For Quick Alerts
ALLOW NOTIFICATIONS  
For Daily Alerts

ವೈಟ್ ಹೆಡ್ಸ್ ಹೋಗಲಾಡಿಸಬೇಕೆ? ಇಲ್ಲಿದೆ ಟಿಪ್ಸ್

|

ಬ್ಲ್ಯಾಕ್ ಹೆಡ್ಸ್ ನಂತೆ ವೈಟ್ ಹೆಡ್ಸ್ ಬಂದರೂ ಕೂಡ ಮುಖದ ಅಂದ ಹಾಳಾಗುವುದು. ವೈಟ್ ಹೆಡ್ಸ್ ಮೂಗಿನ ಸಮೀಪದಲ್ಲಿ ಹೆಚ್ಚು ಕಂಡುಬರುತ್ತದೆ. ಚಿಕ್ಕ-ಚಿಕ್ಕ ಮೊಡವೆಯಂತೆ ಕಾಣುವುದು, ಆದರೆ ಅವು ಮೊಡವೆಗಳಲ್ಲ, ಮುಖದ ಮೇಲೆ ಎದ್ದು ಕಾಣುವ ಇವು ತುಂಬಾ ಮುಜುಗರವನ್ನು ಉಂಟು ಮಾಡುತ್ತದೆ.

ಈ ವೈಟ್ ಹೆಡ್ಸ್ ಅನ್ನು ಬರೀ ಹಿಸುಕಿ ತೆಗೆಯುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದಕ್ಕೂ ಮೇಲೆ ತ್ವಚೆ ಆರೈಕೆ ಮಾಡಬೇಕು. ವೈಟ್ ಹೆಡ್ಸ್ ಗೆ ಗುಡ್ ಬೈ ಹೇಳಲು ಈ ಕೆಳಗಿನ ಟಿಪ್ಸ್ ನಿಮ್ಮ ಸಹಾಯಕ್ಕೆ ಬರುತ್ತದೆ ನೋಡಿ:

ಆಲೂಗಡ್ಡೆ

ಆಲೂಗಡ್ಡೆ

ಹಸಿ ಆಲೂಗಡ್ಡೆಯನ್ನು ಪೇಸ್ಟ್ ರೀತಿ ಮಾಡಿ ಮುಖಕ್ಕೆ ಹಚ್ಚಿ, ಸ್ವಲ್ಪ ಹೊತ್ತಿನ ಬಳಿಕ ಮುಖನ್ನು ತೊಳೆಯಿರಿ. ನಂತರ ಆಲೂಗಡ್ಡೆಯಿಂದ ಸ್ಕ್ರಬ್ ಮಾಡಿ. ಈ ರೀತಿ ಮಾಡುತ್ತಾ ಬಂದರೆ ನಿಮ್ಮ ವೈಟ್ ಹೆಡ್ಸ್ ಅನ್ನು ಸುಲಭದಲ್ಲಿ ಹೋಗಲಾಡಿಸಬಹುದು.

ನಿಂಬೆ ರಸ

ನಿಂಬೆ ರಸ

ನಿಂಬೆ ರಸ ಮೊಡವೆ, ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ಇವುಗಳನ್ನು ಹೋಗಲಾಡಿಸುವಲ್ಲಿ ತುಂಬಾ ಪಡಿಣಾಮಕಾರಿ. ನಿಂಬೆ ರಸ ಮುಖದಲ್ಲಿ ಕಲೆ ಉಳಿಯಲೂ ಬಿಡುವುದಿಲ್ಲ.

ಮೊಸರು

ಮೊಸರು

ಮೊಸರಿಗೆ ಸ್ವಲ್ಪ ಓಟ್ಸ್ ಮುಡಿ ಹಾಕಿ ಮಿಕ್ಸ್ ಮಾಡಿ ಇದರಿಂದ ಮುಖವನ್ನು ಸ್ಕ್ರಬ್ ಮಾಡಿ ನೋಡಿ. ಬೇಗನೆ ಫಲಿತಾಂಶ ದೊರೆಯುವುದು.

 ಜೇನು

ಜೇನು

ಜೇನನ್ನು ಪ್ರತೀದಿನ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡುತ್ತಾ ಬಂದರೆ ವೈಟ್ ಹೆಡ್ಸ್ ಮಾಯ ಹಾಗೂ ನಿಮ್ಮ ತ್ವಚೆಯ ಕಾಂತಿಯೂ ಹೆಚ್ಚುವುದು.

ಓಟ್ ಮೀಲ್ಸ್

ಓಟ್ ಮೀಲ್ಸ್

ಓಟ್ ಮೀಲ್ಸ್ ಅನ್ನು ಹಾಲು, ಮೊಸರು ಅಥವಾ ಜೇನಿನ ಜೊತೆ ಹಾಕಿ ಮಿಕ್ಸ್ ಮಾಡಿ ಇದರಿಂದ ಮುಖವನ್ನು ಸ್ಕ್ರಬ್ ಮಾಡಿ. ಈ ವಿಧಾನದಿಂದ ವೈಟ್ ಹೆಡ್ಸ್ ಮಾತ್ರವಲ್ಲ, ಬ್ಲ್ಯಾಕ್ ಹೆಡ್ಸ್ ಕೂಡ ಹೋಗಲಾಡಿಸಬಹುದು.

ಲೋಳೆಸರ

ಲೋಳೆಸರ

ಪ್ರತೀದಿನ ಮುಖಕ್ಕೆ ಲೋಳೆಸರ ಹಚ್ಚಿ ಮುಖ ಆರೈಕೆ ಮಾಡುವವರಿಗೆ ವೈಟ್ ಹೆಡ್ಸ್ ಮಾತ್ರವಲ್ಲ, ಇತರ ಯಾವುದೇ ತ್ವಚೆ ಸಮಸ್ಯೆ ಕಂಡು ಬರುವುದಿಲ್ಲ.

ಮೊಟ್ಟೆ

ಮೊಟ್ಟೆ

ಮೊಡವೆ, ವೈಟ್ ಹೆ್ಡ್ಸ್, ಬ್ಲ್ಯಾಕ್ ಹೆಡ್ಸ್ ಇವುಗಳಿಗೆ ಅತ್ಯುತ್ತಮವಾದ ಮನೆ ಮದ್ದೆಂದರೆ ಮೊಟ್ಟೆಯ ಬಿಳಿಯನ್ನು ಸ್ನಾನಕ್ಕೆ 15 ನಿಮಿಷಕ್ಕೆ ಮುನ್ನ ಹಚ್ಚಿದರೆ ಸಾಕು. ನಿಮ್ಮ ಮುಖ ತುಂಬಾ ಆಕರ್ಷಕವಾಗುವುದು.

English summary

Kitchen Ingredients To Treat Whiteheads | Tips For Beauty | ವೈಟ್ ಹೆಡ್ಸ್ ಹೋಗಲಾಡಿಸಲು ಟಿಪ್ಸ್ | ಸೌಂದರ್ಯಕ್ಕಾಗಿ ಕೆಲ ಸಲಹೆಗಳು

They hold various beauty as well as health benefits. For example, lemon has many health and beauty benefits. If you apply this kitchen ingredient, you can easily treat whiteheads naturally. Check out other kitchen ingredients that can be used to get rid of whiteheads.
Story first published: Saturday, April 20, 2013, 15:32 [IST]
X
Desktop Bottom Promotion