For Quick Alerts
ALLOW NOTIFICATIONS  
For Daily Alerts

ಊಹೆಗೂ ನಿಲುಕದ ನಿಂಬೆಯ ಸೌಂದರ್ಯವರ್ಧಕ ಗುಣಗಳು

By Super
|

ನಿಂಬೆ ಹಣ್ಣು ಎಂದರೆ ನಮಗೆ ನೆನಪಿಗೆ ಬರುವುದು ನಿಂಬೆಹಣ್ಣಿನ ರಸ, ಚಿತ್ರಾನ್ನ ಮುಂತಾದ ಅಡುಗೆಗೆ ಹಿಂಡಿಕೊಳ್ಳುವ ಹುಳಿ ಹಣ್ಣಾಗಿ. ಇದರ ಜೊತೆಗೆ ಹಿಂದಿನ ಕಾಲದಿಂದಲು ನಿಂಬೆ ಹಣ್ಣಿನಲ್ಲಿ ಚಿಕಿತ್ಸಕ ಗುಣಗಳಿರುವುದನ್ನು ನಾವು ಮನಗಂಡಿದ್ದೇವೆ.

ಆದಾಗಿಯೂ ಇದರಲ್ಲಿ ಕೆಲವೊಂದು ಸೌಂದರ್ಯವರ್ಧಕ ಗುಣಗಳು ಅಡಗಿರುವುದನ್ನು ನಾವು ಅಷ್ಟಾಗಿ ಗಮನಿಸಿಲ್ಲ. ಬನ್ನಿ ನಮ್ಮ ಕೈಗೆಟುಕುವ ಈ ಹಣ್ಣಿನಲ್ಲಿ ಇರುವ ಸೌಂದರ್ಯವರ್ಧಕ ಗುಣಗಳ ಸದುಪಯೋಗವನ್ನು ಇಂದಿನಿಂದಲೆ ಆರಂಭಿಸಲು ಪ್ರಾರಂಭಿಸಿ. ಅದಕ್ಕಾಗಿ ನಮ್ಮ ಸಲಹೆಗಳನ್ನು ಕೆಳಗೆ ನೀಡಿದ್ದೇವೆ. ಮತ್ತೇಕೆ ತಡ!

1. ಸ್ವಾಭಾವಿಕವಾಗಿ ಹೊಳೆಯುವ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಿ

1. ಸ್ವಾಭಾವಿಕವಾಗಿ ಹೊಳೆಯುವ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಿ

ನಿಂಬೆ ಹಣ್ಣಿನಲ್ಲಿ ಸ್ವಾಭಾವಿಕ ಬ್ಲೀಚಿಂಗ್ ಅಂಶಗಳು ಅಡಕಗೊಂಡಿವೆ. ಇದು ನಿಮ್ಮ ತ್ವಚೆಗೆ ಹೊಳಪನ್ನು ಒದಗಿಸುವ ಅಂಶವಾಗಿ ಸದುಪಯೋಗಿಯಾಗುತ್ತದೆ. ಹಾಗಾಗಿಯೇ ಹಲವಾರು ಸೌಂದರ್ಯ ಸಮಸ್ಯೆಗಳಿಗೆ ಮನೆಯಲ್ಲು ಮತ್ತು ಹೊರಗು ನಿಂಬೆ ಹಣ್ಣು ಪ್ರಯೋಜನಕಾರಿಯಾಗಿ ಕೆಲಸಕ್ಕೆ ಬರುತ್ತದೆ. ನಿಂಬೆಹಣ್ಣನ್ನು ಫೇಸ್‍ಫ್ಯಾಕ್ ಜೊತೆಗೆ ಅಥವಾ ನೇರವಾಗಿ ನಿಮ್ಮ ತ್ವಚೆಗೆ ಲೇಪಿಸಿ. ನಂತರ ನೋಡಿ ನಿಮ್ಮ ತ್ವಚೆಯ ಮೇಲೆ ಇರುವ ಕಲೆಗಳು ತನ್ನಷ್ಟಕ್ಕೆ ತಾನೇ ಮಾಯವಾಗುತ್ತವೆ.

