For Quick Alerts
ALLOW NOTIFICATIONS  
For Daily Alerts

ಸನ್ ಸ್ಕ್ರಿನ್ ಬಗ್ಗೆ ಈ ಅಂಶಗಳು ತಿಳಿದಿರಲಿ

|

ಸೂರ್ಯನ ನೆರಳಾತೀತ ಕಿರಣಗಳಿಂದ ತ್ವಚೆಯನ್ನು ರಕ್ಷಣೆ ಮಾಡುವಲ್ಲಿ ಸನ್ ಸ್ಕ್ರೀನ್ ಲೋಷನ್ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಬಿಸಿಲಿಗೆ ಹೋಗುವ 20 ನಿಮಿಷಗಳ ಮುಂಚೆ ಸನ್ ಸ್ಕ್ರೀನ್ ಲೋಷನ್ ಹಚ್ಚಿ, ನಂತರ ಬಿಸಿಲಿನಲ್ಲಿ ಓಡಾಡಿದರೆ ಸನ್ ಟ್ಯಾನ್ (ತ್ವಚೆ ಕಪ್ಪಗಾಗುವುದು), ತ್ವಚೆ ಸುಟ್ಟು ಹೋಗುವುದು ಈ ರೀತಿಯ ಯಾವುದೇ ಹಾನಿಯುಂಟಾಗುವುದಿಲ್ಲ.

ಬಿಸಿಲಿನಿಂದ ರಕ್ಷಣೆ ಪಡೆಯಲು ಸನ್ ಸ್ಕ್ರಿನ್ ಹಚ್ಚಬೇಕು. ಹಚ್ಚುವ ಮೊದಲು ಸನ್ ಸ್ಕ್ರಿನ್ ಲೋಷನ್ ಗಳ ಬಗ್ಗೆ ಕೆಲವೊಂದು ಅಂಶಗಳನ್ನು ಗಮನಿಸುವುದು ಒಳ್ಳೆಯದು. ಉದಾಹರಣೆಗೆ ಸನ್ ಸ್ಕ್ರೀನ್ 24 ಗಂಟೆಗಳ ಕಾಲ ತ್ವಚೆ ರಕ್ಷಣೆ ಮಾಡುವುದಿಲ್ಲ!

ಇಲ್ಲಿ ನಾವು ಸನ್ ಸ್ಕ್ರೀನ್ ಲೋಷನ್ ಕೆಲವೊಂದು ಮಾಹಿತಿಯನ್ನು ನೀಡಿದ್ದೇವೆ. ತ್ವಚೆ ಆರೈಕೆ ಬಗೆ ಗಮನ ಕೊಡುವವರು ಈ ಅಂಶಗಳನ್ನು ಗಮನಿಸುವುದು ಒಳ್ಳೆಯದು.

Facts About Sunscreens You Must Know

ಸನ್ ಸ್ಕ್ರೀನ್ ಒಂದು ಬಾರಿ ಹಚ್ಚಿದರೆ ಸಾಕೇ?

ಹೆಚ್ಚಿನವರು ಸನ್ ಸ್ಕ್ರೀನ್ ಲೋಷನ್ ಅನ್ನು ದಿನದಲ್ಲಿ ಒಂದು ಬಾರಿ ಮಾತ್ರ ಹಚ್ಚುತ್ತಾರೆ. ಇಷ್ಟು ಮಾಡಿದರೆ ಸಾಕಾಗುವುದಿಲ್ಲ. ಏಕೆಂದರೆ 24 ಗಂಟೆಗಳವರೆಗೆ ತ್ವಚೆ ರಕ್ಷಣೆ ಮಾಡುವುದಿಲ್ಲ. ಆದ್ದರಿಂದ ಬಿಸಿಲಿಗೆ ಹೋಗುವಾಗ ಪ್ರತೀ ಮೂರು ಗಂಟೆಗೊಮ್ಮೆ ಸನ್ ಸ್ಕ್ರೀನ್ ಲೋಷನ್ ಹಚ್ಚುವುದು ಒಳ್ಳೆಯದು.

