For Quick Alerts
ALLOW NOTIFICATIONS  
For Daily Alerts

ಕಲೆ ಬೀಳದಂತೆ ಮೊಡವೆ ನಿವಾರಣೆಗೆ ಮನೆಮದ್ದು

|

ಕೆಲವರಿಗೆ ತುಂಬಾ ನೋವಿನಿಂದ ಕೂಡಿದ ಮೊಡವೆ ಉಂಟಾಗುತ್ತದೆ. ಅದರಲ್ಲೂ ಮೂಗಿನ ಮೇಲೆ ಬಂದರಂತೂ ತುಂಬಾ ನೋವು ಉಂಟಾಗುವುದು. ಮೊಡವೆ ಮುಖದಲ್ಲಿ ಮಾತ್ರವಲ್ಲ, ಎದೆಯಲ್ಲಿ, ಬೆನ್ನಿನಲ್ಲಿ ಕಂಡು ಬರುವುದು. ಕೆಲವೊಮ್ಮೆ ಯಾವ ಕ್ರೀಮ್ ಮೊಡವೆ ಕಡಿಮೆ ಮಾಡಲು ಸಹಾಯ ಮಾಡುವುದಿಲ್ಲ.

ಮೊಡವೆಯನ್ನು ಕಲೆ ಬೀಳದಂತೆ ನಿವಾರಿಸಲು ಇಲ್ಲಿ ನಾವು ಕೆಲ ಮನೆ ಮದ್ದು ನೀಡಿದ್ದೇವೆ. ಇವುಗಳನ್ನು ಪಾಲಿಸಿದರೆ ಕ್ಲಿಯರ್ ಸ್ಕಿನ್ ನಿಮ್ಮದಾಗಿಸಿಕೊಳ್ಳಬಹುದು:

ಮೊಡವೆ ಬಂದಾಗ ಟಚ್ ಮಾಡಬೇಡಿ

ಮೊಡವೆ ಬಂದಾಗ ಟಚ್ ಮಾಡಬೇಡಿ

ಮೊಡವೆ ಬಂದಾಗ ಪಾಲಿಸಬೇಕಾದ ಮೊದಲ ಟಿಪ್ಸ್ ಅಂದರೆ ಅದನ್ನು ಮುಟ್ಟದಿರುವುದು. ಆದರೆ ನಮ್ಮ ಕೈ ಮೊಡವೆಯನ್ನು ಆಗಾಗ ಮುಟ್ಟುತ್ತಿರುತ್ತದೆ. ಮೊಡವೆ ಮುಟ್ಟಿದರೆ ಅದರ ಬ್ಯಾಕ್ಟೀರಿಯಾ ಮುಖದ ಇತರ ಕಡೆಗೆ ಹರಡಿ ಮೊಡವೆ ಸಮಸ್ಯೆ ಹೆಚ್ಚಾಗುವುದು ಆದ್ದರಿಂದ ಮೊಡವೆ ಮುಟ್ಟಬೇಡಿ.

ಮುಖವನ್ನು 3-4 ಬಾರಿ ತೊಳೆಯಿರಿ

ಮುಖವನ್ನು 3-4 ಬಾರಿ ತೊಳೆಯಿರಿ

ದಿನದಲ್ಲಿ ಮುಖವನ್ನು 3-4 ಬಾರಿ ತೊಳೆಯಿರಿ. ಮುಖದಲ್ಲಿ ಎಣ್ಣೆಯಂಶ ಉಂಟಾದರೆ ತಕ್ಷಣ ಮುಖವನ್ನು ತೊಳೆಯಿರಿ. ಅದರಲ್ಲೂ ತಣ್ಣೀರಿನಿಂದ ಮುಖ ತೊಳೆಯುವುದು ಒಳ್ಳೆಯದು.

ಅದನ್ನು ಚಿವುಟಬೇಡಿ

ಅದನ್ನು ಚಿವುಟಬೇಡಿ

ಮೊಡವೆ ಚಿವುಟಿದರೆ ಮುಖದಲ್ಲಿ ಕಲೆ ಮಾತ್ರವಲ್ಲ ರಂಧ್ರಗಳು ಉಂಟಾಗುವುದು. ಆದ್ದರಿಂದ ಚಿವುಟಬೇಡಿ.