2. ನಿಂಬೆಹಣ್ಣು ಬಳಸಿ ಸದಾ ಯೌವನವನ್ನು ಕಾಪಾಡಿಕೊಳ್ಳಿ

2. ನಿಂಬೆಹಣ್ಣು ಬಳಸಿ ಸದಾ ಯೌವನವನ್ನು ಕಾಪಾಡಿಕೊಳ್ಳಿ

ವಯಸ್ಸಾದಂತೆ ಬರುವ ಸುಕ್ಕುಗಳು ಮತ್ತು ಕಲೆಗಳಿಗೆ ನಿಂಬೆಹಣ್ಣು ರಾಮಬಾಣದಂತೆ ಕೆಲಸ ಮಾಡುತ್ತದೆ. ನಿಂಬೆ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್‍ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಈ ಅಂಟಿಆಕ್ಸಿಡೆಂಟ್‍ಗಳು ತ್ವಚೆಯಲ್ಲಿ ಸುಕ್ಕುಗಳು ಉಂಟಾಗದಂತೆ ತಡೆಯುತ್ತವೆ. ನಿಮ್ಮ ಮನೆಯಲ್ಲಿ ಒಂದು ಉತ್ತಮ ಸುಕ್ಕು ನಿರೋಧಕ ಫೇಸ್ ಫ್ಯಾಕ್ ತಯಾರಿಸಿಕೊಳ್ಳಿ. ಅದಕ್ಕಾಗಿ ಕೆಲವು ಹನಿ ನಿಂಬೆ ಹಣ್ಣಿನ ರಸವನ್ನು ತೆಗೆದುಕೊಂಡು ಅದನ್ನು ಸಿಹಿಯಾದ ಬಾದಾಮಿ ಎಣ್ಣೆಯಲ್ಲಿ ಬೆರೆಸಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಚೆನ್ನಾಗಿ ತೊಳೆಯಿರಿ. ಇದರ ಜೊತೆಗೆ ನಿಮಗೆ ಅವಶ್ಯಕವಾದರೆ ಇಷ್ಟೇ ಪ್ರಮಾಣದ ನಿಂಬೆಹಣ್ಣಿನ ರಸವನ್ನು ತೆಗೆದು ಕೊಂಡು, ಅದನ್ನು ಸೇಬಿನ ಸಿಡೆರ್ ವಿನೆಗರ್ ಜೊತೆಗೆ ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದನ್ನು ನಿಮ್ಮ ಮುಖದಲ್ಲಿರುವ ಕಲೆಗಳ ಮೇಲೆ ಹಚ್ಚಿ.

3. ನಿಮ್ಮ ಎಣ್ಣೆ ತ್ವಚೆಯನ್ನು ಹದ್ದು ಬಸ್ತಿಗೆ ತನ್ನಿ

3. ನಿಮ್ಮ ಎಣ್ಣೆ ತ್ವಚೆಯನ್ನು ಹದ್ದು ಬಸ್ತಿಗೆ ತನ್ನಿ

ಎಣ್ಣೆ ಚರ್ಮವು ನಿಮ್ಮ ತ್ವಚೆಯಲ್ಲಿ ಉಂಟಾಗುವ ಮೊಡವೆ, ಕಪ್ಪು ತಲೆಗಳು ( ಬ್ಲ್ಯಾಕ್ ಹೆಡ್ಸ್) ಹಾಗು ಇನ್ನಿತರ ಹಲವು ಸಮಸ್ಯೆಗಳಿಗೆ ಮೂಲ ಕಾರಣ. ನಿಂಬೆ ಹಣ್ಣು ಈ ಎಣ್ಣೆ ಚರ್ಮದ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನಿಂಬೆ ಹಣ್ಣಿನಲ್ಲಿರುವ ಸಿಟ್ರಿಕ್ ಆಸಿಡ್ ನಿಮ್ಮ ತ್ವಚೆಯಲ್ಲಿರುವ ಎಣ್ಣೆಯ ಕಣಗಳ ಸಂಬಂಧವನ್ನು ಕಡಿದು ಹಾಕಿ, ನಿಮ್ಮ ತ್ವಚೆಗೆ ಮೃದುತ್ವವನ್ನು ಮತ್ತು ಹೊಳಪನ್ನು ತಂದು ಕೊಡುತ್ತದೆ. ಇದಕ್ಕಾಗಿ ಒಂದು ಸಣ್ಣ ಪರಿಹಾರವನ್ನು ನಾವು ಸೂಚಿಸುತ್ತಿದ್ದೇವೆ. ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಹತ್ತಿಯ ಉಂಡೆಗಳಲ್ಲಿ ತೆಗೆದುಕೊಂಡು ನಿಮ್ಮ ಮುಖಕ್ಕೆ ಹಚ್ಚುತ್ತ ಬನ್ನಿ. ಇದನ್ನು ಪ್ರತಿದಿನ ಪಾಲಿಸಿ. ನಿಮ್ಮ ಎಣ್ಣೆ ಚರ್ಮ ಹೇಗೆ ಮಾಯವಾಗುತ್ತದೆಯೆಂದು ನೀವೇ ಗಮನಿಸಿ.

