For Quick Alerts
ALLOW NOTIFICATIONS  
For Daily Alerts

ತ್ವಚೆ ಮೇಲಿನ ಕಲೆಗಳ ನಿವಾರಣೆಗೆ ಟಿಪ್ಸ್

By ಗುರುರಾಜ್
|

ನಿಮ್ಮ ಶರೀರದ ಮೇಲಿರುವ ಕಲೆಗಳ (scars) ಕುರಿತು ಚಿಂತಿತರಾಗಿದ್ದೀರಾ ?! ಈ ಕಲೆಗಳ ಕಾರಣದಿಂದಾಗಿ ಸಮಾಜದೊಡನೆ ಮುಕ್ತವಾಗಿ ಬೆರೆಯಲು ನಿಮಗೆ ಮುಜುಗರವಾಗುತ್ತಿದೆಯೇ ?! ಈ ಕಲೆಗಳ ನಿವಾರಣೆಗಾಗಿ ಅನೇಕ ರೀತಿಯಲ್ಲಿ ಪ್ರಯತ್ನಿಸಿ, ಫಲ ಕಾಣದೇ ಹತಾಶರಾಗಿದ್ದೀರಾ ?!

ಹಾಗಿದ್ದಲ್ಲಿ, ಕಲೆಗಳ ನಿವಾರಣೆಗಾಗಿ ಈ ಕೆಳಗೆ ಕೆಲವು ಮಾರ್ಗಗಳನ್ನು ಸೂಚಿಸಲಾಗಿದೆ ಹಾಗೂ ನೀವು ಕಾಳಜಿ ವಹಿಸಬೇಕಾದ ಕೆಲವೊಂದು ವಿಚಾರಗಳ ಬಗ್ಗೆ ಪ್ರಸ್ತಾಪಿಸಲಾಗಿದೆ.

Natural Ways To Remove Scars

1 . ಅವಘಡಗಳ ಕಾರಣದಿಂದಾಗಿ ಉಂಟಾದ ಕಲೆಗಳನ್ನು ನಿವಾರಿಸಲು, ಅರಿಶಿನದ ಪುಡಿಯನ್ನು (ಮುಖಕ್ಕೆ ಬಳಸುವ ಅರಿಶಿನ ಪುಡಿಯೇ ಹೊರತು ಮಾರುಕಟ್ಟೆಯಲ್ಲಿ, ಪ್ಯಾಕೆಟ್ ಗಳಲ್ಲಿ ದೊರೆಯುವ ಅರಿಶಿನ ಪುಡಿಯಲ್ಲ) ಹುರಿದು ತದನಂತರ ಅದನ್ನು ದೇಸೀ ತುಪ್ಪದೊಂದಿಗೆ ಬೆರೆಸಿ, ನಿಮ್ಮ ಬೆರಳುಗಳ ತುದಿಯಿಂದ ಈ ಮಿಶ್ರಣವನ್ನು ನಯವಾಗಿ ತ್ವಚೆಯ ಕಲೆಗಳ ಮೇಲೆ ಲೇಪಿಸಿರಿ. ಸುಮಾರು 20 ನಿಮಿಷಗಳ ತರುವಾಯ ಇದನ್ನು ತೊಳೆದು ತೆಗೆಯಿರಿ. ಈ ಮಿಶ್ರಣವು ತ್ವಚೆಯ ಮೇಲಿನ ಕಲೆಗಳನ್ನು ಸಂಪೂರ್ಣವಾಗಿ ನಿವಾರಿಸಿಬಿಡುತ್ತದೆ. ಆದಾಗ್ಯೂ, ಯಾವುದೇ ಸೌಂದರ್ಯ ಸಂಬಂಧಿತ ಶುಶ್ರೂಷೆಯನ್ನು ಆರಂಭಿಸುವ ಮುನ್ನ, ಯಾವಾಗಲೂ ಕೂಡ ನಿಮ್ಮ ವೈದ್ಯರ ಸಲಹೆಯನ್ನು ಪಡೆಯುವುದು ಒಳ್ಳೆಯದು.

2 . ಕಲೆಗಳ ನಿವಾರಣೆಗಾಗಿ ಇರುವ ಮತ್ತೊಂದು ಮನೆಮದ್ದು ಅಡುಗೆ ಸೋಡಾ ಆಗಿದ್ದು, ಇದೊಂದು ಪ್ರಾಕೃತಿಕ ಉಜ್ಜುಕಾರಕವಾಗಿದ್ದು, ಕಲೆಯನ್ನು ಪದರ ಪದರಗಳ ರೂಪದಲ್ಲಿ ನಿವಾರಿಸಲು ಸಹಾಯಕವಾಗಿದೆ. ಎರಡು ಪಾಲು ನೀರು ಮತ್ತು ಒಂದು ಪಾಲು ಅಡುಗೆ ಸೋಡಾವನ್ನು ಬಳಸಿಕೊಂಡು ಒಂದು ತೆಳುವಾದ ಪೇಸ್ಟ್ ಅನ್ನು ತಯಾರಿಸಿರಿ. ಈ ಪೇಸ್ಟ್ ಅನ್ನು ಸುಮಾರು ಒಂದು ನಿಮಿಷದ ಕಾಲ ಕಲೆಗಳ ಮೇಲೆ ನಯವಾಗಿ ಉಜ್ಜಿರಿ. ಅನಂತರ ನೀವು ಈ ಪೇಸ್ಟ್ ಅನ್ನು ತೊಳೆದು ತೆಗೆಯಬಹುದು. ಆದರೆ, ಇಲ್ಲಿ ನೀವು ತೆಗೆದುಕೊಳ್ಳಬೇಕಾದ ಒಂದು ಎಚ್ಚರಿಕೆಯೇನೆಂದರೆ, ನೀವು ಕಲೆಗಳ ಮೇಲೆ ಈ ಪೇಸ್ಟ್ ಅನ್ನು ಜೋರಾಗಿ ಉಜ್ಜದಂತೆ ನೋಡಿಕೊಳ್ಳುವುದಾಗಿದೆ.

