For Quick Alerts
ALLOW NOTIFICATIONS  
For Daily Alerts

ಮೊಡವೆ ನಿವಾರಿಸಲು ಈ ಫೇಸ್ ಪ್ಯಾಕ್ ಒಳ್ಳೆಯದು

|

ಮೊಡವೆ ಸಮಸ್ಯೆ ಬಗ್ಗೆ ಹೇಳುವುದು ಸುಲಭ. ಆದರೆ ಅದು ಬಂದವರಿಗೆ ಮಾತ್ರ ಗೊತ್ತು, ಮೊಡವೆ ಬಂದರೆ ಎಷ್ಟು ಮಾನಸಿಕ ಕಿರಿಕಿರಿ ಉಂಟಾಗುವುದೆಂದು. ಮೊಡವೆ ಬಂದು ಹೋಗುವುದಾದರೆ ಯಾರೂ ಅಷ್ಟಾಗಿ ತಲೆ ಕೆಡಿಸುತ್ತಿರಲಿಲ್ಲ, ಆದರೆ ಮೊಡವೆ ಬಂದರೆ ಕಲೆ ಮತ್ತು ರಂಧ್ರಗಳು ಉಂಟಾಗಿ ಸೌಂದರ್ಯ ಹಾಳಾಗುವುದು.

ಮೊಡವೆಗೆ ಅದು ಹಚ್ಚಿದರೆ, ಕ್ರೀಮ್ ಹಚ್ಚಿದರೆ ಹೋಗುತ್ತೆ ಎಂದು ಅನೇಕರು ಹೇಳಬಹುದು. ಆದರೆ ಮೊಡವೆ ಸಮಸ್ಯೆಯನ್ನು ಹೋಗಲಾಡಿಸಲು ನೈಸರ್ಗಿಕವಾದ ವಿಧಾನ ಬಳಸುವುದು ಒಳ್ಳೆಯದು. ಏಕೆಂದರೆ ನೈಸರ್ಗಿಕವಾದ ವಿಧಾನದಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲದಿರುವುದರಿಂದ ಸೇಫ್.

ಇಲ್ಲಿ ಕೆಲವು ಫೇಸ್ ಪ್ಯಾಕ್ ಬಗ್ಗೆ ಹೇಳಿದ್ದೇವೆ, ಇವುಗಳನ್ನು ಮೊಡವೆ ಇರುವವರು ಬಳಸಿದರೆ ಮೊಡವೆ ಬರುವುದು ಕಡಿಮೆಯಾಗುವುದು ಹಾಗೂ ಮುಖದಲ್ಲಿ ಕಲೆ ಬೀಳುವುದನ್ನು ತಡೆಯಬಹುದು.

Ayurvedic Face Packs

ಅರಿಶಿಣ ಮತ್ತು ಕಡಲೆ ಹಿಟ್ಟು
ಕೆಲವರಿಗೆ ಅರಿಶಿಣ ಅಲರ್ಜಿ, ಮತ್ತೆ ಕೆಲವರಿಗೆ ಕಡಲೆ ಹಿಟ್ಟು ಅಲರ್ಜಿ. ಇವುಗಳಿಂದ ಅಲರ್ಜಿ ಸಮಸ್ಯೆ ಉಂಟಾಗದವರು ಈ ಎರಡನ್ನೂ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಒಳ್ಳೆಯದು.

ಚೆಂಡು ಹೂ
ಚೆಂಡು ಹೂವನ್ನು ಪೇಸ್ಟ್ ಮಾಡಿ, ಅದನ್ನು 1 ಚಮಚ ಜೇನಿನ ಜೊತೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಬಿಸಿ ಹದ ನೀರಿನಿಂದ ಮುಖ ತೊಳೆದರೆ ಮೊಡವೆ ಏಳುವುದಿಲ್ಲ.

ಕಹಿ ಬೇವಿನ ಎಲೆ
ಕಹಿ ಬೇವಿನ ಎಲೆ ಮಾತ್ರ ಪೇಸ್ಟ್ ಮಾಡಬಹುದು, ಬೇಕಿದ್ದರೆ ಅದಕ್ಕೆ ಅರಿಶಿಣ ಸೇರಿಸಿ ಪೇಸ್ಟ್ ಮಾಡಿ ಫೇಸ್ ಮಾಸ್ಕ್ ನಂತೆ ಬಳಸಿ. ಮೊಡವೆ ಸಮಸ್ಯೆಯಿಂದ ಕೆಲವೇ ದಿನಗಳಲ್ಲಿ ಮುಕ್ತಿ ಪಡೆಯಬಹುದು.

ಪುದೀನಾ ಫೇಸ್ ಪ್ಯಾಕ್
ಪುದೀನಾ ಕೂಡ ಮೊಡವೆಯನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿರುವುದರಿಂದ ಪುದೀನಾ ಫೇಸ್ ಪ್ಯಾಕ್ ಬಳಸಬಹುದು.

ಮುಲ್ತಾನಿ ಮಿಟಿ
ಮುಲ್ತಾನಿ ಮಿಟಿ ತ್ವಚೆಯಲ್ಲಿರುವ ಜಿಡ್ಡಿನಂಶ ತೆಗೆದು, ಮೊಡವೆ ಏಳುವುದನ್ನು ತಡೆಯುತ್ತದೆ.

ವಿಶೇಷತೆ: ಈ ಎಲ್ಲಾ ಫೇಸ್ ಪ್ಯಾಕ್ ಗಳ ವಿಶೇಷತೆ ಅಂದರೆ ಮೊಡವೆ ಬರುವುದನ್ನು ತಡೆಯುತ್ತದೆ, ಕಲೆ ಕಡಿಮೆಯಾಗುವುದು, ಮುಖದ ಹೊಳಪು ಹೆಚ್ಚುವುದು.

English summary

Ayurvedic Face Packs To Treat Acne

There are many natural home remedies for getting an acne-free skin. Try them out and you will be amazed to see the difference. Ayurvedic face masks can treat and heal the acne blemished skin and make it a healthy and flawless. Also, there won't be any side effects of these natural masks.
Story first published: Wednesday, May 29, 2013, 15:08 [IST]
X
Desktop Bottom Promotion