4. ಮೃದುವಾದ ಮತ್ತು ಆಹ್ಲಾದಕರವಾದ ತ್ವಚೆ

4. ಮೃದುವಾದ ಮತ್ತು ಆಹ್ಲಾದಕರವಾದ ತ್ವಚೆ

ತಾಜಾ ನಿಂಬೆಹಣ್ಣು ನಿಮ್ಮ ತ್ವಚೆಯಲ್ಲಿ ತಾಜಾತನ ಮತ್ತು ಮೃದುತ್ವವನ್ನು ತಂದು ಕೊಡುತ್ತವೆ. ನಿಂಬೆರಸವನ್ನು ಪ್ರತಿದಿನ ನಿಮ್ಮ ಮುಖ, ಮೊಣಕಾಲುಗಳು ಮತ್ತು ಮೊಣಕೈಗಳಿಗೆ ಹಚ್ಚುತ್ತ ಬನ್ನಿ. ಹೀಗೆ ಮಾಡುವುದರಿಂದ ನಿಮ್ಮ ತ್ವಚೆ ಮೃದುವಾಗಿ, ಹೊಳಪಿನಿಂದ ಕಂಗೊಳಿಸುತ್ತದೆ. ಇದರ ಜೊತೆಗೆ ನಿಂಬೆ ಹಣ್ಣಿನ ಸಿಪ್ಪೆಗಳನ್ನು ನಿಮ್ಮ ತ್ವಚೆಯ ಮೇಲೆ ಹಚ್ಚುತ್ತ ಬನ್ನಿ. ಇದು ನಿಮ್ಮ ತ್ವಚೆಗೆ ಸ್ವಾಭಾವಿಕ ಔಷಧಿಯಾಗಿ ಕಾರ್ಯ ನಿರ್ವಹಿಸುತ್ತದೆ. ನಿಂಬೆ ಹಣ್ಣನ್ನು ಒಣ ಮತ್ತು ನಿರ್ಜೀವ ತ್ವಚೆಗೆ ಪುನಃಶ್ಚೇತನ ನೀಡಲು ಸಹ ಬಳಸುತ್ತಾರೆ.

5. ಸುಂದರವಾದ ತುಟಿಗೆಳಿಗಾಗಿ ನಿಂಬೆಹಣ್ಣನ್ನು ಬಳಸಿ

5. ಸುಂದರವಾದ ತುಟಿಗೆಳಿಗಾಗಿ ನಿಂಬೆಹಣ್ಣನ್ನು ಬಳಸಿ

ನಿಂಬೆ ಹಣ್ಣಿನ ರಸವು ನಿಮ್ಮ ತುಟಿಗಳಿಗು ಸಹ ಉಪಯೋಗಕಾರಿ. ಒಣಗಿದ, ನಿಸ್ತೇಜಗೊಂಡ ಮತ್ತು ಒಡೆದ ತುಟಿಗಳಿಗೆ ನಿಂಬೆ ಹಣ್ಣಿನ ರಸವನ್ನು ಹಚ್ಚಿ. ನಿಂಬೆ ಹಣ್ಣಿನ ರಸವನ್ನು ಹಾಲಿನ ಕೆನೆ ಮತ್ತು ಜೇನು ತುಪ್ಪದ ಜೊತೆಗೆ ಬೆರೆಸಿ ನಿಮ್ಮ ಮನೆಯಲ್ಲೇ ಒಂದು ಉತ್ತಮ ಸ್ವಾಭಾವಿಕ ಲಿಪ್ ಬಾಮ್ ಅನ್ನು ತಯಾರಿಸಿಕೊಳ್ಳಬಹುದು. ಈ ಬಾಮ್ ನಿಮ್ಮ ತುಟಿಗೆ ಆರೋಗ್ಯವನ್ನು ಮತ್ತು ಮೊಯಿಶ್ಚರೈಸ್ ಅನ್ನು ಒದಗಿಸಲು ನೆರವಾಗುತ್ತದೆ.

