For Quick Alerts
ALLOW NOTIFICATIONS  
For Daily Alerts

ಇವುಗಳು ಇರುವಾಗ ಸನ್ ಟ್ಯಾನ್ ಭಯವೇಕೆ?

|

ಕಾಲಕ್ಕೆ ತಕ್ಕಂತೆ ಡಯಟ್ ನಲ್ಲಿ ಮಾತ್ರ ವ್ಯತ್ಯಾಸ ಮಾಡಿದರೆ ಸಾಲದು ಸೌಂದರ್ಯ ವರ್ಧಕಗಳನ್ನು ಬಳಸಬೇಕು. ಚಳಿಗಾಲದಲ್ಲಿ ಒಡೆಯದಂತೆ ತ್ವಚೆಯನ್ನು ಸಂರಕ್ಷಿಸುವ ಕ್ರೀಮ್ ಬಳಸಿದರೆ, ಬೇಸಿಗೆಯಲ್ಲಿ ಸನ್ ಟ್ಯಾನ್ ತಡೆಯುವ ಸೌಂದರ್ಯವರ್ಧಕಗಳನ್ನು ಬಳಸಬೇಕು.

ತ್ವಚೆ ರಕ್ಷಣೆಗೆ ತುಂಬಾ ದುಡ್ಡು ಖರ್ಚು ಮಾಡುವ ಬದಲು ಸಾಕಷ್ಟು ಸೌಂದರ್ಯವರ್ಧಕಗಳು ನಮ್ಮ ಮನೆಯಲ್ಲಿಯೇ ಇರುತ್ತವೆ. ಅವುಗಳನ್ನು ಬಳಸಿ ನಿಮ್ಮ ತ್ವಚೆಯನ್ನು ಸಂರಕ್ಷಿಸಬಹುದು. ಅಲ್ಲದೆ ನೈಸರ್ಗಿಕವಾದ ಸೌಂದರ್ಯವರ್ಧಗಳು ತ್ವಚೆ ರಕ್ಷಣೆ ಮಾಡುವಲ್ಲಿ ಯಾವ ಕ್ರೀಮ್ ಗೂ ಕಮ್ಮಿಯಿಲ್ಲ.

ಇಲ್ಲಿ ನಾವು ಬೇಸಿಗೆಯಲ್ಲಿ ತ್ವಚೆ ರಕ್ಷಣೆ ಮಾಡುವ ಕೆಲವು ನೈಸರ್ಗಿಕವಾದ ಸೌಂದರ್ಯವರ್ಧಕಗಳ ಬಗ್ಗೆ ಹೇಳಿದ್ದೇವೆ ನೋಡಿ:

ರೋಸ್ ವಾಟರ್

ರೋಸ್ ವಾಟರ್

ಹೊರಗಡೆ ಸುತ್ತಾಡಿ ಬಂದ ಮೇಲೆ ಸ್ವಲ್ಪ ಹತ್ತಿಯನ್ನು ರೋಸ್ ವಾಟರ್ ನಲ್ಲಿ ಅದ್ದಿ ಅದರಿಂದ ಮುಖವನ್ನು ಕ್ಲೆನ್ಸ್ ಮಾಡಿ. ಈ ರೀತಿ ಮಾಡಿದರೆ ಮುಖದಲ್ಲಿ ಅಂಟಿದ ಕಣ್ಣಿಗೆ ಕಾಣದ ದೂಳನ್ನು ಹೋಗಲಾಡಿಸಿ, ತ್ವಚೆ ಹಾಳಾಗದಂತೆ ರಕ್ಷಣೆ ಮಾಡುತ್ತದೆ.

ಐಸ್ ಮಸಾಜ್

ಐಸ್ ಮಸಾಜ್

ಬಿಸಿಲಿನಲ್ಲಿ ಸುತ್ತಾಡಿದರೆ ಮನೆಗೆ ಬಂದ ತಕ್ಷಣ ಐಸ್ ಮಸಾಜ್ ಮಾಡಿ. ಇದು ಸನ್ ಟ್ಯಾನ್ ಉಂಟಾಗದಂತೆ ತಡೆಯುತ್ತದೆ. ಅಲ್ಲದೆ ಇದು ಮೊಡವೆಯನ್ನು ಹೋಗಲಾಡಿಸುತ್ತದೆ, ಮುಖ ಕಪ್ಪಾಗದಂತೆ ತಡೆಯುತ್ತದೆ.

 ಗಂಧದ ಪುಡಿ

ಗಂಧದ ಪುಡಿ

ಈ ಬೇಸಿಗೆಯಲ್ಲಿ ಫೇಸ್ ಪ್ಯಾಕ್ ಮಾಡಲು ಗಂಧದ ಪುಡಿ ಬಳಸುವುದು ಒಳ್ಳೆಯದು. ಇದು ತ್ವಚೆಯನ್ನು ತುಂಬಾ ತಂಪಾಗಿಸುತ್ತದೆ. ಈ ಪುಡಿಯನ್ನು ಮೊಸರು ಅಥವಾ ಹಾಲಿನ ಜೊತೆ ಮಿಶ್ರಣ ಮಾಡಿ ಹಚ್ಚಿದರೆ ಹೆಚ್ಚಿನ ಗುಣ ಪಡೆಯಬಹುದು.

