For Quick Alerts
ALLOW NOTIFICATIONS  
For Daily Alerts

ನಿಮ್ಮ ತ್ವಚೆಯ ಅಂದಕ್ಕೆ ಬೇಕು ಶ್ರೀಗಂಧದ ಲೇಪನ!

By Super
|

ಗಂಧ ಎಂದರೆ ಮೊದಲು ಕನ್ನಡಿಗರಿಗೆ ಗಂಧದ ಗುಡಿ ನೆನೆಪಾದರೆ ತಪ್ಪೇನಿಲ್ಲ. ಆದರೆ ಅದರ ನಂತರದ ಸ್ಥಾನ ಇರುವುದು ಸೌಂದರ್ಯ ವರ್ಧಕಗಳಿಗೆ. ತ್ವಚೆಯ ಆರೋಗ್ಯ ಚರ್ಮ ವಯಸ್ಸಾಗುವುದನ್ನು ತಡೆಯುವುದು, ಚರ್ಮದ ಮೇಲೆ ಬೊಕ್ಕೆಗಳು ಏಳದಂತೆ ತಡೆಯುವ ಎಲ್ಲಾ ಸೌಂದರ್ಯ ವರ್ಧಕಗಳು ಹಾಗೂ ಸ್ಕಿನ್ ಕೇರ್ ಗಳಲ್ಲಿ ಗಂಧದ ಉಲ್ಲೇಖ ಇದ್ದೇ ಇರುತ್ತದೆ. ಆಯುರ್ವೇದದಲ್ಲೂ ಇದರ ಬಳಕೆಯ ಬಗ್ಗೆ ಸಾಕಷ್ಟು ಹೇಳಲಾಗಿದೆ.

ಭಾರತದಲ್ಲಿ ಗಂಧ ಎಂದು ಕರೆಯುವ ಆಂಗ್ಲ ಭಾಷೆಯ ಸ್ಯಾಂಡಲ್ ವುಡ್ ಸೌಂದರ್ಯ ವರ್ಧಕಗಳಲ್ಲಿ ಸಾಮಾನ್ಯವಾಗಿ ಚರ್ಚಿತವಾದ ವಿಷಯ. ಚರ್ಮದ ಮೇಲೆ ಗಂಧದ ಪ್ರಭಾವ ಬಹಳಷ್ಟಿದೆ. ಗಂಧ ಒಂದು ನೈಸರ್ಗಿಕ ಸೌಂದರ್ಯ ವರ್ಧಕವೂ ಆಗಿರುವ ಕಾರಣ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಗಂಧಯುಕ್ತ ಸೌಂದರ್ಯ ವರ್ಧಕಗಳು ಇದೇ ಕಾರಣಕ್ಕಾಗಿ ಹೆಚ್ಚು ಜನಪ್ರಿಯವಾಗಿದೆ.

ಸಾಮಾನ್ಯವಾಗಿ ಸಾಬೂನು, ಕ್ರೀಮ್ ಗಳು, ಪೌಡರ್ ಗಳು, ಫೇಸ್ ಪ್ಯಾಕ್ ಮತ್ತು ಹ್ಯಾಂಡ್ ವಾಶ್ ಗಳಲ್ಲಿ ಗಂಧದ ಅಂಶದ ಬಳಕೆಯಾಗುತ್ತದೆ. ಇದು ಬಹಳ ವಿಶಿಷ್ಟವಾದ ಸುವಾಸನೆಯನ್ನು ಹೊಂದಿದ್ದು ಗಾಳಿಯಲ್ಲಿ ಬಹಳ ಕಾಲದ ತನಕ ಇರುತ್ತದೆ. ಇದು ಸುಗಂಧ ಕಡ್ಡಿಗಳ ಉತ್ಪಾದನೆಯಲ್ಲೂ ಬಹಳ ಬೇಡಿಕೆ ಇರುವ ವಸ್ತುವಾಗಿದೆ. ತ್ವಚೆಯ ಅಂದವನ್ನು ಹೆಚ್ಚಿಸುವ ಜೇನು ಮತ್ತು ಹಾಲಿನ ಪ್ಯಾಕ್