ಈ ವರ್ಷ ಕೊಂಡ ಸನ್ ಸ್ಕ್ರೀನ್ ಲೋಷನ್ ಅನ್ನು ಮುಂದಿನ ವರ್ಷ ಬಳಸಬಹುದೇ?
ಈ ವರ್ಷ ಕೊಂಡ ಸನ್ ಸ್ಕ್ರೀನ್ ಲೋಷನ್ ಉಳಿದರೆ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ ಹಾಗೇ ಇಡಿ ಮುಂದಿನ ವರ್ಷ ಬಳಸಬಹುದು. ಸನ್ ಸ್ಕ್ರೀನ್ ಲೋಷನ್ ತಯಾರಿಸಿದ ದಿನದಂದ 3 ವರ್ಷದವರೆಗೆ ಬಳಸಬಹುದು. expiry date ಆದ ಸನ್ ಸ್ಕ್ರಿನ್ ಲೋಷನ್ ಬಳಸಬೇಡಿ.

ನೀರು ತಾಗಿದರೆ ಹೋಗದ ಸನ್ ಸ್ಕ್ರೀನ್ ಲೋಷನ್ ಬಳಸಿ
ಮಾರ್ಕೆಟ್ ಗೆ ಹೋಗಿ ಸನ್ ಸ್ಕ್ರಿನ್ ಲೋಷನ್ ಕೊಳ್ಲುವಾಗ SPF (sun protect factor) ಗಮನಿಸಿಕೊಳ್ಳಬೇಕು. ಅದರಲ್ಲೂ SPF 30 ಇರುವ ಸನ್ ಸ್ಕ್ರೀನ್ ಲೋಷನ್ ಬಳಸುವುದು ಒಳ್ಳೆಯದು. ಇದರಿಂದ ಬೆವರಿದರೂ ಸನ್ ಸ್ಕ್ರೀನ್ ಲೋಷನ್ ಹೋಗುವುದಿಲ್ಲ.

ತ್ವಚೆಗೆ ಸೂಕ್ತವಾದ ಸನ್ ಸ್ಕ್ರೀನ್ ಲೋಷನ್ ಬಳಸಿ
ಅನೇಕ ಬ್ರ್ಯಾಂಡ್ ನ ಸನ್ ಸ್ಕ್ರೀನ್ ಮಾರ್ಕೆಟ್ ನಲ್ಲಿದೆ, ಉತ್ತಮ ಗುಣ ಮಟ್ಟದ ಸನ್ ಸ್ಕ್ರೀನ್ ಲೋಷನ್ ಬಳಸಿ.

ಸನ್ ಸ್ಕ್ರಿನ್ ನಲ್ಲಿರುವ ವಿಧಗಳು
ಬಿಸಿಲಿನಿಂದ ತಲೆಕೂದಲಿನ ರಕ್ಷಣಗೆ ಸನ್ ಸ್ಕ್ರೀನ್ ಜೆಲ್, ದೇಹದ ರಕ್ಷಣಗೆ ಸನ್ ಸ್ಕ್ರೀನ್ ಲೋಷನ್, ಮುಖ ಟ್ಯಾನ್ ಆಗದಿರಲು ಸನ್ ಸ್ಕ್ರಿನ್ ಕ್ರೀಮ್ ಬಳಸಿ.

ಈ ಸನ್ ಸ್ಕ್ರೀನ್ ಲೋಷನ್ ಬೇರೆ ಏನಾದರೂ ಸಂದೇಹವಿದ್ದರೆ ನಮ್ಮನ್ನು ಕೇಳಬಹುದು.

English summary

Facts About Sunscreens You Must Know | Tips For Beauty | ಸನ್ ಸ್ಕ್ರಿನ್ ಬಗ್ಗೆ ಈ ಅಂಶಗಳು ತಿಳಿದಿರಲಿ | ಸೌಂದರ್ಯಕ್ಕಾಗಿ ಕೆಲ ಸಲಹೆಗಳು

We all think that sunscreens protects the skin whole day. However, there are some facts that you must know about sunscreens. For instance, sunscreens do not provide 24-hours protection. Shocking right? Check out more facts about sunscreens that you might not have been aware of.
X
Desktop Bottom Promotion