For Quick Alerts
ALLOW NOTIFICATIONS  
For Daily Alerts

ನುಣಪಾದ ತ್ವಚೆಗಾಗಿ ತಿನ್ನಬೇಕಾದ ಆಹಾರಗಳು

By Super
|

ಸುಂದರ, ತಾರುಣ್ಯ, ದೋಷರಹಿತ ತ್ವಚೆ ಯಾರು ತಾನೇ ಬಯಸಲಾರರು.ಇಂತಹ ತ್ವಚೆ ಪಡೆಯಲು ಈಗಲೇ ನಿಮ್ಮ ದಿನಸಿ ಪಟ್ಟಿಯನ್ನು ಬದಲಾಯಿಸಿ, ಆರೋಗ್ಯಕರ ಆಹಾರಕ್ರಮವನ್ನು ಶುರುಮಾಡಿಕೊಳ್ಳಿ.

ಆಹಾರ ನಮಗೆ ಜೀವ ಕೊಡುವಂಥದ್ದು. ಆದರೆ ತಪ್ಪಾದ ಆಹಾರಕ್ರಮ ನಿಮ್ಮ ಫಿಗರ್ ನ ಹಾಳು ಮಾಡಬಹುದು, ಕೆಲವು ಆಹಾರ ನಿಮ್ಮ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರಬಹುದು - ಪ್ರತಿಯಾಗಿ, ನೀವು ಉತ್ತಮ ಆಹಾರಕ್ರಮವನ್ನು ಪಾಲಿಸುವುದರಿಂದ ಇದೆಲ್ಲವನ್ನು ಬದಲಾಯಿಸಬಹುದು.

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್ ನಲ್ಲಿರುವ ಅದ್ಭುತ ರೋಗ ನಿವಾರಕ ಗುಣ ಎಲ್ಲರಿಗೂ ಗೊತ್ತೇ ಇದೆ. ಇದಲ್ಲದೆ, ಇದರಲ್ಲಿ ಚರ್ಮವನ್ನು ಮೆದುವಾಗಿಡುವ ಗುಣ ಕೂಡಾ ಇದೆ. ಇದರಲ್ಲಿರುವ ಕಿಣ್ವಗಳ ( enzymes) ಸಾರ ಚರ್ಮದಲ್ಲಿರುವ ಸತ್ತ ಕೋಶಗಳ ನಿವಾರಣೆಗೆ ಸಹಾಯಕವಾಗಿದೆ. ಇದು ಕೊಬ್ಬನ್ನು ಅರಗಿಸಿ, ಆಹಾರದ ಪಚನ ಕ್ರಿಯೆಗೆ ನೆರವಾಗುತ್ತದೆ.

ಕ್ಯಾರೆಟ್

ಕ್ಯಾರೆಟ್

ಚರ್ಮದ ಹೊರ ಕವಚವನ್ನು ಸುಸ್ಥಿತಿಯಲ್ಲಿಡುವುದರ ಮೂಲಕ ಅಕಾಲಿಕ ವಯಸ್ಸಾಗುವುದನ್ನು ಮುಂದೂಡಬಹುದು. ರೆಟಿನ್ A ಮೂಲಕ ಉಂಟಾಗುವ ಪರಿಣಾಮಗಳನ್ನು ಕ್ಯಾರೆಟ್ ಬಳಕೆಯಿಂದ ಪಡೆಯಬಹುದು.

ಚೀಸ್

ಚೀಸ್

ನಿಮ್ಮ ಮುಖದಲ್ಲಿ ಸಂತೋಷಕರ ಮಂದಹಾಸ ಮೂಡಿಸಲು, ನಿಮ್ಮ ಆಹಾರಕ್ರಮದಲ್ಲಿ ಒಂದೆರಡು ಚೂರು ಚೀಸ್ ಅನ್ನು ಬಳಸಿರಿ. ಸ್ವಿಸ್, ಚೆಡ್ದರ್ ಅಥವಾ gouda ಚೀಸ್ ಗಳು ಬಾಯಿಯಲ್ಲಿನ ಬ್ಯಾಕ್ಟೀರಿಯಾ ಗಳನ್ನು ತಡೆಗಟ್ಟಿ, ಹುಳುಕು ಹಲ್ಲುಗಳು ಬರದಂತೆ ತಡೆಯುತ್ತದೆ.

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು

ಕೊಲೆಜೆನ್(collagen) ಉತ್ಪಾದನೆಯ ಮೂಲಕ ಚರ್ಮದ ಕೋಶಗಳನ್ನು ಬಿಗಿಹಿಡಿಯುತ್ತದೆ. ಬೇರೆ ಯಾವುದೇ ವಿಧಾನದ ಮೂಲಕ ಕಾಲಜನ್ ಅನ್ನು ಚರ್ಮಕ್ಕೆ ನೀಡಲಾಗದ ಕಾರಣ, ಹಣ್ಣು ಅಥವಾ ಹಣ್ಣಿನ ಜ್ಯೂಸು ಗಳು ಪ್ರತಿದಿನದ ಆಹಾರಕ್ರಮದ ಮುಖ್ಯ ಭಾಗವಾಗಿರಬೇಕು.

