For Quick Alerts
ALLOW NOTIFICATIONS  
For Daily Alerts

ಆಕರ್ಷಕ ತ್ವಚೆಗಾಗಿ ಮಾವಿನ ಫೇಸ್ ಮಾಸ್ಕ್

By ಲೇಖಕ
|

ಮಾವಿನ ತಿರುಳನ್ನು ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಉಜ್ಜುವುದರಿಂದ ನಿಮ್ಮ ಚರ್ಮಕ್ಕೆ ನವಚೈತನ್ಯ ತುಂಬಿರಿ.ರಸಯುಕ್ತ ಫಲವು ದಣಿದ ಚರ್ಮಕ್ಕೆ ತಂಪಾದ ಪರಿಣಾಮವನ್ನು ಒದಗಿಸುತ್ತದೆ.ಮಾವಿನ ತಿರುಳಿನಿಂದ ಮುಖವನ್ನು 6-10 ನಿಮಿಷಗಳವರೆಗೆ ಮಸಾಜ್ ಮಾಡಿ, ತಂಪು ನೀರಿನಿಂದ ಸ್ವಚ್ಛಗೊಳಿಸಿ.

ನೀವು ಮೋದಲು ತಣ್ಣನೆಯ ಹಾಲಿನಿಂದ ನಂತರ ನೀರಿನಿಂದ ಕೂಡ ತೊಳೆಯ ಬಹುದು.

Mango Face Mask For Glowing Skin


ಮಾವು ಮೊಸರಿನ ಮುಖವಾಡ:
ಸೂರ್ಯನಿಂದ ಉಂಟಾಗುವ ಕಂದುಬಣ್ಣವನ್ನು ತೆಗೆಯಲುಈ ಫೆಸಿಯಲ್ಲನ್ನು ದಿನವೂ ಹಚ್ಚ ಬಹುದು ಅಥವಾ ಕೊನೇಪಕ್ಷ ವಾರಕ್ಕೆ ಮೂರು ಬಾರಿಯಾದರೂ ಬಳಸಬಹುದು. ಒಂದು ಮಾವನ್ನು ಹಿಸುಕಿ,1 ಚಿಕ್ಕ ಚಮಚ ಮೊಸರು ಹಾಗೂ ನಿಂಬೆ ರಸಗಳನ್ನು ಚನ್ನಾಗಿ ಬೆರೆಸಿ,ಈ ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿರಿ. ನೀವು ಇದನ್ನು ತೋಳು ಹಾಗೂ ಇತರೆ ಹೊರ ತೆರೆಯಲ್ಪಟ್ಟ ಚರ್ಮದ ಕಂದು ಬಣ್ಣ ನಿವಾರಣೆಗಾಗಿ ಬಳಸಬಹುದು. ಈ ಬೇಸಿಗೆ ಹಣ್ಣಿನ ಮುಖವಾಡವನ್ನು ಸುಮಾರು 15 ನಿಮಿಷಗಳವರೆಗೆ ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಬೇಕು.

ಮಾವು ಮತ್ತು ಮೊಟ್ಟೆ ಮುಖವಾಡ: ಆಕರ್ಷಕ ತ್ವಚೆ ಹೊಂದಲು ಇದು ಮತ್ತೊಂದು ಸುಲಭ ಗೃಹ ವೈದ್ಯ!ಒಂದು ಮಾವನ್ನು ಹಿಸುಗಿ ರಸ ಮಾಡಿಕೊಳ್ಳಿ , ಮೊಟ್ಟೆಯ ಬಿಳಿ ಭಾಗವನ್ನು ಎಳೆ-ಎಳೆ ಬರುವಂತೆ ಕಲಸಿ ಹಿಸುಕಿದ ರಸಕ್ಕೆ ಸೇರಿಸಿ ಈ ಮಿಶ್ರಣಕ್ಕೆ ಒಂದು ಚಿಕ್ಕ ಚಮಚ ಜೇನುತುಪ್ಪವನ್ನು ಸೇರಿಸಿ, ಹಾಗೂ ಈ ಬೇಸಿಗೆ ಮುಖವಾಡವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿರಿ.15-20 ನಿಮಿಷ ಬಿಡಿ ನಂತರ ತಣ್ಣನೆಯ ನೀರು ಮತ್ತು ಸೌಮ್ಯ ಸಾಬೂನಿನಿಂದ ತೊಳೆಯಿರಿ.ಏಕೆಂದರೆ ಮೊಟ್ಟೆಯ ವಾಸನೆ ತುಂಬಾ ಬಲಿಷ್ಠವಾಗಿರುತ್ತದೆ.

