For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ತ್ವಚೆಯ ರಕ್ಷಣೆಗೆ ಸಲಹೆಗಳು:

By Manohar. V
|

ಹೆಂಗಳೆಯರ ಜೀವನದಲ್ಲಿ ಹದಿಹರೆಯವು ವಸಂತಕಾಲದಂತಿರುವ ಒಂದು ಸುಂದರವಾದ ಅನುಭೂತಿ. ಅದೇ ಸಮಯದಲ್ಲಿ, ಒಂದು ಹುಡುಗಿಯ ಜೀವನದಲ್ಲಿ ಹದಿಹರೆಯವು ಹೊಸ ಹೊಸ ಅನುಭವಗಳನ್ನು ತರುತ್ತವೆ.

ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಈ ಹದಿಹರೆಯದ ಒಂದು ಭಾಗವಾಗಿ ಕಾಣಿಸಿಕೊಳ್ಳುತ್ತವೆ. ಈ ಬದಲಾವಣೆಗಳ ಪ್ರತಿಬಿಂಬವು, ವಿಶೇಷವಾಗಿ ಹಾರ್ಮೋನ್ ಬದಲಾವಣೆಗಳಾಗಿದ್ದು ಹದಿಹರೆಯದ ಹುಡುಗಿಯ ತ್ವಚೆಯ ಮೇಲೆ ಪರಿಣಾಮವನ್ನು ಉಂಟು ಮಾಡುತ್ತವೆ.

ತ್ವಚೆಯ ಕಾಳಜಿಗಾಗಿ ಏನನ್ನೂ ರಾಜಿ ಮಾಡಿಕೊಳ್ಳಲು ಹುಡುಗಿಯರು ಸಿದ್ಧರಿರುವುದಿಲ್ಲ. ಮೊದಲ ಸಲದ ಮುಟ್ಟಾಗುವಿಕೆಯು ಹದಿಹರೆಯದವರಲ್ಲಿ ಚರ್ಮದಲ್ಲಿ ಬದಲಾವಣೆಯನ್ನುಂಟು ಮಾಡುವ ಹಲವಾರು ಹಾರ್ಮೋನ್ ಬದಲಾವಣೆಗಳನ್ನು ಉಂಟುಮಾಡುತ್ತವೆ. ಪಿಂಪಲ್ಸ್, ಎಣ್ಣೆ ಚರ್ಮ ಇತ್ಯಾದಿಗಳಾಗಿರಬಹುದು. ಮೊದಲ ಮುಟ್ಟಾದ ನಂತರ ತ್ವಚೆಯ ಬಗೆಗೆ ಹೆಚ್ಚುವರಿ ಕಾಳಜಿಯನ್ನು ಹುಡುಗಿಯರು ಮಾಡಲೇಬೇಕು.

ಚಳಿಗಾಲದಲ್ಲಿ ವಾತಾವರಣವು ಬದಲಾದಂತೆ ಚರ್ಮಕ್ಕೆ ಸಣ್ಣದಾಗಿ ಹಾನಿಯಾಗುತ್ತವೆ. ಈ ವಾತಾವರಣವು ಚರ್ಮಕ್ಕೆ ಹಲವಾರು ರೀತಿಯ ತೊಂದರೆಗಳನ್ನುಂಟುಮಾಡುತ್ತವೆ. ಈ ಚಳಿಗಾಲದಲ್ಲಿ ಹೆಚ್ಚಿನ ಕ್ರಮಗಳನ್ನು ಕಾಳಜಿಯನ್ನು ನಿಮ್ಮ ತ್ವಚೆಯ ರಕ್ಷಣೆಯಲ್ಲಿ ನೀವು ತೆಗೆದುಕೊಳ್ಳಬೇಕಾದುದು ಅತ್ಯವಶ್ಯಕ.

ಈ ಚಳಿಗಾಲದಲ್ಲಿ ಸುಂದರವಾದ, ಮೃದುವಾದ, ಕಡಿಮೆ ಒಣಗಿದ ಮೊಡವೆಗಳಿಲ್ಲದ ತ್ವಚೆಗಾಗಿ ದೃಷ್ಟಿಹರಿಸಿ. ಈ ಚಳಿಗಾಲಕ್ಕಾಗಿ ನಿರ್ದಿಷ್ಟವಾದ ತ್ವಚೆ ಕಾಳಜಿಗೆ ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ ಮತ್ತು ಇವುಗಳು ಅದ್ಭುತವಾದ ಬದಲಾವಣೆಗಳನ್ನು ನಿಮ್ಮ ತ್ವಚೆಯಲ್ಲಿ ಉಂಟು ಮಾಡುತ್ತವೆ. ಹದಿಹರೆಯದ ಹುಡುಗಿಯರಲ್ಲಿ ತ್ವಚೆಯ ಕಾಳಜಿಯನ್ನು ಸುಲಭ ಮತ್ತು ಸರಳಗೊಳಿಸುವ ಕೆಲವೊಂದು ಸಲಹೆಗಳು ಇಲ್ಲಿವೆ.

