For Quick Alerts
ALLOW NOTIFICATIONS  
For Daily Alerts

ಬಿಳಿ ಮೊಡವೆ ನಿವಾರಣೆಗೆ ಕೆಲವೊಂದು ವಿಧಾನಗಳು

By Hemanth.P
|

ವಿಭಿನ್ನ ಜೀವನ ಶೈಲಿ, ನಿಮ್ಮ ನಿಯಂತ್ರಣದಲ್ಲಿರುವ ಅಥವಾ ಇಲ್ಲದೆ ಇರುವ ಕೆಲವೊಂದು ಅಂಶಗಳಿಂದಾಗಿ ಮೊಡವೆಗಳು ಮೂಡಬಹುದು. ಆರೋಗ್ಯಕರ ಜೀವನಶೈಲಿ ಮತ್ತು ಆರೋಗ್ಯಕರ ಆಹಾರಕ್ರಮವನ್ನು ಪಾಲಿಸುವುದು ಇದನ್ನು ನಿಯಂತ್ರಿಸಲು ಅತ್ಯುತ್ತಮ ವಿಧಾನ. ಬಿಳಿ ಮೊಡವೆಗಳನ್ನು ನಿಯಂತ್ರಿಸಲು ದಿನಾಲೂ ಸಾಕಷ್ಟು ನೀರು ಕುಡಿಯಬೇಕು. ಹಾರ್ಮೋನ್ ಬದಲಾವಣೆಗಳಿಂದ ಬಿಳಿ ಮೊಡವೆಗಳು ಮೂಡಬಹುದು ಮತ್ತು ಇದಕ್ಕೆ ಕಾಳಜಿ ಮತ್ತು ಎಚ್ಚರಿಕೆಯಿಂದ ಚಿಕಿತ್ಸೆ ನೀಡಬೇಕು.

ಸಣ್ಣ ಬಿಳಿ ಉಬ್ಬುಗಳು, ಬಿಳಿ ತುಂಬಿದ ಮೊಡವೆಗಳು ಅಥವಾ ಚರ್ಮದ ಅಡಿಯಲ್ಲಿರುವ ಪ್ರೋಟೀನ್ ನ ಸಣ್ಣ ಗುಳ್ಳೆಗಳು. ಸಾಮಾನ್ಯವಾಗಿ ಎರಡು ರೀತಿಯ ಮೊಡವೆಗಳಿವೆ. ಮೊದಲನೇ ರೀತಿಯ ಗುಳ್ಳೆಗಳು ಸಂಪೂರ್ಣ ಅಥವಾ ಸರಿಯಾಗಿ ಬೆಳವಣಿಗೆಯಾಗದ ತೈಲ ಗ್ರಂಥಿಗಳ ಪರಿಣಾಮದಿಂದ ಉಂಟಾಗುತ್ತದೆ. ಎರಡನೇ ರೀತಿಯ ಗುಳ್ಳೆಗಳು ತ್ವಚೆಗಾದ ಗಾಯದಿಂದಾಗಿ ಉಂಟಾಗುತ್ತದೆ. ಸೂರ್ಯನ ಬೆಳಕಿನಲ್ಲಿ ಹೆಚ್ಚು ಸಮಯವಿದ್ದರೆ ಹೀಗೆ ಆಗಬಹುದು. ಸೂರ್ಯನ ಬೆಳಕಿಗೆ ಕಡಿಮೆ ಒಡ್ಡಿಕೊಳ್ಳುವುದು ಮತ್ತು ತುಂಬಾ ಒರಟಾದ ರಾಸಾಯನಿಕದಿಂದ ಇದನ್ನು ನಿವಾರಿಸಬಹುದು.

Ways to get rid of white pimples

ಬಿಳಿ ಮೊಡವೆಗಳು ರಾತ್ರಿ ಮೂಡಿ ಬೆಳಿಗ್ಗೆ ಎದ್ದು ಕನ್ನಡಿ ನೋಡಿದಾಗ ನಿಮ್ಮ ಮುಖದ ಅಂದವನ್ನೇ ಬದಲಾಯಿಸಿರಬಹುದು. ಬಿಳಿ ಮೊಡವೆಗಳನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಕ್ರೀಮ್ ಗಳು ಲಭ್ಯವಿದೆ. ಬಿಳಿ ಮೊಡವೆಗಳನ್ನು ಹೋಗಲಾಡಿಸಲು ಕೆಲವೊಂದು ಮನೆಮದ್ದು ಕೂಡ ಇದೆ.

