For Quick Alerts
ALLOW NOTIFICATIONS  
For Daily Alerts

ಸೆನ್ಸಿಟಿವ್ ಸ್ಕಿನ್ ನಿಮ್ಮದಾಗಿದ್ದರೆ ಫೇಶಿಯಲ್ ಮಾಡಬೇಡಿ

|

ಸ್ಕಿನ್ ಕೇರ್ ನಲ್ಲಿ ನಾವೆಲ್ಲಾ ಮಾಡುವ ಪ್ರಮುಖ ತಪ್ಪೆಂದರೆ ನಮ್ಮ ತ್ವಚೆಯ ಗುಣದ ಬಗ್ಗೆ ತಿಳಿದುಕೊಳ್ಳದೆಯೇ ಆರೈಕೆ ಮಾಡುವುದು. ಅದರಲ್ಲೂ ನಮ್ಮ ಫ್ರೆಂಡ್ಸ್ "ಈ ಕ್ರೀಮ್ ತುಂಬಾ ಚೆನ್ನಾಗಿದೆ, ಈ ಫೇಶಿಯಲ್ ಮಾಡಿಸಿದ ಬಳಿಕ ನನ್ನ ಮುಖ ಚೆನ್ನಾಗಿ ಆಯ್ತು" ಎಂದು ಹೇಳಿದರೆ ನಾವೂ ಅದನ್ನೇ ಮಾಡಿಸುತ್ತೇವೆ. ಇಲ್ಲೇ ನಾವು ಮಾಡುವುದು ತಪ್ಪನ್ನು!

ಎಣ್ಣೆ ತ್ವಚೆ ಇರುವವರು ಡ್ರೈ ಸ್ಕಿನ್ ಗೆ ಹಚ್ಚುವ ಕ್ರೀಮ್ ಹಚ್ಚಿದರೆ ಎಣ್ಣೆಯಂಶ ಮತ್ತಷ್ಟು ಹೆಚ್ಚಾಗುವುದು. ಇನ್ನು ಸೆನ್ಸಿಟಿವ್ ಸ್ಕಿನ್ ಇರುವವರಂತೂ ತ್ವಚೆ ಆರೈಕೆಯಲ್ಲಿ ಇತರರಿಗಿಂತ ಸ್ವಲ್ಪ ಅಧಿಕವೇ ಗಮನಕೊಡಬೇಕು. ಇಲ್ಲದಿದ್ದರೆ ಸ್ಕಿನ್ ಹಾಳಾಗುವುದು. ಇಲ್ಲಿ ನಾವು ಸೆನ್ಸಿಟಿವ್ ಸ್ಕಿನ್ ಇರುವವರು ತ್ವಚೆ ಆರೈಕೆಯಲ್ಲಿ ಏನು ಮಾಡಬೇಕು, ಏನನ್ನು ಮಾಡಬಾರದೆಂದು ವಿವರಿಸಿದ್ದೇವೆ ನೋಡಿ:

 ಸ್ಕ್ರಬ್

ಸ್ಕ್ರಬ್

ಸೆನ್ಸಿಟಿವ್ ತ್ವಚೆಯವರು ಸ್ಕ್ರಬ್ ಮಾಡದಿರುವುದು ಬೆಸ್ಟ್. ಸ್ಟ್ರಾಬೆರಿ, ಅಕ್ಕಿ ಹಿಟ್ಟು ಇವುಗಳಿಂದ ಸ್ಕ್ರಬ್ ಮಾಡಬಹುದು.

 ಸ್ಕ್ರಬ್

ಸ್ಕ್ರಬ್

ಸೆನ್ಸಿಟಿವ್ ತ್ವಚೆಯವರು ಸ್ಕ್ರಬ್ ಮಾಡದಿರುವುದು ಬೆಸ್ಟ್. ಸ್ಟ್ರಾಬೆರಿ, ಅಕ್ಕಿ ಹಿಟ್ಟು ಇವುಗಳಿಂದ ಸ್ಕ್ರಬ್ ಮಾಡಬಹುದು.

