For Quick Alerts
ALLOW NOTIFICATIONS  
For Daily Alerts

ಮೂಗಿನ ಮೇಲೆ ಗೋಚರಿಸುವ ಕಪ್ಪು ಚುಕ್ಕೆ ನಿವಾರಣೆಗೆ ಸೂಕ್ತ ಸಲಹೆ

By Super
|

ಸಾಮಾನ್ಯವಾಗಿ ಮೂಗಿನ ಮೇಲೆ ಮತ್ತು ಮೂಗಿನ ಅಕ್ಕಪಕ್ಕದ ಚರ್ಮದಲ್ಲಿ ಕಪ್ಪುಚುಕ್ಕೆಗಳು (Blackhead) ಕಾಣಿಸಿಕೊಳ್ಳುತ್ತವೆ. ಎಣ್ಣೆಚರ್ಮದವರಿಗೆ ಈ ತೊಂದರೆ ಅತಿಹೆಚ್ಚು. ಎಷ್ಟು ತೊಳೆದರೂ ಸುಲಭವಾಗಿ ಹೋಗದೇ ಇರುವ ಈ ಚುಕ್ಕೆಗಳು ವಾಸ್ತವವಾಗಿ ಚರ್ಮದಾಳಕ್ಕೆ ಇಳಿದು ಕೇವಲ ತುದಿಯ ಕಪ್ಪುಚುಕ್ಕೆಯಂತೆ ಕಾಣುವ ಕಲೆಗೆ ಬ್ಲ್ಯಾಕ್ ಹೆಡ್‌ಗಳು ಎನ್ನುತ್ತಾರೆ. ಚಿಕ್ಕ ಗುಳ್ಳೆಯಂತಹಾ ಆಕಾರವಿರುವ ಈ ಕಪ್ಪುಕಲೆಗಳು ವಾಸ್ತವವಾಗಿ ನಮ್ಮ ಚರ್ಮದ ರಂಧ್ರವನ್ನು ತುಂಬಿರುವ ಸೆಬಮ್ (sebum) ಎಂಬ ಕೊಳೆ.

ಆರೋಗ್ಯಕರ ಚರ್ಮದಲ್ಲಿ ಈ ರಂಧ್ರಗಳು ತೀರಾ ಕಿರಿದಾಗಿರುವುದರಿಂದ ಕೊಳೆಕೂರಲು ಸ್ಥಳವಿಲ್ಲದೇ ಅತ್ಯಲ್ಪ ಪ್ರಮಾಣದಲ್ಲಿರುವ ಕಾರಣ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಆದರೆ ಮೂಗಿನ ಹೊರಚರ್ಮ ಮತ್ತು ಪಕ್ಕದ ಭಾಗ ಹೆಚ್ಚು ಸೆಳೆತದಲ್ಲಿರುವ ಕಾರಣ ಈ ಭಾಗದಲ್ಲಿ ಬ್ಲ್ಯಾಕ್ ಹೆಡ್ ಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

ಬ್ಲ್ಯಾಕ್ ಹೆಡ್ ನಿವಾರಣೆಗೆ ಶೇಖಡಾ ತೊಂಬತ್ತೊಂಬತ್ತು ಜನ ಅನುಸರಿಸುವ ಮಾರ್ಗವೆಂದರೆ ಚಿವುಟುವುದು. ಇದರಿಂದ ಮೊಳೆಯ ಮೇಲ್ಭಾಗದಲ್ಲಿರುವ ತಲೆ ತುಂಡಾಗಿ ಹೊರಬರುತ್ತದೆಯೇ ವಿನಃ ಮೂಲಭಾಗ ಹಾಗೇ ಉಳಿದುಕೊಳ್ಳುತ್ತದೆ. ಖಾಲಿಯಾದ ಈ ಭಾಗ ಮತ್ತೆ ತುಂಬಿ ಇನ್ನಷ್ಟು ದೊಡ್ಡದಾಗುತ್ತವೆ. ಪ್ರತಿಬಾರಿಯ ಚಿವುಟುವಿಕೆಯಿಂದ ಈ ತಲೆಯ ವ್ಯಾಸ ಹೆಚ್ಚುತ್ತಾ ಹೋಗುತ್ತದೆ.

