For Quick Alerts
ALLOW NOTIFICATIONS  
For Daily Alerts

ಮೃದು ತ್ವಚೆಗಾಗಿ ಟಿಪ್ಸ್-ಪುರುಷರಿಗೆ ಮಾತ್ರ

|

ಶೇವ್ ಮಾಡುವುದರಿಂದ ಪುರುಷರ ಮುಖ ಒರಟಾಗಿರುತ್ತದೆ. ತ್ವಚೆ ತುಂಬಾ ಒರಟಾದರೆ ಮುಖದ ಕಾಂತಿ ಕಮ್ಮಿಯಾಗುವುದು. ಆದ್ದರಿಂದ ಶೇವ್ ಮಾಡಿದ ನಂತರ ಜೆಲ್ ಅಥವಾ ಮಾಯಿಶ್ಚರೈಸರ್ ಹಚ್ಚಬೇಕು.

ಶೇವ್ ಮಾಡಿದ ನಂತರ ಮಾಯಿಶ್ಚರೈಸರ್ ಹಚ್ಚಿದರೆ ತ್ವಚೆಯ ಉರಿ ಕಡಿಮೆಯಾಗುತ್ತದೆ ಹಾಗೂ ಮುಖದ ಹೊಳಪು ಹೆಚ್ಚುವುದು. ಅದರಲ್ಲೂ ಈ ಕೆಳಗಿನ ವಸ್ತುಗಳು ಪುರುಷರ ತ್ವಚೆಯ ಮೃದುತ್ವವನ್ನು ಕಾಪಾಡುತ್ತವೆ.

Best Homemade Aftershave For Men

ಲೋಳೆಸರ: ಶೇವ್ ಮಾಡಿದ ನಂತರ ಲೋಳೆಸರವನ್ನು ಹಚ್ಚಿದರೆ ತ್ವಚೆ ಮೃದುವಾಗುತ್ತದೆ, ಕಣ್ಣಿನ ಸುತ್ತ ಕಪ್ಪು ಕಲೆಗಳಿದ್ದರೆ ಕಡಿಮೆಯಾಗುತ್ತದೆ.

ಟೀ ಟ್ರೀ ಎಣ್ಣೆ: ಪ್ರತೀದಿನ ಈ ಎಣ್ಣೆಯನ್ನು ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಬೇಕು. ಈ ರೀತಿ ಮುಖದ ತ್ವಚೆ ಮೃದುವಾಗುವುದು, ಮುಖದಲ್ಲಿರುವ ಕಲೆಗಳನ್ನು ಹೋಗಲಾಡಿಸುತ್ತದೆ.

ಆಲೀವ್ ಎಣ್ಣೆ: ಶೇವ್ ಮಾಡಿದ ಬಳಿಕ ಮಾಯಿಶ್ಚರೈಸರ್ ಆಗಿ ಆಲೀವ್ ಎಣ್ಣೆಯನ್ನು ಕೂಡ ಬಳಸಬಹುದು.

ಮೃದು ತ್ವಚೆಗಾಗಿ ಈ ವಿಧಾನವನ್ನೂ ಅನುಸರಿಸಬಹುದು:

* ಬಾಳೆ ಹಣ್ಣನ್ನು ಮುಖದ ಮೇಲೆ ತಿಕ್ಕಿ ನಂತರ 10 ನಿಮಿಷ ಬಿಟ್ಟು ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು. ಈ ರೀತಿ ಮಾಡಲು ತುಂಬಾ ಹಣ್ಣಾದ ಬಾಳೆ ಹಣ್ಣನ್ನು ಬಳಸಿ.

* ಮುಖದ ಬಿಳುಪು ಹೆಚ್ಚಿಸಲು ಬಾದಾಮಿ, ಕಹಿ ಬೇವಿನ ಎಲೆ, ಚಂದನ, ಮತ್ತು ಸ್ವಲ್ಪ ಗಸೆಗಸೆ ಇವೆಷ್ಟನ್ನೂ ಚೆನ್ನಾಗಿ ಅರೆದು ಪೇಸ್ಟ್ ರೀತಿ ಮಾಡಿ ಮುಖಕ್ಕೆ ಹಚ್ಚಬೇಕು. ನಂತರ ಒಣಗಿದ ಮೇಲೆ ಈ ಫೇಸ್ ಮಾಸ್ಕ್ ಅನ್ನು ಕೈಯಿಂದ ಮುಖವನ್ನು ವೃತ್ತಾಕಾರವಾಗಿ ಉಜ್ಜುತ್ತಾ ತೆಗೆಯಬೇಕು. ನಂತರ ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು.

* ವಾರಕ್ಕೊಮ್ಮೆ ಸೌತೆಕಾಯಿಯನ್ನು ಪೇಸ್ಟ್ ರೀತಿ ಮಾಡಿ ಅದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ ಮಿಶ್ರ ಮಾಡಿ ಮುಖ ಮತ್ತು ಮೈಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಮುಖ ತೊಳೆಬೇಕು. ಈ ರೀತಿ ಮಾಡಿ ನಿಮ್ಮ ತ್ವಚೆ ಕಾಂತಿ ಹೆಚ್ಚುವುದು.

English summary

Best Homemade Aftershave For Men | Tips For Skin Care | ಶೇವ್ ಮಾಡಿದ ತಕ್ಷಣ ಹಚ್ಚಲು ಬೆಸ್ಟ್ ನೈಸರ್ಗಿಕ ಮಾಯಿಶ್ಚರೈಸರ್ | ತ್ವಚೆ ಆರೈಕೆಗೆ ಕೆಲ ಸಲಹೆಗಳು

Aftershave contains very little amount of alcohol and spices. So, why buy from market? Here are few homemade aftershaves that you can easily make without using too many ingredients.
 
 
X
Desktop Bottom Promotion