ಶುದ್ಧೀಕರಣ:

ಶುದ್ಧೀಕರಣ:

ಹದಿಹರೆಯದವರಲ್ಲಿ ತ್ವಚೆಯ ಕಾಳಜಿಯನ್ನು ಕುರಿತು ಗಮನ ಹರಿಸುವಾಗ ಆವಶ್ಯವಾಗಿ ಪ್ರಾಮುಖ್ಯತೆ ಕೊಡಬೇಕಾದ ಅಂಶ ಶುದ್ಧೀಕರಣವಾಗಿದೆ. ಮೊದಲ ಮುಟ್ಟಾಗುವಿಕೆಯ ಕಾರಣದಿಂದ ಉಂಟಾಗುವ ಹಾರ್ಮೋನಲ್ ಬದಲಾವಣೆಗಳು ಚರ್ಮರಂಧ್ರಗಳನ್ನು ಮುಚ್ಚಿಬಿಡುತ್ತವೆ. ಆದ್ಧರಿಂದ ಶುದ್ಧೀಕರಣ ಅತೀ ಆವಶ್ಯಕ.

ಸೌಂದರ್ಯ ಉತ್ಪನ್ನಗಳು:

ಸೌಂದರ್ಯ ಉತ್ಪನ್ನಗಳು:

ಉತ್ತಮ ಗುಣಮಟ್ಟದ ಸೌಂದರ್ಯ ಉತ್ಪನ್ನಗಳನ್ನು ನೀವು ಬಳಸುತ್ತಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಚಳಿಗಾಲದಲ್ಲಿ ತ್ವಚೆಯು ಒಣಗಿ ಹೋಗುವುದರಿಂದ, ನಿಮ್ಮ ತ್ವಚೆಯನ್ನು ಒಣಗುವುದರಿಂದ ತಡೆಗಟ್ಟುವ ತ್ವಚೆಯನ್ನು ಮಾಯಿಶ್ಚರೈಸ್ ಮಾಡುವ ಸೌಂದರ್ಯ ಉತ್ಪನ್ನಗಳನ್ನು ಬಳಸಿ.

ಸೌಂದರ್ಯವರ್ಧಕಗಳನ್ನು ತ್ಯಜಿಸಿ:

ಸೌಂದರ್ಯವರ್ಧಕಗಳನ್ನು ತ್ಯಜಿಸಿ:

ನಿಯಮಿತವಾಗಿ ಸೌಂದರ್ಯವರ್ಧಕಗಳನ್ನು ಬಳಸುವುದರಿಂದ ತ್ವಚೆಯು ಮೊಡವೆಗಳಿಂದ ಮತ್ತು ಎಣ್ಣೆಯಿಂದ ಕೂಡಿರುತ್ತದೆ. ಹೆಚ್ಚು ರಾಸಾಯನಿಕ ಸೌಂದರ್ಯವರ್ಧಕಗಳ ಬಳಕೆಯನ್ನು ಬಿಡಿ. ಹದಿಹರೆಯದವರು ಇದರ ಬಗೆಗೆ ಹೆಚ್ಚು ಗಮನ ನೀಡಬೇಕು.

ಎಕ್ಸ್‌ಫೋಲಿಯೇಶನ್:

ಎಕ್ಸ್‌ಫೋಲಿಯೇಶನ್:

ನಿಮ್ಮ ತ್ವಚೆಯಲ್ಲಿರುವ ಮೃತ ಕೋಶಗಳನ್ನು ನಿವಾರಿಸುವಲ್ಲಿ ಎಕ್ಸ್‌ಫೋಲಿಯೇಶನ್ ನೆರವು ನೀಡುತ್ತವೆ. ಇದು ತ್ವಚೆಯನ್ನು ಮೃದು ಮತ್ತು ಕೋಮಲವನ್ನಾಗಿಸುತ್ತದೆ. ಮುಟ್ಟಾದ ನಂತರ ಹುಡುಗಿಯರಲ್ಲಿ ಪಿಂಪಲ್‌ಗಳು ಮತ್ತು ಮೊಡವೆಗಳ ಬಿರುಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಎಕ್ಸ್‌ಫೋಲಿಯೇಶನ್ ಇದನ್ನು ನಿವಾರಿಸುತ್ತವೆ.

