For Quick Alerts
ALLOW NOTIFICATIONS  
For Daily Alerts

ಮುಖದಲ್ಲಿರುವ ರಂಧ್ರವನ್ನು ಕಾಣದಂತೆ ಮಾಡಬೇಕೆ?

By Super
|

ಸಾಮಾನ್ಯವಾಗಿ ಕೆಲವರ ಮುಖದಲ್ಲಿ ಸಣ್ಣ ಸಣ್ಣ ಅಥವಾ ದೊಡ್ಡ ರಂಧ್ರ(ಗುಂಡಿ) ಗಳಿರುವುದನ್ನು ನೀವೂ ನೋಡಿರಬಹುದು. ಇಂತಹ ರಂಧ್ರಗಳು ಮುಖದಲ್ಲಿದ್ದರೆ ವ್ಯಕ್ತಿ ನೋಡುವುದಕ್ಕೆ ಎಷ್ಟೇ ಸುಂದರವಾಗಿದ್ದರೂ ಆ ಸೌಂದರ್ಯವೂ ಈ ರಂಧ್ರಗಳಿಂದಾಗಿ ಅಡಗಿ ಹೋಗುತ್ತವೆ! ಆದ್ದರಿಂದ ಕೆಲವು ಸಾಮಾನ್ಯ ಚಿಕಿತ್ಸೆಗಳ ಮೂಲಕ ಈ ರಂಧ್ರಗಳನ್ನು ತೊಡೆದು ಹಾಕಬಹುದು.

ಆದರೆ ಈ ರಂಧ್ರಗಳನ್ನು ಕಡಿಮೆ ಮಾಡಲು ಪ್ರಾರಂಭಿಸುವುದಕ್ಕಿಂತ ಮೊದಲು ಮುಖದಲ್ಲಿ ರಂಧ್ರಗಳೇಕೆ ಉಂಟಾಗುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಸೂಕ್ತ. ಸಾಮಾನ್ಯವಾಗಿ ತಮ್ಮ ಮುಖದಲ್ಲಿರುವ ರಂಧ್ರ ಎಷ್ಟು ದೊಡ್ಡದು ಎಂಬುದು ಯಾರೂ ಗಮನವಹಿಸಿರುವುದಿಲ್ಲ. ಆದರೆ ವಯಸ್ಸಾಗುತ್ತ ಹೋದಂತೆ ಮುಖದಲ್ಲಿನ ಈ ರಂಧ್ರಗಳು ದೊಡ್ಡದಾಗುತ್ತಾ ಹೋಗುತ್ತವೆ.

ಮುಖದಲ್ಲಿ ಕಾಣುವ ರಂಧ್ರಗಳು ಸಾಮಾನ್ಯವಾಗಿ ಹಣೆಯ ಮೇಲೆ, ಮೂಗಿನ ಮೇಲೆ ಹಾಗೂ ಕೆನ್ನೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ರಂಧ್ರಗಳಿಂದಾಗಿ ತ್ವಚೆ ಮೃದುತ್ವವನ್ನು ಕಳೆದುಕೊಳ್ಳುತ್ತದೆ. ಈ ರಂಧ್ರಗಳನ್ನು ಶಾಶ್ವತವಾಗಿ ನಿವಾರಣೆ ಮಾಡಲು ಸಾಧ್ಯವಿಲ್ಲವಾದರೂ ಕಡಿಮೆ ಮಾಡಬಹುದು. ಇದಕ್ಕೆ ಕಾರಣ, ಮನೆ ಮದ್ದು, ಪರಿಹಾರದ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ:

ಮೊದಲಿಗೆ ಕಾರಣ

ದೊಡ್ಡ ಗಾತ್ರದ ರಂಧ್ರಗಳಿಗೆ ಕಾರಣಗಳು

ದೊಡ್ಡ ಗಾತ್ರದ ರಂಧ್ರಗಳಿಗೆ ಕಾರಣಗಳು

1. ರಂಧ್ರಗಳ ಗಾತ್ರವನ್ನು ನಿರ್ಣಯಿಸುವಲ್ಲಿ ಜೆನೆಟಿಕ್ಸ್ (ಅನುವಂಶೀಯತೆ) ಗಮನಾರ್ಹ ಪಾತ್ರವಹಿಸುತ್ತದೆ. ಆದರೆ ಇದನ್ನು ತಡೆಯಲು ಮಾರ್ಗಗಳಿಲ್ಲ.

2. ತ್ಚಚೆಯಲ್ಲಿರುವ ತೈಲದ ಅಂಶ ನೈಸರ್ಗಿಕವಾಗಿ ರಂಧ್ರಗಳನ್ನು ಹೆಚ್ಚಿಸುತ್ತದೆ. ದೇಹವು ಚರ್ಮ ಒಣಗದಂತೆ ತಡೆಗಟ್ಟಲು ಮೇದೋಗ್ರಂಥಿಗಳ ಸ್ರಾವವನ್ನು ಉತ್ವಾದಿಸುತ್ತದೆ. ಇದು ತ್ವಚೆಯಲ್ಲಿ ಎಣ್ಣೆ ಅಂಶ ಉತ್ವಾದನೆಯಾಗಲು ಕಾರಣ.

