For Quick Alerts
ALLOW NOTIFICATIONS  
For Daily Alerts

ಮುಖದ ಕಪ್ಪು ಅಥವಾ ಕೆಂಪು ಕಲೆ ನಿವಾರಣೆಗೆ 8 ಟಿಪ್ಸ್

|

ಮುಖದಲ್ಲಿ ವರ್ಣಕತೆ (pigmentation) ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಕಂಡು ಬರುತ್ತದೆ. ಇದು ಕಪ್ಪು ಬಣ್ಣದಲ್ಲಿ ಇರಬಹುದು ತುಂಬಾ ಬೆಳ್ಳಗೆ ಇದ್ದವರಲ್ಲಿ ಸ್ವಲ್ಪ ಕೆಂಪು ಬಣ್ಣದಲ್ಲಿ ಕಂಡು ಬರುತ್ತದೆ. ಈ ರೀತಿಯ ಕಲೆಗಳು ಇದ್ದರೆ ಮುಜುಗರ ಉಂಟಾಗುತ್ತದೆ.

ಈ ರೀತಿ ಮುಖದಲ್ಲಿ ಇರುವ ಕಲೆಯನ್ನು ಹೋಗಲಾಡಿಸಲು ಅನೇಕ ವಿಧಾನಗಳಿವೆ. ಆ ವಿಧಾನವನ್ನು ಬಳಸುವುದು ಹೇಗೆ ಎಂದು ತಿಳಿದಿರಬೇಕಷ್ಟೆ. ಇಲ್ಲಿ ನಾವು pigmentation ಹೋಗಲಾಡಿಸಲು ಟಾಪ್ 8 ಟಿಪ್ಸ್ ನೀಡಲಾಗಿದೆ ನೋಡಿ:

1. ಫ್ರೆಶ್ ಕ್ರೀಮ್

1. ಫ್ರೆಶ್ ಕ್ರೀಮ್

ಪ್ರೆಶ್ ಕ್ರೀಮ್ ಗೆ ಸ್ವಲ್ಪ ನಿಂಬೆ ರಸ ಹಾಕಿ ಮುಖಕ್ಕೆ ಹಚ್ಚಿ 1 ಗಂಟೆಯ ಬಳಿಕ ಮುಖ ತೊಳೆಯಬೇಕು. ಈ ರೀತಿ ಪ್ರತಿದಿನ ಮಾಡುತ್ತಾ ಬಂದರೆ ಮುಖದಲ್ಲಿರುವ ಕಲೆ ಕ್ರಮೇಣ ಕಡಿಮೆಯಾಗುವುದು.

2. ತುಳಸಿ ಎಲೆ

2. ತುಳಸಿ ಎಲೆ

ತುಳಸಿ ರಸಕ್ಕೆ ಸ್ವಲ್ಪ ನಿಂಬೆ ರಸ ಹಾಕಿ ಹಚ್ಚಿದರೆ ರೀತಿಯ ಕಲೆಗಳು ಸಂಪೂರ್ಣವಾಗಿ ಮಾಯವಾಗುವುದು ಹಾಗೂ ಮುಂದಕ್ಕೆ ಈ ರೀತಿಯ ಕಲೆಗಳು ಮತ್ತೆ ಮುಖದಲ್ಲಿ ಕಾಣಿಸಿಕೊಳ್ಳುವುದಿಲ್ಲ.

3. ಜೀರಿಗೆ

3. ಜೀರಿಗೆ

ಜೀರಿಗೆ ನೀರನ್ನು ಮಾಡಿ ಅದರಿಂದ ಮುಖ ತೊಳೆಯಿರಿ. ಈ ರೀತಿ ಸ್ವಲ್ಪ ದಿನಗಳವರೆಗೆ ಮಾಡುತ್ತಾ ಬನ್ನಿ, ನಿಮ್ಮ ಮುಖದಲ್ಲಿರುವ ಕಲೆಗಳು ಮಾಯವಾಗುವುದು ನಿಮ್ಮ ಗಮನಕ್ಕೆ ಬರುತ್ತದೆ.

