For Quick Alerts
ALLOW NOTIFICATIONS  
For Daily Alerts

ತ್ವಚೆಯ ಅಂದ ಕಾಪಾಡುವ antioxidants ಆಹಾರಗಳು

|

ಸಿನಿಮಾ ನಟಿಯರು ವಯಸ್ಸಾದರೂ ಅವರ ಮುಖದಲ್ಲಿ ಎದ್ದು ಕಾಣುವುದಿಲ್ಲ ಏಕೆ? ಎಂದು ನಾವೆಲ್ಲಾ ಯೋಚಿಸುತ್ತೇವೆ. ನಂತರ ಅವರು ಮೇಕಪ್ ಮಾಡಿ ಚೆಂದ ಕಾಣುತ್ತಾರೆ ಅಷ್ಟೇ ಎಂದು ನಾವೇ ಉತ್ತರವನ್ನೂ ಕಂಡುಕೊಳ್ಳುತ್ತೇವೆ. ಮೇಕಪ್ ಮಾಡಿದಾಗ ಆಕರ್ಷಕವಾಗಿ ಕಾಣಲು ತ್ವಚೆ ಸುಂದರವಾಗಿದ್ದರೆ ಮಾತ್ರ ಸಾಧ್ಯ. ತ್ವಚೆ ಸುಂದರವಾಗಿರಲು ನಾವು ಅದರ ಆರೈಕೆ ಮಾಡಬೇಕು.

ಬಾಹ್ಯ ಆರೈಕೆ ಮಾತ್ರವಲ್ಲದೆ, ತ್ವಚೆಯ ಆರೋಗ್ಯ ವೃದ್ಧಿಸುವ ಆಹಾರಗಳನ್ನು ತಿನ್ನಬೇಕು. ಅದರಲ್ಲೂ antioxidants ಇರುವ ಆಹಾರಗಳನ್ನು ತಿನ್ನಬೇಕು. ಈ ಆಹಾರಗಳ ವಿಶೇಷತೆಯೆಂದರೆ ಇವುಗಳು ದೇಹವನ್ನು ಸೇರಿದಾಗ, ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತವೆ. ಇದರಿಂದ ನಿಮ್ಮ ತ್ವಚೆಯ ಹೊಳಪು ಹೆಚ್ಚುವುದು, ಆರೋಗ್ಯ ಕೂಡ ವೃದ್ಧಿಸುವುದು.

ಈ ಕೆಳಗಿನ ಆಹಾರಗಳಲ್ಲಿ antioxidants ಅಧಿಕವಿದೆ:

ಹಸಿರು ಬಣ್ಣದ ದುಂಡು ಮೆಣಸು

ಹಸಿರು ಬಣ್ಣದ ದುಂಡು ಮೆಣಸು

ಇದರಲ್ಲಿ antioxidants ಅಧಿಕವಿದ್ದು ಕ್ಯಾನ್ಸರ್ ರೋಗಿಗಳು ಇದನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ.

ಪಲ್ಲೆ ಹೂ (artichokes)

ಪಲ್ಲೆ ಹೂ (artichokes)

ಇದರಲ್ಲಿ antioxidants ಹಾಗೂ ಅಧಿಕ ನಾರಿನಂಶ, ಕ್ಯಾಲ್ಸಿಯಂ, ಪೊಟಾಷ್ಯಿಯಂ, ರಂಜಕದಂಶವಿದೆ.

ಬ್ರೊಕೋಲಿ

ಬ್ರೊಕೋಲಿ

ನಿಮ್ಮ ತ್ವಚೆಯ ಹೊಳಪು ಹೆಚ್ಚಾಗಲು ಪ್ರತೀದಿನ ಬ್ರೊಕೋಲಿ ಸೂಪ್ ಕುಡಿದರೆ ಸಾಕು. ಮದುವೆ ಫಿಕ್ಸ್ ಆದವರು ಮದುವೆಯಲ್ಲಿ ನಾನು ಆಕರ್ಷಕವಾಗಿ ಕಾಣಬೇಕೆಂದು ಬಯಸುವುದು ಸಹಜ. ಬ್ರೊಕೋಲಿ ನಿಮ್ಮ ಅಂದ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಕೆಂಪು ದುಂಡು ಮೆಣಸು

ಕೆಂಪು ದುಂಡು ಮೆಣಸು

ಇದರಲ್ಲಿ ಹಸಿ ದುಂಡು ಮೆಣಸಿನಕಾಯಿಯಲ್ಲಿ ಇರುವುದಕ್ಕಿಂತ ಅಧಿಕ antioxidants ಅಂಶ ಅಧಿಕವಾಗಿರುತ್ತದೆ.

