For Quick Alerts
ALLOW NOTIFICATIONS  
For Daily Alerts

ಮುಖದ ಕಲೆ ಹೋಗಲಾಡಿಸಬೇಕೆ? ಈ ರೀತಿ ಮಾಡಿ

By Super
|

ಮೊಡವೆ ಕಲೆಗಳನ್ನು ತೆಗೆಯಲು ಸಾಕಷ್ಟು ವಿಧಾನಗಳಿವೆ. ಈ ಮೊಡವೆಗಳು ಪ್ರಾರಂಭವಾಗುವುದು ಯೌವನದಲ್ಲಿ. ಪ್ರಾಯದ ಕಾಲದಲ್ಲಿ ಹಾರ್ಮೋನ್ ಏರುಪೇರಾದಾಗ ಮೆದೋಗ್ರಂಥಿಗಳ ಸ್ರಾವದಿಂದಾಗಿ ಮೊಡವೆಗಳು ಪ್ರಾರಂಭವಾಗುತ್ತವೆ. ಇದಕ್ಕೆ ಕೆಲವು ಔಷಧೀಯ ಚಿಕಿತ್ಸೆಗಳಿವೆ, ಆದರೆ ಮನೆಯಲ್ಲಿಯೇ ಮಾಡಿಕೊಳ್ಳುವ ಪ್ರಾಕೃತಿಕ ಚಿಕಿತ್ಸೆಯಿಂದ ಸಾಕಷ್ಟು ಹಣ ಉಳಿಸಬಹುದು.

ಸ್ವಾಭಾವಿಕ ವಿಧಾನದಿಂದ ಮೊಡವೆ ಕಲೆಗಳಿಂದ ಮುಕ್ತಿ ಹೊಂದುವುದು ಹೇಗೆ ಎಂದು ತಿಳಿಯಬೇಕೆ? ಹಾಗಾದರೆ ಮುಂದೆ ಓದಿ:

1.ಹೈಡ್ರೇಶನ್ ಕೀಲಿ

1.ಹೈಡ್ರೇಶನ್ ಕೀಲಿ

ನೀರು ಮೊಡವೆ ಕಲೆಗಳನ್ನು ತಡೆಗಟ್ಟುವ ಉತ್ತಮ ಸ್ವಾಭಾವಿಕ ವಿಧಾನ ಎಂದು ಸಾಬೀತಾಗಿದೆ.ಪ್ರತಿ ದಿನ 8 ಲೋಟ ಅಥವಾ ಅದಕ್ಕಿಂತ ಹೆಚ್ಚು ನೀರು ಕುಡಿದರೆ ಅದು ಬೇಡದ ಚರ್ಮವನ್ನು,ಕಲೆಗಳನ್ನು ತೆಗೆಯುತ್ತದೆ ಎಂದು ಹೇಳಲಾಗುತ್ತದೆ.

2. ಮೆಂತೆ ಸೊಪ್ಪಿನ ಟ್ರೀಟ್ ಮೆಂಟ್

2. ಮೆಂತೆ ಸೊಪ್ಪಿನ ಟ್ರೀಟ್ ಮೆಂಟ್

ಮೆಂತೆ ಸೊಪ್ಪನ್ನು ನೆನೆಸಿ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಇದನ್ನು ಒಣಗಲು ಬಿಡಿ ಮತ್ತು ಸ್ವಲ್ಪ ಹೊತ್ತಿನ ನಂತರ ತೊಳೆಯಿರಿ. ಸ್ವಲ್ಪ ದಿನಗಳವರೆಗೆ ಇದನ್ನು ಅನುಸರಿಸಿ ಇದರಿಂದ ಮೊಡವೆಗಳು ಮಾಯವಾಗುತ್ತವೆ ಮತ್ತು ಚರ್ಮವನ್ನು ಮೃದುವಾಗಿಸುತ್ತದೆ.

