but might not want to pay a bomb for fancy services.
X
Desktop Bottom Promotion