For Quick Alerts
ALLOW NOTIFICATIONS  
For Daily Alerts

ನಿಮ್ಮ ತ್ವಚೆಯ ಆರೈಕೆಗೆ ಏನೆಲ್ಲಾ ಅವಶ್ಯಕ?

|

ನಮ್ಮ ದೇಹವನ್ನು ತ್ವಚೆಯೂ ಆಕರ್ಷಣೆ ಮಾಡುತ್ತದೆ. ನಿಮ್ಮ ಆರೋಗ್ಯವನ್ನು ನಿಮ್ಮ ಮುಖ ಪ್ರತಿಬಿಂಬಿಸುತ್ತದೆ. ನೀವು ಏನು ತಿನ್ನುತ್ತೀರಿ, ನಿಮ್ಮ ಜೀವನ ಶೈಲಿ ಹೇಗಿದೆ ಎಲ್ಲವೂ ತ್ವಚೆಯ ಮೇಲೆ ಪರಿಣಾಮವನ್ನು ಬೀರುತ್ತದೆ.

ನಿಮ್ಮ ತ್ವಚೆಗೆ ಕೆಲವು ಪ್ರೊಟೀನ್ ಹಾಗೂ ವಿಟಮಿನ್ ಗಳು ಅವಶ್ಯಕ. ಈ ಕೆಳಗೆ ನಾವು ಒಂದಿಷ್ಟು ಸಲಹೆಗಳನ್ನು ನೀಡದ್ದೇವೆ. ಅವುಗಳನ್ನು ಪಾಲಿಸಿದರೆ ನಿಮ್ಮ ತ್ವಚೆಯ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು.

ತ್ವಚೆಗಾಗಿ ಆಹಾರ

ತ್ವಚೆಗಾಗಿ ಆಹಾರ

ತ್ವಚೆಗೆ antioxidants ಅಧಿಕವಿರುವ ಆಹಾರ ತಿನ್ನಬೇಕು. ಮೀನು, ಹಣ್ಣುಗಳು, ವಿಟಮಿನ್ ಸಿ ಹಾಗೂ ಇ ಇರುವ ತರಕಾರಿಗಳನ್ನು ತಿನ್ನಿ. ಎಳನೀರನ್ನು ಕುಡಿಯಿರಿ. ಪ್ರತೀದಿನ ಎಳನೀರು ಕುಡಿದರೆ ಮುಖದ ಕಾಂತಿ ಹೆಚ್ಚುವುದು.

ವ್ಯಾಯಾಮ

ವ್ಯಾಯಾಮ

ದೇಹಕ್ಕೆ ಆಮ್ಲಜನಕದ ಪೂರೈಕೆ ಹೆಚ್ಚಾದರೆ ನಿಮ್ಮ ತ್ವಚೆಯ ಆರೋಗ್ಯವೂ ಹೆಚ್ಚಾಗುವುದು. ದೇಹದಲ್ಲಿ ಕೊಬ್ಬಿನಂಶ ಹೆಚ್ಚಾಗದೆ ಸಮತೂಕದ ಮೈಕಟ್ಟಿನಿಂದ ಆಕರ್ಷಕವಾಗಿ ಕಾಣುವಿರಿ. ಪ್ರತೀದಿನ 7-8 ಗಂಟೆ ನಿದ್ದೆ ಅವಶ್ಯಕ.

ಸ್ಟ್ರೆಚ್ ಮಾರ್ಕ್ಸ್

ಸ್ಟ್ರೆಚ್ ಮಾರ್ಕ್ಸ್

ಗರ್ಭಿಣಿಯಾಗಿದ್ದಾಗ, ದೇಹದ ತೂಕದಲ್ಲಿ ಏರಳಿತ ಉಂಟಾದಾಗ ಸ್ಟ್ರೆಚ್ ಮಾರ್ಕ್ಸ್ ಬೀಳುತ್ತದೆ. ವಿಟಮಿನ್ ಇ ಹಚ್ಚಿದರೆ ಸ್ಟ್ರೆಚ್ ಮಾರ್ಕ್ಸ್ ಅನ್ನು ಹೋಗಲಾಡಿಸಬಹುದು.

