For Quick Alerts
ALLOW NOTIFICATIONS  
For Daily Alerts

ಪುರುಷರಿಗಾಗಿ ಈ ಸ್ಕಿನ್ ಕೇರ್ ಟಿಪ್ಸ್

|

ಫೇಶಿಯಲ್, ಮಸಾಜ್ ಎಲ್ಲಾ ಮಹಿಳೆಯರಿಗೆ ಮಾತ್ರವಲ್ಲ, ತಮ್ಮ ತ್ವಚೆ ಕಾಂತಿ ಹೆಚ್ಚಿಸಲು ಪುರುಷರೂ ಮಾಡುವುದು ಒಳ್ಳೆಯದು. ಬ್ಯೂಟಿ ಸ್ಪಾ, ಪಾರ್ಲರ್ ಗೆ ಹೋಗಲು ಇಷ್ಟಪಡದಿದ್ದರೆ ಸ್ವಲ್ಪ ಪುರುಸೊತ್ತು ಮಾಡಿಕೊಂಡು ನೀವೇ ಫೇಶಿಯಲ್, ಫೇಸ್ ಮಾಸ್ಕ್ ಮಾಡಿ.

ಈ ರೀತಿ ಮಾಡಲು ಹಿಂಜರಿಕೆ ಬೇಡ, ಆಕರ್ಷಕವಾದ ಮುಖ ನಿಮಗೆ ಆತ್ಮವಿಶ್ವಾಸ ತುಂಬುವುದು. ಅದರಲ್ಲಿ ಈ ಕೆಳಗಿನ ಟಿಪ್ಸ್ ಬಳಸಿ ನಿಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಬಹುದು.

Homemade Face Packs For Men

ಮೊಡವೆ ಇದ್ದವರು ಈ ರೀತಿ ಮಾಡಿ
ಪುರುಷರ ಮುಖದಲ್ಲಿ ಮೊಡವೆ ಇದ್ದರೆ ತುಂಬಾ ತೊಂದರೆಯಾಗುತ್ತದೆ. ಶೇವ್ ಮಾಡಲೂ ಕಷ್ಟವಾಗಬಹುದು. ಈ ಮೊಡವೆ ಹೋಗಲಾಡಿಸಲು ಮುಖಕ್ಕೆ ಪುದೀನಾ ರಸ ಹಚ್ಚಿ 10 ನಿಮಿಷದ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡುತ್ತಾ ಬಂದರೆ ಮೊಡವೆ ಸಮಸ್ಯೆಯಿಂದ ಮುಕ್ತರಾಗಬಹುದು.

ಮುಖದಲ್ಲಿ ಮಾಯಿಶ್ಚರೈಸರ್ ಕಾಪಾಡಲು
ಬಿಸಿಲಿನಲ್ಲಿ ಓಡಾಡುವಾಗ ಪುರುಷರು ಕೊಡೆ ಹಿಡಿದುಕೊಳ್ಳುವುದಿಲ್ಲ. ಸನ್ ಸ್ಕ್ರೀನ್ ಬಳಸುವವರು ಕಡಿಮೆ. ಆದ್ದರಿಂದ ಮನೆಗೆ ಬಂದಾಗ ಸ್ವಲ್ಪ ಹತ್ತಿಯನ್ನು ಹಾಲಿನಲ್ಲಿ ಅದ್ದಿ ಮುಖವನ್ನು ಒರೆಸಿ. ಇದರಿಂದ ಮುಖ ಡ್ರೈಯಾಗುವುದಿಲ್ಲ.

ಬನಾನ ಪ್ಯಾಕ್
ವಾರಕ್ಕೊಮ್ಮೆ ಬಾಳೆ ಹಣ್ಣನ್ನು ಚೆನ್ನಾಗಿ ಹಿಸುಕಿ ಮುಖಕ್ಕೆ ಹಚ್ಚಿ, ಮೇಲ್ಮುಖವಾಗಿ ಮಸಾಜ್ ಮಾಡಿ 10 ನಿಮಿಷದ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡಿದರೆ ನಿರ್ಜೀವ ತ್ವಚೆ ಹೋಗಿ ಮುಖದ ಹೊಳಪು ಹೆಚ್ಚುವುದು.

ಪಪ್ಪಾಯಿ
ಪಪ್ಪಾಯಿ ಫೇಸ್ ಪ್ಯಾಕ್ ಕೂಡ ತ್ವಚೆಗೆ ಒಳ್ಳೆಯದು. ಇದು ಮೊಡವೆಯ ಕಲೆಯನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದೆ.

ಸೌತೆಕಾಯಿ

ಕಣ್ಣಿನ ಸುತ್ತ ಕಪ್ಪು ಕಲೆ ಬಿದ್ದಿದ್ದರೆ ಸೌತೆಕಾಯಿ ಪೇಸ್ಟ್ ಹಚ್ಚಿದರೆ ಆ ಕಲೆ ಮಾಯವಾಗುವುದು. ನಿದ್ದೆ ಇಲ್ಲದಿರುವುದು, ಮಾನಸಿಕ ಒತ್ತಡ ಇವುಗಳಿಂದ ಕಣ್ಣಿನ ಸುತ್ತ ಕಪ್ಪು ಕಲೆ ಬೀಳುವುದು.

ಮುಲ್ತಾನಿ ಮಿಟಿ

ಮುಲ್ತಾನಿ ಮಿಟಿಯನ್ನು ವಾರಕ್ಕೊಮ್ಮೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ. ನಿಮ್ಮ ಮುಖದ ಆಕರ್ಷಣೆ ಹೆಚ್ಚುವುದು.

ನಾನು ಈ ರೀತಿಯೆಲ್ಲಾ ಮಾಡಿದರೆ ನೋಡಿದವರು ತಮಾಷೆ ಮಾಡಬಹುದು ಎನ್ನುವ ಅಂಜಿಕೆ ಬಿಡಿ, ನಿಮ್ಮ ತ್ವಚೆ ಆರೈಕೆಯತ್ತ ಗಮನ ಕೊಡಿ.

English summary

Homemade Face Packs For Men | Tips For Men skin Care | ಈ ಫೇಸ್ ಪ್ಯಾಕ್ ಪುರುಷರಿಗಾಗಿ | ಪುರುಷರ ತ್ವಚೆ ಆರೈಕೆಗೆ ಕೆಲ ಸಲಹೆಗಳು

Constant exposure to sunlight and dirt can take away the inherent moisture of skin and make it appear dull and aged. So why not try out one of these prepare-at-home face packs and help curb the damage.So why not try out one of these prepare-at-home face packs and help curb the damage.
X
Desktop Bottom Promotion