6. ನಿಮ್ಮ ಕಂಕುಳಿಗೆ ಸುಖಾನುಭವ ನೀಡಲು

6. ನಿಮ್ಮ ಕಂಕುಳಿಗೆ ಸುಖಾನುಭವ ನೀಡಲು

ನಿಮ್ಮ ಸ್ನೇಹಿತರನ್ನು ಭೇಟಿ ಮಾಡಲು ಅಥವಾ ಯಾವುದೇ ಪಾರ್ಟಿಗೆ ಹೋಗುತ್ತಿದ್ದೀರಾ? ಓಹ್! ಈಗ ಗೊತ್ತಾಯಿತು, ನಿಮ್ಮ ಕಂಕುಳು ಕಪ್ಪಗೆ, ಒರಟೊರಟಾಗಿ, ಬೆವರಿನಿಂದಾಗಿಯೋ ಅಥವಾ ಕಲುಷಿತ ವಾತಾವರಣದಿಂದಾಗಿಯೋ ಅಸಹ್ಯವಾದ ವಾಸನೆಯನ್ನು ಹೊಮ್ಮಿಸುತ್ತಿದೆಯೇ?. ಹಾಗಾದರೆ ಅದಕ್ಕಾಗಿ ಯೋಚಿಸಬೇಡಿ. ಸ್ವಲ್ಪ ಹತ್ತಿಯ ಉಂಡೆಯಲ್ಲಿ, ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಅಥವಾ ಕತ್ತರಿಸಿದ ನಿಂಬೆ ಹಣ್ಣಿನ ತುಂಡನ್ನು ತೆಗೆದುಕೊಳ್ಳಿ. ಅದನ್ನು ನಿಮ್ಮ ಕಂಕುಳ ಕೆಳಗೆ ಉಜ್ಜಿ. ಈಗ ನೋಡಿ, ಸ್ಲೀವ್ ಲೆಸ್ ಬಟ್ಟೆ ಹಾಕಿಕೊಂಡು ಜಮ್ಮೆಂದು ನಿಶ್ಚಿಂತೆಯಿಂದ ಪಾರ್ಟಿಗೆ ಹೋಗಿ.

7. ಸದೃಢ ಮತ್ತು ಸುಂದರವಾದ ಉಗುರುಗಳಿಗಾಗಿ

7. ಸದೃಢ ಮತ್ತು ಸುಂದರವಾದ ಉಗುರುಗಳಿಗಾಗಿ

ಸೂಕ್ಷ್ಮವಾದ, ಏನಾದರು ತಾಗಿದರೆ ಮುರಿದು ಹೋಗುವ ಮತ್ತು ಹಳದಿಯಾಗಿರುವ ಉಗುರುಗಳಿಂದ ಬೇಸತ್ತಿದ್ದೀರಾ? ಚಿಂತೆ ಮಾಡಬೇಡಿ. ನಿಮ್ಮ ಬಳಿ ನಿಂಬೆಹಣ್ಣು ಇದ್ದರೆ ಸಾಕು, ಇದಕ್ಕೆ ಪರಿಹಾರ ಸಿಕ್ಕಂತೆಯೇ!. ನಿಂಬೆ ರಸದಲ್ಲಿ ಸ್ವಲ್ಪ ಹೊತ್ತು ನಿಮ್ಮ ಉಗುರುಗಳನ್ನು ನೆನೆಸಿ ಅವುಗಳನ್ನು ಸದೃಢಗೊಳಿಸಿ. ಇದು ನಿಮ್ಮ ಉಗುರಿನಲ್ಲಿರುವ ಜಡತ್ವವನ್ನು ಮತ್ತು ಹಳದಿ ಅಂಶವನ್ನು ತೆಗೆದು ಹಾಕುತ್ತದೆ.

8. ಮೊಡವೆಗಳಿಗೆ ಗುಡ್ ಬೈ ಹೇಳಿ

8. ಮೊಡವೆಗಳಿಗೆ ಗುಡ್ ಬೈ ಹೇಳಿ

ನಿಂಬೆ ರಸವು ಮೊಡವೆ ಮುಂತಾದ ಚರ್ಮ ವ್ಯಾಧಿಗಳಿಗೆ ಉತ್ತಮ ಪರಿಹಾರವಾಗಿದೆ. ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಇರುತ್ತದೆ. ಇದು ಚರ್ಮವನ್ನು ಆರೋಗ್ಯ ಮತ್ತು ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ. ಇದರಲ್ಲಿರುವ ಆಲ್ಕಾಲೈನ್ ಚರ್ಮದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಹೊಡೆದೊಡಿಸಿ, ಚರ್ಮಕ್ಕೆ ಯಾವುದೇ ತೆರನಾದ ಮೊಡವೆ ಮುಂತಾದ ಸಮಸ್ಯೆಗಳು ಬರದಂತೆ ಕಾಯುತ್ತದೆ.

