For Quick Alerts
ALLOW NOTIFICATIONS  
For Daily Alerts

ಲಿಂಬೆಯನ್ನು ಮುಖಕ್ಕೆ ಹಚ್ಚಿಕೊಳ್ಳುವ ಉತ್ತಮ ವಿಧಾನಗಳು

|

ನಿಮ್ಮ ಮುಖವನ್ನು ಹೊಳೆಯಿಸುವ ಉತ್ತಮ ವಿಧಾನವನ್ನು ನಿಮ್ಮ ಸೌಂದರ್ಯ ತಜ್ಞರಲ್ಲಿ ಕೇಳಿದಾಗ ಅವರು ನೀಡುವ ಉತ್ತರ ಲಿಂಬೆಯಾಗಿರುತ್ತದೆ. ನೈಸರ್ಗಿಕವಾಗಿ ನಿಮ್ಮ ಮುಖವನ್ನು ಹೊಳೆಯಿಸುವ ಸಾಮರ್ಥ್ಯ ಲಿಂಬೆಗಿದೆ.

ಸೌಂದರ್ಯದ ವಿಷಯದಲ್ಲಿ ಲಿಂಬೆಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ನಿಮ್ಮ ತ್ವಚೆ ಒಣಗುವ ಸಮಸ್ಯೆಯನ್ನು ನೀವು ಇದರಿಂದ ದೂರಗೊಳಿಸಬಹುದು. ಲಿಂಬೆಯು ಒಂದು ಉತ್ತಮವಾದ ನೈಸರ್ಗಿಕ ಬ್ಲೀಚ್ ಆಗಿದ್ದು, ಲಿಂಬೆ ರಸವನ್ನು ಮಾತ್ರವೇ ನೇರವಾಗಿ ಮುಖಕ್ಕೆ ಹಚ್ಚಿಕೊಳ್ಳುವುದು ಡ್ರೈ ಸ್ಕಿನ್‌ಗೆ ಕಾರಣವಾಗುತ್ತದೆ.

ಮೊಡವೆ ನಿವಾರಕ ಚಿಕಿತ್ಸೆ ಮನೆಯಲ್ಲಿಯೇ ತಯಾರಿಸಿಕೊಳ್ಳಿ

ಹಾಗಿದ್ದರೆ ನಿಮ್ಮ ಸಮಯ ಮತ್ತು ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಲಿಂಬೆಯಿಂದ ಉಂಟಾಗುವ ಅದ್ಭುತ ಪ್ರಯೋಜನವನ್ನು ನಿಮ್ಮದಾಗಿಸಿಕೊಳ್ಳಿ. ಸೂಕ್ಷ್ಮ ಮತ್ತು ಡ್ರೈ ಸ್ಕಿನ್ ಹೊಂದಿರುವ ಮಹಿಳೆಯರು ಲಿಂಬೆಯನ್ನು ಬಳಸಲು ಹಿಂದೆ ಮುಂದೆ ನೋಡುತ್ತಾರೆ. ನಿಮ್ಮ ಸಮಸ್ಯೆಯನ್ನು ದೂರ ಮಾಡಲೆಂದೇ ಈ ಲೇಖನವನ್ನು ಇಲ್ಲಿ ಬರೆಯಲಾಗಿದ್ದು ಲಿಂಬೆಯಿಂದ ಈ ರೀತಿಯ ತೊಂದರೆ ಉಂಟಾಗದಂತೆ ಅದನ್ನು ಬಳಸುವುದು ಹೇಗೆಂಬುದನ್ನು ತಿಳಿಸಿಕೊಡುತ್ತಿದ್ದೇವೆ.

ಇಲ್ಲಿ ನಾವು ನೀಡಿರುವ ಲಿಂಬೆಯನ್ನು ಮುಖಕ್ಕೆ ಬಳಸುವ ವಿಧಾನಗಳು ಖಂಡಿತ ನಿಮಗೆ ಸಹಕಾರಿಯಾಗಿವೆ. ನಿಮ್ಮ ಮುದ್ದು ಮುಖದ ಸೌಂದರ್ಯವನ್ನು ಲಿಂಬೆ ಹೇಗೆ ಕಾಪಾಡುತ್ತದೆ ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ.

