For Quick Alerts
ALLOW NOTIFICATIONS  
For Daily Alerts

ತ್ವಚೆ ಸಮಸ್ಯೆಗೆ ಮನೆಯಲ್ಲಿಯೇ ಮುಲಾಮ್ !

By Super
|

ದೇಹದ ಯಾವುದೇ ಭಾಗದಲ್ಲಿ ನೋವು, ಗಾಯ ಅಥವಾ ಇನ್ಯಾವುದೇ ಸಮಸ್ಯೆಗಳಿದ್ದಾಗ ನಾವು ಮುಲಾಮ್ ಗಳನ್ನು ಹಚ್ಚುವುದು ಸಹಜ. ಆದರೆ ಕೆಲವು ಮುಲಾಮ್ ಉತ್ಪನ್ನಗಳು ಸಾಕಷ್ಟು ವೆಚ್ಚದಾಯಕವಾಗಿರುತ್ತವೆ. ಆದ್ದರಿಂದ ಇಂತಹ ಮುಲಾಮ್ ಗಳನ್ನು ಮನೆಯಲ್ಲಿಯೇ ನೈಸರ್ಗಿಕ ಪದಾರ್ಥಗಳನ್ನು ಬಳಸಿ ತಯಾರಿಸಬಹುದು.

ಸಾಮಾನ್ಯವಾಗಿ ತುಟಿ ಹಾಗೂ ದೇಹದ ಯಾವುದೇ ಭಾಗವನ್ನು ಮೃದುವನ್ನಾಗಿಸಲು ತತ್ ಕ್ಷಣದ ಚಿಕಿತ್ಸಕವಾಗಿ ಇದನ್ನು ಬಳಸಲಾಗುತ್ತದೆ. ಇದು ಹವಾಗುಣ ಅಥವಾ ಅತಿಯಾದ ಕೆಲಸದಿಂದ ಮೊನಚಾದ ಚರ್ಮಕ್ಕೆ ರಕ್ಷಣೆಯನ್ನು ನೀಡುವಲ್ಲಿ ಸಹಾಯಕಾರಿ.

ಇವುಗಳಿಗೆ ಮನೆಯಲ್ಲಿಯೇ ತಯಾರಿಸಿ ಬಾಮ್

Homemade Balms To Soothe Your Skin

ಯಾವುದೇ ಮುಲಾಮುಗಳನ್ನು ತಯಾರಿಸಲು ಸ್ವಲ್ಪ ಪ್ರಮಾಣದ ಅಭ್ಯಾಸ ಅಗತ್ಯ. ಆದರೆ ನೀವು ಒಮ್ಮೆ ಇದನ್ನು ತಯಾರಿಸುವುದನ್ನು ಕಲಿತರೆ ಮತ್ತೆ ಮತ್ತೆ ಬೇರೆ ಬೇರೆ ವಿಧಾನಗಳಲ್ಲಿ ಸಾಕಷ್ಟು ಉಪಶಮನಕಾರಿ ಮುಲಾಮುಗಳನ್ನು ತಯಾರಿಸಬಹುದು. ಯಾವುದೇ ಮುಲಾಮುಗಳನ್ನು ತಯಾರಿಸುವಾಗಲು ಅದಕ್ಕೆ ಪ್ರಾಥಮಿಕವಾಗಿ ಸಸ್ಯಹಾರಿ ಎಣ್ಣೆಗಳಾದ ಆಲಿವ್ ಎಣ್ಣೆ, ತೆಂಗಿನೆಣ್ಣೆಗಳು ಅಗತ್ಯ. ಇದರ ಜೊತೆಗೆ ಮುಲಾಮು ತಯಾರಿಸಲು ಅಗತ್ಯವಾದ ಇನ್ನೊಂದು ಮುಖ್ಯ ಅಂಶವೆಂದರೆ ಅದನ್ನು ಸಂಗ್ರಹಿಸಿಡಲು ಮತ್ತು ಬಳಸಲು ಸುಲಭವಾಗುವಂತಹ ಮೇಣ.

