For Quick Alerts
ALLOW NOTIFICATIONS  
For Daily Alerts

ಒಣ ಚರ್ಮಕ್ಕೆ ಉಪ್ಪಿನ ಸ್ಕ್ರಬ್ ರೆಸಿಪಿ

By Poornima Heggade
|

ಉಪ್ಪು, ಮನೆಯಲ್ಲಿಯೇ ಸರಳ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ತಯಾರಿಸಬಹುದಾದ ಒಂದು ಉತ್ತಮ ಘಟಕಾಂಶವಾಗಿದೆ. ಇದು ವಿಶೇಷವಾಗಿ ಚಳಿಗಾಲದಲ್ಲಿ ಸಾಮಾನ್ಯವಾಗಿ ಒಣಗುವ ತ್ವಚೆ ಮತ್ತು ನಿರ್ಜೀವಗೊಂಡ ಚರ್ಮದ ಪಾಲನೆಗೆ ಸಹಾಯಕವಾಗಿದೆ. ಉಪ್ಪು ಮತ್ತು ಮನೆಯಲ್ಲಿ ಇರುವ ಸುಲಭವಾಗಿ ಲಭ್ಯವಿರುವ ಪದಾರ್ಥಗಳು ಮತ್ತು ಕೆಲವು ಮೂಲಿಕೆಗಳನ್ನು ಬಳಸಿಕೊಂಡು ನಿಮ್ಮ ಒಣ ಚರ್ಮವನ್ನು ತೊಡೆದುಹಾಕಲು ಸ್ಕ್ರಬ್ ಗಳನ್ನು ತಯಾರಿಸಬಹುದು. ನೀವು ಯಾವುದೇ ಸಮಯದಲ್ಲಿ ಬಿಡುವಾಗಿದ್ದರೂ ಈ ಮನೆಮದ್ದನ್ನು ತಯಾರಿಸಿ ನಿಮ್ಮ ತ್ವಚೆಗೆ ಬಳಸಬಹುದು. ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಸುಲಭವಾಗಿ ಈ ಮನೆಮದ್ದನ್ನು ನೀವೇ ಸ್ವತಃ ತಯಾರಿಸಬಹುದಾದಷ್ಟು ಸುಲಭ!

ನೀವೇ ಸ್ವತಃ ತಯಾರಿಸಬಹುದಾದ ಈ ನೈಸರ್ಗಿಕವಾಗಿ ಸ್ಕ್ರಬ್, ಚರ್ಮದ ಬೆಳವಣಿಗೆಗೆ ಮತ್ತು ಪುನರ್ಯೌವನಗೊಳಿಸಲು ಸಹಾಯ ಮಾಡುತ್ತದೆ. ಇದು ಕೇಲವ ತ್ವಚೆಯ ಒಣ ಮತ್ತು ನಿರ್ಜೀವ ಸತ್ತ ಚರ್ಮವನ್ನು ತೆಗೆಯಲು ನೆರವಾಗುವುದು ಮಾತ್ರವಲ್ಲದೆ, ಚರ್ಮದ ಮೇಲಿನ ಕೊಳಕು ಮತ್ತು ಚರ್ಮದ ಮೇಲೆ ಸಂಗ್ರಹವಾದ ಜೀವಾಣುಗಳನ್ನು ತೆಗೆದು ಹಾಕಲೂ ಸಹ ಸಹಾಯ ಮಾಡುತ್ತದೆ. ಇದು ನಿಮ್ಮ ಚರ್ಮಕ್ಕೆ ಒಂದು ಹೊಸ ಹೊಳಪನ್ನು ನೀಡಲೂ ನೆರವಾಗುತ್ತದೆ. ಚರ್ಮದ ಬೆಳವಣಿಗೆಗೆ ತಡೆಯೊಡ್ಡುವ ರಂಧ್ರಗಳನ್ನು ತೊಡೆದುಹಾಕಿ ಚರ್ಮದ ಬೆಳವಣಿಗೆಗೂ ಸಹ ನೇರವಾಗಿ ಕಾರಣವಾಗಿದೆ ಈ ಮನೆಮದ್ದು!

Salt scrub recipes for dry skin

ಮನೆಯಲ್ಲಿ ತಯಾರಿಸಲಾದ ಈ ಉಪ್ಪು ಸ್ಕ್ರಬ್, ಕೆಲವು ನೈಸರ್ಗಿಕವಾದ ಮಾಯಿಶ್ಚರೈಸಿಂಗ್ ಘಟಕಗಳಾದ ಶಿಯಾ ಬಟರ್ , ಕೊಬ್ಬರಿ ಎಣ್ಣೆ, ಆಲಿವ್ ಎಣ್ಣೆ ಇತ್ಯಾದಿಗಳನ್ನು ಒಳಗೊಂಡಿದ್ದು, ಒಣ ಚರ್ಮವನ್ನು ಹೋಗಲಾಡಿಸಿ ತ್ವಚೆಯಲ್ಲಿ ತೇವಾಂಶವನ್ನು ಉಂಟುಮಾಡಲು ಸಹಾಯಕವಾಗಿದೆ.