1. ಪೆರಾಕ್ಸೈಡ್
ಬೆನ್ಝಾಯ್ಲ್ ಪೆರಾಕ್ಸೈಡ್ ಮೊಡವೆಗಳನ್ನು ಉಂಟು ಮಾಡುವಂತಹ ಬ್ಯಾಕ್ಟೀರಿಯಾದ ದ್ರವವನ್ನು ಕೊಲ್ಲುತ್ತದೆ. ಬೆನ್ಝಾಯ್ಲ್ ಪೆರಾಕ್ಸೈಡ್ ವಿವಿಧ ಸಾಂದ್ರತೆಗಳಲ್ಲಿ ಬರುತ್ತದೆ. ಆದರೆ 2.5% ಸಾಂದ್ರತೆಯಲ್ಲಿ ಬರುವ ಬೆನ್ಝಾಯ್ಲ್ ಪೆರಾಕ್ಸೈಡ್ ಶೇ. 5-10ರಷ್ಟಿರುವ ದ್ರಾವಣದಷ್ಟೇ ಪರಿಣಾಮಕಾರಿ. ಇದು ತ್ವಚೆಯ ಚೇತರಿಕೆಗೆ ಹೆಚ್ಚು ಕಿರಿಕಿರಿಯುಂಟು ಮಾಡದು. ಬೆನ್ಝಾಯ್ಲ್ ಪೆರಾಕ್ಸೈಡ್ ಸತ್ತ ಚರ್ಮದ ಪದರಗಳನ್ನು ತೆಗೆಯುತ್ತದೆ. ಇದರಿಂದ ಚರ್ಮ ಹೊಳೆಯುತ್ತದೆ ಮತ್ತು ಪುನರ್ಚೆತನಗೊಳುತ್ತದೆ.

2. ಸ್ಯಾಲಿಸಿಲಿಕ್ ಆಮ್ಲ

ಬೆನ್ಝಾಯ್ಲ್ ಪೆರಾಕ್ಸೈಡ್ ನಂತೆ ಸ್ಯಾಲಿಸಿಲಿಕ್ ಆಮ್ಲವು ಮೊಡವೆಗಳಿಗೆ ಕಾರಣವಾಗುವಂತಹ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಚರ್ಮದ ಜೀವಕೋಶಗಳು ತ್ವರಿತವಾಗಿ ಪಸರಿಸುವಂತೆ ಮಾಡುತ್ತದೆ. ಇದರಿಂದ ಹೊಸ ಚರ್ಮ ಬೆಳೆಯುತ್ತದೆ. ಸಣ್ಣ ಪ್ರಮಾಣದಲ್ಲಿ ಸ್ಯಾಲಿಸಿಲಿಕ್ ಆಮ್ಲವನ್ನು ಮುಖ ತೊಳೆದ ಬಳಿಕ ನಿದ್ರೆ ಮಾಡುವ ಮೊದಲು ಮೊಡವೆ ಇರುವ ಜಾಗಕ್ಕೆ ಹಚ್ಚಿ.

3. ಟೂಥ್ ಪೇಸ್ಟ್
ಟೂಥ್ ಪೇಸ್ಟ್ ನಲ್ಲಿ ಸಿಲಿಕಾ ಇದೆ. ಚರ್ಮದ ಚೀಲಗಳಲ್ಲಿ ಒಣಗುವಕಾರಕವಾಗಿ ಇದನ್ನು ಬಳಸಲಾಗುತ್ತದೆ. ಟೂಥ್ ಪೇಸ್ಟ್ ಹಚ್ಚಿದರೆ ನಿಮ್ಮ ಮೊಡವೆಗಳು ಒಣಗುವಂತಾಗಿ ಅದರ ಗಾತ್ರ ಕಿರಿದಾಗುತ್ತದೆ. ನಿಮ್ಮ ಚರ್ಮದ ಮೇಲೆ ನೈಸರ್ಗಿಕವಾಗಿರುವ ಟೂಥ್ ಪೇಸ್ಟ್ ನ್ನು ಬಳಸಬೇಕೆಂಬ ಬಗ್ಗೆ ಗಮನಹರಿಸಿ. ಕೆಲವೊಂದು ಟೂಥ್ ಪೇಸ್ಟ್ ನಲ್ಲಿ ಸೋಡಿಯಂ ಲಾರೆಲ್ ಸಲ್ಫೇಟ್ ಹೊಂದಿರುತ್ತದೆ. ಇದು ತ್ವಚೆಗೆ ಕಿರಿಕಿರಿ ಉಂಟು ಮಾಡಬಹುದು. ಚರ್ಮದ ಮೇಲೆ ಹಚ್ಚುವ ಮೊದಲು ಇದನ್ನು ಗಮನಿಸಿ ಮತ್ತು ರಾತ್ರಿಪೂರ್ತಿ ಹಾಗೆ ಬಿಡಿ.

