For Quick Alerts
ALLOW NOTIFICATIONS  
For Daily Alerts

ಪುದೀನಾವನ್ನು ತ್ವಚೆ ಆರೈಕೆಯಲ್ಲಿ ಬಳಸಿದ್ದೀರಾ?

|

ಪುದೀನಾವನ್ನು ಅಡುಗೆಯ ಸ್ವಾದವನ್ನು ಹೆಚ್ಚಿಸಲು, ಆರೋಗ್ಯ ವೃದ್ಧಿಸಲು ಮಾತ್ರವಲ್ಲ ತ್ವಚೆ ಆರೈಕೆಯಲ್ಲೂ ಬಳಸಬಹುದು. ಇದರಲ್ಲಿ ಆಂಟಿ ಬಯೋಟಿಕ್(anti biotic) ಅಂಶವಿರುವುದಿಂದ ಕೀಟಾಣುಗಳ ವಿರುದ್ಧ ಹೋರಾಡಿ ತ್ವಚೆ ರಕ್ಷಣೆಯನ್ನು ಮಾಡುತ್ತದೆ.

ಪುದೀನಾವನ್ನು ಬಳಸಿ ಯಾವ ತ್ವಚೆ ಆರೈಕೆ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

Skin Benefits Of Cool Peppermint

1. ಎಣ್ಣೆ ತ್ವಚೆಯವರು ಬಳಸುವುದು ಒಳ್ಳೆಯದು
ಪುದೀನಾ ರಸವನ್ನು ಹಚ್ಚಿದರೆ ಇದು ಮುಖದಲ್ಲಿರುವ ಎಣ್ಣೆಯಂಶವನ್ನು ಹೀರಿಕೊಂಡು ಮುಖದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಈ ಪುದೀನಾ ರಸವನ್ನು ಎರಡು ದಿನಕ್ಕೊಮ್ಮೆ ಬಳಸುತ್ತಾ ಬನ್ನಿ. ಎಣ್ಣೆ ರಹಿತ ತ್ವಚೆ ನಿಮ್ಮದಾಗುವುದು.

2. ತ್ವಚೆ ತುರಿಕೆಯನ್ನು ಕಡಿಮೆ ಮಾಡುತ್ತದೆ
ಇದ್ದಕ್ಕಿದ್ದಂತೆ ಮೈಯಲ್ಲಿ ತುರಿಕೆ ಉಂಟಾದರೆ ಇದರ ರಸವನ್ನು ಹಚ್ಚಿದರೆ ಸಾಕು ತುರಿಕೆ ತಕ್ಷಣ ಶಮನವಾಗುವುದು. ಚಿಕ್ಕದಾಗಿ ಸುಟ್ಟಗಾಯವಾಗಿದ್ದರೆ ಇದನ್ನು ಹಚ್ಚಿದರೆ ಸಾಕು ಗುಣವಾಗುವುದು. ತುರಿಕೆಗೆ ಪುದೀನಾ ರಸದ ಜೊತೆ ಸ್ವಲ್ಪ ಜೇನು ಹಾಕಿ ಹಚ್ಚಿದರೆ ತುರಿಕೆ ಬೇಗನೆ ನಿಲ್ಲುತ್ತದೆ.

3. ಮೊಡವೆಯನ್ನು ಗುಣಪಡಿಸುತ್ತದೆ
ಇದರ ಮತ್ತೊಂದು ಸೌಂದರ್ಯವರ್ಧಕ ಗುಣವೆಂದರೆ ಮೊಡವೆಯನ್ನು ಕಡಿಮೆ ಮಾಡುತ್ತದೆ. ಇದನ್ನು ಹಚ್ಚುತ್ತಾ ಬಂದರೆ ಮುಖದಲ್ಲಿ ಕಲೆಯೂ ಉಳಿಯುವುದಿಲ್ಲ, ಮೊಡವೆಯೂ ಬರುವುದಿಲ್ಲ.

4. ಸನ್ ಟ್ಯಾನ್ ಹೋಗಲಾಡಿಸುತ್ತೆ
ಬಿಸಿಲಿಗೆ ಹೋಗಿ ಮುಖ ಕಪ್ಪಾಗಿದ್ದರೆ ಪುದೀನಾ ರಸ ಹಚ್ಚಿ, ತ್ವಚೆಗೆ ತಾಜಾತನ ಮರಳಿ ಬರುತ್ತದೆ.

5. ಬಾಯಿ ದುರ್ಗಂಧ ಹೋಗಲಾಡಿಸುತ್ತೆ
ಬಾಯಿ ದುರ್ಗಂಧ ವಾಸನೆ ಬೀರದಿರಲು ಒಂದು ಪುದೀನಾ ಎಲೆಯನ್ನು ಜಗಿದರೆ ಸಾಕು. ಪುದೀನಾ ದೇಹಕ್ಕೂ ತಂಪು.

English summary

Skin Benefits Of Cool Peppermint | Tips For Skin Care | ಪುದೀನಾ ಎಲೆಯ ಸೌಂದರ್ಯವರ್ಧಕ ಗುಣಗಳು | ತ್ವಚೆ ಆರೈಕೆಗೆ ಕೆಲ ಸಲಹೆಗಳು

Menthol present in peppermint offers both health and skin benefits. For example, menthol thins mucus which helps get rid of cold. It also provides a soothing effect to the skin. Take a look on the skin benefits of peppermint and ways to use it for skin care.
X
Desktop Bottom Promotion