For Quick Alerts
ALLOW NOTIFICATIONS  
For Daily Alerts

ಫೇಸ್ ಮಾಸ್ಕ್ ಮಾಡದಿದ್ದರೆ ಏನಾಗುತ್ತದೆ ಗೊತ್ತಾ?

|

ನಿಮ್ಮ ತ್ವಚೆ ಯೌವನದ ಕಳೆಯನ್ನು ಬೇಗನೆ ಕಳೆದುಕೊಳ್ಳಬಾರದೆಂದು ಬಯಸುವುದಾದರೆ ಫೇಸ್ ಮಾಸ್ಕ್, ಫೇಶಿಯಲ್ ಅಂತ ಆರೈಕೆ ಮಾಡುವುದು ಒಳ್ಳೆಯದು. ಇವುಗಳನ್ನು ಬ್ಯೂಟಿ ಪಾರ್ಲರ್ ಗೆ ಹೋಗಿಯೇ ಮಾಡಿಸಬೇಕಾಗಿಲ್ಲ. ಮನೆಯಲ್ಲಿಯೇ ಸುಲಭದಲ್ಲಿ ಸಿಗುವ ಹಣ್ಣುಗಳನ್ನು, ಮೂಲಿಕೆಗಳನ್ನು ಬಳಸಿ ಮಾಡಿ ತ್ವಚೆಯನ್ನು ರಕ್ಷಣೆ ಮಾಡಬಹುದು. ವಯಸ್ಸು 20 ದಾಟಿದ ಮೇಲೆ ತ್ವಚೆ ಆರೈಕೆ ಕಡೆ ಗಮನ ಕೊಡದೆ ಹೋದರೆ 30ರ ಹರೆಯದಲ್ಲಿಯೇ 10 ವರ್ಷ ದೊಡ್ಡವರಂತೆ ಕಾಣುವಿರಿ. ಮಹಿಳೆಯರು ಮಾತ್ರವಲ್ಲ ಪುರುಷರು ಕೂಡ ತ್ವಚೆ ಆರೈಕೆ ಕಡೆ ಗಮನ ಹರಿಸಬೇಕು.

ಫೇಶಿಯಲ್ ಮುಖಕ್ಕೆ ಮಸಾಜ್ ನೀಡಿದರೆ ಫೇಸ್ ಮಾಸ್ಕ್ ತ್ವಚೆಯಲ್ಲಿರುವ ನಿರ್ಜೀವ ತ್ವಚೆಯನ್ನು ಹೋಗಲಾಡಿಸಿ, ಮುಖದ ಅಂದ ಹೆಚ್ಚಿಸುವಲ್ಲ ಸಹಕಾರಿಯಾಗಿದೆ. ಇಲ್ಲಿ ನಾವು ಕೆಲವೊಂದು ಫ್ರೂಟ್ ಫೇಸ್ ಮಾಸ್ಕ್ ಬಗ್ಗೆ ಹೇಳಿದ್ದೇವೆ. ಈ ಎಲ್ಲಾ ಫೇಸ್ ಮಾಸ್ಕ್ ತ್ವಚೆಯ ಅಂದ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಇವುಗಳಲ್ಲಿ ನಿಮಗೆ ಇಷ್ಟವಾದ ಹಣ್ಣನ್ನು ಬಳಸಿ ಫೇಸ್ ಮಾಸ್ಕ್ ಮಾಡಬಹುದು.

ಸ್ಟ್ರಾಬರಿ

ಸ್ಟ್ರಾಬರಿ

2-3 ಚಮಚ ಸ್ಟ್ರಾಬರಿ ಪೇಸ್ಟ್ ಗೆ ಒಂದು ಚಮಚ ಜೇನು ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಬೇಕು. ಈ ಮಾಸ್ಕ್ ನಲ್ಲಿ ಜೇನಿನ ಬದಲು ಮೊಸರು, ನಿಂಬೆ ರಸ ಬಳಸಬಹುದು.

