For Quick Alerts
ALLOW NOTIFICATIONS  
For Daily Alerts

ಲೋಳೆಸರದ ಈ ಗುಣಗಳು ನಿಮ್ಮ ಕ್ರೀಮ್ ನಲ್ಲಿ ಇದೆಯೇ?

|

ನಮಗೆ ಯಾವತ್ತೂ ಹಿತ್ತಲ ಗಿಡ ಮದ್ದಲ್ಲ ! ಅದರ ಬಗ್ಗೆ ಗಮನ ಹರಿಸುವುದೇ ಇಲ್ಲ. ಸೌಂದರ್ಯ ವರ್ಧಕ ವಿಷಯದಲ್ಲೂ ಹಾಗೇ ಮಾಡುತ್ತೇವೆ. ದುಬಾರಿಯಾದ ಕ್ರೀಮ್ ಹಚ್ಚಿದರೆ ಮಾತ್ರ ನಮ್ಮ ಸೌಂದರ್ಯ ವೃದ್ಧಿಸುವುದು ಎಂದು ಭಾವಿಸುತ್ತೇವೆ, ಆದರೆ ಅವುಗಳಿಗಿಂತ ಉಪಯುಕ್ತವಾದ ಗುಣ ನೈಸರ್ಗಿಕ ವಸ್ತುಗಳಲ್ಲಿ ಇರುತ್ತವೆ. ಅಂತಹವುಗಳಲ್ಲಿ ಲೋಳೆಸರ, ಅರಿಶಿಣ ಈ ರೀತಿಯ ವಸ್ತುಗಳು ಪ್ರಮುಖವಾದದು.

ಲೋಳೆಸರವನ್ನು ಮನೆಯಲ್ಲಿ ಸುಲಭವಾಗಿ ಬೆಳೆಸಬಹುದು. ಮನೆಯಲ್ಲಿ ತುಂಬಾ ಸ್ಥಳಾವಕಾಶ ಇಲ್ಲದಿದ್ದರೂ , ಇದನ್ನು ಚಿಕ್ಕ ಹೂ ಕುಂಡದಲ್ಲೂ ಬೆಳೆಯಬಹುದು. ಈ ಲೋಳೆಸರವನ್ನು ಬಳಸುವುದರಿಂದ ಆರೋಗ್ಯ ಮತ್ತು ಸೌಂದರ್ಯ ಎರಡನ್ನೂ ವೃದ್ಧಿಸಿಕೊಳ್ಳಬಹುದು.

ಇಲ್ಲಿ ನಾನು ಲೋಳೆಸರದ ಸೌಂದರ್ಯವರ್ಧಕ ಗುಣಗಳ ಬಗ್ಗೆ ತಿಳಿಸಿರುವೆ. ನೋಡಿ.

Benefits Of Aloe Vera Gel On Skin

ಮೊಡವೆ ನಿವಾರಕ: ಹದಿಹರೆಯದ ಪ್ರಾಯದವರು ಲೋಳೆಸರವನ್ನು ಪ್ರತಿನಿತ್ಯ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆ ಬರುವುದನ್ನು ತಡೆಗಟ್ಟಬಹುದು. ಅಲ್ಲದೆ ಇದು ಮುಖದಲ್ಲಿ ಕಲೆ ಬೀಳದಂತೆ ನೋಡಿಕೊಂಡು ತ್ವಚೆಯನ್ನು ಮೃದುವಾಗಿಸುತ್ತದೆ.

ಮಾಯಿಶ್ಚರೈಸರ್: ಇದರಿಂದ ಮಾಯಿಶ್ಚರುಸರ್ ಮಾಡಿದರೆ ತ್ವಚೆ ಬಿಗಿಯಾಗುವುದು ಹಾಗೂ ತ್ವಚೆ ಒರಟಾಗದಂತೆ ಕಾಪಾಡುತ್ತದೆ. ಅಲ್ಲದೆ ತ್ವಚೆಯ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ, ಮಾಯಿಶ್ಚರೈಸರ್ ಗೆ ಇದನ್ನೇ ಬಳಸಿದರೆ ವಯಸ್ಸು 50 ಆದರೂ 30 ಹರೆಯದವರಂತೆ ಕಾಣುವಿರಿ.

ಶೇವ್ ಬಳಿಕ:
ಪುರುಷರು ಶೇವ್ ಮಾಡಿದ ನಂತರ ಇದನ್ನು ಹಚ್ಚುವುದರಿಂದ ಮುಖ ತುಂಬಾ ಒರಟಾಗುವುದನ್ನು ತಡೆಯಬಹುದು.

ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸುತ್ತದೆ: ಗರ್ಭಿಣಿಯಾದಾಗ ಸ್ಟ್ರೆಚ್ ಮಾರ್ಕ್ಸ್ ಬೀಳುತ್ತದೆ, ಆದ್ದರಿಂದ ಗರ್ಭಾವಸ್ಥೆಯಲ್ಲಿ ಹೊಟ್ಟೆ ಲೋಳೆಸರ ಹಚ್ಚಿದರೆ ಸ್ಟ್ರೆಚ್ ಮಾರ್ಕ್ಸ್ ಬೀಳುವುದಿಲ್ಲ ಹಾಗೂ ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ.

ಸನ್ ಬರ್ನ್: ಸನ್ ಬರ್ನ್ ಆದರೆ ಆ ಭಾಗಕ್ಕೆ ಲೋಳೆ ಸರ ಹಚ್ಚಿ ತ್ವಚೆ ಆರೈಕೆ ಮಾಡಬಹುದು.

ಕೂದಲು: ಇದನ್ನು ಕೂದಲಿಗೆ ಹಚ್ಚಿದರೆ ಸೊಂಪಾದ ಕೂದಲನ್ನು ಪಡೆಯಬಹುದು.

ಈಗ ಹೇಳಿ ಯಾವ ಕ್ರೀಮ್ ನಲ್ಲಿ ಈ ಎಲ್ಲಾ ಗುಣಗಳನ್ನು ಪಡೆಯಲು ಸಾಧ್ಯ?

English summary

Benefits Of Aloe Vera Gel On Skin | Tips For skin Care | ಲೋಳೆಸರದ ಪ್ರಯೋಜನಗಳು | ತ್ವಚೆ ಆರೈಕೆಗೆ ಕೆಲ ಸಲಹೆಗಳು

Aloe vera gel is the extract of the plant leaves that is very commonly used as a beauty product. Aloe vera gel cures sun damage on the skin and also helps get a flawless skin. Check out other skin benefits of aloe vera gel.
X
Desktop Bottom Promotion