Benefits Of Sandalwood For Skin

ಗಂಧದ ಸೌಂದರ್ಯ ವರ್ಧಕಗಳಲ್ಲಿ ಮನೆಗಳಲ್ಲೇ ಮಾಡಿದ ಉತ್ಪನ್ನಗಳೂ ಇವೆ. ಗಂಧದಲ್ಲಿ ಉತ್ತಮ ಗುಣಗಳಿರುವ ಕಾರಣದಿಂದಾಗಿ ಮನೆಯಲ್ಲೇ ಮಾಡಿದ ಸೌಂದರ್ಯ ವರ್ಧಕಗಳನ್ನು ಬಳಸಿದರೆ ಬಹಳ ಉತ್ತಮ. ಇದೂ ಅಲ್ಲದೆ ನಮ್ಮೆ ಚರ್ಮದ ಅನುಸಾರ ನಾವು ಇಂತಹ ಉತ್ಪನ್ನಗಳನ್ನು ಮಾಡಲೂಬಹುದು. ಗಂಧದ ಎಣ್ಣೆ ಮತ್ತು ಪೌಡರ್ ರೂಪದಲ್ಲಿ ಗಂಧದಿಂದ ಮಾಡುವ ಸೌಂದರ್ಯವರ್ಧಕಗಳು ಲಭ್ಯ.

ಚರ್ಮಕ್ಕಾಗಿ ಗಂಧದ ಉತ್ಪನ್ನಗಳು
ಹಾಗಾದರೆ ಚರ್ಮದ ಮೇಲೆ ಗಂಧದ ಉತ್ಪನ್ನಗಳ ಪ್ರಭಾವ ಏನೆಲ್ಲಾ ಇದೆ ಎಂದು ತಿಳಿಯುವ ಕುತೂಹಲ ನಿಮ್ಮಲ್ಲಿ ಇರಬಹುದು ಅದಕ್ಕೆ ಇಲ್ಲಿದೆ ಉತ್ತರ.
ಆಂಟಿ ಟಾನಿಂಗ್: ಚರ್ಮದ ಆರೋಗ್ಯ ಎಲ್ಲರಿಗೂ ಬಹಳ ಕಾಳಜಿ ಇರುವ ವಿಷಯ. ಟ್ಯಾನಿಂಗ್ ನಿಂದಾಗಿ ಚರ್ಮ ಕಪ್ಪಾಗಲು ಆರಂಭವಾಗುತ್ತದೆ ಮತ್ತು ಚರ್ಮಕ್ಕೆ ಬೇಗನೆ ವಯಸ್ಸಾಗುತ್ತದೆ. ಇದರಿಂದ ಹೊರಬರಲು ಗಂಧದ ಬಳಕೆ ಒಂದು ಉತ್ತಮವಾದ ವಿಧಾನವಾಗಿದೆ. ಇದನ್ನು ಬಹಳ ಸುಲಭವಾದ ವಿಧಾನದಲ್ಲಿ ಮಾಡಬಹುದಾಗಿದೆ. ಮೊದಲು ಗಂಧದ ಹುಡಿಯನ್ನು ಜೇನು, ಲಿಂಬೆ ಹಣ್ಣು ಮತ್ತು ಮೊಸರಿನೊಂದಿಗೆ ಮಿಶ್ರಣ ಮಾಡಬೇಕು. ಇದನ್ನು ಮುಖಕ್ಕೆ ಹಚ್ಚಿ ಹದಿನೈದು ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ನಂತರ ಮುಖವನ್ನು ಸ್ವಚ್ಛವಾದ ನೀರಿನೊಂದಿಗೆ ತೊಳೆದರೆ ಚರ್ಮದ ಆರೋಗ್ಯ ಚೆನ್ನಾಗಿರುತ್ತದೆ ಹಾಗೂ ಟ್ಯಾನಿಂಗ್ ನಿಂದ ಮುಕ್ತಿ ಸಿಗುತ್ತದೆ. ಒಣ ತ್ವಚೆಯ ಸೌಂದರ್ಯಕ್ಕಾಗಿ 10 ಸೂಕ್ತ ಮನೆ ಮದ್ದುಗಳು