ಲೆಮನ್ ರಬ್

ಲೆಮನ್ ರಬ್

ನಿಮ್ಮ ಮುಖಕ್ಕೆ ಲಿಂಬೆಯನ್ನು ಹೇಗೆ ಹಚ್ಚಬೇಕೆಂಬ ವಿಧಾನ ಇಲ್ಲಿದೆ. ಲಿಂಬೆಯನ್ನು ಹೋಳುಗಳನ್ನಾಗಿ ಮಾಡಿಕೊಂಡು ನಿಮ್ಮ ಮುಖಕ್ಕೆ ನೇರವಾಗಿ ಅದನ್ನು ಹಚ್ಚಿ. 30 ನಿಮಿಷಗಳ ನಂತರ ತೊಳೆದುಕೊಳ್ಳಿ. ಮುಖಕ್ಕೆ ಉತ್ತಮ ಗುಣಮಟ್ಟದ ಮಾಯಿಸ್ಚರೈಸರ್ ಅನ್ನು ಹಚ್ಚಿಕೊಳ್ಳಿ. ನಿತ್ಯವೂ ಈ ವಿಧಾನವನ್ನು ಅನುಸರಿಸುವುದರಿಂದ ನಿಮಗೆ ಪ್ರತಿಫಲಿತ ಫಲಿತಾಂಶ ಖಂಡಿತ ದೊರೆಯುತ್ತದೆ.

ಲೆಮನ್ ಸ್ಪ್ರೇ

ಲೆಮನ್ ಸ್ಪ್ರೇ

ನೀವು ಸೂಕ್ಷ್ಮ ತ್ವಚೆಯನ್ನು ಹೊಂದಿದ್ದು ನೇರವಾಗಿ ಲಿಂಬೆಯನ್ನು ಮುಖಕ್ಕೆ ಹಚ್ಚಿಕೊಳ್ಳುವುದು ಡ್ರೈ ಸ್ಕಿನ್ ಅನ್ನು ಉಂಟು ಮಾಡುತ್ತದೆ ಎಂದಾದಲ್ಲಿ ಲಿಂಬೆ ರಸವನ್ನು ಸ್ಪ್ರೇನಂತೆ ಮಾಡಿಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಲಿಂಬೆಯನ್ನು ಮುಖಕ್ಕೆ ಹಚ್ಚಿಕೊಳ್ಳುವ ಬೆಸ್ಟ್ ಸಲಹೆ ಇದಾಗಿದೆ. ಲಿಂಬೆ ರಸವನ್ನು ಶುದ್ಧವಾದ ಸ್ಪ್ರೇ ಬಾಟಲಿಗೆ ಹಾಕಿ ಇದಕ್ಕೆ ಸ್ವಲ್ಪ ನೀರು ಬೆರೆಸಿ. ಮುಖವನ್ನು ತೊಳೆದುಕೊಂಡು ಈ ಲಿಂಬೆ ಸ್ಪ್ರೇಯನ್ನು ಮುಖಕ್ಕೆ ಹಚ್ಚಿಕೊಳ್ಳಿ.

