For Quick Alerts
ALLOW NOTIFICATIONS  
For Daily Alerts

ಮುಲ್ತಾನಿ ಮಿಟ್ಟಿಯ ಸೌಂದರ್ಯವರ್ಧಕ ಲಾಭಗಳು

By Hemanth.P
|

ಫುಲ್ಲರ್ಸ್ ಅರ್ಥ್ ಎಂದು ಕರೆಯಲ್ಪಡುವ ಮುಲ್ತಾನಿ ಮಿಟ್ಟಿಯಲ್ಲಿ ಚರ್ಮದ ಸೌಂದರ್ಯವರ್ಧಕ ಗುಣಗಳಿವೆ. ಮುಲ್ತಾನಿ ಮಿಟ್ಟಿ ಚರ್ಮವನ್ನು ಶುದ್ದೀಕರಣ ಮತ್ತು ಸ್ವಚ್ಛಗೊಳಿಸುತ್ತದೆ. ಮುಲ್ತಾನಿ ಮಿಟ್ಟಿಯಲ್ಲಿರುವ ಮೆಗ್ನಿಶಿಯಂ ಕ್ಲೋರೈಡ್ ಚರ್ಮದಲ್ಲಿರುವ ಮೊಡವೆ ಮತ್ತು ಕಲೆಗಳನ್ನು ನಿವಾರಿಸುತ್ತದೆ. ಕೆಲವೊಂದು ಫೇಸ್ ಪ್ಯಾಕ್ ಮತ್ತು ಫೇಸ್ ಮಾಸ್ಕ್ ಗಳು ಮುಲ್ತಾನಿ ಮಿಟ್ಟಿಯನ್ನು ಪ್ರಮುಖವಾಗಿ ಬಳಸುತ್ತಾರೆ.

ಮುಲ್ತಾನಿ ಮಿಟ್ಟಿಯನ್ನು ಪೇಸ್ಟ್ ಮಾಡಿ ನೇರವಾಗಿ ಚರ್ಮಕ್ಕೆ ಹಚ್ಚಬಹುದು. ಇದರಿಂದ ಚರ್ಮಕ್ಕೆ ಯಾವುದೇ ರೀತಿಯ ಅಡ್ಡಪರಿಣಾಮವಿಲ್ಲ ಮತ್ತು ಪ್ರತಿಯೊಂದು ಚರ್ಮಕ್ಕೂ ಇದು ಒಳ್ಳೆಯದು. ಮುಲ್ತಾನಿ ಮಿಟ್ಟಿ, ಮೊಸರು, ಕ್ರೀಮ್, ನಿಂಬೆ, ರೋಸ್ ವಾಟರ್ ಇತ್ಯಾದಿ ಬಳಸಿಕೊಂಡು ಮನೆಯಲ್ಲೇ ಫೇಸ್ ಪ್ಯಾಕ್ ತಯಾರಿಸಬಹುದು. ಇದರಿಂದ ಚರ್ಮದ ಬಣ್ಣ ಮತ್ತು ರಚನೆ ಉತ್ತಮಪಡಿಸಬಹುದು. ಮುಲ್ತಾನಿ ಮಿಟ್ಟಿ ಅತ್ಯಂತ ಅಗ್ಗದ ಚರ್ಮದ ಸೌಂದರ್ಯವರ್ಧಕವೆಂದು ಪರಿಗಣಿಸಲಾಗಿದೆ.

ಮುಲ್ತಾನಿ ಮಿಟ್ಟಿ ಹೆಚ್ಚು ದುಬಾರಿಯಲ್ಲದಿದ್ದರೂ ಇದರಲ್ಲಿ ಹಲವಾರು ರೀತಿಯ ಲಾಭಗಳಿವೆ. ಇದು ಪ್ರತಿಯೊಂದು ಕಡೆಯಲ್ಲಿ ಬಳಸುವ ನೈಸರ್ಗಿಕ ಸೌಂದರ್ಯವರ್ಧಕ ಉತ್ಪನ್ನವಾಗಿದೆ. ಮುಲ್ತಾನಿ ಮಿಟ್ಟಿಯ ಲಾಭಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