ಮಾಯಿಶ್ಚರೈಸರ್ ಬಳಸಿ:

ಮಾಯಿಶ್ಚರೈಸರ್ ಬಳಸಿ:

ಚಳಿಗಾಲದಲ್ಲಿ, ಒಣ ಚರ್ಮ ಮತ್ತು ಅದರಿಂದ ಉಂಟಾಗುವ ಹಲವಾರು ಪರಿಣಾಮಗಳನ್ನು ನೀವು ಅನುಭವಿಸಬೇಕಾಗುತ್ತದೆ. ಸ್ನಾನದ ನಂತರವೂ ನಿಮ್ಮ ತ್ವಚೆ ಒದ್ದೆಯಾಗಿದ್ದರೆ ಮಾಯಿಶ್ಚರೈಸರ್ ಅನ್ನು ಬಳಸಿ. ಚಳಿಗಾಲದಲ್ಲಿ ಇದು ತ್ವಚೆಯ ಕಾಳಜಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಚಳಿಗಾಲದ ಉಡುಪುಗಳು:

ಚಳಿಗಾಲದ ಉಡುಪುಗಳು:

ಚಳಿಗಾಲದ ಉಡುಪುಗಳನ್ನು ಧರಿಸಿ. ಇದು ನಿಮ್ಮನ್ನು ಟ್ರೆಂಡಿಯನ್ನಾಗಿ ಮಾಡುವುದಲ್ಲದೆ ಬೀಸುವ ಶೀತ ಗಾಳಿಯಿಂದ ನಿಮ್ಮ ತ್ವಚೆಯನ್ನು ರಕ್ಷಿಸುತ್ತದೆ. ನಿಮ್ಮ ದೇಹವನ್ನು ಮುಚ್ಚುವ ಉಡುಪುಗಳನ್ನು ಧರಿಸಿಕೊಳ್ಳಿ. ಶೀತಗಾಳಿಗೆ ಮೈಯನ್ನು ಒಡ್ಡಿಕೊಳ್ಳುವುದು ನಿಮ್ಮ ತ್ವಚೆಯನ್ನು ಒಣಗಿಸುತ್ತದೆ.

ಒಡೆದ ತುಟಿಗಳನ್ನು ಉಪಚರಿಸಿ:

ಒಡೆದ ತುಟಿಗಳನ್ನು ಉಪಚರಿಸಿ:

ತುಟಿ ಒಡೆಯುವುದು ಚಳಿಗಾಲದಲ್ಲಿ ಸಾಮಾನ್ಯ. ಶೀತಗಾಳಿಯು ನಿಮ್ಮ ತುಟಿಗೆ ಸುಲಭವಾಗಿ ಹಾನಿಯುಂಟು ಮಾಡುವುದರಿಂದ ಅದರ ಬಗೆಗೆ ಹೆಚ್ಚು ಗಮನ ನೀಡಿ. ತುಟಿ ಒಡೆಯುವುದಕ್ಕೆ ಉತ್ತಮ ಪರಿಹಾರವೆಂದರೆ ಲಿಪ್ ಬಾಮ್ ಬಳಕೆಯಾಗಿದೆ.

ನೀರು ಸೇವನೆ:

ನೀರು ಸೇವನೆ:

ನಿಮ್ಮ ದೇಹದಲ್ಲಿ ನೀರಿನಂಶ ಹೆಚ್ಚಾಗಿ ಇರಬೇಕಾಗಿದ್ದರಿಂದ ಸಾಧ್ಯವಾದಷ್ಟು ನೀರು ಕುಡಿಯಿರಿ. ಇದು ನಿಮ್ಮ ತ್ವಚೆಯ ಮಾಯಿಶ್ಚರೈಸ್ ಅನ್ನು ಪ್ರಾಕೃತಿಕವಾಗಿ ಕಾಪಾಡುತ್ತದೆ. ನಿಮ್ಮ ತ್ವಚೆಯ ಸ್ಥಿತಿಸ್ಥಾಪಕತ್ವನ್ನು ಇದು ರಕ್ಷಿಸುತ್ತದೆ. ಸಾಕಷ್ಟು ನೀರು ಕುಡಿಯುವುದು ಕೂಡ ಹದಿಹರೆಯದ ಹುಡುಗಿಯರು ತ್ವಚೆಯ ಕಾಳಜಿಗಾಗಿ ಮಾಡಲೇಬೇಕು.

English summary

Ieen girls problem during winter season

source: Teenage is the most beautiful in the life of a woman. This is the time when girls are not ready to compromise anything for their skin care. Menarche in teen girls will leave many hormonal changes that can make changes in their skin. Chances are more for you to get pimples, acne or pigmentation. Special care for skin is very important after menarche in teen girls.
Story first published: Thursday, December 26, 2013, 10:03 [IST]
X
Desktop Bottom Promotion