ಹಿರಿಯರಲ್ಲಿ ಈ ಬ್ಲ್ಯಾಕ್ ಹೆಡ್‌ಗಳು ತುಂಬಾ ದೊಡ್ಡ ಗಾತ್ರದಲ್ಲಿರಲು ಇದೇ ಕಾರಣ. ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ? ಇದೆ! ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ. ಇವುಗಳನ್ನು ಉಪಯೋಗಿಸಿ ಬ್ಲ್ಯಾಕ್ ಹೆಡ್ ಗಳಿಂದ ಮುಕ್ತಿ ಪಡೆಯಲು ಪ್ರಮುಖವಾದ ಇಪ್ಪತ್ತು ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಬ್ಲ್ಯಾಕ್ ಹೆಡ್ ನಿವಾರಣೆಗೆ ಏನು ಮಾಡಬಹುದು?

ಆಲೂಗಡ್ಡೆ

ಆಲೂಗಡ್ಡೆ

ಹಸಿ ಆಲುಗಡ್ಡೆ ಮೊಡವೆಗಳಿಗೆ ಉತ್ತಮವಾದ ಆರೈಕೆಯಾಗಿದೆ. ಬ್ಲ್ಯಾಕ್ ಹೆಡ್ ನಿವಾರಣೆಗೂ ಈ ಆಲುಗಡ್ಡೆಯನ್ನು ಬಳಸಬಹುದು. ಆಲುಗಡ್ಡೆಯ ತೆಳುವಾದ ಬಿಲ್ಲೆಯನ್ನು ಕತ್ತರಿಸಿಕೊಂಡು ಬ್ಲ್ಯಾಕ್ ಹೆಡ್ ಇರುವಲ್ಲಿ ಸ್ವಲ್ಪ ಒತ್ತಡದಲ್ಲಿ ಕೊಂಚ ಸಮಯ ಉಜ್ಜಬೇಕು. ಸ್ವಲ್ಪ ಸಮಯ ಬಿಟ್ಟು ದಟ್ಟನೆಯ ಟವಲ್ ಉಪಯೋಗಿಸಿ ಒಣಗಿದ ಆಲುಗಡ್ಡೆಯ ರಸವನ್ನು ಒರೆಸಿ ತೆಗೆಯಬೇಕು. ಇದು ಬ್ಲ್ಯಾಕ್‌ಹೆಡ್‌ಗಳನ್ನು ತನ್ನೊಂದಿಗೆ ಸೆಳೆದುಕೊಂಡು ಬರುತ್ತದೆ. ತಣ್ಣನೆಯ ನೀರಿನಲ್ಲಿ ಬಳಿಕ ಮುಖ ತೊಳೆದುಕೊಳ್ಳಬೇಕು.

ಜೇನು ಸಹಾ ಒಳ್ಳೆಯದು

ಜೇನು ಸಹಾ ಒಳ್ಳೆಯದು

ಒಂದು ದೊಡ್ಡ ಚಮಚದಲ್ಲಿ ಅರ್ಧದಷ್ಟು ಜೇನು ತುಂಬಿಸಿ ಈ ಚಮಚವನ್ನು ನೇರವಾಗಿ ಒಲೆಯ ಜ್ವಾಲೆಯ ಮೇಲೆ ಹಿಡಿಯಬೇಕು. ಜೇನು ಸ್ವಲ್ಪ ಬಿಸಿಯಾಗುತ್ತಿದ್ದಂತೆಯೇ (ಸುಮಾರು ಉಗುರುಬೆಚ್ಚಗೆಗಿಂತ ಕೊಂಚ ಬಿಸಿ) ಜ್ವಾಲೆಯಿಂದ ಹೊರತೆಗೆಯಿರಿ. ಕುದಿಯಲು ಬಿಡಬಾರದು. ಒಂದು ವೇಳೆ ಹೆಚ್ಚು ಬಿಸಿಯಾದರೆ ಚಿಕಿತ್ಸೆಗೆ ಬಳಸಬೇಡಿ, ಇನ್ನೊಂದು ಚಮಚ ಹೊಸ ಜೇನನ್ನು ಬಳಸಿ. ಈ ಬೆಚ್ಚಗಿನ ಜೇನನ್ನು ಬ್ಲ್ಯಾಕ್ ಹೆಡ್ ಗಳಿರುವಲ್ಲಿ ದಪ್ಪನಾಗಿ ಹಚ್ಚಿ. ಸುಮಾರು ಹನ್ನೆರಡರಿಂದ ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ದಾಲ್ಚಿನ್ನಿ ಮತ್ತು ಜೇನು

