For Quick Alerts
ALLOW NOTIFICATIONS  
For Daily Alerts

ಮಹಿಳೆಯರೆ ಚಳಿಗಾಲಕ್ಕೆ ಚರ್ಮದ ಆರೈಕೆ ಹೀಗಿರಲಿ

|

ಚಳಿಗಾಲದಲ್ಲಿ ಹೇಗೆ ಚರ್ಮದ ಆರೈಕೆಯನ್ನು ಮಾಡಬೇಕು ಎನ್ನುವುದಕ್ಕೆ ಹಲವು ವಿಧಾನಗಳಿವೆ. ಆದರೆ ಅವು ನಿಮ್ಮ ತ್ವಚೆಗೆ ಹೊಂದುವಂತಿರಬೇಕು. ಚಳಿಗಾಲದೊಂದಿಗೆ ನಿಮ್ಮ ಚರ್ಮವು ಕಾಂತಿಹೀನವಾಗಿ, ಒಣಗಿ, ಬಿರುಕು ಬಿಟ್ಟು ತುರಿಕೆಗಳು ಶುರುವಾಗಬಹುದು. ಇವುಗಳಿಂದ ಪಾರಾಗಲು ನಾವು ಹೇಳಿರುವ ಕೆಲವು ಸಲಹೆಗಳನ್ನು ಪಾಲಿಸಿ. ಇದರಿಂದ ನಿಮ್ಮ ಚರ್ಮದ ಸಮಸ್ಯೆ ಕಡಿಮೆಯಾಗುತ್ತದೆ.

ವರ್ಷದ ಎಲ್ಲ ಋತುಗಳಲ್ಲೂ ಚರ್ಮದ ಆರೈಕೆಯ ಕಡೆ ಗಮನ ನೀಡಬೇಕಾದದ್ದು ಅತ್ಯಗತ್ಯ. ಆದರೆ ಚಳಿಗಾಲದಲ್ಲಿ ಸ್ವಲ್ಪ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

ಬೋಲ್ಡ್ ಸ್ಕೈ ನಿಮ್ಮೊಂದಿಗೆ ನಿಮ್ಮ ತ್ವಚೆಯನ್ನು ಚಳಿಗಾಲದಲ್ಲಿ ರಕ್ಷಿಸಿಕೊಳ್ಳಲು ನೆರವಾಗುವ ಕೆಲವು ರಹಸ್ಯಗಳನ್ನು ಹಂಚಿಕೊಂಡಿದೆ. ನೀವು 20ರ ಹರೆಯದವರಾಗಿದ್ದಲ್ಲಿ ಇದನ್ನು ಪಾಲಿಸುವುದು ಅತ್ಯಗತ್ಯ.

ಮಹಿಳೆಯರಿಗೆ ಚಳಿಗಾಲದಲ್ಲಿ ಚರ್ಮದ ಆರೈಕೆಯ ರಹಸ್ಯಗಳು

ಮಾಯ್ಸಿಶ್ಚುರೈಸ್

ಮಾಯ್ಸಿಶ್ಚುರೈಸ್

ನಿಮ್ಮ ಚರ್ಮಕ್ಕೆ ಮಾಯ್ಸಿಶ್ಚುರೈಸರು ಹಚ್ಚುವುದನ್ನು ಮರೆಯಬೇಡಿ. ಇದರಿಂದ ನಿಮ್ಮ ಚರ್ಮ ಮೃದುವಾಗುತ್ತದೆ.

ನೀರನ್ನು ಪ್ರೀತಿಸಿ

ನೀರನ್ನು ಪ್ರೀತಿಸಿ

ಚಳಿಗಾಲದಲ್ಲಿನ ಚರ್ಮದ ಸಮಸ್ಯೆಗಳಿಗೆ ನೀರು ಅತ್ಯುತ್ತಮ ಔಷಧಿ. ನೀವು ಹೆಚ್ಚು ಹೆಚ್ಚು ನೀರು ಕುಡಿದಷ್ಟು ನಿಮ್ಮ ಚರ್ಮದ ಕಾಂತಿ ಹೆಚ್ಚುತ್ತದೆ.

ಬಿಸಿನೀರಿನ ಸ್ನಾನ ಬೇಡ

ಬಿಸಿನೀರಿನ ಸ್ನಾನ ಬೇಡ

ಚಳಿಗಾಲದಲ್ಲಿ ಬಿಸಿನೀರಿನ ಸ್ನಾನ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ. ಆದರೆ ಚಳಿಗಾಲದಲ್ಲಿ ಹೆಚ್ಚು ಬಿಸಿ ನೀರನ್ನು ಸ್ನಾನಕ್ಕೆ ಬಳಸಿದರೆ ಚರ್ಮ ಬಿರುಕು ಬಿಡಲು ಆರಂಭವಾಗುತ್ತದೆ. ಆದ್ದರಿಂದ ಮಹಿಳೆಯರೆ ಹೆಚ್ಚು ಬಿಸಿನೀರಿನ ಸ್ನಾನದಿಂದ ದೂರವಿರಿ.