3. ಸೂಕ್ತ ಡಯಟ್

3. ಸೂಕ್ತ ಡಯಟ್

ತರಕಾರಿ ಮತ್ತು ಹಣ್ಣುಗಳಲ್ಲಿ ಸಾಕಷ್ಟು ಕಬ್ಬಿಣ ಮತ್ತು ವಿಟಮಿನ್ ಗಳಿರುತ್ತವೆ ಇದು ಮುಖದ ಸೌಂದರ್ಯ ಮರಳಿ ಪಡೆಯಲು ಸಹಾಯ ಮಾಡುತ್ತವೆ.ಅದರಲ್ಲಿರುವ ಜ್ಯೂಸ್ ಅಂಶ ದೇಹದಲ್ಲಿ ನೀರನ್ನು ಕಾಪಾಡಲು ಸಹಾಯವಾಗುತ್ತದೆ.ಕಾಂತಿ ಹೆಚ್ಚಲು ಮತ್ತು ಕಲೆ ಮಾಸಲು ಸಾಕಷ್ಟು ಹಣ್ಣು ಮತ್ತು ತರಕಾರಿಗಳನ್ನು ತಿನ್ನಿ.

4. ಲೋಳೆಸರ ಬೆಸ್ಟ್

4. ಲೋಳೆಸರ ಬೆಸ್ಟ್

ಮೊಡವೆಯ ಹಠ ಮಾಡುವ ಕಲೆಗಳನ್ನು ಹೋಗಲಾಡಿಸಲು ಲೋಳೆಸರ ಬಳಸುವುದು ಉತ್ತಮ ವಿಧಾನ.ಲ್ಯಾವೆಂಡರ್ ಎಣ್ಣೆ ಮುಂತಾದ ಎಣ್ಣೆಗಳನ್ನು ಕಲೆಗಳಿಗೆ ಹಚ್ಚಿದರೆ ಬೇಗ ಕಡಿಮೆ ಆಗುತ್ತದೆ. ಇದು ತುಂಬಾ ದುಬಾರಿಯೇನಲ್ಲ ಸುಲಭ ದರದಲ್ಲಿ ಸಿಗುತ್ತದೆ ಮತ್ತು ಇದನ್ನು ಪ್ರತಿದಿನ ಉಪಯೋಗಿಸುವುದರಿಂದ ಪರಿಣಾಮವನ್ನು ಕಾಣಬಹುದು.

5. ಮಸಾಜ್

5. ಮಸಾಜ್

ಮೊಡವೆ ಆದಾಗ ಮಸಾಜ್ ಮಾಡಿ ಇದು ಮೊಡವೆ ಕಲೆಗಳನ್ನು ಕಡಿಮೆ ಮಾಡಿ ಮೊಡವೆಯನ್ನು ಹೊರಹಾಕಲು ಸಹಾಯ ಮಾಡುತ್ತವೆ.

6. ಹಾಲಿನಿಂದ ಟ್ರೀಟ್ ಮೆಂಟ್

6. ಹಾಲಿನಿಂದ ಟ್ರೀಟ್ ಮೆಂಟ್

ಒಂದು ಕಪ್ ಹಾಲನ್ನು ಕುಡಿಸಿ ಗಟ್ಟಿಯಾದ ನಂತರ ಅದಕ್ಕೆ ಒಂದು ಹನಿ ನಿಂಬೆ ರಸ ಹಿಂಡಿ ಮತ್ತು ಒಲೆಯಿಂದ ಇಳಿಸಿ,ಕದಡುತ್ತಿರಿ. ಬಿಸಿ ತಣಿದ ನಂತರ ಮಲಗುವ ಸಮಯದಲ್ಲಿ ಇದನ್ನು ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ಮತ್ತು ಮರುದಿನ ಬೆಳಗ್ಗೆ ನಿಮ್ಮ ಮುಖವನ್ನು ತೊಳೆಯಿರಿ.ಇದು ಮೊಡವೆ ನಿವಾರಿಸಿ ಮೃದು ಕಾಂತಿ ನೀಡುತ್ತದೆ.

