For Quick Alerts
ALLOW NOTIFICATIONS  
For Daily Alerts

ಚಳಿಗಾಲಕ್ಕೆ ತ್ವಚೆಯ ರಕ್ಷಣೆಗೆ ಆಯುರ್ವೇದದ ಟಿಪ್ಸ್

By Super
|

ಆಯುರ್ವೇದವೆನ್ನುವುದು ಔಷಧಶಾಸ್ತ್ರ ಹಾಗೂ ಉಪಶಮನದ ಪುರಾತನ ಭಾರತೀಯ ವಿಜ್ಞಾನ. ಆಯುರ್ವೇದ ಔಷಧ ಹಲವಾರು ರೀತಿಯ ಸಸ್ಯಗಳು, ಗಿಡಮೂಲಿಕೆಗಳು ಮತ್ತು ಮಸಾಲೆಗಳಿಂದ ತಯಾರಿಸಲಾಗುತ್ತದೆ. ದೇಹದ ಪ್ರತಿಯೊಂದು ಅಂಗಗಳ ರೋಗಗಳಿಗೆ ಆಯುರ್ವೇದದಲ್ಲಿ ಚಿಕಿತ್ಸೆಯಿದೆ. ಯಾವುದೇ ಚರ್ಮ ರೋಗಕ್ಕೆ ಚಿಕಿತ್ಸೆ ನೀಡುವಂತಹ ಔಷಧಿ ಮತ್ತು ವಿಧಾನಗಳು ಆಯುರ್ವೇದದಲ್ಲಿದೆ. ಚರ್ಮವು ನಮ್ಮ ದೇಹದ ಅತ್ಯಂತ ಕೋಮಲ ಅಂಗ. ಹವಾಮಾನ ಬದಲಾವಣೆ, ಮಾಲಿನ್ಯ ಮತ್ತು ಸೋಂಕಿನಿಂದಾಗಿ ಚರ್ಮದ ಅಂಗಾಂಶಗಳಿಗೆ ಹಾನಿಯಾಗಬಹುದು. ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಕೆಲವೊಂದು ಆಯುರ್ವೇದ ಟಿಪ್ಸ್ ಗಳಿವೆ. ಚಳಿಗಾಲದ ಒಣ ಹವೆಯು ಚರ್ಮವನ್ನು ಒಣಗಿಸುತ್ತದೆ. ಆಯುರ್ವೇದ ಔಷಧವು ಚಳಿಗಾಲದಲ್ಲಿ ಚರ್ಮಕ್ಕೆ ಬೇಕಾಗಿರುವಂತಹ ಹೆಚ್ಚುವರಿ ರಕ್ಷಣೆ ನೀಡಲಿದೆ.

ಚಳಿಗಾಲವು ಈಗಾಗಲೇ ಆರಂಭವಾಗಿರುವ ಕಾರಣ ನಮ್ಮಲ್ಲಿ ಹೆಚ್ಚಿನವರು ಒಡೆದ ಹಿಮ್ಮಡಿ, ಒಣಗಿದ ತುಟಗಿಳು ಮತ್ತು ಒರಟು ಚರ್ಮದ ಸಮಸ್ಯೆ ಎದುರಿಸುತ್ತಿರಬಹುದು. ಚಳಿಗಾಲದಲ್ಲಿ ಕೂಡ ನಿಮ್ಮ ತ್ವಚೆಯು ಹೊಳೆಯುವಂತೆ ಮತ್ತು ನಯವಾಗಿರಲು ಆಯುರ್ವೇದದ ಕೆಲವೊಂದು ಟಿಪ್ಸ್ ಗಳಿವೆ. ನಿಮ್ಮ ತ್ವಚೆ ಮೃದು ಹಾಗೂ ತಾಜಾವಾಗಿರಿಸಲು ನೆರವಾಗುವಂತಹ ಆಯುರ್ವೇದದ ಕೆಲವೊಂದು ಟಿಪ್ಸ್ ಗಳ ಬಗ್ಗೆ ನಾವಿಲ್ಲಿ ಚರ್ಚಿಸಲಿದ್ದೇವೆ.