ಓಟ್ಸ್ ಸ್ಕ್ರಬ್

ಓಟ್ಸ್ ಸ್ಕ್ರಬ್

ಮುಖಕ್ಕೆ ಕೆಮಿಕಲ್ ಇರುವ ಸ್ಕ್ರಬ್ ಬಳಸುವ ಬದಲು ಓಟ್ಸ್ ಬಳಸಿ ಸ್ಕ್ರಬ್ ಮಾಡಿ. ಇದು ನಿರ್ಜೀವ ತ್ವಚೆಯನ್ನು ಹೋಗಲಾಡಿಸುತ್ತದೆ.

 ಟೀ ಟ್ರೀ ಆಯಿಲ್

ಟೀ ಟ್ರೀ ಆಯಿಲ್

ದೇಹದ ಇತರ ಭಾಗದಲ್ಲಿ ಮೊಡವೆಯಾಗಿದ್ದರೆ ಟೀ ಟ್ರೀ ಆಯಿಲ್ ಹಚ್ಚಿ ಮಸಾಜ್ ಮಾಡಿ. ಈ ರೀತಿ ನಿಯಮಿತವಾಗಿ ಮಾಡುತ್ತಾ ಬಂದರೆ ಮೊಡವೆ ಕಡಿಮೆಯಾಗುವುದು.

ನಿಂಬೆರಸ

ನಿಂಬೆರಸ

ನಿಂಬೆರಸ ಹಚ್ಚಿದರೆ ಮುಖದಲ್ಲಿ ಉರಿ ಕಂಡು ಬರುತ್ತದೆ. ಆದರೆ ಮೊಡವೆ ಒಣಗಲು ಮತ್ತು ಕಲೆ ಮಾಯವಾಗಿಸುವಲ್ಲಿ ಇದು ಸಹಾಯಕಾರಿ.

ಮುಖಕ್ಕೆ ಹಬೆ ಕೊಡುವುದು

ಮುಖಕ್ಕೆ ಹಬೆ ಕೊಡುವುದು

ವಾರಕ್ಕೊಮ್ಮೆ ಮುಖಕ್ಕೆ ಸ್ಟೀಮ್ ನೀಡಿದರೆ ಇದು ಮುಖದಲ್ಲಿರುವ ಅಧಿಕ ಎಣ್ಣೆಯಂಶವನ್ನು ಹೋಗಲಾಡಿಸಿ, ಮೊಡವೆ ಏಳುವುದನ್ನು ಕಡಿಮೆ ಮಾಡುತ್ತದೆ.

 ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್

ಸ್ವಲ್ಪ ಹತ್ತಿಯನ್ನು ಆಪಲ್ ಸೈಡರ್ ವಿನೆಗರ್ ನಲ್ಲಿ ಅದ್ದಿ ಅದರಿಂದ ಮುಖವನ್ನು ಸ್ವಚ್ಛಗೊಳಿಸಿದರೆ ಒಳ್ಳೆಯದು. ಆದರೆ ಇದು ಎಲ್ಲರಿಗೆ ಸೂಟ್ ಆಗುವುದಿಲ್ಲ, ಮೊದಲು ಮುಖದಲ್ಲಿರುವ ಒಂದು ಮೊಡವೆ ಮೇಲೆ ಟ್ರೈ ಮಾಡಿ, ಅಲರ್ಜಿಯಾಗುವುದಾದರೆ ಮಾಡಲು ಹೋಗಬೇಡಿ.

ಐಸ್

ಐಸ್

ಶುದ್ಧವಾದ ಕರ್ಚೀಪ್ ನಲ್ಲಿ ಐಸ್ ಹಾಕಿ ಅದರಿಂದ ಮುಖವನ್ನು ಮಸಾಜ್ ಮಾಡಿ. ಈ ರೀತಿ ಮಾಡಿದರೆ ಮೊಡವೆ ದೊಡ್ಡದಾಗುವುದಿಲ್ಲ.

 ಲೋಳೆಸರ

ಲೋಳೆಸರ

ಪ್ರತೀದಿನ ಲೋಳೆಸರ ಹಚ್ಚಿ. ಈ ರೀತಿ 2 ತಿಂಗಳು ಪ್ರತೀದಿನ ಮಾಡಿದರೆ ಮೊಡವೆ ಸಮಸ್ಯೆಗೆ ಮತ್ತು ಅದರಿಂದ ಉಂಟಾದ ಕಲೆಗೆ ಗುಡ್ ಬೈ ಹೇಳಬಹುದು.

English summary

Home Remedies To Treat Nose Acne

Getting rid of acne is very troublesome as all your beauty products and creams some time do not work wonders. here are the best home remedies that you can try at home to treat acne.
X
Desktop Bottom Promotion