ಸನ್ ಸ್ಕ್ರೀನ್ ಲೋಷನ್

ಸನ್ ಸ್ಕ್ರೀನ್ ಲೋಷನ್

ಸೂರ್ಯನ ಕಿರಣಗಳು ನೇರವಾಗಿ ತ್ವಚೆಯ ಬೀಳುವುದನ್ನು ತಡೆಯಿರಿ. ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಲೋಷನ್ ಬಳಸುವುದು, ಮುಖಕ್ಕೆ ಬಿಸಿಲು ಬೀಳದಂತೆ ಟೋಪಿ ಧರಿಸುವುದು ಒಳ್ಳೆಯದು.

ವಯಸ್ಸಾದ ತ್ವಚೆಗೆ ಆರೈಕೆ

ವಯಸ್ಸಾದ ತ್ವಚೆಗೆ ಆರೈಕೆ

ವಯಸ್ಸಾದಂತೆ ತ್ವಚೆಯಲ್ಲಿ ಕೊಲೆಜಿನ್ ಕಡಿಮೆ ಉತ್ಪತ್ತಿಯಾಗಿ ಮುಖದಲ್ಲಿ ನೆರಿಗೆ ಬೀಳಲಾರಂಭಿಸುತ್ತದೆ. ವಯಸ್ಸಾದವರು ವಿಟಮಿನ್ ಸಿ ಇರುವ ಕ್ರೀಮ್ ಬಳಸಬೇಕು, ಮುಖದಲ್ಲಿ ತೇವಾಂಶ ಉಳಿಸುವಂತಹ ಸೋಪನ್ನು ಬಳಸಬೇಕು.

ಮದ್ಯ

ಮದ್ಯ

ಮದ್ಯ ತ್ವಚೆಗೆ ಒಳ್ಳೆಯದಲ್ಲ. ಮದ್ಯ ಕುಡಿದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಮುಖ ಡ್ರೈಯಾಗುತ್ತದೆ, ಮುಖದ ಕಾಂತಿ ಕಡಿಮೆಯಾಗುತ್ತಾ ಹೋಗುತ್ತದೆ.

 ಸಿಗರೇಟ್

ಸಿಗರೇಟ್

ಸಿಗರೇಟ್ ಚಟವಿದ್ದರೆ 30 ವರ್ಷದಲ್ಲಿಯೇ 40 ವರ್ಷದವರಂತೆ ಕಾಣುವಿರಿ. ಧೂಮಪಾನ ಆರೋಗ್ಯ ಹಾಗೂ ಸೌಂದರ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

 ತೆಳು ಮೇಕಪ್

ತೆಳು ಮೇಕಪ್

ಗಾಢ ಮೇಕಪ್ ಅಪರೂಪಕ್ಕೆ ಮಾಡಿದರೆ ಒಳ್ಳೆಯದು, ಆದರೆ ಪ್ರತೀದಿನ ಮಾಡಿದರೆ ತ್ವಚೆ ಹಾಳಾಗುವುದು. ತೆಳು ಮೇಕಪ್ ಮಾಡಿ, ಮಲಗುವ ಮುನ್ನ ಮೇಕಪ್ ತೊಳೆದು ಮಲಗಿ. ಇದರಿಂದ ತ್ವಚೆಯ ರಂಧ್ರಗಳ ಉಸಿರಾಟಕ್ಕೆ ಅಡಚಣೆ ಉಂಟಾಗುವುದಿಲ್ಲ.

English summary

What Your Skin Needs? | Tips For Skin Care | ನಿಮ್ಮ ತ್ವಚೆಗೆ ಏನೆಲ್ಲಾ ಅವಶ್ಯಕ | ತ್ವಚೆ ಆರೈಕೆಗೆ ಕೆಲ ಸಲಹೆಗಳು

Your skin protects your body, but that's not all. It's the face you present to the world. When healthy, it's a source of beauty. The choices you make every day, what you eat, where you go, how you feel -- affect how your skin looks. Use this visual guide to keep your skin youthful, healthy, and wrinkle-free.
X
Desktop Bottom Promotion