ಜೇನು

ಜೇನು

ಜೇನಿಗೆ 2-3 ಚಮಚ ನಿಂಬೆ ರಸ ಹಚ್ಚಿ ಫೇಸ್ ಮಾಸ್ಕ್ ರೀತಿ ಬಳಸಬಹುದು.

 ನಿಂಬೆ ರಸ

ನಿಂಬೆ ರಸ

ನಿಂಬೆ ರಸವನ್ನು ಹಾಗೆಯೇ ಮುಖಕ್ಕೆ ಹಚ್ಚಬಹುದು, ಇಲ್ಲದಿದ್ದರೆ ಮೊಸರು, ಜೇನಿನ ಜೊತೆ ಮಿಶ್ರಣ ಮಾಡಿ ಫೇಸ್ ಮಾಸ್ಕ್ ತಯಾರಿಸಬಹುದು.

 ಪಪ್ಪಾಯಿ

ಪಪ್ಪಾಯಿ

ಹಣ್ಣಾದ ಪಪ್ಪಾಯಿಯನ್ನು ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಮುಖ ತೊಳೆದರೆ ಸಾಕು. ಪಪ್ಪಾಯಿಯನ್ನು ಎರಡು ದಿನಕ್ಕೊಮ್ಮೆಯಾದರೂ ಬಳಸಬಹುದು.

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣನ್ನು ಹಿಸುಕಿ ಅದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡಿದರೆ ನಿಮ್ಮ ಮುಖದ ಕಾಂತಿ ಹೆಚ್ಚುವುದು.

ಸೇಬು

ಸೇಬು

ಸೇಬಿನ ಸಿಪ್ಪೆ ಮತ್ತು ಅದರ ತಿರುಳನ್ನು ಹಾಕಿ ನುಣ್ಣನೆ ರುಬ್ಬಿ ಮುಖಕ್ಕೆ ಹಚ್ಚಿಕೊಂಡರೆ ಮುಖದಲ್ಲಿರುವ ಕಪ್ಪು ಕಲೆಗಳು ಕಡಿಮೆಯಾಗುವುದು.

ಮಾವಿನ ಹಣ್ಣು

ಮಾವಿನ ಹಣ್ಣು

ಮಾವಿನ ಹಣ್ಣನ್ನು ಹಾಲಿನ ಜೊತೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿದರೆ ತ್ವಚೆಗೆ ಒಳ್ಳೆಯದು.

ಬಾಳೆ ಹಣ್ಣು

ಬಾಳೆ ಹಣ್ಣು

ಬಾಳೆ ಹಣ್ಣನ್ನು ಪೇಸ್ಟ್ ರೀತಿ ಅದನ್ನು ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ಮುಖ ತೊಳೆದರೆ ಮುಖದ ಬಿಳುಪು ಹೆಚ್ಚುವುದು.

 ಮೊಸರು

ಮೊಸರು

ಮೊಸರಿಗೆ ಸ್ವಲ್ಪ ನಿಂಬೆ ರಸ ಹಿಂಡಿ ಮುಖಕ್ಕೆ ಹಚ್ಚಿಕೊಂಡು 15 ನಿಮಿಷದ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡಿದರೆ ಮುಖದಲ್ಲಿರುವ ಎಣ್ಣೆಯಂಶವನ್ನು ಹೋಗಲಾಡಿಸಬಹುದು.

 ಐಸ್ ಪ್ಯಾಕ್

ಐಸ್ ಪ್ಯಾಕ್

ಐಸ್ ಪ್ಯಾಕ್ ಕೂಡ ತ್ವಚೆಗೆ ತುಂಬಾ ಒಳ್ಳೆಯದು. ಬಿಸಿಲಿಗೆ ಹೊರಗಡೆ ಹೋಗಿ ಬಂದ ನಂತರ ಒಂದು ತುಂಡು ಐಸ್ ಅನ್ನು ಕರ್ಚೀಪ್ ನಲ್ಲಿ ಹಾಕಿ ಮೆಲ್ಲನೆ ಮುಖವನ್ನು ಉಜ್ಜಿ. ಈ ರೀತಿ ಮಾಡಿದರೆ ಮುಖ ಕಪ್ಪಾಗುವುದಿಲ್ಲ.