Ayurvedic skin care tips for the winter

1. ಮಸಾಜ್
ಒಣ ಹಾಗೂ ಒರಟು ತ್ವಚೆಗೆ ಬಿಸಿ ಎಣ್ಣೆಯ ಮಸಾಜ್ ಆಯುರ್ವೇದದ ಪ್ರಮುಖ ಟಿಪ್ಸ್. ಬ್ರಾಹ್ಮೀ ಮತ್ತು ಬೇವಿನಿಂದ ಮಾಡಿದಂತಹ ಬಿಸಿ ಎಣ್ಣೆಯಿಂದ ಮಸಾಜ್ ಮಾಡಿ. ಎಣ್ಣೆಯ ಮಸಾಜ್ ಚರ್ಮಕ್ಕೆ ಪೋಷಕಾಂಶಗಳನ್ನು ನೀಡುತ್ತದೆ. ಆಯುರ್ವೇದ ಎಣ್ಣೆಯ ಮಸಾಜ್ ಚರ್ಮಕ್ಕೆ ತೇವಾಂಶವನ್ನಿಡುತ್ತದೆ. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಆಯುರ್ವೇದದ ಮಸಾಜ್ ಎಣ್ಣೆಗಳು ಸಿಗುತ್ತದೆ.

2. ಫೇಸ್ ಮಾಸ್ಕ್
ಗಿಡಮೂಲಿಕೆಗಳಿಂದ ಕೂಡಿರುವಂತಹ ಫೇಸ್ ಮಾಸ್ಕ್ ಅಥವಾ ಫೇಸ್ ಪ್ಯಾಕ್ ಗಳನ್ನು ಚಳಿಗಾಲದಲ್ಲಿ ಬಳಸುವುದರಿಂದ ಚರ್ಮಕ್ಕೆ ತೇವಾಂಶ ಸಿಗುತ್ತದೆ. ರೋಸ್ ವಾಟರ್, ಆಮ್ಲಾ, ಅಲೋವೆರಾ, ಅರಿಶಿನ ಮತ್ತು ಇತರ ನೈಸರ್ಗಿಕ ಗಿಡಮೂಲಿಕೆಗಳನ್ನು ಬಳಸಬಹುದು. ಇದನ್ನು ನೀವು ಹಾಲು ಅಥವಾ ಕ್ರೀಮ್ ನೊಂದಿಗೆ ಮಿಶ್ರಣ ಮಾಡಿ ಬಳಸಬಹುದು. ಅಲೋವೆರಾದ ಜೆಲ್ ನ್ನು ಬಳಸಿಕೊಂಡು ಇಂತಹ ಫೇಸ್ ಮಾಸ್ಕ್ ತಯಾರಿಸುತ್ತಾರೆ. ಕೆಲವು ನಿಮಿಷಗಳ ಕಾಲ ನಿಮ್ಮ ಮುಖಕ್ಕೆ ಅಲೋವೆರಾದ ಜೆಲ್ ನ್ನು ಹಾಕಿ ಮತ್ತು ಅದನ್ನು ಒಣಗಲು ಬಿಡಿ. ಇದರ ಬಳಿಕ ತಂಪಾದ ನೀರಿನಲ್ಲಿ ತೊಳೆಯಿರಿ. ರೋಸ್ ವಾಟರ್ ಮತ್ತು ಹಾಲಿನ ಮಿಶ್ರಣ ಮಾಡಿ ನಿಮ್ಮ ಮುಖವನ್ನು ಪ್ರತೀ ದಿನ ತೊಳೆಯಬಹುದು. ನಿಯಮಿತವಾಗಿ ಬಳಸುವುದರಿಂದ ನಿಮ್ಮ ಚರ್ಮವು ಪುನರ್ಚೆತನ ಮತ್ತು ತೇವಾಂಶಯುಕ್ತವಾಗುತ್ತದೆ.