ಆಲ್ಕೊಹಾಲ್ ಯುಕ್ತ ಪ್ರಸಾದನಗಳಿಂದ ದೂರವಿರಿ

ಆಲ್ಕೊಹಾಲ್ ಯುಕ್ತ ಪ್ರಸಾದನಗಳಿಂದ ದೂರವಿರಿ

ಆಲ್ಕೊಹಾಲ್ ಬಹುತೇಕ ಕ್ರೀಂ ಮತ್ತು ಸ್ಕರ್ಬ್ಸಗಳಲ್ಲಿರುತ್ತದೆ. ಆಲ್ಕೊಹಾಲ್ ಯುಕ್ತ ಈ ಪ್ರಸಾಧನಗಳು ಚಳಿಗಾಲದಲ್ಲಿ ಕಂಡುಬರುವ ಚರ್ಮದ ಮೇಲೆ ತುರಿಕೆಯಿಂದುಂಟಾಗುವ ಕೆಂಪು ಬಣ್ಣದ ಕಲೆಗಳಿಗೆ ಕಾರಣವಾಗಬಹುದು. ಆದ್ದರಿಂದ ಇವನ್ನು ಬಳಸಬೇಡಿ.

ಲಿಪ್ ಕೇರ್

ಲಿಪ್ ಕೇರ್

ಮಹಿಳೆಯರು ಚಳಿಗಾಲದಲ್ಲಿ ತಮ್ಮ ತುಟಿಗಳನ್ನು ಬೆಣ್ಣೆ ಬಳಸಿ ರಕ್ಷಿಸಿಕೊಳ್ಳಬಹುದು. ಇದು ನಿಮ್ಮ ತುಟಿಗಳನ್ನು ಮೃದುವಾಗಿರಿಸುತ್ತದೆ. ನೀವು ಮಲಗುವ ಮುನ್ನ ತುಟಿಗಳಿಗೆ ಬೆಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ತುಟಿಗಳು ಒಡೆಯುವುದು ತಪ್ಪುತ್ತದೆ.

ನೋಸ್ ಬಾಂ

ನೋಸ್ ಬಾಂ

ಚಳಿಗಾಲದಲ್ಲಿ ಮೂಗಿನ ಬದಿಗಳು ಒಡೆಯುವುದನ್ನು ಕಾಣುತ್ತೇವೆ. ಇದರಿಂದ ಪಾರಾಗಲು ಸ್ವಲ್ಪ ಬೆಣ್ಣೆಯನ್ನು ಪ್ರತಿ ದಿನ ಬೆಳಗ್ಗೆ ಎದ್ದ ತಕ್ಷಣ ಮೂಗಿನ ಬದಿಗಳಿಗೆ ಹಚ್ಚಿಕೊಳ್ಳಿ.

ಮೇಕಪ್ ಹಚ್ಚುವ ಮುನ್ನ

ಮೇಕಪ್ ಹಚ್ಚುವ ಮುನ್ನ

ಚಳಿಗಾಲದ ದಿನಗಳಲ್ಲಿ ಮೇಕಪ್ ಮಾಡಿಕೊಳ್ಳುವುದು ಒಂದು ಸವಾಲೆ ಸರಿ. ನೀವು ಮೇಕಪ್ ಮಾಡಿಕೊಳ್ಳುವ ಮುನ್ನ ಒಂದು ಕೋಟ್ ಕೋಲ್ಡ್ ಕ್ರೀಂ ಹಚ್ಚಿಕೊಳ್ಳಿ. ಇದರಿಂದ ಮುಖದಲ್ಲಿ ತೇವಾಂಶ ಹಾಳಾಗದೆ ಉಳಿಯುತ್ತದೆ.

ಫೇಸ್ ಪ್ಯಾಕ್

ಫೇಸ್ ಪ್ಯಾಕ್

ಚಳಿಗಾಲದಲ್ಲಿ ಫೇಸ್ ಪ್ಯಾಕ್ ಗಳನ್ನು ಹಚ್ಚಿಕೊಳ್ಳುವ ಮುನ್ನ ಎಚ್ಚರದಿಂದಿರಬೇಕು. ಚಳಿಗಾಲದಲ್ಲಿ ಆದಷ್ಟು ಹಣ್ಣಿನ ಫೇಸ್ ಪ್ಯಾಕ್ ಬಳಸುವುದು ಒಳ್ಳೆಯದು. ಇದು ಚರ್ಮಕ್ಕೆ ಪೋಷಣೆ ನೀಡುತ್ತದೆ.