Beauty benefits of multani mitti

1. ಶುಚಿಗೊಳಿಸುತ್ತದೆ
ಮುಲ್ತಾನಿ ಮಿಟ್ಟಿನಲ್ಲಿ ಮೆಗ್ನಿಶಿಯಂ ಕ್ಲೋರೈಡ್ ಅಂಶ ಸಮೃದ್ಧವಾಗಿದೆ. ಮೆಗ್ನಿಶಿಯಂ ಕ್ಲೋರೈಡ್ ಮೊಡವೆಗಳನ್ನು ನಿವಾರಿಸುವ ಮತ್ತು ಅದರಿಂದ ಉಂಟಾದ ಕಲೆಗಳನ್ನು ನಿವಾರಿಸುವ ಗುಣ ಹೊಂದಿದೆ. ಮುಲ್ತಾನಿ ಮಿಟ್ಟಿ ಚರ್ಮದ ರಂಧ್ರಗಳಲ್ಲಿ ಅಡಗಿರುವ ಧೂಳು ಮತ್ತು ಬ್ಯಾಕ್ಟೀರಿಯಾ ಹೊರತೆಗೆಯುತ್ತದೆ. ಮೊಡವೆಯಿಂದಾಗಿ ಚರ್ಮದಲ್ಲಿ ಉಳಿದಿರುವ ಕೆಲವೊಂದು ಅಂಶಗಳನ್ನು ತೆಗೆದು ಹೊಸ ಮೊಡವೆಗಳು ಬರದಂತೆ ತಡೆಯುತ್ತದೆ. ಯಾವುದೇ ಚರ್ಮಕ್ಕೆ ಬಳಸಬಹುದಾದ ಮತ್ತು ಯಾವುದೇ ಅಡ್ಡ ಪರಿಣಾಮಗಳಿಲ್ಲದ ಮುಲ್ತಾನಿ ಮಿಟ್ಟಿ ಒಳ್ಳೆಯ ಶುಚಿಗೊಳಿಸುವ ಮತ್ತು ಶುದ್ಧೀಕರಣದ ಗುಣಗಳನ್ನು ಹೊಂದಿದೆ.

2. ಎಣ್ಣೆಯುಕ್ತ ಚರ್ಮ
ಮುಲ್ತಾನಿ ಮಿಟ್ಟಿ ಎಣ್ಣೆಯುಕ್ತ ಚರ್ಮದವರಿಗೆ ತುಂಬಾ ಒಳ್ಳೆಯದು. ಮುಲ್ತಾನಿ ಮಿಟ್ಟಿ ಚರ್ಮದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ಹೊರತೆಗೆದು ಮೊಡವೆ ಉಂಟಾಗುವುದನ್ನು ತಡೆಯುತ್ತದೆ. ಎಣ್ಣೆಯುಕ್ತ ಚರ್ಮದಿಂದ ಮುಖ ಕಾಂತಿರಹಿತವಾಗಿ ಕಾಣಿಸುತ್ತದೆ. ಎಣ್ಣೆಯಿಂದಾಗಿ ಚರ್ಮದ ರಂಧ್ರ ಮತ್ತು ಕೋಶಗಳ ಒಳಗೆ ಹೆಚ್ಚಿನ ಕೊಳೆ ತುಂಬಿ ಹೋಗುತ್ತದೆ. ಮುಲ್ತಾನಿ ಮಿಟ್ಟಿ ಎಣ್ಣೆ, ಕೊಳೆ ಮತ್ತು ಧೂಳನ್ನು ಚರ್ಮದ ರಂಧ್ರ ಮತ್ತು ಕೋಶದಿಂದ ಹೊರತೆಗೆಯುತ್ತದೆ. ಎಣ್ಣೆಯುಕ್ತ ಚರ್ಮಕ್ಕೆ ಇದು ಮುಲ್ತಾನಿ ಮಿಟ್ಟಿನ ಅತೀ ಮುಖ್ಯ ಲಾಭ.

3. ಸ್ಕ್ರಬರ್
ಮುಲ್ತಾನಿ ಮಿಟ್ಟಿಯನ್ನು ಸ್ಕ್ರಬರ್ ಆಗಿ ಬಳಸಬಹುದು. ಇದು ಚರ್ಮದಲ್ಲಿನ ಬ್ಲ್ಯಾಕ್ ಹೆಡ್ ಮತ್ತು ವೈಟ್ ಹೆಡ್ ನ್ನು ದೂರ ಮಾಡುತ್ತದೆ. ಮುಲ್ತಾನಿ ಮಿಟ್ಟಿಯನ್ನು ಫೇಸ್ ಪ್ಯಾಕ್ ಅಥವಾ ಸ್ಕ್ರಬ್ ನಲ್ಲಿ ಬಳಸುವುದರಿಂದ ಸತ್ತ ಚರ್ಮ, ಬ್ಲ್ಯಾಕ್ ಹೆಡ್ ಅಥವಾ ವೈಟ್ ಹೆಡ್ ನ್ನು ತೆಗೆಯಬಹುದು. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲ ಮತ್ತು ಚರ್ಮದ ರಚನೆ ಹಾಗೂ ಗುಣಮಟ್ಟ ಕಾಪಾಡಲು ಇದನ್ನು ನಿಯಮಿತವಾಗಿ ಬಳಸಬಹುದು. ಮುಲ್ತಾನಿ ಮಿಟ್ಟಿನಲ್ಲಿರುವ ಲಾಭಗಳೆಂದರೆ ಸ್ಕ್ರಬ್, ಫೇಸ್ ಪ್ಯಾಕ್ ಮತ್ತು ಶುದ್ದೀಕರಣ. ಚರ್ಮದಲ್ಲಿರುವ ಎಲ್ಲಾ ರೀತಿಯ ಧೂಳು, ಬ್ಲ್ಯಾಕ್ ಹೆಡ್ ಮತ್ತು ವೈಟ್ ಹೆಡ್ ನ್ನು ತೆಗೆದು ಅದು ಚರ್ಮವನ್ನು ಪುನರ್ಚೇತನಗೊಳಿಸುತ್ತದೆ.