ಸೌತೆಕಾಯಿಯ ಫೇಸ್ ಮಾಸ್ಕ್

ಸೌತೆಕಾಯಿಯ ಫೇಸ್ ಮಾಸ್ಕ್

ಸೌತೆಕಾಯಿಯನ್ನು ಪೇಸ್ಸ್ ಮಾಡಿ ಮುಖ ಹಾಗೂ ಕಣ್ಣಿನ ಸುತ್ತ ಹಚ್ಚುವುದರಿಂದ ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಬೀಳದಂತೆ ತಡೆಯಬಹುದು, ಮುಖದ ಆಕರ್ಷಣೆಯೂ ಹೆಚ್ಚುವುದು.

 ಟೊಮೆಟೊ

ಟೊಮೆಟೊ

ಟೊಮೆಟೊವನ್ನು ಮುಖಕ್ಕೆ ಹಚ್ಚಿಕೊಂಡರೆ ಮೊಡವೆ ಕಡಿಮೆಯಾಗುತ್ತದೆ, ಇದರಲ್ಲಿ ಬ್ಲೀಚಿಂಗ್ ಅಂಶವಿರುವುದರಿಂದ ಮುಖವನ್ನು ಬೆಳ್ಳಗಾಗಿಸುತ್ತದೆ.

 ಪುದೀನಾ

ಪುದೀನಾ

ಮೊಡವೆ ಇರುವವರು ಪುದೀನಾವನ್ನು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ನಿಂಬೆರಸ ಹಿಂಡಿ ಹಚ್ಚಿದರೆ ಉತ್ತಮ ಪ್ರಯೋಜನವನ್ನು ಪಡೆಯಬಹುದು.

 ಮೊಟ್ಟೆಯ ಬಿಳಿ

ಮೊಟ್ಟೆಯ ಬಿಳಿ

ಮೊಟ್ಟೆಯ ಬಿಳಿ ಕೂಡ ಉತ್ತಮವಾದ ಫೇಸ್ ಮಾಸ್ಕ್ ಆಗಿದೆ. ಈ ಫೇಸ್ ಮಾಸ್ಕ್ ಬಳಸಿದರೆ ಮುಖದಲ್ಲಿರುವ ರಂಧ್ರಗಳು ಕಡಿಮೆಯಾಗುತ್ತದೆ, ಮುಖವೂ ಶುಭ್ರವಾಗಿ ಕಾಣುವುದು.

ಕಹಿ ಬೇವಿನ ಎಲೆ

ಕಹಿ ಬೇವಿನ ಎಲೆ

ಕಹಿ ಬೇವಿನ ಎಲೆಯನ್ನು ಅರೆದು ಮುಖಕ್ಕೆ ಹಚ್ಚಿದರೆ ಮೊಡವೆ ಸಮಸ್ಯೆ ಕಂಡು ಬರುವುದಿಲ್ಲ. ಈ ಎಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕಿದರೆ ಇವು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ.

English summary

Fruits You Can Use For Face Mask | Tips For Skin Care | ಫೇಸ್ಕ್ ಮಾಸ್ಕ್ ಆಗಿ ಬಳಸಬಹುದಾದ ಹಣ್ಣುಗಳು | ತ್ವಚೆ ಆರೈಕೆಗೆ ಕೆಲ ಸಲಹೆಗಳು

Fruits are great for the overall health. Apart from being healthy, fruits can also be used to get a glowing and flawless skin. You can apply fruit on your face in the form of a face pack, scrub, toner or a cleanser.
X
Desktop Bottom Promotion