For Quick Alerts
ALLOW NOTIFICATIONS  
For Daily Alerts

ಮೊಡವೆ ಸಮಸ್ಯೆಗೆ ಮನೆಮದ್ದು

By Hemanth Amin
|

ಮೊಡವೆಗಳಿಂದ ಸಮಸ್ಯೆಗೊಳಗಾಗಿರುವ ನತದೃಷ್ಟ ವ್ಯಕ್ತಿ ನೀವಾಗಿದ್ದರೆ, ಮುಖದ ಮೇಲೆಲ್ಲಾ ಯಾಕೆ ಮೊಡವೆಗಳು ತುಂಬಿದೆ ಎಂದು ನಿಮಗೆ ಅಚ್ಚರಿಯಾಗುತ್ತಿದ್ದರೆ ಇದಕ್ಕೆ ಕಾರಣವೂ ಇದೆ. ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳಲು ಮುಖ್ಯ ಕಾರಣವೆಂದರೆ ಒತ್ತಡ ಮತ್ತು ಖಿನ್ನತೆ. ಇತರ ಕಾರಣಗಳೆಂದರೆ ಸಿಹಿ ಮತ್ತು ಬೆಣ್ಣೆಯುಕ್ತ ಆಹಾರಗಳಾದ ಚಾಕಲೇಟ್ ಮತ್ತು ಧೂಳಿನ ಶೇಖರಣೆ. ನಿಮ್ಮ ಅಂದವಾದ ಮುಖದ ಮೇಲೆ ಮೊಡವೆಗಳೇ ಕಾಣಿಸುತ್ತಿರುವಾಗ ಜೀವನವೇ ಬೇಸರವೆನಿಸುತ್ತದೆ. ಮೊಡವೆಗಳು ಮಾಯವಾದರೂ ಅದರ ಕಲೆ ಹಾಗೆ ಉಳಿದುಕೊಳ್ಳುತ್ತದೆ. ಇದು ದೊಡ್ಡ ಚಿಂತೆಯ ವಿಷಯ.

ನಿಮ್ಮ ತ್ವಚೆ ನಿಜವಾಗಿಯೂ ನಿಮ್ಮ ಸ್ನೇಹಿತನಿದ್ದಂತೆ ಮತ್ತು ಇದರ ಬಗ್ಗೆ ಸಾಧ್ಯವಾದಷ್ಟು ಮಟ್ಟಿಗೆ ಕಾಳಜಿ ತೆಗೆದುಕೊಳ್ಳಬೇಕು. ಮುಖದಲ್ಲಿ ಮೊಡವೆಗಳು ಕಾಣಿಸಿಕೊಂಡಾಗ ತ್ವಚೆಗೆ ಹಾನಿಯಾಗಿ, ನಿಮ್ಮ ತ್ವಚೆಯನ್ನು ದ್ವೇಷಿಸಲು ಆರಂಭಿಸಬಹುದು. ಇದಕ್ಕೆ ಏನು ಮಾಡಬೇಕು? ದುಬಾರಿ ಕಾಸ್ಮೆಟಿಕ್ ಅಥವಾ ರಾಸಾಯನಿಕ ಚಿಕಿತ್ಸೆ ಮಾಡಿಕೊಳ್ಳಬೇಕೇ? ಇದು ಅನಿವಾರ್ಯವಲ್ಲ. ಮನೆಮದ್ದು ಕೂಡ ಮೊಡವೆಗೆ ಪರಿಹಾರ ಒದಗಿಸಬಲ್ಲದು. ನಿಮ್ಮ ತ್ವಚೆ ಕೂಡ ಉಸಿರಾಡುತ್ತದೆ ಮತ್ತು ಅದಕ್ಕೂ ಜೀವವಿದೆ. ತ್ವಚೆಯನ್ನು ತುಂಬಾ ಎಚ್ಚರಿಕೆಯಿಂದ ಆರೈಕೆ ಮಾಡಿ.

ತಾಳ್ಮೆ ತುಂಬಾ ಮುಖ್ಯ. ಗುಣಮುಖವಾಗಲು ಚಿಕಿತ್ಸೆಗೆ ಸರಿಯಾದ ಸಮಯ ನೀಡಿ. ಮೊಡವೆಗಳಿಗೆ ಸರಿಯಾದ ಮದ್ದನ್ನು ಪರಿಣಾಮಕಾರಿಯಾಗಿ ಮಾಡಬೇಕು. ಮೊಡವೆಗಳನ್ನು ಹೇಗೆ ನಿವಾರಿಸಬಹುದೆಂಬ ಕೆಲವೊಂದು ಟಿಪ್ಸ್ ಗಳು ಇಲ್ಲಿವೆ.

