For Quick Alerts
ALLOW NOTIFICATIONS  
For Daily Alerts

ಪುರುಷರೇ, ಈ ರೀತಿ ತ್ವಚೆ ಆರೈಕೆ ಮಾಡುತ್ತಿದ್ದೀರಿ ತಾನೆ?

By Super
|

ಅಬ್ಬಾ! ಬೇಸಿಗೆ ಬಂತು. ಇನ್ನು ಈ ಬಿಸಿಲಿನಲ್ಲಿರುವುದು ಸಾಧ್ಯವೇ ಇಲ್ಲ. ತ್ವಚೆಯನ್ನು ರಕ್ಷಿಸಿಕೊಳ್ಳುವುದು ತುಂಬಾ ಕಷ್ಟ. ಇಂತಹ ಸಮಸ್ಯೆಗಳು, ಯೋಚನೆಗಳು ಮಹಿಳೆಯರಿಗೆ ಮಾತ್ರ ಉಂಟಾಗುವಂತಹವು ಎಂದು ಯೋಚಿಸುತ್ತಿದ್ದೀರಾ? ಒಂದು ವೇಳೆ ನೀವು ಹೀಗೆನಾದರೂ ಅಂದುಕೊಂಡಿದ್ದರೆ ಅದು ಖಂಡಿತಾ ತಪ್ಪು. ಉರಿ ಬಿಸಿಲಿನಿಂದ ತ್ವಚೆಯನ್ನು ಕಾಯ್ದುಕೊಳ್ಳುವುದು ಹುಡುಗಿಯರಿಗೆ ಮಾತ್ರವಲ್ಲದೇ ಹುಡುಗರಿಗೂ ಕೂಡ ಅಷ್ಟೇ ಮುಖ್ಯ !

ಮಹಿಳೆಯರು ತ್ವಚೆಯನ್ನು ರಕ್ಷಿಸಿಕೊಳ್ಳಲು ಯಾವುದಾದರೂ ಕ್ರೀಮ್ ನಂಥಹ ವಸ್ತುಗಳನ್ನು ಬಳಸುತ್ತಾರೆ. ಆದರೆ ಹುಡುಗರು ಚರ್ಮದ ಬಗ್ಗೆ ಗಮನವಹಿಸದೇ ಇರುವುದರಿಂದ ತೊಂದರೆಗಳಾಗುವುದು ಅಧಿಕ. ಆದ್ದರಿಂದ ಬೇಸಿಗೆಯಲ್ಲಿ ಹುಡುಗರೂ ಗಮನಿಸಬೇಕಾದ ಅಂಶಗಳು ಇಲ್ಲಿವೆ.

1. ಮುಖವನ್ನು ಸ್ವಚ್ಛಗೊಳಿಸಿ

1. ಮುಖವನ್ನು ಸ್ವಚ್ಛಗೊಳಿಸಿ

ಹುಡುಗರಲ್ಲಿ, ಉಷ್ಣ ಅತಿಯಾಗಿರುವಾಗ ತ್ಚಚೆಯಲ್ಲಿ ಸಾಕಷ್ಟು ತೊಂದರೆಗಳು ಉಂಟಾಗುತ್ತವೆ. ಆದ್ದರಿಂದ ದಿನದಲ್ಲಿ ಕನಿಷ್ಠ ಎರಡು ಬಾರಿ ಮುಖವನ್ನು ತೊಳೆಯಿರಿ. ಮುಖ ತೊಳೆಯುವಾಗ ಉತ್ತಮ ಗುಣಮಟ್ಟದ ಫೇಸ್ ವಾಶ್ ಅಥವಾ ಸೋಪ್ ಬಳಸಿ ಮುಖವನ್ನು ಸ್ಕ್ರಬ್ ಮಾಡಿ. ಇದರಿಂದ ಮುಖದಲ್ಲಿರುವ ಎಣ್ಣೆಯ ಅಂಶ ಹೋಗಿ ತ್ವಚೆ ಆರೋಗ್ಯವಂತವಾಗಿರುತ್ತದೆ.

2. ಟೋನರ್ ಬಳಸಿ

2. ಟೋನರ್ ಬಳಸಿ

ಹುಡುಗರ ತ್ವಚೆ ಹುಡುಗಿಯರ ತ್ವಚೆಗಿಂತ ದಪ್ಪ ಹಾಗೂ ಒರಟಾಗಿರುತ್ತದೆ. ಆದ್ದರಿಂದ ಹುಡುಗರು ಆಸ್ಟ್ರಿಜೆಂಟ್( astringent), ಅಥವಾ ಗೈಕೋಲಿಕ್ ಆಮ್ಲದಂಥ(Glycolic acid) ಟೋನರ್ ಬಳಸಿ.