ಮಾವು, ಓಟ್ಸ್ ನ ಮುಖವಾಡ: ಆಕರ್ಷಕ ತ್ವಚೆ ಹೊಂದಲು ಹಾಗು ಸೂರ್ಯನಿಂದ ಉಂಟಾದ ಕಂದು ಬಣ್ಣವನ್ನು ತೊಡೆದುಹಾಕಲು ಈ ಬೇಸಿಗೆ ಹಣ್ಣಿನ ಮುಖವಾಡದ ವೈದ್ಯ ತುಂಬಾ ಸರಳ ಮತ್ತು ಪರಿಣಾಮಕಾರಿ.ಒಂದು ಬಟ್ಟಲಿನಲ್ಲಿ, 4 ಚಿಕ್ಕ ಚಮಚ ಮಾವಿನ ರಸ,೩ಚಮಚ ಪುಡಿಮಾಡಿದ ಓಟ್ಸ್, 2 ಚಮಚ ಪುಡಿಮಾಡಿದ ಬಾದಾಮ್ ಮತ್ತು 3-4 ಚಮಚ ಹದಮಾಡಿದ ಕೆನೆ. ಚನ್ನಾಗಿ ಕಲೆಸಿ ಈ ಮಖವಾಡವನ್ನು ಹಚ್ಚಿಕೊಳಿ. 20 ನಿಮಿಷಗಳ ವರೆಗೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.ಈ ಮಾವು ಓಟ್ಸ್ ಮುಖವಾಡದ ವೈದ್ಯವು ಚರ್ಮವನ್ನು ಸ್ವಚ್ಛ ಹಾಗೂ ನವೀನ ಗೊಳಿಸುತ್ತದೆ.

ಈ ಬೇಸಿಗೆಯಲ್ಲಿ ಈಎಲ್ಲ ಮಾವಿನ ಹಣ್ಣಿನ ಮುಖವಾಡದ ವೈದ್ಯ ಮಾಡಿ, ಕಂದುಬಣ್ಣವನ್ನು ಹೊಗಲಾಡಿಸಿ ಆಕರ್ಷಕ ತ್ವಚೆ ಪಡೆಯಿರಿ.ಬಿಸಿ ಮತ್ತು ಬೆವರಿನ ದಿನದ ಅಂತ್ಯದಲ್ಲಿ ಉಪಯುಕ್ತವಾದ ಈ ಬೇಸಿಗೆ ಮುಖವಾಡದ ವೈದ್ಯದಿಂದ ಸಂತಸ-ಸಮಾಧಾನ ಪಡೆಯಿರಿ!

English summary

Mango Face Mask For Glowing Skin | Tips For Skin Care | ಒಳೆಯುವ ತ್ವಚೆಗಾಗಿ ಮ್ಯಾಂಗೋ ಫೇಸ್ ಮಾಸ್ಕ್ | ತ್ವಚೆ ಆರೈಕೆಗೆ ಕೆಲ ಸಲಹೆಗಳು

To keep the glowing complexion even during the summer season, you have to ensure skin care at home! Mangoes, the fruit of summer has several facial benefits.
X
Desktop Bottom Promotion