ಬೆರ್ರಿ (berries)

ಬೆರ್ರಿ (berries)

ಮೂತ್ರನಾಳಗಳ ಆರೋಗ್ಯ ಕಾಪಾಡಲು ಇದು ಸಹಾಯಕವಾಗಿದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಜೀವಕೋಶಗಳನ್ನು ನವೀಕರಿಸಲು ಹಾಗೂ ಸುಕ್ಕುಗಟ್ಟುವುದನ್ನು ತಡೆಯಲು ಸಹಾಯಕವಾಗಿದೆ.

ಕೊಬ್ಬುರಹಿತ ಮೊಸರು

ಕೊಬ್ಬುರಹಿತ ಮೊಸರು

ಕ್ಯಾಲ್ಸಿಯಂ ಭರಿತವಾಗಿರುವುದರಿಂದ, ಹಲ್ಲುಗಳನ್ನು ಬಿಳಿಯಾಗಿಸಲು ಹಾಗೂ ಹುಳುಕುಗಳನ್ನು ತಡೆಯಲು ನೆರವಾಗುತ್ತದೆ.

ಟೊಮೆಟೊ

ಟೊಮೆಟೊ

"ಲವ್ ಆಪಲ್" ಎಂದೇ ಖ್ಯಾತ ಟೊಮೆಟೊ ದಿಂದ ನೀವು ನಿಮ್ಮ ಚರ್ಮವನ್ನು ಪ್ರೀತಿಸುವಂತಾಗುತ್ತೀರಿ. ಟೊಮೆಟೊ ವಿಟಮಿನ್ A, ವಿಟಮಿನ್ C ಹಾಗೂ ಪೊಟ್ಯಾಷಿಯಂ ಯುಕ್ತವಾಗಿದೆ.

ತರಕಾರಿಗಳು

ತರಕಾರಿಗಳು

ನಿತ್ಯ ಮೂರರಿಂದ ಐದು ಭಾಗದಷ್ಟು ತರಕಾರಿಯನ್ನು ಸೇವಿಸಬೇಕು. ಇದರಲ್ಲಿ ಒಂದು ಭಾಗದಷ್ಟು ಸೊಪ್ಪು ಇರುವಂತೆ ನೋಡಿಕೊಳ್ಳಿ.

ಮಾಂಸ

ಮಾಂಸ

ಮಾಂಸವನ್ನು ಮಿತಿಯಲ್ಲಿ ತಿನ್ನಿ. ಕೊಬ್ಬನ್ನು ಕಡಿಮೆಗೊಳಿಸಿ. ಎರಡು ಭಾಗದಷ್ಟು ಚಿಕನ್ ಮತ್ತು ಒಂದು ಭಾಗ ಮೀನು ಆರೋಗ್ಯಕ್ಕೆ ಒಳ್ಳೆಯದು.

ಹಣ್ಣುಗಳು

ಹಣ್ಣುಗಳು

ಎರಡು ಅಥವಾ ಮೂರು ಭಾಗದಷ್ಟು ಹಣ್ಣನ್ನು ನಿತ್ಯ ಸೇವಿಸಿರಿ. ಒಂದು ಭಾಗವೆಂದರೆ 1/2 ಕಪ್ ತುಂಡರಿಸಿದ ಹಣ್ಣು.

ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳು

ದಿನಕ್ಕೆ ಕನಿಷ್ಠ ಎರಡು ಭಾಗದಷ್ಟು ಸೇವಿಸಿರಿ. ಒಂದು ಭಾಗವೆಂದರೆ ಎಂಟು ಔನ್ಸ್ ಗಳಷ್ಟು ಹಾಲು ಅಥವಾ ಮೊಸರು.

ಕೊಬ್ಬು

ಕೊಬ್ಬು

ಸಲಾಡ್ ಡ್ರೆಸ್ಸಿಂಗ್, ಅಡುಗೆ ಎಣ್ಣೆ, ಬೆಣ್ಣೆ ಹಾಗೂ ಮಯೊನೈಸ್ ಗಳನ್ನು ಎರಡು ಭಾಗಗಳಿಗೆ ಸೀಮಿತಗೊಳಿಸಿರಿ.

English summary

What To Eat Daily For Looks

Want youthful, flawless and healthy skin? It might be time to edit your grocery list and embark on a healthy skin diet.
X
Desktop Bottom Promotion