3. ಎಕ್ಸ್ ಫೋಲೆಟ್

3. ಎಕ್ಸ್ ಫೋಲೆಟ್

ಸ್ಕ್ರಬ್ಬಿಂಗ್ ಮೂಲಕ ನಿರ್ಜೀವ ತ್ವಚೆಯನ್ನು ಹೋಗಲಾಡಿಸುವುದು ಬೇಸಿಗೆ ಸಮಯದಲ್ಲಿ ಮುಖ್ಯವಾಗಿದೆ. ಪುರುಷರು ಪ್ರತಿ 3 ದಿನಗಳಲ್ಲಿ ಒಮ್ಮೆ ಆಳವಾದ ಎಕ್ಸ್ ಫೋಲೆಟ್ ಮಾಡುವುದು ಅಥವಾ ಸಲೂನ್ ಗೆ ಹೋಗಿ ನಿರ್ಜೀವ ತ್ವಚೆಯನ್ನು ತೆಗೆದುಹಾಕಬಹುದು. ಇದರಿಂದ ನಿರ್ಜೀವ ತ್ವಚೆ ಹೋಗಿ, ತ್ವಚೆ ಹೊಳಪನ್ನು ಪಡೆದುಕೊಳ್ಳುತ್ತದೆ.

4. ಮಾಯಿಶ್ಚರೈಸರ್

4. ಮಾಯಿಶ್ಚರೈಸರ್

ತ್ವಚೆಯನ್ನು ಚೆನ್ನಾಗಿ ಇಟ್ಟುಕೊಳ್ಳಬೇಕಾದರೆ ಮಾಯಿಶ್ಚರೈಸರ್ ಅತ್ಯಂತ ಮುಖ್ಯ. ಆದ್ದರಿಂದ SPF 15 ಅಥವಾ ಬೇರೆ ನಿಮ್ಮ ತ್ವಚೆಗೆ ಸರಿಹೋಗುವಂಥ ಯಾವುದೇ ಉತ್ತಮ ಗುಣಮಟ್ಟದ ಮಾಶ್ಚರೈಸರ್ ಬಳಸಿ. ಇದು ನಿಮ್ಮ ತ್ವಚೆ ತೇವಾಂಶ ಕಳೆದುಕೊಳ್ಳದಂತೆ ರಕ್ಷಿಸುತ್ತದೆ. ಇದರಿಂದ ತ್ವಚೆಯನ್ನು ಸುಕ್ಕು ಬರದಂತೆ ತಡೆದು ತ್ವಚೆಯನ್ನು ಆಕರ್ಷಕವಾಗಿ ಇಡುತ್ತದೆ.

5. ಶೇವಿಂಗ್

5. ಶೇವಿಂಗ್

ಬೇಸಿಗೆಯಲ್ಲಿ ದಿನವೂ ಶೇವಿಂಗ್ ಮಾಡದೇ ಇರುವುದು ಉತ್ತಮ. ಇದರಿಂದ ಸೂರ್ಯನ ಬಿಸಿಲಿಗೆ ಹೊರಗಡೆ ಹೋದಾಗ ತ್ವಚೆ ಬೇಗನೆ ಕಪ್ಪಾಗುವುದಿಲ್ಲ.

6. ಶೇವ್ ನಂತರ ಕ್ರೀಮ್ ಹಚ್ಚಿ

6. ಶೇವ್ ನಂತರ ಕ್ರೀಮ್ ಹಚ್ಚಿ

ಇದು ಮುಖದ ತ್ವಚೆಯ ಮಾಯಿಶ್ಚರೈಸರ್ ನ್ನು ಮರುಕಳಿಸುವಂತೆ ಮಾಡುತ್ತದೆ. ಮತ್ತು ಸೂರ್ಯನ ಬಿಸಿಲಿನಲ್ಲಿ ತ್ವಚೆಯ ಸೂಕ್ಷ್ಮತೆಯನ್ನು ಕಡಿಮೆಮಾಡುತ್ತದೆ. ನೈಸರ್ಗಿಕವಾದ ಆಫ್ಟರ್ ಶೇವ್ ನ್ನು ಹೆಚ್ಚು ಬಳಸುವುದು ಉತ್ತಮ.

7. ದಿನವೂ ಸನ್ ಸ್ಕ್ರೀನ್ ಬಳಸಿ

7. ದಿನವೂ ಸನ್ ಸ್ಕ್ರೀನ್ ಬಳಸಿ

ದಿನವೂ ನಿಮ್ಮ ತ್ವಚೆಗೆ ಸನ್ ಸ್ಕ್ರೀನ್ ಲೋಶನ್ ಗಳನ್ನು ಹಚ್ಚಿ. ದೇಹದ ಎಲ್ಲಾ ಭಾಗಗಳಿಗೂ ಸಮಾನವಾಗಿ ಇದನ್ನು ಹಚ್ಚುವುದರಿಂದ ತ್ವಚೆ ಸದಾ ಮೃದುವಾಗಿರುತ್ತದೆ.

