For Quick Alerts
ALLOW NOTIFICATIONS  
For Daily Alerts

ಬ್ಲ್ಯಾಕ್ ಹೆಡ್ಸ್ ಹೋಗಲಾಡಿಸುವ 3 ಫೇಸ್ ಮಾಸ್ಕ್

|

ವಾರಕ್ಕೊಮ್ಮೆಯಾದರೂ ಫೇಸ್ ಮಾಸ್ಕ್ ಉಪಯೋಗಿಸುವುದು ತ್ವಚೆಗೆ ಒಳ್ಳೆಯದು. ಮಾರ್ಕೆಟ್ ನಲ್ಲಿ ಅನೇಕ ಬಗೆಯ ಫೇಸ್ ಮಾಸ್ಕ್ ದೊರೆಯುವುದಾದರರೂ ಇದನ್ನು ನೀವೇ ತಯಾರಿಸುವುದು ಒಳ್ಳೆಯದು. ಫೇಸ್ ಮಾಸ್ಕ್ ತಯಾರಿಸುವ ವಿಧಾನ ಕಷ್ಟವೇನಲ್ಲ.

ಇಲ್ಲಿ ನಾವು ಮುಖದಲ್ಲಿರುವ ಬ್ಲ್ಯಾಕ್ ಹೆಡ್ಸ್ ಹೋಗಲಾಡಿಸಲು ಕೆಲವು ನೈಸರ್ಗಿಕವಾದ ಫೇಸ್ ಮಾಸ್ಕ್ ಬಗ್ಗೆ ಹೇಳಿದ್ದೇವೆ ನೋಡಿ:

DIY Peel Off Masks To Try At Home

ಮೊಟ್ಟೆಯ ಬಿಳಿಯಿಂದ ಮಾಡಿ ಫೇಸ್ ಮಾಸ್ಕ್
ಮೊಟ್ಟೆಯ ಬಿಳಿಗೆ ಸಕ್ಕರೆ ಮಿಕ್ಸ್ ಮಾಡಿ ಅದನ್ನು ಮುಖಕ್ಕೆ ಹಚ್ಚಿ, ನಂತರ organic tissue ಪೇಪರ್ ಅನ್ನು ಮುಖಕ್ಕೆ ಅಂಟಿಸಿ ನಂತರ ಪುನಃ ಈ ಮೊಟ್ಟೆಯ ಮಿಶ್ರಣವನ್ನು ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ಟಿಶ್ಯೂ ಪೇಪರ್ ಅನ್ನು ಮೇಲ್ಮುಖವಾಗಿ ತೆಗೆಯಿರಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿದರೆ ಬ್ಲ್ಯಾಕ್ ಹೆಡ್ಸ್ ಕಡಿಮೆಯಾಗುವುದು.

ಗ್ರೀನ್ ಟೀ ಮತ್ತು ಲೆಮನ್ ಫೇಸ್ ಮಾಸ್ಕ್
ಮೊದಲು ಗ್ರೀನ್ ತಯಾರಿಸಿ ಅದಕ್ಕೆ ನಿಂಬೆ ರಸ ಹಿಂಡಿ ಮಿಕ್ಸ್ ಮಾಡಿ ನಂತರ ಅದಕ್ಕೆ ಜೆಲಾಟಿನ್ ಪುಡಿ(gelatin powder) ಮಿಕ್ಸ್ ಮಾಡಿ 30 ಸೆಕೆಂಡ್ ಬಿಸಿ ಮಾಡಿ, ನಂತರ ಮತ್ತೊಮ್ಮೆ ತಿರುಗಿಸಿ, ನಂತರ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ಆ ಪದರ ತೆಗೆದು ಮುಖ ತೊಳೆಯಿರಿ. ಪೀಲ್ ಮಾಡುವಾಗ ಮೇಲ್ಮುಖವಾಗಿ ಮಾಡಿ.

ಕಿತ್ತಳೆಯ ಫೇಸ್ ಮಾಸ್ಕ್
ಕಿತ್ತಳೆ ಸಿಪ್ಪೆಯನ್ನು ಒನಗಿಸಿ, ಪುಡಿ ಮಾಡಿಡಬೇಕು. ಕಿತ್ತಳೆಯ ಫೇಸ್ ಮಾಸ್ಕ್ ಮಾಡಲು ಅರ್ಧ ಕಪ್ ನೀರನ್ನು ಕುದಿಸಬೇಕು, ನಂತರ ಸ್ವಲ್ಪ ಸಕ್ಕರೆಯನ್ನು ಆ ನೀರಿಗೆ ಹಾಕಿ, ಕರಗಿಸಿದ ಬಳಿಕ ಈ ಕಿತ್ತಳೆ ಸಿಪ್ಪೆಯ ಪುಡಿ 2 ಚಮಚದಷ್ಟು ಹಾಕಿ ಕಲೆಸಿ ಮುಖಕ್ಕೆ ಹಚ್ಚಬೇಕು. ನಂತರ 10 ನಿಮಿಷದ ಬಳಿಕ ಪೀಲ್ ಮಾಡಿ ಮುಖ ತೊಳೆಯಿರಿ.

ಈ ಫೇಸ್ ಮಾಸ್ಕ್ ಅನ್ನು ನಿರಂತರವಾಗಿ ಮಾಡುತ್ತಿದ್ದರೆ ಬ್ಲ್ಯಾಕ್ ಹೆಡ್ಸ್ ಸಮಸ್ಯೆ ಬರುವುದಿಲ್ಲ.

English summary

DIY Peel Off Masks To Try At Home

DIY peel off mask are the best to remove blackheads from your skin. These DIY peel off masks are best because they are natural. To remove blackheads and dead skin cells from your face, you need some doable face mask recipes.
X
Desktop Bottom Promotion