ದಾಲ್ಚಿನ್ನಿ ಮತ್ತು ಜೇನು

ದಾಲ್ಚಿನ್ನಿಪುಡಿ ಮಿಶ್ರಿತ ಜೇನನ್ನು ಬ್ಲ್ಯಾಕ್ ಹೆಡ್ ಗಳಿರುವಲ್ಲಿ ಹಚ್ಚಿ ಸುಮಾರು ಹದಿನೈದು ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳಿ. ಚರ್ಮದ ಕಾಂತಿ ಹೆಚ್ಚಿಸಲೂ ಈ ಮಿಶ್ರಣ ನೆರವಾಗುತ್ತದೆ.

ಟೊಮೇಟೊ ತಿರುಳು

ಟೊಮೇಟೊ ತಿರುಳು

ಚೆನ್ನಾಗಿ ಹಣ್ಣಾದ ಒಂದು ಟೋಮಾಟೋದ ಸಿಪ್ಪೆ ಸುಲಿದು ಬೀಜ ಬೇರ್ಪಡಿಸಿ ಕೇವಲ ತಿರುಳನ್ನು ಚೆನ್ನಾಗಿ ರುಬ್ಬಿ ದ್ರಾವಣವನ್ನು ತಯಾರಿಸಿ. ಈ ದ್ರಾವಣವನ್ನು ಬ್ಲ್ಯಾಕ್ ಹೆಡ್ ಇರುವಲ್ಲಿ ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಸುಮಾರು ಹದಿನೈದರಿಂದ ಮೂವತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಮುಖದಲ್ಲಿ ಎಣ್ಣೆ ಪಸೆ ಇದ್ದರೆ ಇತರ ಭಾಗಗಳಿಗೆ ತೆಳ್ಳನಾಗಿ ಹಚ್ಚಿ. ಶೀಘ್ರವೇ ತ್ವಚೆ ಎಣ್ಣೆ ಮತ್ತು ಬ್ಲ್ಯಾಕ್ ಹೆಡ್‌ನಿಂದ ಮುಕ್ತಗೊಳ್ಳುತ್ತದೆ.

ಮೆಕ್ಕೆಜೋಳದ ಹಿಟ್ಟು (Cornstarch)

ಮೆಕ್ಕೆಜೋಳದ ಹಿಟ್ಟು (Cornstarch)

ಮೆಕ್ಕೆಜೋಳದ ಹಿಟ್ಟನ್ನು ಸ್ವಲ್ಪ ನೀರಿನೊಂದಿಗೆ ಸೇರಿಸಿ ಮಿಶ್ರಣವನ್ನು ತಯಾರಿಸಿ. ಬ್ಲ್ಯಾಕ್ ಹೆಡ್ ಇರುವಲ್ಲಿ ಒಂದು ಬ್ರಶ್ ಮೂಲಕ ದಪ್ಪನಾಗಿ ಹಚ್ಚಿಕೊಂಡು ಒಣಗಲು ಬಿಡಿ. ಸುಮಾರು ಇಪ್ಪತ್ತು ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆದುಕೊಳ್ಳಿ.