ವಿಧಾನ :
ಮೇಣ ಚೆನ್ನಾಗಿ ಕರಗುವವರೆಗೂ ಎಣ್ಣೆ ಮತ್ತು ಮೇಣವನ್ನು ಸೇರಿಸಿ ಕುದಿಸಬೇಕು. ಆದರೆ ಇದು ಅತೀಯಾಗಿ ಕುದಿಯಬಾರದು ಇದು ಸ್ವಲ್ಪತಣ್ಣಗಾದ ನಂತರ ಇದಕ್ಕೆ ಸುಗಂಧ ಎಣ್ಣೆ, ಒಣಗಿದ ಎಲೆಗಳು, ಸುಗಂಧ ದ್ರವ್ಯ ಹೀಗೆ ನಿಮಗೆ ತಿಳಿದಿರುವ ಉತ್ತಮ ಉತ್ಪನ್ನಗಳನ್ನು ಹಾಕಿ ಮಿಶ್ರಣಮಾಡಬೇಕು.

ಇದು ಸಂಪೂರ್ಣ ತಣ್ಣಗಾಗುವುದಕ್ಕಿಂತ ಮೊದಲು ಮಿಶ್ರಣವನ್ನು ಒಂದು ಜಾರ್ ಅಥವಾ ಸೀಸೆಯಲ್ಲಿ ಸುರಿಯಬೇಕು. ಮುಲಾಮು ತಯಾರಿಸುವ ಪ್ರಾಥಮಿಕ ಹಂತ ಇದಾಗಿದ್ದು ನಿಮ್ಮ ಆಯ್ಕೆಯ ಮೇರೆಗೆ ಸಾಕಷ್ಟು ಬಗೆಯಲ್ಲಿ ಇದನ್ನು ತಯಾರಿಸಬಹುದು.

ಬಾಡಿ ಬಾಮ್ (ದೇಹದ ಮುಲಾಮು) ಹಾಗೂ ಲಿಪ್ ಬಾಮ್ (ತುಟಿ ಮುಲಾಮು) ತಯಾರಿಸುವ ಸರಳ ವಿಧಾನಗಳು:

ಕ್ಯಾಲೆಡುಲ-ನಿಂಬೆ ಮುಲಾಮು

ಇದು ಶಿಲೀಂದ್ರ ವಿರೋಧಿ, ವೈರಸ್ ವಿರೋಧಿ ಹಾಗೂ ಉರಿಯೂತ ವಿರೋಧಿ ಗುಣ ಹೊಂದಿದ್ದು, ಇದನ್ನು ಸೋಂಕಿನ ಚಿಕಿತ್ಸೆಗಾಗಿ ಹಾಗೂ ನೋವು ನಿವಾರಕವಾಗಿ ಬಳಸಲಾಗುತ್ತದೆ. ಇದನ್ನು ತಯಾರಿಸಲು ಅರ್ಧ ಕಪ್ ಮೇಣ, ಎರಡು ಕಪ್ ಆಲಿವ್ ಎಣ್ಣೆ, 3 ಚಮಚ ಕಚ್ಚಾ ಕೊಬ್ಬರಿ ಎಣ್ಣೆ, 2 ಚಮಚ ಶಿಯಾ ಬಟರ್, ಕಾಲು ಚಮಚ ನಿಂಬೆ ಮತ್ತು ಚೆಂಡು ಹೂವಿನ ಒಣಗಿದ ಎಲೆಗಳು, ಚಹಾ ಮರದ ಎಣ್ಣೆ ಮತ್ತು ಲ್ಯಾವೆಂಡರ್ ತೈಲ 2-3 ಹನಿಗಳು ಬೇಕಾಗುತ್ತವೆ.

ಮಾಡುವ ವಿಧಾನ :

ಕಡಿಮೆ ಉರಿಯಲ್ಲಿ, 3 ಗಂಟೆಗಳ ಕಾಲ ಒಣಗಿದ ಗಿಡಮೂಲಿಕೆಗಳೊಂದಿಗೆ ಎರಡೂ ತೈಲಗಳನ್ನು (ತೆಂಗಿನಕಾಯಿ ಮತ್ತು ಆಲಿವ್) ಹಾಕಿ ಕುದಿಸಿ. ಕುದಿದ ನಂತರ ಮಿಶ್ರಣವನ್ನು ಬದಿಯಲ್ಲಿಡಿ. ಈಗ ಎರಡು ಬಾಯ್ಲರ್ ವಿಧಾನವನ್ನು ಬಳಸಿಕೊಂಡು, ಮೇಣ ಮತ್ತು ಬೆಣ್ಣೆ ಎರಡನ್ನೂ ಕರಗಿಸಿ ತಕ್ಷಣ ತೈಲ ಪಾತ್ರೆಗೆ ಅದನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿದ ನಂತರ ನಿಧಾನವಾಗಿ ಚಹಾ ಮರದ ಎಣ್ಣೆ ಮತ್ತು ಲ್ಯಾವೆಂಡರ್ ತೈಲವನ್ನು ಬೆರೆಸಿ. ಆನಂತರ ಗಾಜಿನ ಜಾರ್ ಅಥವಾ ಅಲ್ಯೂಮಿನಿಯಂ ಪಾತ್ರೆಯಲ್ಲಿ ಬೆಚ್ಚಗಿನ ಈ ಮಿಶ್ರಣವನ್ನು ಹಾಕಿ ಶೇಖರಿಸಿಡಿ.

