For Quick Alerts
ALLOW NOTIFICATIONS  
For Daily Alerts

ಯಾವ ಫೇಶಿಯಲ್ ಬ್ಲೀಚಿಂಗ್ ಒಳ್ಳೆಯದು?

By Super
|

ಪ್ರತಿಯೊಬ್ಬರೂ ತಮ್ಮ ಮುಖ ಸುಂದರವಾಗಿರಬೇಕು ಎಂದು ಬಯಸುತ್ತಾರೆ. ಮುಖದಲ್ಲಿ ಕಪ್ಪು ಕಲೆಗಳು, ನೆರಿಗೆಗಳು ಸೌಂದರ್ಯವನ್ನು ಹಾಳುಮಾಡುತ್ತದೆ. ಈ ಕಪ್ಪು ಕಲೆ ಹೋಗಲಾಡಿಸಿ ಮುಖದ ಅಂದ ಉಳಿಸಲು ಅನೇಕ ಮಾರ್ಗಗಳಿವೆ, ಅದರಲ್ಲೊಂದು ಬ್ಲೀಚಿಂಗ್ . ಬ್ಲೀಚಿಂಗ್ ಕಪ್ಪು ಕಲೆಗಳನ್ನು ಹೋಗಲಾಡಿಸಿ, ಮುಖದ ಬಿಳುಪನ್ನು ಹೆಚ್ಚಿಸುತ್ತದೆ. ಆದರೆ ಬ್ಲೀಚಿಂಗ್ ಮಾಡಿಸುವವರು ನಮ್ಮ ಮುಖಕ್ಕೆ ಹೊಂದಿಕೆಯಾಗುವ ಬ್ಲೀಚಿಂಗ್ ಮಾಡಿಕೊಳ್ಳುವುದು ಬಹಳ ಮುಖ್ಯ. ಬ್ಲೀಚಿಂಗ್ ಬಗ್ಗೆ ಹೆಚ್ಚಿನ ಮಾಹಿತಿಗೆ ಮುಂದೆ ಓದಿ.

ಬ್ಲೀಚಿಂಗ್ ವಿಧಗಳು

ಪೌಡರ್ ಬ್ಲೀಚ್: ಬ್ಲೀಚಿಂಗ್ ಪೌಡರ್ ಗೆ ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಅಮೋನಿಯಾ ಲಿಕ್ವಿಡ್ ಬಳಸಿ ತಯಾರಿಸುವ ಬ್ಲೀಚಿಂಗ್.

ಕ್ರೀಮ್ ಬ್ಲೀಚ್: ಇದು ಸಾಮಾನ್ಯವಾಗಿ ಎಲ್ಲಾ ಡ್ರಗ್ ಸ್ಟೋರ್ ಗಳಲ್ಲಿ ದೊರೆಯುತ್ತದೆ. ಸಾಕಷ್ಟು ಬ್ಯೂಟಿಪಾರ್ಲರ್ ಗಳಲ್ಲಿ ಇದನ್ನೇ ಉಪಯೋಗಿಸುತ್ತಾರೆ.

ಹೇಗೆ ಉಪಯೋಗಿಸಬೇಕು? ಮತ್ತು ಯಾರು ಯಾವ ಬ್ಲೀಚ್ ಉಪಯೋಗಿಸಬೇಕು ಎಂದು ತಿಳಿಯಲು ಮುಂದೆ ಓದಿ:

ಪೌಡರ್ ಬ್ಲೀಚ್

ಪೌಡರ್ ಬ್ಲೀಚ್

ಕಪ್ಪು ಕಲೆಗಳನ್ನು ಹೋಗಲಾಡಿಸಲು ಅಥವಾ ಮುಖದ ಕಾಂತಿ ಹೆಚ್ಚಿಸಲು ಎಂಬುದನ್ನು ನಿರ್ಧರಿಸಿ.

ಕಪ್ಪು ಕಲೆಗಳನ್ನು ಹೋಗಲಾಡಿಸಲು ಎಂದಾದರೆ ಅದು ಯಾವ ಜಾಗದಲ್ಲಿ ಕಲೆಗಳಿವೆಯೋ ಅಲ್ಲಿ ಮಾತ್ರ ಹಚ್ಚಿ,ಇದಕ್ಕೆ ಪೌಡರ್ ಬ್ಲೀಚ್ ಉತ್ತಮ.

ಕ್ರೀಂ ಬ್ಲೀಚಿಂಗ್

ಕ್ರೀಂ ಬ್ಲೀಚಿಂಗ್

ಮುಖದ ಕಾಂತಿ ಹೆಚ್ಚಿಸುವ ಉದ್ದೇಶ ನಿಮ್ಮದಾಗಿದ್ದರೆ ಕ್ರೀಂ ಬ್ಲೀಚ್ ಉಪಯೋಗಿಸಿ ಇದನ್ನು ಮುಖದ ತುಂಬಾ ಹಚ್ಚಿಕೊಳ್ಳಬಹುದು.

ಡಾರ್ಕ್ ಸ್ಪಾಟ್ ಹೆಚ್ಚಾಗಿದ್ದು ಯಾವ ಜಾಗದಲ್ಲಿ ಹಚ್ಚಬೇಕು ಎಂಬುದು ತಿಳಿಯದಿದ್ದಲ್ಲಿ ಕ್ರೀಂ ಬ್ಲೀಚಿಂಗ್ ಉಪಯೋಗಿಸುವುದು ಸೂಕ್ತ.