ಮುಖವನ್ನು ಹಬೆಗೆ ಒಡ್ಡಿ

ಮುಖವನ್ನು ಹಬೆಗೆ ಒಡ್ಡಿ

ಚರ್ಮದ ರಂಧ್ರಗಳನ್ನು ಶುಭ್ರಗೊಳಿಸಲು ಹಬೆ ಅತ್ಯುತ್ತಮ ಚಿಕಿತ್ಸೆಯಾಗಿದೆ. ಇದನ್ನು ಬ್ಲ್ಯಾಕ್ ಹೆಡ್‌ಗಳಿಗೂ ಅನ್ವಯಿಸಬಹುದು. ಬರೆಯ ಹಬೆಗಿಂತಲೂ ಕುದಿಯುತ್ತಿರುವ ನೀರಿನಲ್ಲಿ ಲ್ಯಾವೆಂಡರ್ ಹೂವು, ಲಿಂಬೆಯ ಸಿಪ್ಪೆ ಅಥವಾ ಪುದಿನಾ ಎಲೆಗಳನ್ನು ಸೇರಿಸಿ ಈಗ ಬರುವ ಹಬೆಯಲ್ಲಿ ಮುಖವನ್ನು ಒಡ್ಡುವುದರಿಂದ ಕಪ್ಪುತಲೆಗಳು ಶೀಘ್ರವಾಗಿ ಹೊರಬರುತ್ತವೆ.

ಅಪ್ಪಟ ಹಸುವಿನ ಹಾಲು

ಅಪ್ಪಟ ಹಸುವಿನ ಹಾಲು

ಪ್ಯಾಶ್ಚರೀಕರಿಸಿದ ಅಪ್ಪಟ ಹಸುವಿನ ಹಾಲು ತಣ್ಣಗಿರುವಂತೆಯೇ ಸ್ವಚ್ಛವಾದ ವಸ್ತ್ರದಲ್ಲಿ ಅದ್ದಿ ಬ್ಲ್ಯಾಕ್ ಹೆಡ್‌ಗಳನ್ನು ಒರೆಸಿಕೊಳ್ಳಿ. ಇದು ಚಿಕ್ಕ ಪ್ರಮಾಣದ ಬ್ಲ್ಯಾಕ್ ಹೆಡ್‌ಗಳಿಗೆ ಉಪಯುಕ್ತವಾಗಿದೆ. ದೊಡ್ಡ ಬ್ಲ್ಯಾಕ್ ಹೆಡ್‌ಗಳ ತುದಿ ಮಾತ್ರ ತುಂಡಾಗುತ್ತದೆ.

ಲೋಳೆಸರ (ಆಲೋವೆರಾ)

ಲೋಳೆಸರ (ಆಲೋವೆರಾ)

ಕಪ್ಪುತಲೆಗಳಿಗೆ ಅತ್ಯುತ್ತಮವಾದ ಮನೆಮದ್ದು ಎಂದರೆ ಲೋಳೆಸರ. ಲೋಳೆಸರದ ಈಗತಾನೇ ಕೊಯ್ದ ಕೋಡೊಂದನ್ನು ರಸ ಇಳಿಯುತ್ತಿರುವ ಭಾಗ ತಾಗುವಂತೆ ಬ್ಲ್ಯಾಕ್ ಹೆಡ್‌ಗಳ ಮೇಲೆ ನಯವಾಗಿ ಉಜ್ಜಿ. ಈ ಉಜ್ಜುವಿಕೆ ಕೆಳಗಿನಿಂದ ಮೇಲೆ ಮಾತ್ರ ಇರಬೇಕು. ಸುಮಾರು ಹದಿನೈದು ನಿಮಿಷ ಸತತವಾಗಿ ಉಜ್ಜಬೇಕು. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಬೇಕು.

ಪುದಿನಾಯುಕ್ತ ಹಲ್ಲು ಉಜ್ಜುವ ಪೇಸ್ಟ್

ಪುದಿನಾಯುಕ್ತ ಹಲ್ಲು ಉಜ್ಜುವ ಪೇಸ್ಟ್

ಹಲ್ಲುಜ್ಜುವ ಹಲ್ಲು ಉಜ್ಜುವ ಸಹಾ ಬ್ಲ್ಯಾಕ್ ಹೆಡ್ ನಿವಾರಣೆಗೆ ಸಹಕಾರಿಯಾಗಿದೆ. ಇದಕ್ಕೆ ಪುದಿನಾಯುಕ್ತ ಪೇಸ್ಟ್ ಉತ್ತಮ. ಬ್ಲ್ಯಾಕ್ ಹೆಡ್ ಗಳಿರುವಲ್ಲಿ ದಪ್ಪನಾಗಿ ಹಚ್ಚಿ ಒಣಗಿ ಗಟ್ಟಿಯಾಗಲು ಬಿಡಬೇಕು. ಬಳಿಕ ನಿಧಾನವಾಗಿ ಕೆಳಗಿನಿಂದ ಮೇಲಕ್ಕೆ ಸಿಪ್ಪೆಯಂತೆ ಸುಲಿಯುತ್ತಾ ಬರಬೇಕು. ಇದರೊಂದಿಗೆ ಬ್ಲ್ಯಾಕ್ ಹೆಡ್‌ಗಳು ಬುಡಸಹಿತ ಕಿತ್ತು ಬರುತ್ತವೆ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಬೇಕು.

