For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಕಂಡು ಬರುವ ಗುಳ್ಳೆಗಳಿಗೆ ಪರಿಹಾರ

|

ಬೇಸಿಗೆಯಲ್ಲಿ ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯೆಂದರೆ ನವೆ. ಕೆಲವರಿಗೆ ಕೈ ಬರಳಿನ ನಡುವೆ ಕಂಡು ಬರುತ್ತದೆ, ಮತ್ತೆ ಕೆಲವರಿಗೆ ಮೈಯೆಲ್ಲಾ ಬೊಬ್ಬೆ ಹೇಳುತ್ತದೆ. ಪೌಡರ್, ಕ್ರಿಮ್ ಏನೂ ಹಚ್ಚಿದರೂ ಕೆಲವೊಮ್ಮೆ ಪ್ರಯೋಜನ ಆಗುವುದಿಲ್ಲ. ಈ ರೀತಿ ಗುಳ್ಳೆ ಬಂದರೆ ಮತ್ತೊಂದು ದೊಡ್ಡ ಹಿಂಸೆಯೆಂದರೆ ತುರಿಕೆ.

ಆದ್ದರಿಂದ ಬೇಸಿಗೆಯಲ್ಲಿ ಕಾಡುವ ಈ ಗುಳ್ಳೆಗಳಿಗೆ ಕಾರಣ ಮತ್ತು ಪರಿಹಾರವನ್ನು ತಿಳಿದುಕೊಳ್ಳುವುದು ಒಳ್ಳೆಯದು. ಇಲ್ಲಿ ನಾವು ಕೆಲವು ಸರಳವಾದ ಪರಿಹಾರವನ್ನು ನೀಡಿದ್ದೇವೆ ನೋಡಿ:

Home Remedies To Cure Summer Rashes

ಮೊದಲಿಗೆ ಇದಕ್ಕೆ ಕಾರಣಗಳು
ಬೇಸಿಗೆಯಲ್ಲಿ ಗುಳ್ಳೆಗಳು ಬರಲು ಪ್ರಮುಖ ಕಾರಣ ಮೈ ಬೆವರುವುದು. ಮೈ ಬೆವರಿದರೆ ಒಳ್ಳೆಯದು, ದೇಹವು ತಂಪಾಗಿ ಇರುತ್ತದೆ. ಆದರೆ ಬೆವರು ಬಂದು ಬಟ್ಟೆ ಒದ್ದೆಯಾಗಿ ಈ ರೀತಿಯ ಗುಳ್ಳೆಗಳು ಉಂಟಾಗುವುದು. ಬೇಸಿಗೆಯಲ್ಲಿ ಅಲರ್ಜಿ ಉಂಟಾಗಲು ಇದು ಪ್ರಮುಖ ಕಾರಣವಾಗಿದೆ.

ಪರಿಹಾರ

1. ಮೈ ಮೇಲೆ ಎದ್ದ ಬೊಬ್ಬೆ ಹೋಗಲಾಡಿಸಲು ಮೊದಲು ನೀವು ಮಾಡಬೇಕಾದದು ಸ್ಪೆಷಲ್ ಸ್ನಾನ. ಅದೇನಂದರೆ ಒಂದು ಕಪ್ ಓಟ್ಸ್ ಪುಡಿಗೆ, ಅರ್ಧ ಕಪ್ ಅಡುಗೆ ಸೋಡಾವನ್ನು ಮಿಕ್ಸ್ ಮಾಡಿ, ಸ್ನಾನ ಮಾಡುವ ಬಾತ್ ಟಬ್ ಗೆ ಹಾಕಿ ಅದರಲ್ಲಿ 15 ನಿಮಿಷ ವಿಶ್ರಮಿಸಿ. ನಂತರ ನೀರು ಹಾಕಿ ಮೈ ತೊಳೆಯಿರಿ. ಈ ರೀತಿ ಮಾಡಿದರೆ ಮೈ ಬೊಬ್ಬೆ ಎದ್ದಿದ್ದು ಕಡಿಮೆಯಾಗುವುದು.

2. ಲೋಳೆಸರ
ಗುಳ್ಳೆಗಳು ತುಂಬಾ ಗಟ್ಟಿಯಾಗಿದ್ದರೂ ಅದನ್ನು ಹೋಗಲಾಡಿಸುವಲ್ಲಿ ಲೋಳೆಸರ ತುಂಬಾ ಸಹಕಾರಿ. ಅದರಲ್ಲೂ ಮಕ್ಕಳ ತ್ವಚೆಗೆ ಲೋಳೆಸರ ಹಚ್ಚುವುದು ಒಳ್ಳೆಯದು. ದಿನದಲ್ಲಿ ಎರಡು ಬಾರಿಯಂತೆ ಹಚ್ಚುತ್ತಾ ಬಂದರೆ ಮೈ ಮೇಲೆ ಎದ್ದ ಗುಳ್ಳೆಗಳು ಕಡಿಮೆಯಾಗುವುದು.

3. ಐಸ್ ಕ್ಯೂಬ್ಸ್
ಇದು ಕೂಡ ತ್ವಚೆಯ ಮೇಲೆ ಎದ್ದ ಗುಳ್ಳೆಗಳನ್ನು ಹೋಗಲಾಡಿಸಲುವಲ್ಲಿ ತುಂಬಾ ಪರಿಣಾಮಕಾರಿ. ಐಸ್ ಕ್ಯೂಬ್ ಹಚ್ಚಿದಾಗ ದೇಹಕ್ಕೆ ತಂಪಾಗಿ ಗುಳ್ಳೆಗಳು ಕಡಿಮೆಯಾಗುವುದು. ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ಕೆಂಪು ಗುಳ್ಳೆಗಳಿಂದ ಮುಕ್ತಿ ಹೊಂದಬಹುದು.

English summary

Home Remedies To Cure Summer Rashes | Skin Care Tips | ಬೇಸಿಗೆಯಲ್ಲಿ ಕಂಡು ಬರುವ ಗುಳ್ಳೆಗಳಿಗೆ ಪರಿಹಾರ | ತ್ವಚೆ ಆರೈಕೆಗೆ ಕೆಲ ಸಲಹೆಗಳು

If your skin itches then you may be suffering from rashes. They appear more on the areas where exposure to air is not possible. Though they can be caused by other reasons too, summer rashes generally appear because of excessive heat. There are different ways to prevent and cure these rashes.
X
Desktop Bottom Promotion