1. ಮಸಾಲೆ

1. ಮಸಾಲೆ

ಮೊಡವೆಗಳಿಗೆ ಮಸಾಲೆ ಮದ್ದೇ ಎಂದು ಮೂಗಿನ ಮೇಲೆ ಕೈಯಿಡಬೇಡಿ. ದಾಲ್ಚಿನ್ನಿ ಮತ್ತು ಜೇನಿನ ಮಾಸ್ಕ್ ನ್ನು ಪ್ರಯತ್ನಿಸಿ. ಮೊಡವೆಗಳಿಗೆ ಜೇನು ಮತ್ತು ದಾಲ್ಚಿನಿಯ ಚಿಕಿತ್ಸೆ ತುಂಬಾ ಪರಿಣಾಮಕಾರಿ. ದಾಲ್ಚಿನಿಯಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಾ ಗುಣಗಳು ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ ಮತ್ತು ಜೇನು ನೈಸರ್ಗಿಕ ಆ್ಯಂಟಿ ಬಯೋಟಿಕ್. ಇದು ಒಳ್ಳೆಯ ತ್ವಚೆಗೆ ಅದ್ಭುತ ಮಿಶ್ರಣವೆಂದು ನಿಮಗನಿಸುವುದಿಲ್ಲವೇ?

2. ಮೊಟ್ಟೆ

2. ಮೊಟ್ಟೆ

ಆಹಾರದಲ್ಲಿ ಕ್ಯಾಲ್ಸಿಯಂಗಾಗಿ ಮೊಟ್ಟೆಯ ಬಿಳಿ ಭಾಗವನ್ನು ತಿನ್ನುತ್ತಿದ್ದರೆ ಇದು ಮೊಡವೆಗಳಿಗೂ ಒಳ್ಳೆಯ ಮದ್ದು. ಮೊಡವೆಗಳಿಗೆ ಮೊಟ್ಟೆಯ ಬಿಳಿಭಾಗವು ಒಳ್ಳೆಯ ಚಿಕಿತ್ಸೆ. ಇದರಲ್ಲಿ ಪ್ರೋಟೀನ್ ಮತ್ತು ಖನಿಜಗಳಿದ್ದು, ಇದು ಮೊಡವೆಗಳ ವಿರುದ್ಧ ಹೋರಾಡುತ್ತದೆ ಮತ್ತು ತ್ವಚೆಯನ್ನು ಪುನರ್ಯೌವನಗೊಳಿಸುತ್ತದೆ. ಈ ವಿಧಾನದ ಮೂಲಕ ನೀವು ತುಂಬಾ ಕಡಿಮೆ ಖರ್ಚಿನಲ್ಲಿ ತ್ವಚೆಯ ಆರೈಕೆ ಮಾಡಬಹುದು. ಮೊಟ್ಟೆಯ ಬಿಳಿಭಾಗವನ್ನು ತೆಗೆದು ಅದನ್ನು ನಿಮ್ಮ ತ್ವಚೆಗೆ ಹಚ್ಚಿ ಮತ್ತು ಅದನ್ನು ಒಣಗಲು ಬಿಡಿ. ಸ್ವಲ್ಪ ಸಮಯದ ಬಳಿಕ ತೊಳೆಯಿರಿ.

3. ಪಪ್ಪಾಯಿ ಮ್ಯಾಜಿಕ್

3. ಪಪ್ಪಾಯಿ ಮ್ಯಾಜಿಕ್

ಇಂದು ಮಾರುಕಟ್ಟೆಯಲ್ಲಿ ಸಿಗುವ ತ್ವಚೆಗೆ ಸಂಬಂಧಿಸಿದ ಹೆಚ್ಚಿನ ಉತ್ಪನ್ನಗಳಲ್ಲಿ ಪಪ್ಪಾಯಿ ಅಂಶ ಒಳಗೊಂಡಿರುತ್ತದೆ. ಮೊಡವೆಗಳಿಗೆ ಇದು ಒಳ್ಳೆಯ ಮದ್ದು. ಪಪ್ಪಾಯಿಯನ್ನು ಪೇಸ್ಟ್ ಮಾಡಿ ಅದನ್ನು ತ್ವಚೆ ಹಚ್ಚಿ. ಇದನ್ನು 15-20 ನಿಮಿಷಗಳವರೆಗೆ ಹಾಗೆ ಬಿಡಿ. ಬಳಿಕ ಬಿಸಿ ನೀರಿನಿಂದ ಮುಖ ತೊಳೆಯಿರಿ. ಮೊಡವೆಗಳಿಗೆ ಇದು ಒಳ್ಳೆಯ ವಿಧಾನ.

4. ಹಳದಿ ಬಾಳೆಹಣ್ಣು ನಿಮಗಿಷ್ಟವೇ?