3. ತುಂಬಾ ಎಣ್ಣೆಯುಕ್ತ ಚರ್ಮದ ಹೊಂದಿದ್ದರೆ, ಧೂಳು ಸುಲಭವಾಗಿ ರಂಧ್ರಗಳಲ್ಲಿ ತುಂಬಿಕೊಂಡು ರಂಧ್ರಗಳು ವಿಸ್ತರಣೆಯಾಗಬಹುದು.

4. ಮಣ್ಣು ಅಥವಾ ಸೌಂದರ್ಯವರ್ಧಕಗಳಿಂದ ಉಂಟಾದ ಅಡೆತಡೆಗಳು

5. ಸೌಂದರ್ಯವರ್ಧಕಗಳ ಅನುಚಿತ ಬಳಕೆ

6. ಮುಖದಲ್ಲಿ ಹೆಚ್ಚುವರಿ ತೈಲ ಉತ್ಪಾದನೆ

7. ಮುಖದ ತ್ವಚೆಯ ನೈರ್ಮಲ್ಯ

ಮನೆಮದ್ದುಗಳು

ಮನೆಮದ್ದುಗಳು

1. ಐಸ್ ಕ್ಯೂಬ್ : ಈ ಚಿಕಿತ್ಸೆ ಅತ್ಯಂತ ಸುಲಭ. ಒಂದು ಶುಭ್ರ ಬಟ್ಟೆಯಲ್ಲಿ ಐಸ್ ಕ್ಯೂಬ್/ಮಂಜುಗಡ್ಡೆ ತುಂಡು ನ್ನು ಹಾಕಿ ಮುಖಕ್ಕೆ ಒತ್ತಿ. ಇದು ತ್ವಚೆಯನ್ನು ಬಿಗಿಗೊಳಿಸುತ್ತದೆ. ಇದನ್ನು ದಿನವೂ ಬೆಳಿಗ್ಗೆ ಮಾಡುವುದರಿಂದ ಮುಖದಲ್ಲಿ ರಂಧ್ರಗಳು ಹಿಗ್ಗುವುದನ್ನು ತಪ್ಪಿಸುತ್ತದಲ್ಲದೆ ಮೇದೋಗ್ರಂಥಿಗಳ ಸ್ರಾವವನ್ನು ಸಹಜವಾಗಿಸುತ್ತದೆ.

ಮನೆಮದ್ದುಗಳು

ಮನೆಮದ್ದುಗಳು

2. ಜೇನು: ಜೇನು ಮತ್ತು ನಿಂಬೆ ರಸವನ್ನು ಮಿಶ್ರಣಮಾಡಿ ಮುಖಕ್ಕೆ ಉಜ್ಜಿ ನಂತರ ಐದು ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಮುಖವನ್ನು ಬಿಸಿನೀರಿನಲ್ಲಿ ತೊಳೆಯಿರಿ. ಇದು ಮುಖದಲ್ಲಿ ರಂಧ್ರವನ್ನು ಕಡಿಮೆಗೊಳಿಸುತ್ತದೆ.

ಮನೆಮದ್ದುಗಳು

ಮನೆಮದ್ದುಗಳು

3. ಟೊಮೆಟೊ ರಸ: ಟೊಮೆಟೊ ರಸವನ್ನು ಮುಖಕ್ಕೆ ಹಚ್ಚಿದರೆ ರಂಧ್ರಗಳು ಕಡಿಮೆಯಾಗುತ್ತವೆ. ವಾರದಲ್ಲಿ ಮೂರು ಬಾರಿ ಟೊಮೆಟೊ ರಸವನ್ನು ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷಗಳ ನಂತರ ಬಿಸಿ ನೀರಿನಲ್ಲಿ ತೊಳೆದರೆ ರಂಧ್ರಗಳು ಸಾಕಷ್ಟು ಕಡಿಮೆಯಾಗುತ್ತವೆ.

ಮನೆಮದ್ದುಗಳು

ಮನೆಮದ್ದುಗಳು

4. ಸೌತೆಕಾಯಿ ರಸ: ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸೌತೆಕಾಯಿ ಪ್ರಮುಖ ಪಾತ್ರವಹಿಸುತ್ತದೆ. ಸೌತೆಕಾಯಿ ರಸಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿ ಮುಖಕ್ಕೆ ಹಚ್ಚಿ ಕೆಲವು ಸಮಯಗಳ ನಂತರ ತೊಳೆಯಿರಿ.