ಕಲ್ಲುಸಕ್ಕರೆ

ಕಲ್ಲುಸಕ್ಕರೆ

ಕಲ್ಲುಸಕ್ಕರೆಯ ದೊಡ್ಡ ತುಂಡನ್ನು ಸೋಪಿನಂತೆ ಬ್ಲ್ಯಾಕ್ ಹೆಡ್ ಗಳಿರುವ ಜಾಗದಲ್ಲಿ ನಯವಾಗಿ ಉಜ್ಜುವುದರಿಂದ ಬ್ಲ್ಯಾಕ್‌ ಹೆಡ್ ನಿವಾರಣೆಯಾಗುವ ಜೊತೆ ಸತ್ತ ಜೀವಕೋಶಗಳನ್ನು ನಿವಾರಿಸಲೂ ಸಾಧ್ಯವಾಗುತ್ತದೆ. ಸತ್ತ ಜೀವಕೋಶಗಳ ನಿವಾರಣೆಯಿಂದ ಚರ್ಮ ಹೊಸ ಜೀವಕೋಶಗಳ ಮೂಲಕ ಹೊಸ ಕಾಂತಿ ಪಡೆಯಲು ಸಾಧ್ಯವಾಗುತ್ತದೆ.

ಲಿಂಬೆ

ಲಿಂಬೆ

ಚರ್ಮದ ರಂಧ್ರಗಳಲ್ಲಿ ಗಟ್ಟಿಯಾಗಿ ಕುಳಿತಿರುವ ಬ್ಲ್ಯಾಕ್ ಹೆಡ್ ಗಳನ್ನು ಲಿಂಬೆ ಸಡಿಲ ಮಾಡುತ್ತದೆ. ಒಂದು ಲಿಂಬೆಹಣ್ಣನ್ನು ಅರ್ಧ ತುಂಡು ಮಾಡಿ ಲಿಂಬೆರಸ ತಾಕುವಂತೆ ನಯವಾಗಿ ಬ್ಲ್ಯಾಕ್ ಹೆಡ್‌ಗಳ ಮೇಲೆ ಉಜ್ಜಬೇಕು. ಇದರಿಂದಾಗಿ ಚರ್ಮದ ರಂಧ್ರಗಳು ಸಡಿಲಗೊಂಡು ಸುಲಭವಾಗಿ ಹೊರಬರುತ್ತವೆ.

ಮೊಟ್ಟೆಯ ಬಿಳಿಭಾಗ

ಮೊಟ್ಟೆಯ ಬಿಳಿಭಾಗ

ಮೊಟ್ಟೆಯ ಬಿಳಿಭಾಗವನ್ನು ಹಳದಿ ಭಾಗದಿಂದ ಬೇರ್ಪಡಿಸಿ ಬ್ಲ್ಯಾಕ್ ಹೆಡ್ ಗಳಿರುವಲ್ಲಿ ತೆಳುವಾಗಿ ಹೆಚ್ಚಿ. ಕೊಂಚ ಒಣಗಿದ ಬಳಿಕ ಇನ್ನೊಂದು ಪದರ ಹಚ್ಚಿ. ಹೀಗೇ ಮೂರು ಅಥವಾ ನಾಲ್ಕು ಪದರಗಳನ್ನು ಹಚ್ಚಿ ಗಟ್ಟಿಯಾಗಿ ಒಣಗಲು ಬಿಡಿ. ಬಳಿಕ ಕೆಳನಿಂದ ಪ್ರಾರಂಭಿಸಿ ಮೇಲಕ್ಕೆತ್ತುತ್ತಾ ಈ ಪದರವನ್ನು ಎಳೆದು ತೆಗೆಯಿರಿ. ಬ್ಲ್ಯಾಕ್ ಹೆಡ್‌ಗಳು ಈ ಪದರಕ್ಕೆ ಅಂಟಿಕೊಂಡು ಬರುತ್ತವೆ.

