For Quick Alerts
ALLOW NOTIFICATIONS  
For Daily Alerts

ಸುಂದರ ತ್ವಚೆಗಾಗಿ 5 ರೀತಿಯ ರೋಸ್ ಫೇಸ್ ಪ್ಯಾಕ್

|

ನಾನಾ ರೀತಿಯ ಫೇಸ್ ಪ್ಯಾಕ್ ದೊರೆಯುತ್ತವೆ. ಒಂದೊಂದು ಫೇಸ್ ಪ್ಯಾಕ್ ಗೂ ಒಂದೊಂದು ಗುಣವಿರುತ್ತದೆ. ಇಲ್ಲಿ ನಾವು ರೋಸ್ ಪ್ಯಾಕ್ ಮಾಡುವುದು ಹೇಗೆ ಎಂದು ತಿಳಿಸಲಾಗಿದೆ.

ತ್ವಚೆ ಸೌಂದರ್ಯ ವೃದ್ಧಿಸುವ ಸಾಮರ್ಥ್ಯ ತ್ವಚೆಗಿದೆ. ರೋಸ್ ದಳಗಳಿಂದ ಜ್ಯೂಸ್ ಮಾಡಿ ಕುಡಿದರೂ ತ್ವಚೆಗೆ ತುಂಬಾ ಒಳ್ಳೆಯದು. ಪ್ರತಿದಿನ ರೋಸ್ ವಾಟರ್ ನಿಂದ ಕ್ಲೆನ್ಸ್ ಮಾಡಿದರೆ ನಿಮ್ಮ ತ್ವಚೆ ಮೃದುವಾಗಿ , ಹೊಳಪನ್ನು ಪಡೆಯುವುದು ನಿಮ್ಮ ಗಮನಕ್ಕೆ ಬರುತ್ತದೆ.

ಬರೀ ರೋಸ್ ದಳಗಳನ್ನು ಪೇಸ್ಟ್ ಮಾಡಿ ಹಚ್ಚಬಹುದು, ಈ ಕೆಳಗಿನ ವಸ್ತುಗಳನ್ನು ಸೇರಿಸಿ ಹಚ್ಚಿದರೆ ಮತ್ತಷ್ಟು ಪ್ರಯೋಜನ ಪಡೆಯಬಹುದು.

Homemade Rose Face Packs For Rosy Cheeks

1. ಮೊದಲು ರೋಸ್ ದಳಗಳನ್ನು ನೀರಿನಲ್ಲಿ ನೆನೆ ಹಾಕಬೇಕು. ನಂತರ ನೀರಿನಿಂದ ತೆಗೆದು ಗಟ್ಟಿ ಪೇಸ್ಟ್ ರೀತಿ ಮಾಡಿ ಅದಕ್ಕೆ ಮೊಸರು, ನಿಂಬೆ ರಸ, ಜೇನು ಇವುಗಳನ್ನು ಒಂದೊಂದು ಚಮಚ ಹಾಕಿ ಮಿಶ್ರ ಮಾಡಿ ಫೇಸ್ ಪ್ಯಾಕ್ ತಯಾರಿಸಬಹುದು.

2. ಮುಖದಲ್ಲಿ ಬ್ಲ್ಯಾಕ್ ಹೆಡ್ಸ್ ಇದ್ದರೆ ಓಟ್ಸ್ ಅನ್ನು ಪುಡಿ ಮಾಡಿ , ಗುಲಾಬಿ ದಳಗಳನ್ನು ಪೇಸ್ಟ್ ಮಾಡಿ, ಈಗ ಗುಲಾಬಿ ಪೇಸ್ಟ್ ಮತ್ತು ಓಟ್ಸ್ ಅನ್ನು ಮಿಶ್ರ ಮಾಡಿ ಸ್ಕ್ರಬ್ ಮಾಡಿದರೆ ಬ್ಲ್ಯಾಕ್ ಹೆಡ್ಸ್ ಹೋಗುತ್ತದೆ, ಮುಖವೂ ಆಕರ್ಷಕವಾಗಿ ಕಾಣುತ್ತದೆ.

3. ರೋಸ್, ಕಡಲೆ ಹಿಟ್ಟು, ಮೊಸರು ಇವು ಮೂರನ್ನು ಮಿಶ್ರ ಮಾಡಿ ಗಟ್ಟಿ ಪೇಸ್ಟ್ ರೀತಿಯಲ್ಲಿ ಮಾಡಿ ಹಚ್ಚಿ, ನಂತರ ಹಾಲಿನಿಂದ ಕ್ಲೆನ್ಸ್ ಮಾಡಿ, ತಣ್ಣೀರಿನಿಂದ ಮುಖ ತೊಳೆಯಿರಿ.

4. ಗುಲಾಬಿಯನ್ನು ಪೇಸ್ಟ್ ಮಾಡಿ ಅದಕ್ಕೆ ಗಂಧದ ಪುಡಿ ಹಾಕಿ ಮಿಶ್ರಣ ಮಾಡಿ ಫೇಸ್ ಪ್ಯಾಕ್ ತಯಾರಿಸಬಹುದು. ಮೊಡವೆ ಇರುವವರಿಗೆ ಈ ಫೇಸ್ ಪ್ಯಾಕ್ ಉತ್ತಮ.

5. ಗುಲಾಬಿಯನ್ನು ಪೇಸ್ಟ್ ಮಾಡಿ ಅದಕ್ಕೆ ಅರ್ಧ ಚಮಚ ಅರಿಶಿಣ ಮತ್ತು ಅರ್ಧ ಚಮಚ ಗಂಧದ ಪುಡಿ ಹಾಕಿ ಕೂಡ ರೋಸ್ ಫೇಸ್ ಪ್ಯಾಕ್ ತಯಾರಿಸಬಹುದು.

English summary

Homemade Rose Face Packs For Rosy Cheeks | Tips For Skin Care | ಸುಂದರ ತ್ವಚೆಗಾಗಿ ರೋಸ್ ಫೇಸ್ ಪ್ಯಾಕ್ | ತ್ವಚೆ ಆರೈಕೆಗೆ ಕೆಲ ಸಲಹೆಗಳು

There are many women who try hard to get rosy glow on their face. Just applying rosewater to get rosy glow on your face is not enough. Here are few homemade face packs that are made using rose as the main ingredient.
Story first published: Saturday, February 9, 2013, 14:21 [IST]
X
Desktop Bottom Promotion