For Quick Alerts
ALLOW NOTIFICATIONS  
For Daily Alerts

ಗ್ಲಿಸೆರಿನ್ ಮ್ಯಾಜಿಕ್-ಸ್ಕಿನ್ ಕೇರ್ ಟಿಪ್ಸ್

|

ಗ್ಲಿಸೆರಿನ್ ಬಳಸಿದರೆ ತ್ವಚೆಗೆ ಒಳ್ಳೆಯದು ಎಂಬ ಅಂಶ ನಿಮಗೆ ಗೊತ್ತಿರಬಹುದು, ಆದರೆ ಇದನ್ನು ಬಳಸಿದರೆ 10ಕ್ಕಿಂತ ಅಧಿಕ ಗುಣಗಳನ್ನು ಪಡೆಯಬಹುದೆನ್ನುವ ಅಂಶ ಬಹುಶಃ ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ನಿಮ್ಮ ತ್ವಚೆ ಸಮಸ್ಯೆಗಳಿಗೆ ದುಬಾರಿ ಬೆಲೆಯ ಕ್ರೀಮ್ ಗಳನ್ನು ಕೊಳ್ಳುವುದಕ್ಕಿಂತ ಬದಲಾಗಿ ಈ ಗ್ಲಿಸೆರಿನ್ ಬಳಸಿದರೆ ತುಂಬಾ ಪ್ರಯೋಜವನ್ನು ಪಡೆಯಬಹುದು.

ಇಲ್ಲಿ ನಾವು ಗ್ಲಿಸೆರಿನ್ ನ ಸೌಂದರ್ಯವರ್ಧಕ ಗುಣಗಳ ಬಗ್ಗೆ ಹೇಳಿದ್ದೇವೆ ನೋಡಿ:

Glycerin For Skin Care

* ಗ್ಲಿಸೆರಿನ್ ಅನ್ನು ಟೋನರ್ ಆಗಿ ಬಳಸಬಹುದು. ಪ್ರತೀದಿನ ರೋಸ್ ವಾಟರ್ ಗೆ 2 ಹನಿ ಗ್ಲಿಸೆರಿನ್ ಹಾಕಿ ಮಿಕ್ಸ್ ಮಾಡಿ, ಅದರಲ್ಲಿ ಅದ್ದಿದ ಹತ್ತಿಯಿಂದ ಮುಖವನ್ನು ಒರೆಸಿದರೆ ತ್ವಚೆ ಶುಭ್ರವಾಗಿರುತ್ತದೆ.

* ಗ್ಲಿಸೆರಿನ್ ಮುಖದಲ್ಲಿ ಮಾಯಿಶ್ಚರೈಸರ್ ಇರುವಂತೆ ನೋಡಿಕೊಂಡು, ಮುಖ ಎಣ್ಣೆ-ಎಣ್ಣೆಯಾಗಿರುವುದು ಕೂಡ ತಪ್ಪುತ್ತದೆ.

* ಗ್ಲಿಸೆರಿನ್ ಬಳಸಿ ಮಸಾಜ್ ಮಾಡಿದರೆ ತ್ವಚೆ ಕಣಗಳು ಹಾನಿಯಾಗಿದ್ದನ್ನು ಸರಿಪಡಿಸಿ, ಮುಖಕ್ಕೆ ಹೊಳಪನ್ನು ತುಂಬುವುದು.

* ತುಂಬಾ ಬೆವರುವವರು, ಎಣ್ಣೆ ತ್ವಚೆ ಸಮಸ್ಯೆ ಇರುವವರು ಗ್ಲಿಸೆರಿನ್ ಗೆ ಹಾಲು ಮತ್ತು ಜೇನು ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿದರೆ ಒಳ್ಳೆಯದು.

* ಮೊಡವೆ ಸಮಸ್ಯೆ ಇರುವವರು ಇದನ್ನು ಮುಖಕ್ಕೆ ಹಚ್ಚಿದರೆ ಒಳ್ಳೆಯದು. ಗ್ಲಿಸೆರಿನ್ ನಿರ್ಜೀವ ತ್ವಚೆಯನ್ನು ಹೋಗಲಾಡಿಸುತ್ತದೆ.

* ಫೇಸ್ ಮಾಸ್ಕ್ ಮಾಡುವಾಗ ಸ್ವಲ್ಪ ಗ್ಲಿಸೆರಿನ್ ಕೂಡ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದು ಒಳ್ಳೆಯದು.

* ಅಂಗೈ ತುಂಬಾ ಒಣಗುತ್ತಿದ್ದರೆ ಸ್ವಲ್ಪ ಗ್ಲಿಸೆರಿನ್ ಹಾಕಿ ಕೈಯನ್ನು ಉಜ್ಜಿದರೆ ಸಾಕು.

* ಕೈ ಕಾಲುಗಳಿಗೆ ಹಚ್ಚಿದರೆ ತ್ವಚೆ ಮಾಯಿಶ್ಚರೈಸರ್ ನಿಂದ ಕೂಡಿದ್ದು ಆಕರ್ಷಕವಾಗಿ ಕಾಣುವುದು.

* ಮುಖದಲ್ಲಿ ನೆರಿಗೆ ಬಿದ್ದಿದ್ದರೆ ಗ್ಲಿಸೆರಿನ್ ಹಚ್ಚಿದರೆ ನೆರಿಗೆ ಎದ್ದು ಕಾಣದಂತೆ ತಡೆಯಬಹುದು.

English summary

Glycerin For Skin Care

Apart from being easily available, these ingredients are not expensive too! For example glycerin is an inexpensive beauty ingredient which has many skin benefits. Skin care with glycerin is easy and you would get results too! Glycerin moisturise the skin also tightens it.
Story first published: Wednesday, July 10, 2013, 15:21 [IST]
X
Desktop Bottom Promotion