ಕಡಲೆಹಿಟ್ಟು ಮತ್ತು ಬಾದಾಮಿ

ಕಡಲೆಹಿಟ್ಟು ಮತ್ತು ಬಾದಾಮಿ

ಒಂದು ಬಾದಾಮಿಯನ್ನು ನಯವಾಗಿ ಅರೆದು ಒಂದು ಚಮಚ ಕಡಲೆಹಿಟ್ಟಿನೊಂದಿಗೆ ಬೆರೆಸಿ ನೀರು ಸೇರಿಸಿ ದಪ್ಪನೆಯ ದ್ರಾವಣ ತಯಾರಿಸಿ. ಇದನ್ನು ಬ್ಲ್ಯಾಕ್ ಹೆಡ್‌ಗಳ ಮೇಲೆ ದಪ್ಪನಾಗಿ ಹಚ್ಚಿ ಸುಮಾರು ಅರ್ಧ ಘಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಮೊಸರು ಮತ್ತು ಲಿಂಬೆ

ಮೊಸರು ಮತ್ತು ಲಿಂಬೆ

ಒಂದು ದೊಡ್ಡಚಮಚ ಲಿಂಬೆರಸಕ್ಕೆ ಎರಡು ಚಮಚ ಮೊಸರನ್ನು ಸೇರಿಸಿ ಬ್ಲ್ಯಾಕ್‌ ಹೆಡ್‌ಗಳಿರುವಲ್ಲಿ ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಸುಮಾರು ಅರ್ಧ ಘಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಅಡುಗೆ ಸೋಡಾ

ಅಡುಗೆ ಸೋಡಾ

ಎರಡು ದೊಡ್ಡಚಮಚ ನೀರಿಗೆ ಒಂದು ದೊಡ್ಡಚಮಚ ಅಡುಗೆ ಸೋಡಾ ಸೇರಿಸಿ ದ್ರಾವಣವನ್ನು ತಯಾರಿಸಿ. ಈ ದ್ರಾವಣವನ್ನು ಬ್ಲ್ಯಾಕ್ ಹೆಡ್‌ಗಳ ಮೇಲೆ ದಪ್ಪನಾಗಿ ಹಚ್ಚಿಕೊಳ್ಳಿ. ಹಚ್ಚುವಿಕೆ ಕೆಳಗಿನಿಂದ ಮೇಲಕ್ಕೆ ವೃತ್ತಾಕಾರದಲ್ಲಿರಲಿ. ಸುಮಾರು ಮೂರರಿಂದ ಐದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಒಂದು ವೇಳೆ ಹಚ್ಚುವಾಗ ಉರಿ ಎನಿಸಿದರೆ ತಕ್ಷಣ ನಿಲ್ಲಿಸಿ ಬಿಡಿ, ಕೆಲವರಿಗೆ ಅಡುಗೆ ಸೋಡಾ ಅಲರ್ಜಿ ತರಿಸುತ್ತದೆ.

ಅರಿಶಿನ ಮತ್ತು ಪುದಿನಾ ಎಲೆ

ಅರಿಶಿನ ಮತ್ತು ಪುದಿನಾ ಎಲೆ

ಅರಿಶಿನ ಪುಡು ಮತ್ತು ಪುದಿನಾ ಎಲೆಗಳನ್ನು ಅರೆದು ಮಾಡಿದ ದ್ರಾವಣವನ್ನು ಸಮಪ್ರಮಾಣದಲ್ಲಿ ಮಿಶ್ರಣಮಾಡಿ. ಇದನ್ನು ಬ್ಲ್ಯಾಕ್ ಹೆಡ್ ಗಳಿರುವಲ್ಲಿ ಕೆಳಗಿನಿಂದ ಮೇಲಕ್ಕೆ ಬರುವಂತೆ ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಸುಮಾರು ಅರ್ಧ ಘಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಸ್ಟ್ರಾಬೆರಿ ಎಲೆಗಳು

