For Quick Alerts
ALLOW NOTIFICATIONS  
For Daily Alerts

ಮುಖದಲ್ಲಿರುವ ರಂಧ್ರಗಳನ್ನು ಕಡಿಮೆ ಮಾಡಲು ಟಿಪ್ಸ್

|

ಮೊಡವೆಯಿಂದ ಕಲೆಗಳು ಉಂಟಾಗಿದ್ದರೆ ಫೇಶಿಯಲ್, ಕ್ಲೆನ್ಸರ್ ಅಂತ ಆರೈಕೆ ಮಾಡುತ್ತಿದ್ದರೆ ಕಲೆಗಳು ಕಡಿಮೆಯಗುವುದು. ಆದರೆ ಮೊಡವೆಗಳಿಂದ ರಂಧ್ರಗಳು ಉಂಟಾಗಿದ್ದರೆ ಮರೆ ಮಾಚುವುದು ಸ್ವಲ್ಪ ಕಷ್ಟ.

ನಿಮ್ಮ ಮುಖದಲ್ಲಿ ರಂಧ್ರಗಳಿದ್ದರೆ , ಮೇಕಪ್ ಮಾಡಿದರೂ ರಂಧ್ರಗಳು ಎದ್ದು ಕಾಣುವುದು. ರಂಧ್ರಗಳು ಎದ್ದು ಕಂಡರೆ ಮುಜುಗರ ಕೂಡ ಉಂಟಾಗುತ್ತದೆ. ಮೊಡವೆಯಿಂದ ಬಿದ್ದ ರಂಧ್ರಗಳು ಎದ್ದು ಕಾಣದಿರಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಿದರೆ ಒಳ್ಳೆಯದು.

Tips To Get Rid of Large Pores

1. ಮುಖವನ್ನು ಆಗಾಗ ತೊಳೆಯಿರಿ
ಮುಖದಲ್ಲಿ ದೂಳು ಇದ್ದರೆ ರಂಧ್ರಗಳು ಅಧಿಕವಾಗುತ್ತದೆ. ಮುಖವನ್ನು 3-4 ಬಾರಿ ತೊಳೆಯುವುದು, ದಿನಾ ಕ್ಲೆನ್ಸಿಂಗ್ ಮಾಡುವುದು ಮಾಡಿದರೆ ರಂಧ್ರಗಳು ಚಿಕ್ಕದಾಗಿ ಮುಖದಲ್ಲಿ ಎದ್ದು ಕಾಣುವುದಿಲ್ಲ.

2. ಐಸ್ ಕ್ಯೂಬ್ ಹಚ್ಚುವುದು
ಪ್ರತೀದಿನ 15-30 ಸೆಕೆಂಡ್ ಐಸ್ ಕ್ಯೂಬ್ ನಿಂದ ಮಸಾಜ್ ಮಾಡಿದರರೆ ಮುಖದ ತ್ವಚೆ ಬಿಗಿದುಕೊಂಡು ರಂಧ್ರಗಳು ಎದ್ದು ಕಾಣುವುದಿಲ್ಲ.

3. ಅಡುಗೆ ಸೋಡಾದ ಪೇಸ್ಟ್
ಅಡುಗೆ ಸೋಡಾವನ್ನು ಪೇಸ್ಟ್ ರೀತಿಯಲ್ಲಿ ಮಾಡಿ ಹಚ್ಚಿದರೆ ರಂಧ್ರಗಳು ಕಮ್ಮಿಯಾಗುತ್ತದೆ. ತುಂಬಾ ಸೂಕ್ಷ್ಮ ತ್ವಚೆಯಿರುವವರು ಅಡುಗೆ ಸೋಡಾ ಬಳಸುವುದು ಒಳ್ಳೆಯದಲ್ಲ.

ಪೇಸ್ಟ್ ಮಾಡುವ ವಿಧಾನ
ಅಡುಗೆ ಸೋಡಾವನ್ನು ಬಿಸಿ ನೀರು ಹಾಕಿ ಮಿಕ್ಸ್ ಮಾಡಿ ಅದನ್ನು ಮುಖಕ್ಕೆ ವೃತ್ತಾಕಾರವಾಗಿ ಹಚ್ಚಿ 30 ಸೆಕೆಂಡ್ ಇಟ್ಟು ಮುಖ ತೊಳೆಯಬೇಕು. ಇದನ್ನು ರಾತ್ರಿ ಮಲಗುವ ಮುನ್ನ ಮಾಡಿ. ಈ ರೀತಿ ಮಾಡುವುದರಿಂದಲೂ ಮುಖದ ರಂಧ್ರಗಳು ಎದ್ದು ಕಾಣದಂತೆ ತ್ವಚೆ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು.

4. ನಿಂಬೆ ರಸ ಹಾಗೈ ಪೈನಾಪಲ್ ರಸ
ಈ ಎರಡು ರಸಗಳನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಇದರಿಂದ ಮುಖವನ್ನು ಕ್ಲೆನ್ಸ್ ಮಾಡುತ್ತಾ ಬಂದರೆ ರಂಧ್ರಗಳು ಬೀಳುವುದು ಕಡಿಮೆಯಾಗುತ್ತದೆ.

5. ಮೊಸರಿನ ಮಾಸ್ಕ್
ಮೊಸರನ್ನು ಮುಖಕ್ಕೆ ಹಚ್ಚಿ 20 ನಿಮಿಷದ ಬಳಿಕ ತೊಳೆಯಿರಿ. ಈ ರೀತಿ ಪ್ರತಿದಿನ ಮಾಡಿದರೆ ಮುಖದಲ್ಲಿರುವ ರಂಧ್ರಗಳು ಎದ್ದು ಕಾಣುವುದಿಲ್ಲ.

English summary

Tips To Get Rid of Large Pores | Tips For Skin Care | ಮುಖದಲ್ಲಿರುವ ರಂಧ್ರಗಳನ್ನು ಕಡಿಮೆ ಮಾಡಲು ಟಿಪ್ಸ್ | ತ್ವಚೆಯ ಆರೈಕೆಗೆ ಕೆಲ ಸಲಹೆಗಳು

No matter how well you take care of your face, large pores can always pop up, which make the appearance of blemishes even bigger.Here are some good ways to shrink them.
X
Desktop Bottom Promotion