4. ಟೀ ಟ್ರೀ ಎಣ್ಣೆ
ಟೀ ಟ್ರೀ ಎಣ್ಣೆ ಬ್ಯಾಕ್ಟೀರಿಯಾ ನಿರೋಧಕ ಅಂಶಗಳನ್ನು ಹೊಂದಿದ್ದು, ಇದು ನಿಮ್ಮ ಚರ್ಮರಂಧ್ರಗಳಲ್ಲಿ ಮನೆ ಮಾಡಲು ಪ್ರಾರಂಭಿಸಿದ ಸೂಕ್ಷ್ಮಜೀವಿಗಳನ್ನು ನಾಶ ಮಾಡುತ್ತದೆ. ಸ್ವಲ್ಪ ಹತ್ತಿ ತೆಗೆದುಕೊಂಡು ಅದಕ್ಕೆ ಟೀ ಟ್ರೀ ಎಣ್ಣೆ ಹಾಕಿ ಅದನ್ನು ಮೊಡವೆಗಳ ಮೇಲೆ ಹಾಕಿ. ಹೆಚ್ಚು ಎಣ್ಣೆ ಹಾಕಬೇಡಿ. ಉರಿಯೂತ ವಿರೋಧಿ ಲಕ್ಷಣಗಳನ್ನು ಹೊಂದಿರುವ ಟೀ ಟ್ರೀ ಎಣ್ಣೆಯು ಮೊಡವೆಗಳ ಕೆಂಪುಬಣ್ಣ ಮತ್ತು ಗಾತ್ರ ಕಡಿಮೆ ಮಾಡಲಿದೆ.

5. ಆಸ್ಪಿರಿನ್
ಆಸ್ಪಿರಿನ್ ಮಾತ್ರೆಯನ್ನು ಹುಡಿ ಮಾಡಿ ಮತ್ತು ಅದಕ್ಕೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿ. ಹತ್ತಿಯಿಂದ ಆಸ್ಪಿರಿನ್ ಪೇಸ್ಟ್ ತೆಗೆದುಕೊಂಡು ಬಿಳಿ ಮೊಡವೆಗಳ ಮೇಲೆ ಅದನ್ನು ಹಚ್ಚಿ. ಅದನ್ನು ಒಣಗಲು ಬಿಡಿ. ಆಸ್ಪಿರಿನ್ ನಲ್ಲಿರುವ ಉರಿಯೂತ ವಿರೋಧಿ ಗುಣಗಳು ತ್ವಚೆ ಉರಿಯೂತ ವಿರುದ್ಧ ಹೋರಾಡಲು ನೆರವಾಗುತ್ತದೆ.

6. ಆಸ್ಟ್ರಿಜೆಂಟ್ಸ್
ಆಸ್ಟ್ರಿಜೆಂಟ್ಸ್ ಚರ್ಮವನ್ನು ಸಂಕುಚಿತ ಮತ್ತು ಸಣ್ಣದಾಗುವಂತೆ ಮಾಡುವ ದ್ರಾವಣ. ಕೆಲವು ಔಷಧೀಯ ಆಸ್ಟ್ರಿಜೆಂಟ್ಸ್ ಗಳು ಸೂಕ್ಷ್ಮಜೀವಿ ಪ್ರತಿರೋಧಕ ಅಂಶಗಳನ್ನು ಹೊಂದಿದೆ. ಇದು ಮೊಡವೆಗಳ ವಿರುದ್ಧ ಹೋರಾಡಿ ಮೊಡವೆಗಳ ಗಾತ್ರ ಕುಗ್ಗಿಸುತ್ತದೆ. ನೈಸರ್ಗಿಕ ಆಸ್ಟ್ರಿಜೆಂಟ್ಸ್ ಗಳಾದ ನಿಂಬೆರಸ, ಬಾಳೆಹಣ್ಣಿನ ಸಿಪ್ಪೆ ಅಥವಾ ಗ್ರೀನ್ ಟೀ ಬಳಸಬಹುದು. ನಿಂಬೆಯಲ್ಲಿರುವ ಸಿಟ್ರಿಕ್ ಆ್ಯಸಿಡ್ ಮೊಡವೆಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ ಮತ್ತು ಚರ್ಮಕ್ಕೆ ಹೊಳಪು ನೀಡುತ್ತದೆ.

English summary

Ways to get rid of white pimples

Breakouts are a problem caused due to various lifestyle issues and other factors that may or may not be under your control. Best possible way is to prevent them to a large extent by following healthy lifestyle and healthy diet routine. Drinking adequate water each day is essential to prevent white pimples.
Story first published: Wednesday, December 18, 2013, 17:20 [IST]
X
Desktop Bottom Promotion