ಲೆಮನ್ ಎಕ್ಸ್‌ಪೋಲಿಯೇಶನ್

ಲೆಮನ್ ಎಕ್ಸ್‌ಪೋಲಿಯೇಶನ್

ನೇರವಾಗಿ ಲಿಂಬೆಯನ್ನು ಮುಖಕ್ಕೆ ಹಚ್ಚಿಕೊಳ್ಳುವುದಕ್ಕಿಂತ ಈ ವಿಧಾನವನ್ನು ನಿಮಗೆ ಅನುಸರಿಸಬಹುದು. ಎಕ್ಸ್‌ಪೋಲಿಯೇಶನ್‌ಗಾಗಿ ಇದನ್ನು ಮುಖ್ಯ ಸಾಮಾಗ್ರಿಯನ್ನಾಗಿ ಬಳಸುತ್ತಾರೆ. 2 ಸ್ಪೂನ್‌‌ನಷ್ಟು ಬ್ರೌನ್ ಶುಗರ್, 1 ಮೊಟ್ಟೆ ಬಿಳಿ ಭಾಗ, 1 ಸ್ಪೂನ್ ಲಿಂಬೆ ರಸವನ್ನು ಸೇರಿಸಿ ಪೇಸ್ಟ್‌ನಂತೆ ಮಾಡಿಕೊಳ್ಳಿ. ವೃತ್ತಾಕಾರವಾಗಿ ಇದನ್ನು ನಿಮ್ಮ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ ಮತ್ತು ತೊಳೆಯಿರಿ.

ಲೆಮನ್ ಲೋಶನ್

ಲೆಮನ್ ಲೋಶನ್

ಲೆಮನ್ ಲೋಶನ್ ಅನ್ನು ಲಿಂಬೆಯೊಂದಿಗೆ ಬಳಸುವುದು ಪರಿಣಾಮಕಾರಿ ವಿಧಾನವಾಗಿದೆ. ಈ ಮನೆಯಲ್ಲೇ ತಯಾರಾದ ಲೋಶನ್ ಅನ್ನು ನಿಮ್ಮ ಮುಖಕ್ಕೆ ಬಳಸಿಕೊಳ್ಳಿ. ಲಿಂಬೆಯ ಎರಡು ಭಾಗದಷ್ಟು ರಸಕ್ಕೆ ಮೂರು ಭಾಗದಷ್ಟು ಗ್ಲಿಸರಿನ್ ಅನ್ನು ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು ನಿಯಮಿತವಾಗಿ ಮಾಡಿ.

ಲೆಮನ್ ಫೇಸ್‌ಮಾಸ್ಕ್

ಲೆಮನ್ ಫೇಸ್‌ಮಾಸ್ಕ್

ಫೇಸ್‌ಮಾಸ್ಕ್‌ನಲ್ಲಿ ಕೂಡ ಅತ್ಯಂತ ಪ್ರಮುಖ ಸಾಮಾಗ್ರಿಯನ್ನಾಗಿ ಲಿಂಬೆಯನ್ನು ಬಳಸಬಹುದು. ಸ್ವಲ್ಪ ಲಿಂಬೆ ರಸ, ಟೊಮೇಟೋ ರಸ, ಮುಳ್ಳುಸೌತೆ ರಸ, ಹಾಗೂ ಶ್ರೀಗಂಧದ ಪೇಸ್ಟ್ ಅನ್ನು ಮಿಶ್ರ ಮಾಡಿಕೊಳ್ಳಿ. ತ್ವಚೆಯನ್ನು ಹೊಳೆಎಯಿಸುವ ಫೇಸ್‌ಮಾಸ್ಕ್ ಅನ್ನು ಹಚ್ಚಿಕೊಳ್ಳಿ ಮತ್ತು 20 ನಿಮಿಷಗಳ ನಂತರ ಮುಖ ತೊಳೆಯಿರಿ. ನಿಮ್ಮ ಮುಖಕ್ಕೆ ಹೊಳಪನ್ನು ನೀಡಲು ಲಿಂಬೆಯೊಂದಿಗೆ ಮಿಶ್ರ ಮಾಡಿರುವ ಸಾಮಾಗ್ರಿಗಳು ನೆರವಾಗುತ್ತವೆ.

English summary

Best Ways To Use Lemon On Face

Do you know there are more things you can do to enhance your beauty? Nourishing your skin from inside is one among them. This talks about the complexion boosting foods that can go a long way in your beauty care regimen.
Story first published: Friday, June 6, 2014, 11:37 [IST]
X
Desktop Bottom Promotion