For Quick Alerts
ALLOW NOTIFICATIONS  
For Daily Alerts

ಫೇಶಿಯಲ್ ನಂತರ ಗಮನಿಸಬೇಕಾದ 6 ಅಂಶಗಳು

|

ನೀವು ಎಷ್ಟು ತಿಂಗಳಿಗೊಮ್ಮೆ ಫೇಶಿಯಲ್ ಮಾಡಿಸುತ್ತೀರಾ? ಕನಿಷ್ಠವೆಂದರೂ 3 ತಿಂಗಳಿಗೊಮ್ಮೆ ಫೇಶಿಯಲ್ ಮಾಡಿಸುವುದು ಒಳ್ಳೆಯದು. ಫೇಶಿಯಲ್ ನಿರ್ಜೀವ ತ್ವಚೆಯನ್ನು ಹೋಗಲಾಡಿಸಿ, ನಿಮ್ಮ ತ್ವಚೆಗೆ ಕಾಂತಿಯನ್ನು ತುಂಬುತ್ತದೆ. ಬ್ಲ್ಯಾಕ್ ಹೆಡ್ಸ್, ಮುಖದಲ್ಲಿ ಕಲೆ ಈ ರೀತಿಯ ಸಮಸ್ಯೆ ಇರುವವರು ತಿಂಗಳಿಗೆ ಒಮ್ಮೆ ಫೇಶಿಯಲ್ ಮಾಡಿಸಿದರೆ ನಿಮ್ಮ ಮುಖದ ಅಂದ ಹೆಚ್ಚುವುದು.

ಫೇಶಿಯಲ್ ಮಾಡಿಸುವಾಗ ಗಮನಿಸಬೇಕಾದ ಅಂಶವೆಂದರೆ ಫೇಶಿಯಲ್ ಗೆ ಯಾವ ವಸ್ತುಗಳನ್ನು ಬಳಸುತ್ತಾರೆ ಅನ್ನುವುದು. ಕೆಮಿಕಲ್ ಇರುವ ವಸ್ತುಗಳನ್ನು ಬಳಸಿ ಮಾಡುವ ಫೇಶಿಯಲ್ ಗಿಂತ ಹರ್ಬಲ್ ಫೇಶಿಯಲ್ ಒಳ್ಳೆಯದು. ಫೇಶಿಯಲ್ ಮಾಡಿಸಿದ ಬಳಿಕ ಕೆಲವೊಂದು ಅಂಶಗಳನ್ನು ಗಮನಿಸದೆ ಇದ್ದರೆ ಫೇಶಿಯಲ್ ಮಾಡಿಸಿದ ಪ್ರಯೋಜನ ಇಲ್ಲದಾಗುವುದು. ಇಲ್ಲಿ ನಾವು ಕೆಲ ಟಿಪ್ಸ್ ನೀಡಿದ್ದೇವೆ. ಅವುಗಳನ್ನು ಪಾಲಿಸಿ ಫೇಶಿಯಲ್ ಮಾಡಿಸಿದರ ಸಂಪೂರ್ಣ ಪ್ರಯೋಜನ ಪಡೆಯಬಹುದು:

ಫೇಸ್ ವಾಶ್ ಅಥವಾ ಸೋಪು ಹಾಕಬೇಡಿ

ಫೇಸ್ ವಾಶ್ ಅಥವಾ ಸೋಪು ಹಾಕಬೇಡಿ

ಫೇಶಿಯಲ್ ಮಾಡಿಸಿದ ಬಳಿಕ 24 ಗಂಟೆಗಳವರೆಗೆ ಯಾವುದೇ ಸೋಪು ಅಥವಾ ಫೇಸ್ ವಾಸ್ ಅನ್ನು ಮುಖಕ್ಕೆ ಹಚ್ಚಬೇಡಿ, ತಣ್ಣೀರು ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ.

ಬಿಸಿಲಿಗೆ ಮುಖ ಒಡ್ಡಬೇಡಿ

ಬಿಸಿಲಿಗೆ ಮುಖ ಒಡ್ಡಬೇಡಿ

ಫೇಶಿಯಲ್ ಮಾಡಿದ ನಂತರ 2 ದಿನ ಬಿಸಿಲಿನಲ್ಲಿ ಓಡಾಡಬೇಡಿ. ಬಿಸಿಲಿನಲ್ಲಿ ಓಡಾಡುವುದಾದರೂ ಕೊಡೆ ಹಿಡಿದುಕೊಂಡು ಓಡಾಡಿ.

ನೀರು ಕುಡಿಯಿರಿ

ನೀರು ಕುಡಿಯಿರಿ

ನಿಮ್ಮ ಮುಖದ ಕಾಂತಿ ಹೆಚ್ಚಲು ಮತ್ತೊಂದು ಟಿಪ್ಸ್ ಅಂದರೆ ನೀರು ಕುಡಿಯುವುದು. 7-8 ಲೋಟ ನೀರು ಕುಡಿಯಿರಿ, ಅಲ್ಲದೆ ಜ್ಯೂಸ್, ಎಳನೀರು ಇವುಗಳನ್ನು ಕುಡಿಯಿರಿ.

ಮೇಕಪ್ ಮಾಡಬೇಡಿ

ಮೇಕಪ್ ಮಾಡಬೇಡಿ

ಫೇಶಿಯಲ್ ಮಾಡಿಸದ ಬಳಿಕ ಎರಡು ದಿನ ಯಾವುದೇ ಮೇಕಪ್ ಮಾಡಬೇಡಿ, ಕ್ರೀಮ್ ಕೂಡ ಹಚ್ಚಬೇಡಿ.

ನೋ ಸನ್ ಬೆಡ್

ನೋ ಸನ್ ಬೆಡ್

ಫೇಶಿಯಲ್ ಮಾಡಿಸಿದ ನಂತರ 28 ಗಂಟೆಗಳವರೆಗೆ ಬಿಸಿಲಿನಲ್ಲಿ ಓಡಾಡುವುದು ಅಥವಾ ಸೂರ್ಯನ ಕಿರಣಗಳಿಗೆ ಮೈ ಒಡ್ಡಿ ಮಲಗುವುದನ್ನು ಮಾಡಬೇಡಿ.

3-4 ಗಂಟೆಗಳಿಗೊಮ್ಮೆ ಮುಖವನ್ನು ತಣ್ಣೀರಿನಿಂದ ತೊಳೆಯಿರಿ

3-4 ಗಂಟೆಗಳಿಗೊಮ್ಮೆ ಮುಖವನ್ನು ತಣ್ಣೀರಿನಿಂದ ತೊಳೆಯಿರಿ

ಈ ಅಭ್ಯಾಸ ತ್ವಚೆ ಆರೈಕೆಯಲ್ಲಿ ತುಂಬಾ ಸಹಾಯ ಮಾಡುತ್ತದೆ. ಇದು ಮುಖದಲ್ಲಿರುವ ಕೊಳೆಯನ್ನು ಹೋಗಲಾಡಿಸುತ್ತದೆ ಹಾಗೂ ಮುಖದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ. ಆದರೆ ದಿನದಲ್ಲಿ 2 ಬಾರಿ ಮಾತ್ರ ಸೋಪು ಅಥವಾ ಫೇಶ್ ವಾಶ್ ಬಳಸಿ.

English summary

Skin Care Tips After A Facial

After facial you need to follow some tips for after care. So, here are the skin care tips for you to follow after getting a facial.
X
Desktop Bottom Promotion