3. ಆರೋಗ್ಯಕರ ಆಹಾರ
ಚಳಿಗಾಲದಲ್ಲಿ ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ನಿಮ್ಮ ಆಹಾರಕ್ಕೆ ಕೆಲವೊಂದು ಗಿಡಮೂಲಿಕೆಗಳಾದ ಅಮ್ಲಾ, ಶತಾವರಿ, ಅಶ್ವಗಂಧ, ತ್ರಿಫಲ ಮತ್ತು ಇತರ ಗಿಡಮೂಲಿಕೆಗಳನ್ನು ಸೇರಿಸಬೇಕು. ಈ ಎಲ್ಲಾ ಗಿಡಮೂಲಿಕೆಗಳು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಕೆಲವೊಂದು ಆಯುರ್ವೇದ ಚವನಪ್ರಶ್ ಗಳು ಚಳಿಗಾಲದಲ್ಲಿ ತಿನ್ನಲು ಯೋಗ್ಯ. ಆಯುರ್ವೇದ ಗಿಡಮೂಲಿಕೆಗಳು ಚರ್ಮಕ್ಕೆ ತೇವಾಂಶ ನೀಡುತ್ತದೆ. ನಿಯಮಿತವಾಗಿ ಒಂದು ಚವನ್ ಪ್ರಶ್ ಸೇವನೆ ನಿಮ್ಮ ಚರ್ಮ ಮತ್ತು ದೇಹಕ್ಕೆ ಒಳ್ಳೆಯದು. ನಿಮ್ಮ ಆಹಾರದಲ್ಲಿ ಹಣ್ಣುಗಳನ್ನು ಸೇರಿಸಿ. ಹಣ್ಣುಗಳು ಸ್ವಾಭಾವಿಕವಾಗಿ ತೇವಾಂಶ ನೀಡುತ್ತದೆ ಮತ್ತು ನಿಮ್ಮ ಚರ್ಮವು ತಾಜಾ ಹಾಗೂ ಹೊಳೆಯುವಂತೆ ಮಾಡುತ್ತದೆ.

4. ನೀರು ಕುಡಿಯಿರಿ
ಇದು ಪ್ರತೀ ಋತುವಿಗೆ ಸಾಮಾನ್ಯವಾಗಿ ಹೇಳಲಾಗುವ ಚರ್ಮದ ಆರೈಕೆಯ ಟಿಪ್ಸ್. ನೀವು ನಮ್ಮ ಜೀವಕೋಶಗಳನ್ನು ಸರಿಪಡಿಸಿ ಮರುತುಂಬಿಸಲು ನೆರವಾಗುತ್ತದೆ. ಸೂಕ್ತ ರೀತಿಯಲ್ಲಿ ನೀರು ಕುಡಿಯುವುದರಿಂದ ಚರ್ಮವು ಆರೋಗ್ಯಕರ ಮತ್ತು ನಯವಾಗುತ್ತದೆ. ಇದು ಚಳಿಗಾಲಕ್ಕೆ ಆಯುರ್ವೇದ ಟಿಪ್ಸ್. ಆಯುರ್ವೇದದ ಪ್ರಕಾರ ನೀರು ಎಲ್ಲಾ ರೋಗಗಳಿಗೆ ಒಳ್ಳೆಯ ಮದ್ದು. ಚಳಿಗಾಲದಲ್ಲಿ ಹೊರಗಿನ ವಾತಾವರಣವು ಒಣಗಿರುವ ಕಾರಣ ಹೆಚ್ಚಿನ ನೀರು ಕುಡಿಯಲು ಇದು ಸಲಹೆ ಮಾಡುತ್ತದೆ. ಪ್ರತೀ ದಿನ ಸರಾಸರಿ 8-10 ಲೋಟ ನೀರು ಕುಡಿಯಬೇಕು.

5. ಸಾಬೂನುಗಳು
ಆಯುರ್ವೇದದ ಪ್ರಕಾರ ಚಳಿಗಾಲದಲ್ಲಿ ಒರಟಾದ ಸಾಬೂನುಗಳನ್ನು ಬಳಸಬಾರದು. ರಾಸಾಯನಿಕಯುಕ್ತ ಸಾಬೂನುಗಳು ಚರ್ಮವನ್ನು ಒಣಗಿಸುತ್ತದೆ ಮತ್ತು ಒರಟಾಗಿಸುತ್ತದೆ. ಹಾಲು, ಕ್ರೀಮ್, ಅರಿಶಿನ ಹುಡಿ ಮತ್ತು ಕಡಲೆ ಹಿಟ್ಟನ್ನು ಹೊಂದಿರುವ ಸಾಬೂನನ್ನು ಬಳಸಿ. ಇದು ಚರ್ಮದ ರಚನೆ ಸುಧಾರಿಸಿ ಅದನ್ನು ಮೃದುವಾಗಿಸುತ್ತದೆ.

English summary

Ayurvedic skin care tips for the winter

Ayurveda is an ancient Indian science of medicine and healing. Ayurveda medicines are made from a combination of various shrubs, herbs and spices. Ayurveda medicines are effectual and have no reverse side effects.
Story first published: Saturday, December 28, 2013, 16:38 [IST]
X
Desktop Bottom Promotion