ಇದಲ್ಲದೇ, ಈ ಪದಾರ್ಥಗಳು ನಿಮ್ಮ ಚರ್ಮಕ್ಕೆ ನೈಸರ್ಗಿಕವಾಗಿ ಪೌಷ್ಟಿಕಾಂಶದ ಮೌಲ್ಯಗಳನ್ನು ಒದಗಿಸುವಲ್ಲಿ ಅತ್ಯಂತ ಅಗತ್ಯ. ಹೊಸ ಚರ್ಮ, ಬಾದಾಮಿ ಎಣ್ಣೆ , ಗಿಡಮೂಲಿಕೆಗಳು , ಓಟ್ ಮೀಲ್ ದ್ರಾಕ್ಷಿಬೀಜ ಇತ್ಯಾದಿಗಳಿಂದ ಪೋಷಕಾಂಶಗಳನ್ನು ಹೀರಿಕೊಳ್ಳುಲು ಸಾಧ್ಯವಾಗುತ್ತದೆ.

1. ಹರ್ಬಲ್ (ಮೂಲಿಕೆ) ಸಮುದ್ರ ಉಪ್ಪಿನ ಸ್ಕ್ರಬ್


ಬೇಕಾಗುವ ಪದಾರ್ಥಗಳು:

a. ಒಂದು ದೊಡ್ಡ ಕೈಮುಷ್ಠಿಯಷ್ಟು ಒಣಗಿದ ಸಸ್ಯ ( ಯಾವುದೇ )
b. 2 - 3 ಚಮಚ ಸಮುದ್ರ ಉಪ್ಪು
c. ½ ಚಮಚ ಆಲಿವ್ ತೈಲ ( ಅಥವಾ ಕೊಬ್ಬರಿ ಎಣ್ಣೆ )
d. 4 ಚಮಚೆಯಷ್ಟು ನೀರು

ನಿಮ್ಮ ಆಯ್ಕಿಯ ಮೂಲಿಕೆಯನ್ನು ತೆಗೆದುಕೊಂಡು ಒನಕೆಯಿಂದ ಪುಡಿ ಮಾಡಿ. ಸಮುದ್ರದ ಉಪ್ಪಿಗೆ ಈ ಪುಡಿಯನ್ನು ಸೇರಿಸಿ. ಈ ಮಿಶ್ರಣಕ್ಕೆ ನೀರನ್ನು ಹಾಕಿ ಕಲಕಿ. ಕೊನೆಯದಾಗಿ ಆಲಿವ್ ಎಣ್ಣೆಯನ್ನು ಸೇರಿಸಿ. ಇದನ್ನು ಬಳಸುವುದರಿಂದ ಕೆಲವೇ ದಿನಗಳಲ್ಲಿ ನೀವೇ ಸ್ವತಃ ಪರಿಣಾಮಕಾರಿ ಚಿಕಿತ್ಸೆಯನ್ನು ಅನುಭವಿಸುವಿರಿ.

2. ಸಾಮಾನ್ಯ ಉಪ್ಪಿಸ ಸ್ಕ್ರಬ್

ಬೇಕಾದ ಪದಾರ್ಥಗಳು:
a. ಉಪ್ಪು
b. ಎಣ್ಣೆ (ಆಲಿವ್ ಅಥವಾ ತೆಂಗಿನೆಣ್ಣೆ)
c. ಸುಗಂಧ ದ್ರವ್ಯ

ಸಮುದ್ರದ ಉಪ್ಪು, ಎಪ್ಸಮ್ ಉಪ್ಪು , ಸಾಚಾ ಉಪ್ಪು ಅಥವಾ ಹಳೆಯ ಉಪ್ಪು ಇವುಗಳಲ್ಲಿ ನಿಮಗೆ ಬೇಕಾದ ಉಪ್ಪನ್ನು ಆಯ್ಕೆ ಮಾಡಿಕೊಳ್ಳಿ. ಸಾಮಾನ್ಯವಾಗಿ ಟೆಬಲ್ ಉಪ್ಪು (ಸಾಮಾನ್ಯ ಉಪ್ಪು) ಅಗ್ಗದಲ್ಲಿ ದೊರೆಯುತ್ತದೆ ಮತ್ತು ಇದು ಸಣ್ಣ ಕಾಳುಗಳನ್ನು ಹೊಂದಿರುತ್ತದೆ. ನಿಮ್ಮ ಚರ್ಮದ ರೀತಿಗೆ ಸರಿ ಹೊಂದುವಂತಹ ಮತ್ತು ನಿಮಗೆ ಸುಲಭವಾಗಿ ಲಭ್ಯವಿರುವ ಎಣ್ಣೆಯನ್ನು ಆಯ್ಕೆ ಮಾಡಿ ಉಪ್ಪುಗೆ ಮಿಶ್ರಣ ಮಾಡಿ. ಆಲಿವ್ ಎಣ್ಣೆ, ತೆಂಗಿನ ಎಣ್ಣೆ , ಬಾದಾಮಿ ಎಣ್ಣೆ, ಎಳ್ಳೆಣ್ಣೆ ಇತ್ಯಾದಿ ತೈಲಗಳು ಚರ್ಮಕ್ಕೆ ಒಳ್ಳೆಯದು. ಇದಕ್ಕೆ ಲ್ಯಾವೆಂಡರ್, ಚಾಕಲೇಟ್, ಕಿತ್ತಳೆ ಇತ್ಯಾದಿ ಸಾರಗಳಿರುವ ಸುಗಂಧ ದ್ರವ್ಯದ ಕೆಲವು ಹನಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ನಾನದ ನಂತರ ನಿಮ್ಮ ಚರ್ಮ ತೇವಭರಿತ ಮತ್ತು ಮೃದುವಾಗಲು ಯಾವಾಗಲೂ ಬಳಸಿ ಅಥವಾ ಮೊಣಕಾಲು ಮತ್ತು ಮೊಣಕೈ ರೀತಿಯ ಒರಟು ಪ್ರದೇಶಗಳಿಗೆ ಇದನ್ನು ಅನ್ವಯಿಸಿ.

