For Quick Alerts
ALLOW NOTIFICATIONS  
For Daily Alerts

ಕಾಫಿ ಸೇವನೆಯಿಂದ ನಿಮ್ಮ ಚರ್ಮಕ್ಕೆ ಆಗುವ ಪ್ರಯೋಜನಗಳು

By Viswanath S
|

ಇಂದಿನ ದೊಡ್ಡ ನಗರಗಳಲ್ಲಿ ಕಾಫಿ ಕುಡಿಯುವುದು ಹೆಚ್ಚಾಗಿದೆ. ಕಾಫೀ ಕುಡಿಯುವುದರಿಂದ ನಮ್ಮ ಇಡೀ ದಿನ ವಿಶ್ವಾಸ ಹೆಚ್ಚಿದಂತಿರುತ್ತದೆ ಹಾಗೆಂದು ಬಹುತೇಕ ಎಲ್ಲಾ ರಸ್ತೆಗಳಲ್ಲೂ ಅಥವ ಮೂಲೆ ಮೂಲೆಗಳಲ್ಲೂ ತಲೆ ಎತ್ತಿರುವ ಕಾಫಿ ಅಂಗಡಿಗಳನ್ನು ನಾವು ಹಚ್ಚಿಕೊಂಡುಬಿಟ್ಟಿದ್ದೇವೆ.

ಆದಾಗ್ಯೂ ಕಾಫಿ ನಮ್ಮ ದಿನನಿತ್ಯ ಜೀವನದಲ್ಲಿ ಹರಡಿಕೊಂಡಿರುವುದಕ್ಕೆ ಸ್ಪಷ್ಟ ಕಾರಣಗಳಿವೆ. ವೈಜ್ಞಾನಿಕವಾಗಿ ಈ ‘ಅದ್ಭುತ ಪಾನೀಯ' ಮಿತವಾಗಿ ಸೇವಿಸಿದರೆ ನಮ್ಮ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಅನಾರೋಗ್ಯವನ್ನು ದೂರವಿಡುತ್ತದೆಯೆಂಬ ಅಂಶಗಳನ್ನು ಹೊಂದಿದೆಯೆಂದು ಸಾಬೀತಾಗಿದೆ.

Benefits of coffee for your skin

ಹಾಗಾಗಿ ಕಾಫಿ ಪ್ರಿಯರಿಗೆ ಸಂತೋಷ ತರಲು ಮತ್ತೊಂದು ಒಳ್ಳೆಯ ಕಾರಣ ಅದರ ಅನೇಕ ಪ್ರಯೋಜನಗಳಲ್ಲಿ ನಮ್ಮ ಚರ್ಮಕ್ಕೆ ಆಗುವ ಪ್ರಯೋಜನ! ಕಾಫಿಯ ಪ್ರಯೋಜನಗಳನ್ನು ಮತ್ತೂ ಆಳವಾಗಿ ನೋಡಿದಾಗ ನಮ್ಮ ಚರ್ಮಕ್ಕೆ ಬಲು ದೊಡ್ಡ ಪ್ರಯೋಜನವೆಂದು ಹೇಳಿದ್ದಾರೆ.

ಕಾಫಿ ಸೇವನೆಯಿಂದ ತೂಕ ಇಳಿಕೆ ಸಾಧ್ಯವೇ?

ಕಾಫಿಯನ್ನು ಕುಡಿದಾಗ ನಮಗೆ ಅಂತರಿಕವಾಗಿ ಸ್ಪೂರ್ತಿದಾಯಕ ಎನಿಸಿದರೆ ನಮ್ಮ ಚರ್ಮವನ್ನು ಕಾಫಿಸೇರಿರುವ ಸೋಪ್ ಅಥವ ಕ್ರೀಮ್ ಹಚ್ಚಿದಾಗ ಕಾಫಿಯು ನಮ್ಮ ನೆಚ್ಚಿನ ಚರ್ಮ'ಪಾನೀಯ'ವೆಂದು ತಿಳಿಯುತ್ತದೆ. ಕಾಫಿಯಿಂದ ನಿಮ್ಮ ಚರ್ಮಕ್ಕೆ ಬಾಹ್ಯ ವರ್ಧಕವೆಂದು ಹೇಳಲು ಕಾರಣಗಳನೇಂದು ತಿಳಿಯೋಣ ಬನ್ನಿ:

ಕಾಫಿಯು ಉತ್ಕರ್ಷಣ (Antioxidants) ಸಮೃದ್ದ ಮೂಲ:
ಪರಿಸರದಲ್ಲಿ ಚರ್ಮಕ್ಕೆ ಹಾನಿಮಾಡುವ ಹಲವಾರು ಮಾಲಿನ್ಯ ಕಣಗಳಿಂದ ತುಂಬಿಹೋಗಿವೆ. ಆದರೆ ಕಾಫಿಸೇರಿರುವ ಕ್ರೀಮ್ ಅಥವ ಸೋಪ್ ಉಪಯೋಗಿಸುವುದರಿಂದ ಅದರಲ್ಲಿರುವ ಉತ್ಕರ್ಷಣಗಳು ಚರ್ಮಕ್ಕೆ ರಕ್ಷಣೆ ಕೊಡುವುದಲ್ಲದೆ ವಾಸ್ತವವಾಗಿ ಸ್ವಾಭಾವಿಕ ರಕ್ಷಣೆಯನ್ನು ಹೆಚ್ಚಿಸುತ್ತದೆ. ಒಂದು ಅಧ್ಯಯನದ ಪ್ರಕಾರ ಕಾಫಿಬೀಜದಸಾರದಲ್ಲಿರುವ ಮೂಲಭೂತ ಗುಣಗಳಿಂದ ಚರ್ಮದ ಕಣಗಳ ರಕ್ಷಣೆಯನ್ನು ಮಾಡುತ್ತದೆಯೆಂದು ಸಾಬೀತಾಗಿದೆ.

ಇದು ಸೂರ್ಯನ ಕಠಿಣ ಕಿರಣಗಳಿಂದ ರಕ್ಷಣೆ ಕೊಡುತ್ತದೆ:
ಸೂರ್ಯನ ಕಿರಣದಲ್ಲಿರುವ ಯುವಿಬಿ (Ultra Violet B Rays) ಚರ್ಮಕ್ಕೆ ಹಾನಿಕಾರಕ ಮತ್ತು ಸಂಕೀರ್ಣವಾದ ಮತ್ತು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು. ಚರ್ಮಕ್ಕೆ ಕೆಫೀನ್ ಯುವಿ ಕ್ಯಾನ್ಸರುಜನಕದ ವಿರುದ್ಧ ರಕ್ಷಣೆಕೊಡುತ್ತದೆ. ಮತ್ತೊಂದು ಅಧ್ಯಯನದ ಪ್ರಕಾರ ಕೆಫೀನ್ ವಾಸ್ತವವಾಗಿ ಡಿಎನ್ಎ (DNA) ದುಷ್ಪರಿಣಾಮಗಳ ವಿರುದ್ಧ ರಕ್ಷಣೆ ನೀಡಿ ಯುವಿಬಿಯಿಂದ ಆಗುವ ಹಾನಿಗಳಿಂದ ರಕ್ಷಣೆ ಕೊಡುತ್ತದೆ.

ಡಿಎನ್ಎ (DNA) ದುಷ್ಪರಿಣಾಮವನ್ನು ರಕ್ಷಿಸುವುದರ ಮೂಲಕ ಚರ್ಮ ಕ್ಯಾನ್ಸರಿಗೆ ಚಿಕಿತ್ಸಕ ಆಯ್ಕೆಯನ್ನೂ ಸಹ ನೀಡಬಹುದು. ಇದು ಚರ್ಮವನ್ನು ಮೃದು ಮತ್ತು ಪ್ರಕಾಶಮಾನವಾಗಿ ಮಾಡುತ್ತದೆ: ಅದರ ಅಂಗಾಂಶದುರಸ್ತಿಮಾಡುವ ಗುಣದಿಂದ ಕಾಫಿಯು ಚರ್ಮದ ಕಣಗಳ ಪುನರ್‌ಬೆಳವಣಿಗೆಗೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹಾಗಾಗುವುದರಿಂದ ಚರ್ಮದಲ್ಲಿ ಜಲಸಂಚಯನ ಹೆಚ್ಚಾಗಿ ಚರ್ಮದ ಎಲಾಸ್ಟಿಸಿಟಿ ಕೂಡ ಹೆಚ್ಚಾಗುತ್ತದೆ.

English summary

Benefits of coffee for your skin

Delving deeper into the benefits of coffee, it has also been noted that coffee is great for the skin. While drinking a cup gets you that internal coffee boost, Here are some reasons your skin will thank you for an external coffee boost:
Story first published: Thursday, June 19, 2014, 9:50 [IST]
X
Desktop Bottom Promotion