ಚರ್ಮ ವಯಸ್ಸಾಗುವುದನ್ನು ತಡೆಯುತ್ತದೆ
ಫೇಸ್ ಪ್ಯಾಕ್ ಮಾಡುವುದರಿಂದಾಗಿ ಚರ್ಮದ ರಂಧ್ರಗಳು ಇನ್ನೂ ದೊಡ್ಡದಾಗುತ್ತವೆ. ಎಲ್ಲಾ ಸೌದರ್ಯವರ್ಧಕಗಳಲ್ಲೂ ಗಂಧವನ್ನು ಚರ್ಮಕ್ಕೆ ವಯಸ್ಸಾಗುವುದನ್ನು ತಡೆಯುವ ಸಾಧನ ಎಂದು ಪರಿಗಣಿಸಲಾಗಿದೆ. ಮೊಟ್ಟೆ, ಜೇನು, ಗಂಧ ಮತ್ತು ಅಗತ್ಯ ಎಣ್ಣೆಯನ್ನು ಬಳಸಿ ಮಿಶ್ರಣ ತಯಾರಿಸಿ ಇದನ್ನು ಬಳಸಿ ಫೇಸ್ ಪ್ಯಾಕ್ ಮಾಡಿ ಹಾಗೂ ಇದನ್ನು ಮುಖದ ಮೇಲೆ ಬಳಸಿ.

ಚರ್ಮವನ್ನು ನಯವಾಗಿಸುತ್ತದೆ
ನಯವಾದ ಚರ್ಮ ಎಲ್ಲರ ಆಸೆ. ಇದನ್ನು ಸಾಧ್ಯವಾಗಿಸಲು ಗಂಧವನ್ನು ಬಳಸಬಹುದಾಗಿದೆ. ಗಂಧದ ಎಣ್ಣೆಯಿಂದ ಮುಖದ ಮೇಲೆ ಎಣ್ಣೆಯ ಮಸಾಜ್ ಮಾಡುವಾಗ ಎಣ್ಣೆಯ ಜೊತೆಗೆ ಗಂಧದ ಹುಡಿಯನ್ನು ಬಳಸಿ ಮಾಡುವ ಮೂಲಕ ಚರ್ಮವನ್ನು ನಯವಾಗಿ ಇಡಬಹುದು. ಮುಖದ ಮೇಲೆ ಹೀಗೆ ಹಚ್ಚಿನ ಎಣ್ಣೆಯನ್ನು ಹನ್ನೆರಡು ಗಂಟೆಗಳ ಕಾಲ ಹಾಗೆಯೇ ಇಡಬೇಕು. ಹೀಗೆ ಗಂಧವನ್ನು ಚರ್ಮದ ನಯವನ್ನು ಕಾಪಾಡಲು ಬಳಸಬಹುದಾಗಿದೆ.

ಬೊಕ್ಕೆಗಳನ್ನು ನಿವಾರಿಸಬಹುದು
ಬಿಸಿಲಿನಿಂದ ಆಗುವ ಚರ್ಮದ ಮೇಲೆ ಏಳುವ ಬೊಕ್ಕೆಗಳನ್ನು ನಿಲ್ಲಿಸಬೇಕಾದರೂ ಗಂಧದ ಬಳಕೆ ರಾಮಬಾಣವಾಗಿದೆ. ಇಂತಹ ಬೊಕ್ಕೆಗಳು ಏಳದಂತೆ ಮತ್ತು ಎದ್ದಾಗ ಕಡಿಮೆ ಮಾಡಲು ಗಂಧವನ್ನು ಬಳಸಬಹುದು. ನೀರಿನ ಜೊತೆಗೆ ಗಂಧವನ್ನು ಬಳಸಿ ಮಾಡಿದ ಮಿಶ್ರಣವನ್ನು ಮುಖದ ಮೇಲೆ ಹಚ್ಚಿ ಇದನ್ನು ಕಡಿಮೆ ಮಾಡಬಹುದು. ಇದು ಬಹಳ ಉತ್ತಮ ಪರಿಣಾಮವನ್ನು ನೀಡುವುದರಲ್ಲಿ ಅನುಮಾನವೇ ಇಲ್ಲ. ಇದು ಮಕ್ಕಳಿಗೂ ಬಹಳ ಸುರಕ್ಷಿತವಾದ ವಿಧಾನವಾಗಿದೆ.

English summary

Benefits Of Sandalwood For Skin

Sandalwood, or chandan as it is known in India, is a very common product that is often mentioned in beauty products. Sandalwood benefits for skin are multiple which gives it a very special place in skin care.
Story first published: Tuesday, November 11, 2014, 19:07 [IST]
X
Desktop Bottom Promotion