3. ಜಡ ಸಮುದ್ರ ಉಪ್ಪಿನ ಸ್ಕ್ರಬ್

ಬೇಕಾಗುವ ಪದಾರ್ಥಗಳು
a. 4 ಚಮಚ ಕೊಬ್ಬರಿ ಎಣ್ಣೆ
b. ಒಂದು ಚಮಚ ಶಿಯಾ ಬಟರ್
c. 3 ಚಮಚ ಎಣ್ಣೆ (ಬಾದಾಮಿ, ಜೊಜೊಬಾ, ಆಲಿವ್ ಇತ್ಯಾದಿ)
d. 1 / 3ರಷ್ಟು ಮೇಣ
e. ಸಮುದ್ರ ಉಪ್ಪು
f. 1 / 2 ಚಮಚ ಅತ್ಯಗತ್ಯ ತೈಲ ( ಐಚ್ಛಿಕ )

ಸಮುದ್ರ ಉಪ್ಪು ಮತ್ತು ಅತ್ಯಗತ್ಯ ತೈಲ ಹಿಡಿದಿಡಲು ಸಾಕಷ್ಟು ದೊಡ್ಡ ಒಂದು ಗಾಜಿನ ಪಾತ್ರೆಯನ್ನು ತೆಗೆದುಕೊಂಡು ಇವೆಲ್ಲವನ್ನೂ ಮಿಶ್ರಣ ಮಾಡಿ. ಬಾಯ್ಲರ್ ನ್ನು ಬಳಸಿ, ಈ ಪದಾರ್ಥಗಳನ್ನು ಕರಗಿಸಿ. ಇದನ್ನು ತಣ್ಣಗಾಗಿಸಿ ಸಾರಭೂತ ತೈಲಗಳನ್ನು ಬೆರೆಸಿ ಮತ್ತು ನಂತರ ಉಪ್ಪನ್ನು ಸೇರಿಸಿ. ತ್ವಚೆಗೆ ಲೇಪಿಸಿ.

4. ಓಟ್ ಹಿಟ್ಟು ಮತ್ತು ಪಚ್ಚೆತೆನೆ ಸಮುದ್ರ ಉಪ್ಪಿನ ಸ್ಕ್ರಬ್

ಬೇಕಾದ ಪದಾರ್ಧಗಳು:
a. ಸಮುದ್ರ ಉಪ್ಪು (2 ಕಪ್ )
b. ಓಟ್ ಹಿಟ್ಟು ಬೇಯಿಸದೇ ಇರುವುದು ( 1/2 ಕಪ್ )
c. ಆಲಿವ್ ತೈಲ ( 1/2 ಕಪ್ )
d. ಪಚ್ಚೆತೆನೆ ಅಗತ್ಯ ತೈಲ ( 5-10 ಹನಿಗಳು )

ಒಂದು ಸ್ವಚ್ಛ ಒಣ ಬಟ್ಟಲಿನಲ್ಲಿ ಉಪ್ಪು ಹಾಕಿ ತೈಲಗಳನ್ನು ಸೇರಿಸಿ ಮಿಶ್ರಣ ಮಾಡಿ. ಪಚ್ಚೆತೆನೆ ಹನಿಗಳನ್ನು ಸೇರಿಸಿ ಪುನಃ ಚೆನ್ನಾಗಿ ಮಿಶ್ರಣ ಮಾಡಿ. ಗಾಜಿನ ಜಾಡಿಯಲ್ಲಿ ಸಂಗ್ರಹಿಸಿ ದೇಹದ ಮೇಲೆ ಲೇಪಿಸಿ.

English summary

Salt scrub recipes for dry skin

Salt is a great ingredient to make some simple and highly effective homemade scrubs. It specially helps during winter when your skin gets dry quite often and accumulates dead skin.
Story first published: Monday, December 30, 2013, 10:42 [IST]
X
Desktop Bottom Promotion