ಎಕ್ಸಫೋಲಿಯೇಶನ್

ಎಕ್ಸಫೋಲಿಯೇಶನ್

ಚಳಿಗಾಲದಲ್ಲಿ ಚರ್ಮ ಒಣಗಿರುತ್ತದೆಯಾದ್ದರಿಂದ ಒಣ ಚರ್ಮದ ಪಕಳೆಗಳನ್ನು ತೆಗೆದು ಹಾಕಲು ಸ್ಕರ್ಬರ್ ಗಳನ್ನು ಹುಷಾರಾಗಿ ಬಳಸಬೇಕು. ಆದ್ದರಿಂದ ಮಹಿಳೆಯರೆ ಮುಖಕ್ಕೆ ಆದಷ್ಟು ಮೆದುವಾದ ಸ್ಕರ್ಬರ್ ಗಳನ್ನು ಬಳಸಿ ಉದಾಹರಣೆಗೆ ಅಡುಗೆ ಸೋಡಾ ಅಥವ ಉಪ್ಪನ್ನು ಬಳಸುವುದು ಉತ್ತಮ.

ಕೆಲ ಸಾಮಗ್ರಿಗಳು

ಕೆಲ ಸಾಮಗ್ರಿಗಳು

ಬಹಳಷ್ಟು ಮಹಿಳೆಯರು ಚರ್ಮವನ್ನು ಮೃದುವಾಗಿರಿಸಿಕೊಳ್ಳಲು ಜೇನುತುಪ್ಪವನ್ನು ಬಳಸುತ್ತಾರೆ. ಆದರೆ ಪರಿಣಿತರ ಪ್ರಕಾರ ಜೇನುತುಪ್ಪ ನಿಮ್ಮ ಚರ್ಮ ಮತ್ತಷ್ಟು ಒಡೆಯುವಂತೆ ಮಾಡುತ್ತದೆ. ಏಕೆಂದರೆ ಜೇನು ತುಪ್ಪ ಅಂಟು ಪದಾರ್ಥವಾದ್ದರಿಂದ ಇದು ಚರ್ಮವನ್ನು ಎಳೆದು ಬಿಡುವ ಸಾಧ್ಯತೆಗಳು ಹೆಚ್ಚು.

ಮೊಡವೆಗಳಿಗೆ

ಮೊಡವೆಗಳಿಗೆ

ನಿಮಗೆ ಮೊಡವೆಗಳ ಸಮಸ್ಯೆಯಿದ್ದರೆ ಚಳಿಗಾಲದಲ್ಲಿ ನೀವು ಮತ್ತಷ್ಟು ಎಚ್ಚರದಿಂದಿರಬೇಕು. ಚಳಿಗಾಲದಲ್ಲಿ ನೀವು ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಮಾಡಬಹುದಾದ ಒಂದು ಉಪಾಯವೆಂದರೆ ಆಗಾಗ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯುತ್ತಿರಿ. ಇದರಿಂದ ತುರಿಕೆ ಕಡಿಮೆಯಾಗುತ್ತದೆ.

ಕೆಲವು ತರಕಾರಿಗಳನ್ನು ಬಳಸಬೇಡಿ

ಕೆಲವು ತರಕಾರಿಗಳನ್ನು ಬಳಸಬೇಡಿ

ನಾವು ಯಾವಾಗಲೂ ಚಳಿಗಾಲದಲ್ಲಿ ಹೆಚ್ಚು ತರಕಾರಿಗಳನ್ನು ಬಳಸಿ ಎಂದು ಹೇಳುತ್ತಿರುತ್ತೇವೆ. ಆದರೆ ಆಸ್ಪರಗಸ್ ನಂತಹ ತರಕಾರಿಗಳಿಂದ ದೂರವಿರಿ ಏಕೆಂದರೆ ಇದು ಚರ್ಮವನ್ನು ಒಣಗುವಂತೆ ಮಾಡುತ್ತದೆ.

English summary

Winter Skin Care Secrets For Women

Winter skin care secrets for women are many, but you should know what suits your skin better. With the onset of winter, your skin turns pale, dry, flaky and not to forget itchy too.
Story first published: Saturday, December 14, 2013, 10:30 [IST]
X
Desktop Bottom Promotion