ರೋಸ್ ಲಿಪ್ ಬಾಮ್:

ಇದು ಮಾಯಿಶ್ವರೈಸರ್ ಆಗಿದ್ದು ಒಣ ಹವಾಮಾನದಲ್ಲಿ ತುಟಿಗೆ ಗುಲಾಬಿ ಪರಿಮಳದ ಜೊತೆಗೆ ಸುಂದರ ಬಣ್ಣವನ್ನೂ ನೀಡುತ್ತದೆ. ಇದನ್ನು ತಯಾರಿಸಲು ತೆಂಗಿನ ಅಥವಾ ಸಿಹಿ ಬಾದಾಮಿ ತೈಲ 2 ಚಮಚ, 1 ಚಮಚ ಒಣಗಿದ ಗುಲಾಬಿ ಮೊಗ್ಗುಗಳು, 1 ಚಮಚ ಕೋಕಾ ಬಟರ್, ¼ ಚಮಚ ವಿಟಮಿನ್ ಈ (E) ಎಣ್ಣೆ ಅಥವಾ ವಿಟಮಿನ್ ಈ (E) ಅಂಶವಿರುವ ಕ್ಯಾಪ್ಸೂಲ್ ಗಳು, ಮತ್ತು 2-3 ಹನಿಗಳಷ್ಟು ರೋಸ್ ಅಥವಾ ವೆನಿಲಾ ಎಣ್ಣೆ ಬೇಕಾಗುತ್ತದೆ.

ತಯಾರಿಸುವ ವಿಧಾನ :

ತೆಂಗಿನ ಅಥವಾ ಬಾದಾಮಿ ಎಣ್ಣೆಯ ಜೊತೆಗೆ ಒಣಗಿದ ಗುಲಾಬಿ ದಳಗಳನ್ನು ಸಣ್ನ ಪಾತ್ರೆಯಲ್ಲಿ ಮೂವತ್ತು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿಟ್ಟು ಬಿಸಿ ಮಾಡಿ. ನಂತರ ದ್ರವವನ್ನು ಉತ್ತಮ ಜರಡಿಯಲ್ಲಿ ಸೋಸಿ. ಎರಡು ಬಾಯ್ಲರ್ ವಿಧಾನದಿಂದ ಕೋಕಾ ಬಟರ್ ಕರಗುವವರೆಗೆ ಕುದಿಸಿ. ಇದನ್ನು ಬಿಸಿ ಎಣ್ಣೆಗೆ ಮಿಶ್ರಣ ಮಾಡಿ ಮತ್ತು ಮೇಲೆ ಹೇಳಿದ ಉಳಿದ ಎಣ್ಣೆಗಳನ್ನೂ ಸೇರಿಸಿ. ಇದನ್ನು ನಿಧಾನವಾಗಿ ಕಲಸಿ ಪಾತ್ರೆಯಲ್ಲಿ ಸುರಿಯಿರಿ.

ಈ ಸರಳ ವಿಧಾನಗಳ ಮೂಲಕ ಮನೆಯಲ್ಲಿಯೇ ಮುಲಾಮುಗಳನ್ನು ತಯಾರಿಸಿ. ಇದು ಒರಟು ಹವಾಮಾನದಲ್ಲಿ ನಿಮ್ಮನ್ನು ರಕ್ಷಿಸಲು ಮತ್ತು ಹಾಗೆಯೇ ಅನೇಕ ಚರ್ಮದ ಪರಿಸ್ಥಿತಿಗಳು ಸರಿಪಡಿಸಲು ಸಹಾಯವಾಗುತ್ತದೆ.

English summary

Homemade Balms To Soothe Your Skin

Balm, the most inexpensive and creative product, can be made at home by infusing various nourishing and luxurious ingredients. Generally used for lips or to sooth any part of the body which requires immediate healing, they also act as a defensive barrier to the skin jagged by hard work, climate or gardening.
 
X
Desktop Bottom Promotion