4. ಮೈಬಣ್ಣ
ಮುಲ್ತಾನಿ ಮಿಟ್ಟಿ ಚರ್ಮದ ಕಂದುಬಣ್ಣ ತೆಗೆದು ಮೈಬಣ್ಣ ವೃದ್ಧಿಸಲು ನೆರವಾಗುತ್ತದೆ. ನಿಯಮಿತವಾಗಿ ಮುಲ್ತಾನಿ ಮಿಟ್ಟಿಯನ್ನು ಬಳಸುವುದರಿಂದ ಈ ಲಾಭ ಪಡೆಯಬಹುದು. ಮುಲ್ತಾನಿ ಮಿಟ್ಟಿಯನ್ನು ಒಳಗೊಂಡಿರುವ ಹಲವಾರು ರೀತಿಯ ಫೇಸ್ ವಾಶ್ ಮತ್ತು ಸೋಪುಗಳು ಮೈಬಣ್ಣ ಹೆಚ್ಚಿಸುತ್ತದೆ. ಮುಲ್ತಾನಿ ಮಿಟ್ಟಿ ವರ್ಣದ್ರವ್ಯ ಕಡಿಮೆ ಮಾಡಿ ಚರ್ಮವನ್ನು ಶುದ್ಧ ಹಾಗೂ ಸ್ಪಷ್ಟವಾಗಿಡುತ್ತದೆ. ದದ್ದು ಹಾಗೂ ಉರಿಯೂತದಿಂದ ಉಂಟಾಗಿರುವ ಕೆಂಪುಕಲೆಯನ್ನು ಮುಲ್ತಾನಿ ಮಿಟ್ಟಿ ಕಡಿಮೆ ಮಾಡುತ್ತದೆ. ಇದೆಲ್ಲವೂ ಮುಲ್ತಾನಿ ಮಿಟ್ಟಿಯ ಕೆಲವೊಂದು ಅತೀ ಮುಖ್ಯ ಲಾಭಗಳು.

5. ರಚನೆ
ಮುಲ್ತಾನಿ ಮಿಟ್ಟಿ ಚರ್ಮದ ರಚನೆಯನ್ನು ಸುಧಾರಿಸುತ್ತದೆ. ಇದು ಅನಗತ್ಯ ತೇಪೆಗಳನ್ನು ತೆಗೆದು ಚರ್ಮವನ್ನು ಮೃದುವಾಗಿಸುತ್ತದೆ. ಇದರಿಂದ ಚರ್ಮ ತುಂಬಾ ಸುಸಂಗತ ಮತ್ತು ಬಿಳಿಯಾಗುತ್ತದೆ. ಚರ್ಮದ ಕಾಂತಿ ಹಾಗೂ ರಚನೆ, ಅದರ ಆರೋಗ್ಯಕ್ಕಾಗಿ ಮುಲ್ತಾನಿ ಮಿಟ್ಟಿಯನ್ನು ನಿಯಮಿತವಾಗಿ ಬಳಸಬೇಕು. ಇದು ಯಾವುದೇ ಮಾದರಿಯ ಚರ್ಮ ರಚನೆಗೆ ಬಳಸಬಹುದು. ಒಣ ಚರ್ಮದವರು ಚಳಿಗಾಲದಲ್ಲಿ ಇದನ್ನು ಬಳಸಬಾರದು. ಯಾಕೆಂದರೆ ಇದು ಚರ್ಮವನ್ನು ಮತ್ತಷ್ಟು ಒಣಗುವಂತೆ ಹಾಗೂ ಕಳೆಗುಂದುವಂತೆ ಮಾಡುತ್ತದೆ. ಇದನ್ನು ಹೊರತುಪಡಿಸಿ ಎಲ್ಲಾ ವಿಧದ ಚರ್ಮಗಳಿಗೆ ಮುಲ್ತಾನಿ ಮಿಟ್ಟಿ ಅಥವಾ ಫುಲ್ಲರ್ಸ್ ಅರ್ಥ್ ನ್ನು ಬಳಸಬಹುದು.

English summary

Beauty benefits of multani mitti

Multani Mitti also known as Fuller’s Earth has cosmetic benefits for the skin. Fuller’s Earth is a skin purifier and cleanser. Fuller’s Earth has Magnesium Chloride content which helps to reduce acne and blemishes from the skin.
Story first published: Monday, January 6, 2014, 9:50 [IST]
X
Desktop Bottom Promotion