ಸ್ಟ್ರಾಬೆರಿ ಎಲೆಗಳು

ಸ್ಟ್ರಾಬೆರಿಯ ಎಲೆಗಳು ಹೆಚ್ಚು ಕ್ಷಾರಯುಕ್ತವಾದುದರಿಂದ ಬ್ಲ್ಯಾಕ್ ಹೆಡ್ ನಿವಾರಣೆಗೆ ಉಪಯುಕ್ತವಾಗಿದೆ. ಈ ಎಲೆಗಳನ್ನು ಅರೆದು ಬ್ಲ್ಯಾಕ್ ಹೆಡ್‌ಗಳಿರುವಲ್ಲಿ ಹಚ್ಚಿಕೊಂಡು ಕೊಂಚ ಸಮಯದ ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳಿ.

ಮೆಂತೆ ಎಲೆಗಳು

ಮೆಂತೆ ಎಲೆಗಳು

ಒಂದು ಹಿಡಿ ಮೆಂತೆ ಎಲೆಗಳನ್ನು ಚೆನ್ನಾಗಿ ತೊಳೆದು ನೀರಿಲ್ಲದೇ ಪುಡಿ ಮಾಡಿಕೊಳ್ಳಿ. ಬಳಿಕ ಎರಡು ತೊಟ್ಟು ನೀರು ಸೇರಿಸಿ ಅರೆಯಿರಿ. ಬಳಿಕ ಬ್ಲ್ಯಾಕ್ ಹೆಡ್ ಗಳಿರುವಲ್ಲಿ ದಪ್ಪನಾಗಿ ಹಚ್ಚಿಕೊಳ್ಳಿ. ಪೂರ್ಣವಾಗಿ ಒಣಗಿದ ಬಳಿಕ ತಣ್ಣನೆಯ ಹಾಲಿನಿಂದ ತೊಳೆದುಕೊಳ್ಳಿ.

ಓಟ್ ಧಾನ್ಯದ ಹಾಲು (Oatmeal)

ಓಟ್ ಧಾನ್ಯದ ಹಾಲು (Oatmeal)

ಓಟ್ ಧಾನ್ಯದ ಹಾಲು ಸಹಾ ಬ್ಲ್ಯಾಕ್ ಹೆಡ್ ನಿವಾರಿಸಲು ಉಪಯುಕ್ತವಾಗಿದೆ. ಈ ಹಾಲು ಮತ್ತು ಹಸುವಿನ ಹಾಲನ್ನು ಸಮಪ್ರಮಾಣದಲ್ಲಿ ಬೆರೆಸಿ ಬ್ಲ್ಯಾಕ್ ಹೆಡ್‌ಗಳಿರುವಲ್ಲಿ ಬೆಳಿಗ್ಗೆ ಎದ್ದ ಕೂಡಲೇ ಮುಖ ತೊಳೆಯುವ ಮುನ್ನ ಹಚ್ಚಿಕೊಳ್ಳಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಕಪ್ಪು ಅವರೆಕಾಳಿನ ಹಿಟ್ಟು

ಕಪ್ಪು ಅವರೆಕಾಳಿನ ಹಿಟ್ಟು

ಕಪ್ಪು ಅವರೆ (black beans) ಯನ್ನು ನುಣ್ಣಗೆ ಪುಡಿಮಾಡಿ ನೀರನ್ನು ಬೆರೆಸಿ ಮಾಡಿದ ಮಿಶ್ರಣವನ್ನು ಬ್ಲ್ಯಾಕ್ ಹೆಡ್‌ಗಳಿರುವಲ್ಲಿ ಹೆಚ್ಚಿ ಕೊಂಚ ಸಮಯದ ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳುವ ಮೂಲಕ ಶೀಘ್ರ ಬ್ಲ್ಯಾಕ್ ಹೆಡ್‌ಗಳು ಮಾಯವಾಗುತ್ತವೆ.

English summary

20 Homely Ways To Get Rid Of Blackheads

Do you resent looking at your face in the mirror cause of those nasty blackheads? If, yes, then we have some ways you can try out to get rid of the blackheads on your nose. Here are some of the ways to remove the blackheads on your nose:
X
Desktop Bottom Promotion