ನೆನಪಿನಲ್ಲಿರಿಸಿಕೊಳ್ಳಬೇಕಾದ ವಿಷಯಗಳು:

1 . ವಿಟಮಿನ್ E ಎಣ್ಣೆಯನ್ನು ಈ ಕಲೆಗಳ ಮೇಲೆ ಲೇಪಿಸಿರಿ. ಈ ಎಣ್ಣೆಯನ್ನು ನೀವು capsule ನಿಂದ ಪಡೆಯಬಹುದು. ಈ ಎಣ್ಣೆಯನ್ನು ಪ್ರತಿದಿನ ರಾತ್ರಿಯ ವೇಳೆ ಮಲಗುವ ಮೊದಲು ಈ ಕಲೆಗಳ ಮೇಲೆ ಲೇಪಿಸಿರಿ. ಕಲೆಗಳು ಮತ್ತು ಚುಕ್ಕೆಗಳನ್ನು ಮಾಸಲುಗೊಳಿಸಿ ಹೋಗಲಾಡಿಸಲು ಇದೊಂದು ಪರಿಣಾಮಕಾರೀ ವಿಧಾನವಾಗಿದೆ.

2 . ನೀರನ್ನು ಧಾರಾಳವಾಗಿ ಸೇವಿಸಿರಿ. ನೀವು ಯಾವಾಗಲೂ ಆರೋಗ್ಯದಾಯಕ ಪದಾರ್ಥಗಳ ಸೇವನೆಯನ್ನು ಖಚಿತಪಡಿಸಿಕೊಳ್ಳಿರಿ. ಏಕೆಂದರೆ, ಇದು ನಿಮ್ಮ ಶರೀರದಲ್ಲಿನ ವಿಷಪದಾರ್ಥಗಳನ್ನು ನಿವಾರಿಸಲು ನೆರವಾಗುತ್ತದೆ ಹಾಗೂ ತನ್ಮೂಲಕ ಕಲೆರಹಿತ ಮುಖವನ್ನು ನೀವು ಹೊಂದುವಂತೆ ಮಾಡುತ್ತದೆ.

3 . ನಿಮ್ಮ ಮುಖದ ಮೇಲೆ ಎಂದಿಗೂ ಸಹ ಬರಿಯ ಲಿoಬೆಹಣ್ಣಿನ ರಸವನ್ನು ಮಾತ್ರವೇ ಉಪಯೋಗಿಸಬೇಡಿರಿ. ಏಕೆಂದರೆ, ಇದರಿಂದ ನಿಮ್ಮ ಮುಖದ ತ್ವಚೆಯು ಹಾನಿಗೀಡಾಗಬಹುದು. ಲಿoಬೆಹಣ್ಣಿನ ರಸವನ್ನು ನೀರಿನಲ್ಲಿ ಅಥವಾ ಪನ್ನೀರಿನಲ್ಲಿ ಬೆರೆಸಿ ನಂತರ ಅದನ್ನು ನಿಮ್ಮ ತ್ವಚೆಯ ಮೇಲೆ ಬಳಸಿರಿ.

4 . ಹೆಚ್ಚಿಗೆಯಲ್ಲದಿದ್ದರೂ, ಕನಿಷ್ಟ ಎರಡು ಬಾರಿಯಾದರೂ ನಿಮ್ಮ ಮುಖವನ್ನು ಶುದ್ಧವಾದ, ತಂಪಾದ ನೀರಿನಿಂದ ತೊಳೆದುಕೊಳ್ಳಿರಿ. ಹೀಗೆ ಮಾಡುವುದರಿಂದ ನಿಮ್ಮ ತ್ವಚೆಯ ಸೂಕ್ಷ್ಮ ರಂಧ್ರಗಳು ಮುಚ್ಚಿ ಹೋಗುವುದನ್ನು ತಡೆದಂತಾಗುತ್ತದೆ.

5 . ಮೊಡವೆಗಳು ಮತ್ತು ಕಲೆಗಳಿಗೆ ಕಾರಣವಾಗಬಹುದಾದ, ಅತಿಯಾದ ಎಣ್ಣೆಯ ಸ್ರವಿಕೆಯನ್ನು (ಸ್ರಾವವನ್ನು) ತಡೆಗಟ್ಟಲು, ಒಂದು ಒಳ್ಳೆಯ oil control face wash ಅನ್ನು ಉಪಯೋಗಿಸಿರಿ.

English summary

Natural Ways To Remove Scars

Pimple, accident, wound will remain scar on our body. Some scar will go within few days, but some scar will take years to go.To clear scars Here are some methods to do the same and certain pointers you need to keep in mind.
X
Desktop Bottom Promotion