7. ಶ್ರೀಗಂಧ ಮತ್ತು ರೋಸ್ ವಾಟರ್

7. ಶ್ರೀಗಂಧ ಮತ್ತು ರೋಸ್ ವಾಟರ್

8.ಶ್ರೀಗಂಧ ಮತ್ತು ರೋಸ್ ವಾಟರ್ ಅನ್ನು ಮಿಶ್ರ ಮಾಡಿ,ಇದನ್ನು ಕಲೆ ಇರುವೆಡೆ ಹಚ್ಚಿ ಮತ್ತು ರಾತ್ರಿ ಪೂರ್ತಿ ಹಾಗೆ ಇಟ್ಟು ಬೆಳಗ್ಗೆ ತೊಳೆಯಿರಿ.

8. ಜೇನು

8. ಜೇನು

ಜೇನಿನ ಸಿಹಿ ನಿಮ್ಮ ದಿನವನ್ನು ಹೊಳೆಯುವಂತೆ ಮಾಡಬಹುದು,ಹಾಗೆಯೇ ಜೇನು ನಿಮ್ಮ ಮುಖವನ್ನು ಕೂಡ ಹೊಳೆಯುವಂತೆ ಮಾಡುತ್ತದೆ. ಜೇನನ್ನು ಮುಖಕ್ಕೆ ಮತ್ತು ಕಲೆಗಳಿಗೆ ಹಚ್ಚಿ ಇದರಿಂದ ನಿಮ್ಮ ಮುಖ ಹೊಳೆಯುತ್ತದೆ ಮತ್ತು ನೀವು ಯಂಗ್ ಆಗಿ ಕಾಣಿಸುವಿರಿ.

9. ಬೇಕಿಂಗ್ ಪೌಡರ್

9. ಬೇಕಿಂಗ್ ಪೌಡರ್

ಬೇಕಿಂಗ್ ಪೌಡರ್ ಅನ್ನು ನೀರಿನೊಂದಿಗೆ ಕಲೆಸಿ ಇಟ್ಟುಕೊಳ್ಳಿ ನೊರೆ ಬರಲು ಬಿಡಿ ನಂತರ ಅದನ್ನು ಮುಖದ ಕಲೆಗಳಿಗೆ ಹಚ್ಚಿ ಮತ್ತು ನೀರಿನಿಂದ ತೊಳೆಯಿರಿ.

ಮೊಡವೆ ಮತ್ತು ಕಲೆಗಳಿಂದ ಮುಕ್ತಿ ಪಡೆಯಲು ಉತ್ತಮ ವಿಧಾನವೆಂದರೆ ಆರೋಗ್ಯಯುತ ಆಹಾರ ಶೈಲಿ ಅಳವಡಿಸಿಕೊಳ್ಳುವುದು.ಪ್ರತಿದಿನ ವ್ಯಾಯಾಮ ಮಾಡುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳುವುದು ಇದರಿಂದ ದೇಹದ ತ್ಯಾಜ್ಯಗಳು ಹೊರಹೋಗುತ್ತವೆ. ಆದರೂ ನಿಮ್ಮ ಮುಖದಲ್ಲಿ ಕಲೆಗಳ ಸಮಸ್ಯೆ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ ಸರಿಯಾದ ಮಾಹಿತಿ ಪಡೆಯಿರಿ.

English summary

9 Helpful Tips To Remove Pimple Scars Naturally

There are several ways on removing pimple scars. The appearance of pimples starts during puberty when the body actively produces hormones that causes too much sebum in the skin. While there are a number medical treatments available today for treating pimple scars, you can save a lot of money by spending some time finding out how do you get rid of pimple scars using natural methods.
X
Desktop Bottom Promotion