ಮೃದುವಾದ ಟವಲ್ ಬಳಸಿ

ಮೃದುವಾದ ಟವಲ್ ಬಳಸಿ

ಮುಖವನ್ನು ಒರೆಸಲು ಮೃದುವಾದ ಟವಲ್ ಬಳಸಿ. ಬೆವರು, ದೂಳು ಮುಖದಲ್ಲಿ ಕೂರದಂತೆ ದಿನದಲ್ಲಿ 2-3 ಬಾರಿ ಮುಖ ತೊಳೆಯಿರಿ..

ಮಿತಿ ಮೀರಿ ಮುಖ ತೊಳೆಯಬೇಡಿ

ಮಿತಿ ಮೀರಿ ಮುಖ ತೊಳೆಯಬೇಡಿ

ಆಗಾಗ ಮುಖ ತೊಳೆಯುವ ಅಭ್ಯಾಸ ಒಳ್ಳೆಯದಲ್ಲ, ಇದು ನಿಮ್ಮ ತ್ವಚೆಯನ್ನು ಒರಟಾಗಿಸುತ್ತದೆ. ದಿನದಲ್ಲಿ 2 ಬಾರಿ ಮಾತ್ರ ಫೇಸ್ ವಾಶ್ ಅಥವಾ ಸೋಪು ಹಾಕಿ ಮುಖ ತೊಳೆಯಿರಿ, ನಂತರ ತೊಳೆಯುವುದಾದರೆ ಬರೀ ನೀರು ಹಾಕಿ ಮುಖ ತೊಳೆಯಿರಿ.

ಈ ಅಂಶಗಳಿಲ್ಲದ ಕ್ರೀಮ್ ಬಳಸಿ

ಈ ಅಂಶಗಳಿಲ್ಲದ ಕ್ರೀಮ್ ಬಳಸಿ

ಆಲ್ಕೋಹಾಲ್, ಯೂರಿಯಾ, ಲ್ಯಾಕ್ಟಿಕ್ ಈ ರೀತಿಯ ಕೆಮಿಕಲ್ ಇಲ್ಲದ ಕ್ರೀಮ್ ಬಳಸಿ. ಸೆನ್ಸಿಟಿವ್ ಸ್ಕಿನ್ ಗಾಗಿಯೇ ತಯಾರಿಸಿದ ಕ್ರೀಮ್ ಬಳಸುವುದು ಒಳ್ಳೆಯದು.

ಸುಗಂಧ ವಾಸನೆಯ ಬ್ಯೂಟಿ ಪ್ರಾಡಕ್ಟ್ ಬಳಸಬೇಡಿ

ಸುಗಂಧ ವಾಸನೆಯ ಬ್ಯೂಟಿ ಪ್ರಾಡಕ್ಟ್ ಬಳಸಬೇಡಿ

ಅಧಿಕ ಸುಗಂಧ ವಾಸನೆಯ ಬ್ಯೂಟಿ ಪ್ರಾಡಕ್ಟ್ ಸ್ಕಿನ್ ಕೇರ್ ಗೆ ಒಳ್ಳೆಯದಲ್ಲ, ಅದರಲ್ಲೂ ಸೆನ್ಸಿಟಿವ್ ಸ್ಕಿನ್ ನವರು ಈ ಸಾಧನಗಳನ್ನು ಬಳಸದಿರುವುದು ಒಳ್ಳೆಯದು.