ನೈಸರ್ಗಿಕ ಬ್ಲೀಚಿಂಗ್ ಬೆಸ್ಟ್

ನೈಸರ್ಗಿಕ ಬ್ಲೀಚಿಂಗ್ ಬೆಸ್ಟ್

ಬ್ಲೀಚಿಂಗ್ ಅನ್ನು ಪ್ರತಿದಿನ ಮಾಡುವುದು ಒಳ್ಳೆಯದಲ್ಲ,ನಿಮ್ಮ ಮುಖದ ಕಲೆಗಳು ಮಾಯವಾದ ತಕ್ಷಣ ಇದರ ಬಳಕೆಯನ್ನು ನಿಲ್ಲಿಸಬೇಕು.ಇಲ್ಲದಿದ್ದರೆ ಇದು ನಿಮ್ಮ ಮುಖದ ಮೇಲೆ ಗಭೀರ ಪರಿಣಾಮ ಬೀರಬಹುದು. ಬೇರೆ ಎಲ್ಲದರಂತೆ ಇದನ್ನು ಕೂಡ ಹೆಚ್ಚು ಮಾಡಿದರೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಆದ್ದರಿಂದ ರಾಸಾಯನಿಕ ಅಂಶ ಬಳಸಿ ತಯಾರಿಸಿರುವ ಬ್ಲೀಚಿಂಗ್ ಗಿಂತ ಮನೆಯಲ್ಲಿಯೇ ಮಾಡಿಕೊಳ್ಳುವ ಬ್ಲೀಚಿಂಗ್ ಉತ್ತಮ.

ನಿಂಬು ಮತ್ತು ಜೇನು ನೈಸರ್ಗಿಕ ಬ್ಲೀಚ್ ಗಳಾಗಿವೆ

ನಿಂಬು ಮತ್ತು ಜೇನು ನೈಸರ್ಗಿಕ ಬ್ಲೀಚ್ ಗಳಾಗಿವೆ

ಇದನ್ನು ವಾರದಲ್ಲಿ ಒಮ್ಮೆ ಉಪಯೋಗಿಸಬಹುದು.

1)1 ಚಮಚ ಜೇನು

1 1/2 ಚಮಚ ಕ್ರೀಂ

1 ಚಮಚ ನಿಂಬೆ ಹಣ್ಣಿನ ರಸ

ವಿಧಾನ:

ಮೇಲೆ ಹೇಳಿದವನ್ನು ಚೆನ್ನಾಗಿ ಮಿಕ್ಸ್ ಮಾಡಿ,ಮುಖಕ್ಕೆ ಹಚ್ಚಿಕೊಳ್ಳಿ. ಒಣಗಲು ಬಿಡಿ ನಂತರ ಬಿಸಿ ನೀರಿನಲ್ಲಿ ಮುಖ ತೊಳೆಯಿರಿ.

2)ಚಿಟಕಿ ಅರಿಶಿನ ಪುಡಿ

2)ಚಿಟಕಿ ಅರಿಶಿನ ಪುಡಿ

ಒಂದೆರಡು ಹನಿ ನಿಂಬು ರಸ

ಸ್ವಲ್ಪ ರೋಸ್ ವಾಟರ್

ವಿಧಾನ:

ಮೇಲೆ ಹೇಳಿದ ಪದಾರ್ಥಗಳನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಒಣಗಿದ ನಂತರ ಬಿಸಿ ನೀರಿನಿಂದ ತೊಳೆದುಕೊಳ್ಳಬೇಕು.

3) 2 ಚಮಚ ಹಾಲು

3) 2 ಚಮಚ ಹಾಲು

ಒಂದು ಚಮಚ ನಿಂಬೆ ಹಣ್ಣಿನ ರಸ

ವಿಧಾನ:

ಇದನ್ನು ಮಿಕ್ಸ್ ಮಾಡಿ ಆಗ ಪೇಸ್ಟ್ ಆಗುತ್ತದೆ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ . ಮತ್ತು ಸ್ವಲ್ಪ ಹೊತ್ತಿನ ನಂತರ ಹದವಾದ ಬಿಸಿ ನೀರಿನಿಂದ ಮುಖ ತೊಳೆಯಿರಿ.

4)2 ಚಮಚ ಗಂಧದ ಪುಡಿ

4)2 ಚಮಚ ಗಂಧದ ಪುಡಿ

2 ಚಮಚ ನಿಂಬು ರಸ

2 ಚಮಚ ಸೌತೆಕಾಯಿ ರಸ

1 ಚಮಚ ಟೊಮೇಟೊ ರಸ

ವಿಧಾನ:

ಮೇಲೆ ಹೇಳಿದ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಮತ್ತು ಮುಖಕ್ಕೆ ಹಚ್ಚಿಕೊಳ್ಳಿ. ಒಣಗಲು ಬಿಡಿ,ನಂತರ ಬಿಸಿನೀರಿನಿಂದ ತೊಳೆಯಿರಿ.

English summary

Facts About Facial Bleaching

Everyone desires to have smooth glowing skin with no dark spots, wrinkles and freckles.Bleaching helps to eliminate these unwanted dark spots that gives you a boring look. Main factor is that there are complications in selecting the right one.
X
Desktop Bottom Promotion