ಮನೆಮದ್ದುಗಳು

ಮನೆಮದ್ದುಗಳು

5. ಓಟ್ಸ್ : ಐದು ಟೀ ಚಮಚ ಜೇನು, ಎರಡು ಟೀ ಚಮಚದಷ್ಟು ಓಟ್ಸ್ ಹಾಗೂ ಎರಡು ಟೀ ಚಮಚ ಹಾಲಿನ ಪೌಡರನ್ನು ಸೇರಿಸಿ. ನಂತರ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ ನಂತರ ತೊಳೆಯಿರಿ. ಈ ವಿಧಾನವನ್ನು ವಾರದಲ್ಲಿ ಎರಡು ಬಾರಿ ಮಾಡಿದರೆ ರಂಧ್ರಗಳು ಕಡಿಮೆಯಾಗುತ್ತವೆ.

ರಂಧ್ರಗಳನ್ನು ಸಂಕುಚಿತ ಗೊಳಿಸಲು ಸಲಹೆಗಳು

ರಂಧ್ರಗಳನ್ನು ಸಂಕುಚಿತ ಗೊಳಿಸಲು ಸಲಹೆಗಳು

1. ಪ್ರತಿದಿನ ರಾತ್ರಿ ಮೇಕಪ್ ಚೆನ್ನಾಗಿ ತೊಳೆದು ಮಲಗಿ.

ರಂಧ್ರಗಳನ್ನು ಸಂಕುಚಿತ ಗೊಳಿಸಲು ಸಲಹೆಗಳು

ರಂಧ್ರಗಳನ್ನು ಸಂಕುಚಿತ ಗೊಳಿಸಲು ಸಲಹೆಗಳು

2. ಸಾಲಿಸೈಲಿಕ್ (salicylic) ಆಮ್ಲ ಹೊಂದಿರುವ ಸಾಬೂನಿನಿಂದ ನಿಮ್ಮ ಮುಖವನ್ನು ತೊಳೆಯಿರಿ. ಈ ಆಮ್ಲ ತೈಲಾಂಶವನ್ನು ತೆಗೆದು ರಂಧ್ರಗಳನ್ನು ಕಡಿಮೆ ಮಾಡುತ್ತದೆ.

ರಂಧ್ರಗಳನ್ನು ಸಂಕುಚಿತ ಗೊಳಿಸಲು ಸಲಹೆಗಳು

ರಂಧ್ರಗಳನ್ನು ಸಂಕುಚಿತ ಗೊಳಿಸಲು ಸಲಹೆಗಳು

3. ಅಲರ್ಜಿ ಉಂಟು ಮಾಡದಂತಹ, ಅಧಿಕ ಎಣ್ಣೆ ಅಂಶವಿರದ ಮಾಯಿಶ್ಚರೈಸರ್ ನ್ನು ಬಳಸಿ.

ರಂಧ್ರಗಳನ್ನು ಸಂಕುಚಿತ ಗೊಳಿಸಲು ಸಲಹೆಗಳು

ರಂಧ್ರಗಳನ್ನು ಸಂಕುಚಿತ ಗೊಳಿಸಲು ಸಲಹೆಗಳು

4. ಸೂರ್ಯನ ಕಿರಣ ನೇರವಾಗಿ ತ್ವಚೆಯ ಮೇಲೆ ಬಿದ್ದರೆ ತ್ವಚೆ ಹಾಳಾಗುತ್ತದೆ ಎಂಬ ಕಲ್ಪನೆ ಹಲವರಿಗಿಲ್ಲ. ದಿನವೂ ಸನ್ ಸ್ಕ್ರೀನ್ ಬಳಸಿ. ಇದು ಸೂರ್ಯವ ಕಿರಣದಿಂದ ತ್ವಚೆ ಹಾಳಾಗುವುದನ್ನು ತಡೆಯುತ್ತದೆ.

ಸಲಹೆ: ಅಗತ್ಯವೆನಿಸಿದರೆ ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ತಿಳಿದಿರುವ ಚರ್ಮ ತಜ್ಞರಿಂದ ಸಲಹೆ ಪಡೆಯಿರಿ. ನಿಮಗೆ ಸೂಕ್ತ ವೆನಿಸಿದ ಚಿಕಿತ್ಸೆಯನ್ನು ನೀವೆ ಆಯ್ಕೆ ಮಾಡಿ.

English summary

Get Rid Of Large Pores Naturally | Tips For Skin Care | ಮುಖದಲ್ಲಿ ಎದ್ದು ಕಾಣುವ ರಂಧ್ರವನ್ನು ಹೋಗಲಾಡಿಸಬೇಕೆ? | ತ್ವಚೆ ಆರೈಕೆಗೆ ಕೆಲ ಸಲಹೆಗಳು

The pores are usually more obvious on the nose, forehead and chin. There is no solution to shrink pore size permanently. However you can help reduce the appearance of large pores. 
X
Desktop Bottom Promotion