 ಡಾರ್ಕ್ ಚಾಕಲೇಟ್

ಡಾರ್ಕ್ ಚಾಕಲೇಟ್

ಇದರಲ್ಲಿ ಕೋಕಾ ಅಂಶವಿದ್ದು ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಮೊಟ್ಟೆ

ಮೊಟ್ಟೆ

ಮೊಟ್ಟೆಯಿಂದ ಫೇಸ್ ಮಾಸ್ಕ್ ಮಾಡಲು ಬಳಸುವುದು ಹಾಗೂ ಇದನ್ನು ತಿನ್ನುವುದರಿಂದ ತ್ವಚೆಯ ಆರೋಗ್ಯ ವೃದ್ಧಿಸುವುದು.

ಕಿಡ್ನಿ ಬೀನ್ಸ್

ಕಿಡ್ನಿ ಬೀನ್ಸ್

ಎಲ್ಲಾ ಬೀನ್ಸ್ ಗಳು ಆರೋಗ್ಯಕರ. ಆದರೆ ಕಿಡ್ನಿ ಬೀನ್ಸ್ ನಲ್ಲಿ antioxidants ಅಧಿಕವಿದೆ.

 ಸೇಬು

ಸೇಬು

ಎಲ್ಲಾ ಹಣ್ಣುಗಳಲ್ಲೂ ಸ್ವಲ್ಪ ಮಟ್ಟಿಗೆ antioxidants ಇರುತ್ತದೆ. ಆದರೆ ಸೇಬಿನಲ್ಲಿ ಈ ಅಂಶ ಸ್ವಲ್ಪ ಅಧಿಕವಾಗಿದೆ.

 ಬೀನ್ಸ್

ಬೀನ್ಸ್

ಬೀನ್ಸ್ ನಲ್ಲಿ ನಾರಿನಂಶ ಹಾಗೂ antioxidants ಅಧಿಕವಿರುತ್ತದೆ.

 ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ಇದರಲ್ಲಿರುವ antioxidants ತ್ವಚೆಗೆ ಒಳ್ಳೆಯದು.

ಲವಂಗ

ಲವಂಗ

ಲವಂಗದಲ್ಲಿ antioxidants ಅಧಿಕವಾಗಿರುವುದರಿಂದ ಅಡುಗೆಯಲ್ಲಿ ಬಳಸುವುದನ್ನು ಮರೆಯಬೇಡಿ.

 ಗ್ರೀನ್ ಟೀ

ಗ್ರೀನ್ ಟೀ

ಪ್ರತೀದಿನ ಒಂದು ಲೋಟ ಗ್ರೀನ್ ಟೀ ಕುಡಿದರೆ ದೇಹದಲ್ಲಿ ಕೊಬ್ಬಿನಂಶವೂ ಹೆಚ್ಚಾಗುವುದಿಲ್ಲ, ತ್ವಚೆಯ ಹೊಳಪು ಹೆಚ್ಚುತ್ತದೆ.

ಟೊಮೆಟೊ

ಟೊಮೆಟೊ

ಟೊಮೆಟೊದಲ್ಲಿ ಶಕ್ತಿಯುತವಾದ antioxidants ಲೈಕೋಪೆನೆ ಇದೆ.

ಕೇಲ್ ಸೊಪ್ಪು(kale leaves)

ಕೇಲ್ ಸೊಪ್ಪು(kale leaves)

ಇದರಲ್ಲಿ ವಿಟಮಿನ್ ಕೆ, ವಿಟಮಿನ್ ಸಿ ಹಾಗೂ antioxidants ಅಧಿಕವಿದೆ.

ದ್ರಾಕ್ಷಿ

ದ್ರಾಕ್ಷಿ

ಒಣ ದ್ರಾಕ್ಷಿಯಲ್ಲಿ antioxidants ಅಧಿಕವಿದೆ.

ಕಿತ್ತಳೆ

ಕಿತ್ತಳೆ

ಇದರಲ್ಲಿ ವಿಟಮಿನ್ ಸಿ, ಹಾಗೂ antioxidants ಇದೆ.

English summary

Antioxidant Rich Foods You Must Have To Look Young | ಯೌವನದ ಕಳೆ ಕಾಪಾಡಲು ತಿನ್ನಬೇಕಾದ antioxidants ಆಹಾರಗಳು

Natural antioxidants are basically elements found in foods that act as janitors of the body. The main health benefit of antioxidants is that they help to clean the free radicals from the body and repair cell damage.
X
Desktop Bottom Promotion