For Quick Alerts
ALLOW NOTIFICATIONS  
For Daily Alerts

ಪುರುಷರ ಮೊಡವೆ ಹೋಗಿಸಲು ಫೇಸ್ ಪ್ಯಾಕ್

|

ಮುಖದಲ್ಲಿ ಮೊಡವೆ ಕಾಣಿಸಿಕೊಳ್ಳುವುದು ಕೇವಲ ಮಹಿಳೆಯರಲ್ಲಿ ಮಾತ್ರವಲ್ಲ, ಪುರುಷರಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮೊಡವೆ ಸಮಸ್ಯೆ ಹದಿ ಹರೆಯದ ಕಂಡು ಬರುವ ಸಮಸ್ಯೆಯಾದರೂ ಅದರ ಕೆಟ್ಟ ಪರಿಣಾಮ (ರಂಧ್ರ ಬೀಳುವುದು) ಜೀವನ ಪರ್ಯಾಂತ ನಮ್ಮ ತ್ವಚೆಯಲ್ಲಿ ಕಂಡು ಬರುವ ಸಾಧ್ಯತೆ ಹೆಚ್ಚು.

ಪುರುಷರರಲ್ಲಿ ಮೊಡವೆ ಸಮಸ್ಯೆಗಳು, ಪರಿಸರ, ಜೀವನಶೈಲಿ ಮತ್ತು ಆನುವಂಶಿಕ ಕಾರಣಗಳಿಂದ ಉಂಟಾಗುತ್ತದೆ. ಎಣ್ಣೆಯುಕ್ತ ಕೂದಲು ಮತ್ತು ತಲೆಹೊಟ್ಟು ತರುವಾಯ ನಿಮ್ಮ ಮುಖದ ಮೇಲೆ ಮೊಡವೆ ಬೆಳವಣಿಗೆಗೆ ಕಾರಣವಾಗುವ ಪ್ರಾಥಮಿಕ ಕಾರಣಗಳಾಗಿವೆ. ದೇಹದ ಒಳಗೆ ನಡೆಯುವ ಗ್ರಂಥಿಯಲ್ಲಿನ ಬದಲಾವಣೆಗಳು ಕೂಡ ಕೆಲವೊಮ್ಮೆ ಮೊಡವೆಗಳಿಗೆ ಕಾರಣವಾಗಬಹುದು. ಗ್ರಂಥಿಯಲ್ಲಿನ ಬದಲಾವಣೆಗಳು ಯೌವ್ವನ ಮತ್ತು ಹರೆಯದ ಹಂತದಲ್ಲಿ ಸಾಮಾನ್ಯವಾಗಿದೆ.

ನೀವು, ಮೊಡವೆಗೆ ಚಿಕಿತ್ಸೆ ನೀಡಲು ಮನೆಯಲ್ಲಿಯೇ ಸರಳ ಮತ್ತು ಪರಿಣಾಮಕಾರಿ ಮುಖದ ಮಾಸ್ಕ್ ಅನ್ನು ತಯಾರಿಸಬಹುದು. ಫೇಸ್ ಪ್ಯಾಕ್, ನಿಮ್ಮ ಮುಖದ ತೇವಾಂಶವನ್ನು ಕಾಪಾಡಲು ಮತ್ತು ಕಾಂತಿಯನ್ನು ವರ್ಧಿಸುವಲ್ಲಿ ಸಹಾಯ ಮಾಡುತ್ತವೆ. ಇದರಿಂದ ಮೊಡವೆಗಳೂ ಸಹ ಕ್ರಮೇಣ ನಿಮ್ಮ ಮುಖದಿಂದ ಮಾಯವಾಗುತ್ತವೆ. ಹಣ್ಣುಗಳು ಸಾಮಾನ್ಯವಾಗಿ ಮನೆಯಲ್ಲಿ ಮಾಡಬಹುದಾದ ಮುಖದ ಮಾಸ್ಕ್ಗಳಿಗೆ ಬಳಸಲಾಗುವ ಅತ್ಯಂತ ಜನಪ್ರಿಯ ಮತ್ತು ಪರಿಣಾಮಕಾರಿ ಫೇಸ್ ಮಾಸ್ಕ್ ಪದಾರ್ಥಗಳಾಗಿವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಪುರುಷರಿಗಾಗಿ ಈ ಸ್ಕಿನ್ ಕೇರ್ ಟಿಪ್ಸ್

ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್:

ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್:

ಇದು ಪರಿಣಾಮಕಾರಿಯಾದ, ಭಾರತೀಯ ಸಂಸ್ಕೃತಿಯಲ್ಲಿ ಮೊಡವೆ ಚಿಕಿತ್ಸೆಯಾಗಿ ಮೊದಲಿನಿಂದಲೂ ಬಳಸಲಾಗುತ್ತಿರುವ ಸಾಂಪ್ರದಾಯಿಕ ಫೇಸ್ ಮಾಸ್ಕ್. ಮುಲ್ತಾನಿ ಮಿಟ್ಟಿಯನ್ನು ಪೇಸ್ಟ್ ಮಾಡಿ ನೇರವಾಗಿ ಚರ್ಮಕ್ಕೆ ಹಚ್ಚಬಹುದು. ಇದರಿಂದ ಚರ್ಮಕ್ಕೆ ಯಾವುದೇ ರೀತಿಯ ಅಡ್ಡಪರಿಣಾಮವಿಲ್ಲ ಮತ್ತು ಪ್ರತಿಯೊಂದು ಚರ್ಮಕ್ಕೂ ಇದು ಒಳ್ಳೆಯದು. ಮುಲ್ತಾನಿ ಮಿಟ್ಟಿ, ಮೊಸರು, ಕ್ರೀಮ್, ನಿಂಬೆ, ರೋಸ್ ವಾಟರ್ ಇತ್ಯಾದಿ ಬಳಸಿಕೊಂಡು ಮನೆಯಲ್ಲೇ ಫೇಸ್ ಪ್ಯಾಕ್ ತಯಾರಿಸಬಹುದು. ಇದರಿಂದ ಚರ್ಮದ ಬಣ್ಣ ಮತ್ತು ರಚನೆ ಉತ್ತಮಪಡಿಸಬಹುದು. ಮುಲ್ತಾನಿ ಮಿಟ್ಟಿ ಅತ್ಯಂತ ಅಗ್ಗದ ಚರ್ಮದ ಸೌಂದರ್ಯವರ್ಧಕವೆಂದು ಪರಿಗಣಿಸಲಾಗಿದೆ.

ಕಡಲೆ ಹಿಟ್ಟು:

ಕಡಲೆ ಹಿಟ್ಟು:

ಕಡಲೆಹಿಟ್ಟು ಬಳಸಿ ತ್ವಚೆ ಆರೈಕೆ ಮಾಡುವ ವಿಧಾನ ಹಿಂದಿನ ಕಾಲದಿಂದಲೂ ಬಳಕೆಯಲ್ಲಿದೆ. ಸೋಪಿನ ಬದಲು ಕಡಲೆ ಹಿಟ್ಟಿನಿಂದ ಮುಖ ತೊಳೆಯುತ್ತಾ ಬಂದರೆ ಮುಖದ ಹೊಳಪು ಹೆಚ್ಚುವುದು ಹಾಗೂ ಮೊಡವೆ ಸಮಸ್ಯೆ ಕಡಿಮೆಯಾಗುವುದು.

ಒಂದು ಸಣ್ಣ ಬಟ್ಟಲಿನಲ್ಲಿ ಮೊಸರು ಮತ್ತು ಎರಡು ಚಮಚ ಕಡಲೆ ಹಿಟ್ಟು ಸೇರಿಸಿ ಹಾಗೂ ದಪ್ಪ ಹದದಲ್ಲಿ ಪೇಸ್ಟ್ ತಯಾರಿಸಿ. ಈ ಪ್ಯಾಕ್‌ನ್ನು ನಿಮ್ಮ ಮುಖದ ಮೇಲೆ ಸಮವಾಗಿ ಹಚ್ಚಿ ಮತ್ತು 30-45 ನಿಮಿಷಗಳ ಕಾಲ ಒಣಗಲು ಬಿಡಿ. ಇದು ಸಂಪೂರ್ಣವಾಗಿ ಒಣಗಿದ ನಂತರ, ನೀರನ್ನು ಹಾಕಿ ನಿಮ್ಮ ಮುಖದ ಮೇಲೆ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ. ನಂತರ ಚೆನ್ನಾಗಿ ಮುಖವನ್ನು ತೊಳೆದು ಉತ್ತಮ ಮಾಯಿಶ್ಚರೈಸರ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಶೇವಿಂಗ್ ಬಳಿಕ ಬಳಸಬಹುದಾದ ಫೇಸ್ ಪ್ಯಾಕ್

ಪುದೀನಾ ಫೇಸ್ ಪ್ಯಾಕ್:

ಪುದೀನಾ ಫೇಸ್ ಪ್ಯಾಕ್:

ಪುದೀನಾ ಕೂಡ ಮೊಡವೆಯನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿರುವುದರಿಂದ ಪುದೀನಾ ಫೇಸ್ ಪ್ಯಾಕ್ ಬಳಸಬಹುದು. ಒಂದಿಷ್ಟು ಪುದೀನ ಎಲೆಗಳನ್ನು ರುಬ್ಬಿಕೊಳ್ಳಿ. ಒಂದು ಬಟ್ಟಲಿನಲ್ಲಿ 2-3 ಚಮಚ ಜೇನುತುಪ್ಪ ಸೇರಿಸಿ. ಈ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಹಚ್ಚಿ ಅದು ಒಣಗುವವರೆಗೂ ಹಾಗೆಯೇ ಬಿಡಿ. ನಂತರ ನೀರಿನಿಂದ ಮುಖವನ್ನು ತೊಳೆಯಿರಿ. ಉತ್ತಮ ಫಲಿತಾಂಶಗಳನ್ನು ಪಡೆಯಲು ಒಂದು ವಾರದಲ್ಲಿ ಸಾಕಷ್ಟು ಬಾರಿ ಪುನರಾವರ್ತಿಸಿ.

ಸೌತೆಕಾಯಿ ಫೇಸ್ ಮಾಸ್ಕ್:

ಸೌತೆಕಾಯಿ ಫೇಸ್ ಮಾಸ್ಕ್:

ಸೌತೆಕಾಯಿ ಅನ್ನು ಸೌಂದರ್ಯವರ್ಧಕವಾಗಿ ಬಳಸುವುದು ಸಾಮಾನ್ಯ. ಇದು ಮುಖದ ಕಾಂತಿ ಹೆಚ್ಚಿಸುವುದು. ಇದರ ಮತ್ತೊಂದು ವಿಶೇಷವೆಂದರೆ ಎಲ್ಲಾ ರೀತಿಯ ತ್ವಚೆಯವರು ಸೌತೆಕಾಯಿ ಫೇಸ್ ಮಾಸ್ಕ್ ಬಳಸಬಹುದು. ಸೌತೆಕಾಯಿ ಫೇಸ್ ಮಾಸ್ಕ್ ಅಂಗಡಿಯಿಂದ ಕೊಳ್ಳುವುದರ ಬದಲು ಮನೆಯಲ್ಲಿ ತಯಾರಿಸುವುದು ಒಳ್ಳೆಯದು. ಸೌತೆಕಾಯಿಯನ್ನು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ರೋಸ್ ವಾಟರ್ ಮತ್ತು 1 ಚಮಚ ಗ್ಲಿಸರಿನ್ ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಬೇಕು 20 ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚುವುದು.

ಎಲೆಕೋಸು ಮಾಸ್ಕ್:

ಎಲೆಕೋಸು ಮಾಸ್ಕ್:

ಎಲೆಕೋಸಿನ ಕೆಲವು ಎಲೆಗಳನ್ನು ಅರೆದು ರಸ ತೆಗೆದುಕೊಳ್ಳಿ. ಅದಕ್ಕೆ 1/4 ಚಮಚ ಈಸ್ಟ್ ಬೆರೆಸಿ, 1 ಟೀ ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲಕಿರಿ. ಗಟ್ಟಿಯಾಗಿ ಪೇಸ್ಟ್ ತಯಾರಿಸಿಕೊಂಡು ಮುಖ ಹಾಗೂ ಕುತ್ತಿಗೆ ಭಾಗದಲ್ಲಿ ಲೇಪಿಸಿರಿ. 15 ನಿಮಿಷದ ನಂತರ ನೀರಿನಲ್ಲಿ ಹತ್ತಿಯನ್ನು ಅದ್ದಿಕೊಂಡು ಮಾಸ್ಕ್ ಅನ್ನು ನಿಧಾನವಾಗಿ ಒರೆಸಿಕೊಳ್ಳಿ. ಈ ಕ್ರಮದಿಂದ ಮುಖದ ಸುಕ್ಕು, ಒಣ ತ್ವಚೆ ದೂರವಾಗಿ ಹೂವಿನಂತೆ ಅರಳುವುದು.

English summary

Acne face packs homemade remedies for men

There are several environmental, lifestyle and genetic reasons for acne problems in men. Forehead is the most problematic areas on face that is more easily affected by acne. Oily hair and dandruff are a primary cause that eventually leads to the development of acne on your face.
Story first published: Monday, April 14, 2014, 15:31 [IST]
X
Desktop Bottom Promotion