For Quick Alerts
ALLOW NOTIFICATIONS  
For Daily Alerts

ಮೊಡವೆ ಹೆಚ್ಚಾಗಲೂ ಈ ಆಹಾರಗಳು ಒಂದು ಕಾರಣ

|

ಹದಿಹರೆಯದ ವಯಸ್ಸಿನಲ್ಲಿ ಕಂಡು ಬರುವ ಅತೀ ದೊಡ್ಡ ಸೌಂದರ್ಯ ಸಮಸ್ಯೆ ಎಂದರೆ ಮೊಡವೆ. ಕೆಲವರಿಗೆ ವಯಸ್ಸು 30 ದಾಟಿದರೂ ಈ ಸಮಸ್ಯೆ ಕಡಿಮೆಯಾಗಿರುವುದಿಲ್ಲ. ಮೊಡವೆ ಅನೇಕ ಕಾರಣಗಳಿಂದ ಬರುತ್ತದೆ. ಹಾರ್ಮೋನ್ ಗಳಲ್ಲಿ ವ್ಯತ್ಯಾಸವಾದಾಗ, ಕ್ರೀಮ್ ನಮ್ಮ ತ್ವಚೆಗೆ ಹೊಂದದಿದ್ದರೆ, ದೂಳು, ಆಹಾರ ಇವುಗಳಿಂದ ಮೊಡವೆ ಉಂಟಾಗುತ್ತದೆ.

ಕರಿದ ಪದಾರ್ಥಗಳನ್ನು ತಿಂದರೆ ಮೊಡವೆ ಬರುತ್ತದೆ ಎಂದು ಗೊತ್ತಿರುವ ವಿಷಯ. ಕರಿದ ಪದಾರ್ಥಗಳನ್ನು ಮಾತ್ರವಲ್ಲ, ಕೆಲವರಿಗೆ ಸಮುದ್ರಾಹರವನ್ನು ತಿಂದರೂ ಮೊಡವೆ ಬರುತ್ತದೆ. ನಿಮ್ಮ ಮೊಡವೆಗೆ ಈ ಆಹಾರಗಳು ಕಾರಣವಾಗಿರಬಹುದು ನೋಡಿ:

ಮೃದ್ವಂಗಿಗಳು

ಮೃದ್ವಂಗಿಗಳು

ಇದರಲ್ಲಿ ಐಯೋಡಿನ್ ಅಧಿಕವಿರುತ್ತದೆ. ಐಯೋಡಿನ್ ಇರುವ ಪದಾರ್ಥಗಳು ಕೂಡ ಕೆಲವರಿಗೆ ಮೊಡವೆ ಉಂಟು ಮಾಡುತ್ತದೆ. ಸಮುದ್ರಾಹಾರ ತಿಂದ ನಂತರ ನಿಮಗೆ ಮೊಡವೆ ಬರುವುದೇ ಅನ್ನುವುದನ್ನು ಗಮನಿಸಿ. ಒಂದು ವೇಳೆ ಬಂದರೆ ನಿಮ್ಮ ಮೊಡವೆಗೆ ಸಮುದ್ರಾಹಾರ ಕಾರಣ.

ಕರಿದ ಪದಾರ್ಥಗಳು

ಕರಿದ ಪದಾರ್ಥಗಳು

ಫ್ರೆಂಚ್ ಫ್ರೈ, ಬರ್ಗರ್ , ಕರಿದ ತಿಂಡಿಗಳು ಇವುಗಳನ್ನು ಮೊಡವೆ ಇರುವವರು ಆದಷ್ಟು ದೂರವಿಡುವುದು ಒಳ್ಳೆಯದು. ಮೊಡವೆಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರೆ ಕರಿದ ಪದಾರ್ಥಗಳನ್ನು ಮುಟ್ಟಲೇಬೇಡಿ.