8. ದುರ್ವಾಸನೆ ತಡೆಯಿರಿ

8. ದುರ್ವಾಸನೆ ತಡೆಯಿರಿ

ದೇಹದ ದುರ್ವಾಸನೆಯನ್ನು ತಡೆಗಟ್ಟಲು ಸುಗಂಧ ದ್ರವ್ಯಗಳನ್ನು ಬಳಸುವುದು ಮಾತ್ರ ಪರಿಹಾರವಲ್ಲ. ಬ್ಯಾಕ್ಟೀರಿಯಾ ಜೊತೆ ಬೆವರು ಸೇರಿದಾಗ ದುರ್ವಾಸನೆಯುಂಟಾಗುತ್ತದೆ. ಆದ್ದರಿಂ anti biotical cleanser ಅಥವಾ ಬಾಡಿ ವಾಶ್ ಬಳಸಿ. ಹರ್ಬಲ್ ವಸ್ತುಗಳನ್ನು ಬಳಸಿ ನಂತರ ಡಿಯೋಡ್ರೆಂಟ್ ಗಳನ್ನು ಬಳಸಬಹುದು.

9. ಆರೋಗ್ಯಕರ ಆಹಾರ ತಿನ್ನಿ

9. ಆರೋಗ್ಯಕರ ಆಹಾರ ತಿನ್ನಿ

ಆಹಾರ ಹಾಗೂ ಜೀವನಕ್ರಮ ನಮ್ಮ ದೇಹದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಟೊಮೆಟೊ, ಬೆಣ್ಣೆ ಹಣ್ಣು, ಹಣ್ಣುಗಳು, ಬಾದಾಮಿ ಇವುಗಳನ್ನು ನಿಮ್ಮ ದಿನದ ಆಹಾರದಲ್ಲಿ ಸೇರಿಸಿ. ಈ ಆಹಾರ ವಸ್ತುಗಳು ದೇಹದಲ್ಲಿ ಜೀರ್ಣಕ್ರಿಯೆ ಸುಲಲಿತವಾಗುವಂತೆ ನೋಡಿಕೊಳ್ಳುತ್ತದೆ. ಆದರೆ ಎಣ್ಣೆ ಪದಾಥಗಳನ್ನು ಹೆಚ್ಚು ಉಪಯೋಗಿಸಬೇಡಿ.

10. ಮೊಡವೆ

10. ಮೊಡವೆ

ಸ್ಯಾಲಿಸಿಲಿಕ್ ಆಮ್ಲ (salicylic acid) ಹೊಂದಿರುವ ಮೊಡವೆ ಉತ್ಪನ್ನಗಳು ನಿಮ್ಮ ಚರ್ಮ ಒಣಗಿ ಮತ್ತು ಬಿಸಿಲು ಅದನ್ನು ಹೆಚ್ಚು ಪೀಡಿತ ಮಾಡಬಹುದು. ಅಲ್ಲದೇ ಸೂರ್ಯನ ಬಿಸಿಲಿಗೆ ತ್ವಚೆಯ ಮೇಲ್ಪದರ ಕಿತ್ತು ಬರಬಹುದು. ಆದ್ದರಿಂದ ಇಂಥ ಉತ್ಪನ್ನಗಳನ್ನು ರಾತ್ರಿಯ ಹೊತ್ತು ಬಳಸಿ ಅದಕ್ಕಿಂತ ಮೊದಲು ನಿಮ್ಮ ವೈದ್ಯರಿಂದ ಸಲಹೆ ಪಡೆದುಕೊಳ್ಳಿ.

11. ತಲೆ ಹೊಟ್ಟು

11. ತಲೆ ಹೊಟ್ಟು

ತಲೆ ಹೊಟ್ಟು ತಡೆಯಲು ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ. ಮೊಸರಿಗೆ ಸ್ವಲ್ಪ ನಿಂಬೆ ರಸ ಹಿಂಡಿ ತಲೆಗೆ ಹಚ್ಚಿದರೆ ತಲೆಹೊಟ್ಟು ಕಡಿಮೆಯಾಗುವುದು.

ಈ ಮೇಲಿನ ವಿಧಾನಗಳು ನಿಮ್ಮ ತ್ವಚೆಯ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡುತ್ತವೆ.

English summary

Summer Skin Care Guide For Men |Tips For Skin Care | ಬೇಸಿಗೆಯಲ್ಲಿ ಪುರುಷರ ತ್ವಚೆ ಆರೈಕೆಗೆ ಟಿಪ್ಸ್ | ತ್ವಚೆ ಆರೈಕೆಗೆ ಕೆಲ ಸಲಹೆಗಳು

Men typically have larger pores on their skin so they are more prone to break-outs and clogged pores.So how will you take care of your skin to maintain a healthy glow? Don’t sweat it - just a few changes are all it takes to have an effective summer skin care routine. Read on...
 
X
Desktop Bottom Promotion