4. ಕಿತ್ತಳೆ ಸಿಪ್ಪೆ

4. ಕಿತ್ತಳೆ ಸಿಪ್ಪೆ

ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಅದನ್ನು ನೀರಿನಲ್ಲಿ ಕಲೆಸಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ಈ ರೀತಿ ಮಾಡಿದರೆ ಪಿಗ್ ಮೆಂಟೇಷನ್ (pigmentation) ಮಾತ್ರವಲ್ಲ ಮೊಡವೆ ಕೂಡ ಮಾಯವಾಗುವುದು.

 5. ಸೀಬೆಕಾಯಿ ಮತ್ತು ಬಾಳೆ ಹಣ್ಣು

5. ಸೀಬೆಕಾಯಿ ಮತ್ತು ಬಾಳೆ ಹಣ್ಣು

ಸೀಬೆಕಾಯಿ ಮತ್ತು ಬಾಳೆ ಹಣ್ಣನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡಿದರೆ ಕಲೆಗಳು ಮಾಯವಾಗಿ ನಿಮ್ಮ ಮುಖದ ಅಂದ ಹೆಚ್ಚುವುದು (1 ಬಾಳೆ ಹಣ್ಣು, 1 ಸೀಬೆಕಾಯಿ ಪೇಸ್ಟ್ ಮಾಡಿ ಫ್ರಿಜ್ ನಲ್ಲಿಟ್ಟರೆ 1 ವಾರ ಹಚ್ಚಬಹುದು)

6. ಸೌತೆಕಾಯಿ

6. ಸೌತೆಕಾಯಿ

ಸೌತೆಕಾಯಿ ರಸವನ್ನು ಪ್ರತಿದಿನ ಹಚ್ಚಿದರೆ pigmentation ಕಡಿಮೆಯಾಗುವುದು ಮುಖದ ಹೊಳಪು ಕೂಡ ಹೆಚ್ಚುವುದು.

7. ರೋಸ್ ವಾಟರ್

7. ರೋಸ್ ವಾಟರ್

ಇಲ್ಲಿ ನೀಡಿರುವ ವಿಧಾನಗಳಲ್ಲಿ ನಿಮಗೆ ಬೇಕಾದ ವಿಧಾನವನ್ನು ಆಯ್ಕೆ ಮಾಡಿಕೊಳ್ಳಿ ಹಾಗೂ ರಾತ್ರಿ ಮಲಗುವಾಗ ರೋಸ್ ವಾಟರ್ ಹಚ್ಚಿ ಮಲಗಿ. ಈ ರೀತಿ ಮಾಡಿದರೆ ನಿಮ್ಮ ಮುಖದಲ್ಲಿರುವ ಕಲೆಗೆ ಗುಡ್ ಬೈ ಹೇಳಬಹುದು

8. ಕೆಂಪು ಮೂಲಂಗಿ

8. ಕೆಂಪು ಮೂಲಂಗಿ

ಆಹಾರದಲ್ಲಿ ಕೆಂಪು ಮೂಲಂಗಿ ಸೇರಿಸಿ. ಶುದ್ಧವಾದ ಗಾಳಿ ಸೇವಿಸಿ. ಈ ರೀತಿ ಮಾಡಿದರೆ ಮುಖದಲ್ಲಿರುವ ಕಲೆಯನ್ನು (pigmentation) ಯಾವುದೇ ಸ್ಕಿನ್ ಟ್ರೀಟ್ ಮೆಂಟ್ ತೆಗೆಯದೇ ಹೋಗಲಾಡಿಸಬಹುದು.

English summary

8 Tips How to Get Rid of Face Pigmentation | Tips For Skin Care | ಮುಖದಲ್ಲಿರುವ ಕಪ್ಪು ಕಲೆ ಹೋಗಲಾಡಿಸಲು 8 ಟಿಪ್ಸ್ | ತ್ವಚೆ ಆರೈಕೆಗೆ ಕೆಲ ಸಲಹೆಗಳು

When it comes to face pigmentation, it can be a very embarrassing thing to deal with. There are many different remedies that will help with getting rid of face pigmentation. So in this article, we will explore the top ten methods to get rid of that face pigmentation
X
Desktop Bottom Promotion