ಸೀಗಡಿ

ಸೀಗಡಿ

ಸೀಗಡಿಯಲ್ಲಿ ಪೋಷಕಾಂಶಗಳಿದ್ದು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ಮೊಡವೆಗೆ ಒಳ್ಳೆಯದಲ್ಲ. ಮೊಡವೆ ಇರುವವರು ಸೀಗಡಿ ತಿನ್ನುವುದಾದರೆ ಫ್ರೈ ಫ್ರಾನ್ಸ್ ತಿನ್ನಬೇಡಿ.

ಹಾಲು

ಹಾಲು

ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ತಿಂದರೆ ಕೆಲವರಿಗೆ ಮೊಡವೆ ಬರುತ್ತದೆ. ಹಾಲು ನಿಮ್ಮ ಮೊಡವೆಗೆ ಒಂದು ಕಾರಣವಾದರೆ, ಮೊಡವೆ ಕಡಿಮೆಯಾಗುವವರೆಗೆ ಹಾಲನ್ನು ಕುಡಿಯಬೇಡಿ.

ಬಿಳಿ ಬ್ರೆಡ್

ಬಿಳಿ ಬ್ರೆಡ್

ಬಿಳಿ ಬ್ರೆಡ್ ನಲ್ಲಿ ಸಕ್ಕರೆಯಂಶ ಅಧಿಕವಿರುವುದರಿಂದ ಇದು ಟೆಸ್ಟೋಸ್ಟಿರೋನೆ ಹಾರ್ಮೋನ್ ಹೆಚ್ಚು ಮಾಡುತ್ತದೆ. ಇದರಿಂದ ಕೂಡ ಮೊಡವೆ ಉಂಟಾಗುತ್ತದೆ.

ಅಕ್ಕಿಯಿಂದ ಮಾಡಿದ ಪದಾರ್ಥಗಳು

ಅಕ್ಕಿಯಿಂದ ಮಾಡಿದ ಪದಾರ್ಥಗಳು

ಮೊಡವೆ ತುಂಬಾ ಬಿದಿದ್ದರೆ ಅಕ್ಕಿಯಿಂದ ಮಾಡಿದ ಪದಾರ್ಥಗಳನ್ನು ತಿನ್ನುವುದನ್ನು ಕಮ್ಮಿ ಮಾಡಿ. ಇದರಲ್ಲಿ ಕಾರ್ಬೋಹೈಡ್ರೇಟ್ ಅಧಿಕವಿರುವುದಿಂದ ಮೊಡವೆ ಉಂಟಾಗುತ್ತದೆ.

ಟ್ರಾನ್ಸ್ ಫ್ಯಾಟ್ ಇರುವ ಪದಾರ್ಥಗಳು

ಟ್ರಾನ್ಸ್ ಫ್ಯಾಟ್ ಇರುವ ಪದಾರ್ಥಗಳು

ಅತ್ಯಧಿಕ ಟ್ರಾನ್ಸ್ ಫ್ಯಾಟ್ ಇರುವ ಪದಾರ್ಥಗಳು ಕೂಡ ಮೊಡವೆ ಬರಲು ಒಂದು ಕಾರಣವಾಗಿದೆ.

ನಿಮಗೆ ಮೊಡವೆ ಆಹಾರದಿಂದ ಬರುತ್ತಿದೆಯೇ ಅಥವಾ ದೂಳಿನಿಂದ ಬರುತ್ತಿದೆಯೇ ಎಂದು ತಿಳಿದುಕೊಳ್ಳಿ. ಇದರಿಂದ ಮೊಡವೆ ಹೋಗಲಾಡಿಸಲು ಏನು ಮಾಡಬೇಕೆನ್ನುವುದು ನಿಮಗೆ ತಿಳಿಯುತ್ತದೆ.

English summary

Surprising Foods That Cause Acne | Tips For Skin Care | ಈ ಆಹಾರಗಳಿಂದಲೂ ಮೊಡವೆ ಉಂಟಾಗಬಹುದು | ತ್ವಚೆ ಆರೈಕೆಗೆ ಕೆಲ ಸಲಹೆಗಳು

Even excessive secretion of testosterone hormone causes acne breakouts. Apart from these, an unhealthy diet is also a major cause behind acne. There are few foods that can increase acne breakouts.
X
Desktop Bottom Promotion