4. ಹಳದಿ ಬಾಳೆಹಣ್ಣು ನಿಮಗಿಷ್ಟವೇ?

ನೀವು ಬಾಳೆಹಣ್ಣು ಪ್ರಿಯರಾಗಿದ್ದರೆ ಅದರ ಸಿಪ್ಪೆಯನ್ನು ನಿಮ್ಮ ಚರ್ಮದ ಮೇಲೆ ಇಡಿ. ಇದು ಮೊಡವೆಗೆ ಒಳ್ಳೆಯ ಮದ್ದು. ಬಾಳೆಹಣ್ಣಿನ್ನು ತಿಂದು ಅದರ ಸಿಪ್ಪೆಯನ್ನು ನಿಮ್ಮ ಮುಖಕ್ಕೆ ಉಜ್ಜಿ. ಮುಖಕ್ಕೆ ಉಜ್ಜಿದ ಬಳಿಕ ಸುಮಾರು 30 ನಿಮಿಷಗಳ ಕಾಲ ಅದು ಹಾಗೆ ಇರಲಿ. ಇದರ ಬಳಿಕ ತೊಳೆಯಿರಿ.

5. ನಿಂಬೆ ಹಣ್ಣಿನಿಂದ ಸೌಂದರ್ಯ ಆರೈಕೆ

5. ನಿಂಬೆ ಹಣ್ಣಿನಿಂದ ಸೌಂದರ್ಯ ಆರೈಕೆ

ನಿಂಬೆಹಣ್ಣಿನಿಂದ ಸೌಂದರ್ಯದ ಆರೈಕೆ ಹೇಗೆ? ನಿಂಬೆಹಣ್ಣಿನ ರಸವು ಮೊಡವೆಗೆ ಒಳ್ಳೆಯ ಮದ್ದು. ನಿಂಬೆಹಣ್ಣಿನಲ್ಲಿ ವಿಟಮಿನ್ `ಸಿ' ಸಮೃದ್ಧವಾಗಿದೆ ಮತ್ತು ಇದು ಮೊಡವೆಗಳನ್ನು ನಿವಾರಿಸುವ ಗುಣ ಹೊಂದಿದೆ. ಇದು ಚರ್ಮದ ಮೇಲ್ಪದವನ್ನು ಸುಲಿದುಹಾಕುವ ಗುಣ ಹೊಂದಿದೆ. ಇದು ನೈಸರ್ಗಿಕವಾಗಿ ಚರ್ಮವನ್ನು ಬಿಳಿ ಮಾಡುತ್ತದೆ ಮತ್ತು ಚರ್ಮವನ್ನು ಪರಿಣಾಮಕಾರಿಯಾಗಿ ಆರೈಕೆ ಮಾಡುತ್ತದೆ. ನಿಂಬೆರಸವನ್ನು ತ್ವಚೆಯ ಮೇಲೆ ಹಾಕಿ ಮತ್ತು ಕೆಲವು ನಿಮಿಷದ ಬಳಿಕ ತೊಳೆಯಿರಿ.

6. ತ್ವಚೆಯನ್ನು ತಾಜಾಗೊಳಿಸಿ

6. ತ್ವಚೆಯನ್ನು ತಾಜಾಗೊಳಿಸಿ

ನೀವು ಪುದಿನಾದಿಂದ ತ್ವಚೆಯನ್ನು ತಾಜಾಗೊಳಿಸಲು ಪ್ರಯತ್ನಿಸಬಹುದು ಮತ್ತು ಇದು ಮೊಡವೆ ನಿವಾರಿಸಲು ಒಳ್ಳೆಯ ವಿಧಾನ. ನಿಮ್ಮ ಮುಖವನ್ನು ತೊಳೆಯಿರಿ ಮತ್ತು ಒಣಗಲು ಬಿಡಿ. ಇದರ ಬಳಿಕ ಪುದಿನಾ ಎಲೆಗಳ ರಸ ತೆಗೆದು ಅದನ್ನು ನಿಮ್ಮ ಮುಖದ ಮೇಲೆ ಹಚ್ಚಿ. ನಿಮ್ಮ ಮುಖದ ಪೂರ್ತಿ ಇದನ್ನು ಹಚ್ಚಿ. 15 ನಿಮಿಷ ತನಕ ಹಾಗೆ ಬಿಡಿ ಮತ್ತು ಬಳಿಕ ಮುಖ ತೊಳೆಯಿರಿ. ಪರಿಣಾಮ ನೋಡಿ.

English summary

Remedies for Skin Outbreaks

If you are one of those unlucky persons suffering from an acne outbreak and wondering why pimples are filled all over your face, then there could be reasons to it. The most popular reasons related to skin outbreaks could be stress or depression.
Story first published: Saturday, November 30, 2013, 15:44 [IST]
X
Desktop Bottom Promotion