ಮಾವಿನ ಹಣ್ಣು

ಮಾವಿನ ಹಣ್ಣು

ಇದನ್ನು ತಿಂದರೆ ಆರೋಗ್ಯಕ್ಕೆ , ತ್ವಚೆಗೆ ಒಳ್ಳೆಯದು. ಮುಖದ ಹೊಳಪನ್ನು ಹೆಚ್ಚಿಸಲು ಇದರಿಂದ ಫೇಶಿಯಲ್ ಮಾಡಬಹುದು.

ಸ್ಟ್ರಾಬೆರಿ

ಸ್ಟ್ರಾಬೆರಿ

ಪ್ರತೀದಿನಾ ಸ್ಟ್ರಾಬೆರಿ ತಿಂದರೆ ಯೌವನದ ಕಳೆ ಬೇಗನೆ ಮಾಸುವುದಿಲ್ಲ. ಇದರಿಂದ ಫೇಶಿಯಲ್ ಮಾಡಿದರೆ ಮುಖದ ಬಿಳುಪು ಹೆಚ್ಚುವುದು.

ಟೊಮೆಟೊ

ಟೊಮೆಟೊ

ಮೊಡವೆ ಹಾಗೂ ಮುಖದಲ್ಲಿರುವ ಕಪ್ಪು ಕಲೆಯನ್ನು ಹೋಗಲಾಡಿಸಲು ಪ್ರತೀದಿನ ಟೊಮೆಟೊವನ್ನು ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಮುಖ ತೊಳೆದರೆ ಸಾಕು.

 ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಇದು ಅನೇಕ ಆರೋಗ್ಯಕರ ಗುಣವನ್ನು ಹೊಂದಿದ್ದು, ಇದನ್ನು ತಿಂದರೆ ಅಥವಾ ಇದರ ಜ್ಯೂಸ್ ಕುಡಿದರೆ ಮುಖದಲ್ಲಿ ತಾಜಾತನ ಹೆಚ್ಚುವುದು.

ಸೌತೆಕಾಯಿ

ಸೌತೆಕಾಯಿ

ಕಣ್ಣಿನ ಸುತ್ತ ಕಪ್ಪು ಕಲೆ ಬಿದ್ದಿದ್ದರೆ ಸೌತೆಕಾಯಿ ಪೇಸ್ಟ್ ಹಚ್ಚುತ್ತಾ ಬನ್ನಿ, ಕೆಲವೇ ದಿನಗಳಲ್ಲಿ ಕಲೆ ಮಾಯವಾಗುವುದು.

 ಹಾಲು

ಹಾಲು

ಹಾಲು ಡ್ರೈ ಸ್ಕಿನ್ ವಿರುದ್ಧ ಹೋರಾಡುತ್ತದೆ, ಮುಖದಲ್ಲಿ ಮಾಯಿಶ್ಚರೈಸರ್ ಇರುವಂತೆ ನೋಡಿಕೊಳ್ಳುತ್ತದೆ. ತ್ವಚೆ ಡ್ರೈಯಾಗುವವರು ಹಾಲಿನಿಂದ ಪ್ರತೀದಿನ ಕ್ಲೆನ್ಸಿಂಗ್ ಮಾಡುವುದು ಒಳ್ಳೆಯದು.

 ಮೊಸರು

ಮೊಸರು

ಮೊಸರು ಸನ್ ಟ್ಯಾನ್ ಹೋಗಲಾಡಿಸುತ್ತದೆ, ತ್ವಚೆಯಲ್ಲಿ ಮಾಯಿಶ್ಚರೈಸರ್ ಕಾಪಾಡುತ್ತದೆ. ಕೂದಲಿಗೆ ಕಂಡೀಷನರ್ ಆಗಿ ಕೂಡ ಬಳಸಬಹುದು.

<blockquote class="twitter-tweet blockquote"><p>ಕೂದಲಿನ ಸಮಸ್ಯೆಗಳಿಗೆನೆಲ್ಲಿಕಾಯಿ ಎಣ್ಣೆಪರಿಹಾರವೇ? <a href="http://t.co/wrC9z9XEtt" title="/beauty/hair-care/2013/hair-care-with-amla-005123.html">kannada.boldsky.com/beauty/hair-ca…</a> <a href="https://twitter.com/search/%23Hair">#Hair</a></p>— Boldsky Kannada (@BoldskyKa) <a href="https://twitter.com/BoldskyKa/status/321515076605599745">April 9, 2013</a></blockquote> <script async src="//platform.twitter.com/widgets.js" charset="utf-8"></script>
English summary

Beauty Ingredients You Need In Summer | ಬೇಸಿಗೆಯಲ್ಲಿ ಈ ನೈಸರ್ಗಿಕವಾದ ಸೌಂದರ್ಯವರ್ಧಕಗಳನ್ನು ಬಳಸಿ

There are few natural and home ingredients that can be used for skin care. These ingredients can be easily found in your kitchen. These ingredients like curd, lemon, cream or milk can be really effective in treating summer skin problems like sun tan, sun burn and so on to maintain your glowing skin.
X
Desktop Bottom Promotion