 ಅಧಿಕ ಬ್ಲೀಚಿಂಗ್ ಅಂಶವಿಲ್ಲದ ಸೋಪ್

ಅಧಿಕ ಬ್ಲೀಚಿಂಗ್ ಅಂಶವಿಲ್ಲದ ಸೋಪ್

ಸೋಪ್ ನಲ್ಲಿ ಅಧಿಕ ಬ್ಲೀಚಿಂಗ್ ಅಂಶ ಇಲ್ಲದಿರುವ ಸೋಪ್ ಅನ್ನು ಆಯ್ಕೆ ಮಾಡಿ. ಅಧಿಕ ಬ್ಲೀಚಿಂಗ್ ಅಂಶ ಇದ್ದರೆ ಸ್ಕಿನ್ ರಿಯಾಕ್ಷನ್ ಉಂಟಾಗಬಹುದು.

ಕಾಲಕ್ಕೆ ತಕ್ಕಂತೆ ತ್ಚಚೆಯ ಆರೈಕೆ

ಕಾಲಕ್ಕೆ ತಕ್ಕಂತೆ ತ್ಚಚೆಯ ಆರೈಕೆ

ಎಲ್ಲಾ ಸಮಯದಲ್ಲಿ ಒಂದೇ ರೀತಿಯಲ್ಲಿ ತ್ವಚೆ ಆರೈಕೆ ಮಾಡುವುದು ಸರಿಯಲ್ಲ, ಕಾಲಕ್ಕೆ ತಕ್ಕಂತೆ ತ್ವಚೆ ಆರೈಕೆ ಮಾಡಿದರೆ ಮಾತ್ರ ತ್ವಚೆ ಆರೋಗ್ಯಕರವಾಗಿರುವುದು.

ಫೇಶಿಯಲ್, ಬ್ಲೀಚಿಂಗ್ ಮಾಡಿಸಬೇಡಿ

ಫೇಶಿಯಲ್, ಬ್ಲೀಚಿಂಗ್ ಮಾಡಿಸಬೇಡಿ

ಸೂಕ್ಷ್ಮ ತ್ವಚೆಯವರು ಫೇಶಿಯಲ್, ಬ್ಲೀಚಿಂಗ್ ಮಾಡಿಸದಿರುವುದು ಒಳ್ಳೆಯದು. ನೀವೇ ಹಣ್ಣುಗಳನ್ನು ಬಳಸಿ ಫೇಶಿಯಲ್ ಮಾಡಬಹುದು.

ಬಿಸಿಲಿಗೆ ಹೋಗುವಾಗ ತ್ವಚೆ ರಕ್ಷಣೆಯ ವಿಧಾನಗಳನ್ನು ಅನುಸರಿಸಿ

ಬಿಸಿಲಿಗೆ ಹೋಗುವಾಗ ತ್ವಚೆ ರಕ್ಷಣೆಯ ವಿಧಾನಗಳನ್ನು ಅನುಸರಿಸಿ

ಸೆನ್ಸಿಟಿವ್ ತ್ವಚೆಯವರು ಬಿಸಿಲಿನಲ್ಲಿ ಸ್ವಲ್ಪ ಹೊತ್ತು ನಿಂತರೂ ಮುಖ ಕಂದು ಬಣ್ಣಕ್ಕೆ ತಿರುಗುವುದು, ತುಂಬಾ ಹೊತ್ತು ತಿರುಗಾಡಿದರೆ ಮುಖ ಪೂರ್ತಿ ಕಪ್ಪಾಗಿ, ತ್ವಚೆ ನೈಜ ಬಣ್ಣಕ್ಕೆ ಬರಲು 1-2 ವಾರ ಹಿಡಿಯಬಹುದು. ಆದ್ದರಿಂದ ಬಿಸಿಲಿಗೆ ಹೋಗುವಾಗ ಕೊಡೆ ಹಿಡಿಯುವುದು ಒಳ್ಳೆಯದು.

English summary

Care For Your Sensitive Skin Naturally!

Sensitive skin needs to be treated with a lot of care since the skin is delicate and more applicable to skin rashes too. If you have sensitive skin, here are some of the natural ways to look after it.
X
Desktop Bottom Promotion