9. ಸುಂದರವಾದ ಕೈಗಳಿಗಾಗಿ ನಿಂಬೆಯನ್ನು ಬಳಸಿ

9. ಸುಂದರವಾದ ಕೈಗಳಿಗಾಗಿ ನಿಂಬೆಯನ್ನು ಬಳಸಿ

ನಿಮ್ಮ ಕೈಗಳು ನಿಮ್ಮ ಮುಖದಷ್ಟೇ ಜನರ ಕಣ್ಣಿಗೆ ಕಾಣುವ ಒಂದು ಅಂಗವಾಗಿರುತ್ತದೆ. ಹಾಗಾಗಿ ಇದನ್ನು ಸಹ ನೀವು ಕಡೆಗಣಿಸದೆ, ಅಗತ್ಯವಾದ ಆರೈಕೆಯನ್ನು ಆಗಾಗ ಮಾಡುತ್ತಿರಬೇಕು. ನಿಮ್ಮ ಕೈಗಳಿಗೆ ಬಾದಾಮಿ ಎಣ್ಣೆ, ಜೇನು ತುಪ್ಪ ಮತ್ತು ನಿಂಬೆರಸವನ್ನು ಬೆರೆಸಿದ ಮಿಶ್ರಣವನ್ನು ಲೇಪಿಸಿ, ಮಸಾಜ್ ಮಾಡುತ್ತ ಬನ್ನಿ. ನಿಮ್ಮ ಕೈಗಳು ಮೃದು ಮತ್ತು ಶುಭ್ರವಾಗುವುದನ್ನು ನೀವೇ ನೋಡುವಿರಿ. ಇದು ಹಠಮಾರಿಯಂತೆ ಕೂತ ಮೊಣಕೈನ ಕಪ್ಪನೆಯ ಒರಟು ಚರ್ಮವನ್ನು ಸಹ ಹೋಗಲಾಡಿಸುತ್ತದೆ.

10. ತೆಳ್ಳಗಾಗಲು ಸಹಾಯಕ

10. ತೆಳ್ಳಗಾಗಲು ಸಹಾಯಕ

ನಿಂಬೆಹಣ್ಣಿನಲ್ಲಿ ಅತ್ಯುತ್ತಮವಾದ ಪೆಕ್ಟಿನ್ ಫೈಬರ್ ಅಧಿಕವಾಗಿರುತ್ತದೆ. ಇದು ಹಸಿವಿನ ಚಪಲದ ಮೇಲೆ ಹೋರಾಡಲು ಸಹಾಯ ಮಾಡುತ್ತದೆ. ಪೆಕ್ಟಿನ್ ಹೊಂದಿರುವ ಆಹಾರಗಳು ಕಡಿಮೆ ಕ್ಯಾಲೋರಿಯನ್ನು ಮತ್ತು ಕೊಬ್ಬನ್ನು ಹೊಂದಿರುತ್ತವೆ. ಇವುಗಳು ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ಒಂದೇ ಸ್ಥಿತಿಯಲ್ಲಿ ಕಾಯ್ದುಕೊಳ್ಳಲು ನೆರವಾಗುತ್ತದೆ. ನಿಂಬೆರಸವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸುವುದರಿಂದ ನಮ್ಮ ಶರೀರದ ರೋಗ ನಿರೋಧಕ ಶಕ್ತಿ ಮತ್ತು ಕಾರ್ಯ ನಿರ್ವಹಣಾ ಸಾಮರ್ಥ್ಯದ ವೇಗ ಹೆಚ್ಚಾಗುತ್ತದೆ. ಹೀಗಾಗುವುದರಿಂದಾಗಿ ನಮ್ಮ ದೇಹದಲ್ಲಿ ಮತ್ತಷ್ಟು ಕ್ಯಾಲೋರಿ ಖರ್ಚಾಗಿ, ನಮ್ಮ ತೂಕ ಇಳಿಮುಖವಾಗುತ್ತದೆ.

11. ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಿ, ಬಾಯಿಯ ದುರ್ವಾಸನೆಯನ್ನು ತೊಲಗಿಸುತ್ತದೆ

11. ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಿ, ಬಾಯಿಯ ದುರ್ವಾಸನೆಯನ್ನು ತೊಲಗಿಸುತ್ತದೆ

ನಿಂಬೆಹಣ್ಣು ನಮ್ಮ ಉಸಿರಿನ ದುರ್ವಾಸನೆಯನ್ನು ದೂರಮಾಡಲು ಸಹಾಯ ಮಾಡುತ್ತದೆ. ಇದು ಹಲ್ಲು ನೋವು ಮತ್ತು ವಸಡಿನ ಸಮಸ್ಯೆಯಿಂದ ಉಪಶಮನವನ್ನು ಸಹ ಒದಗಿಸುತ್ತದೆ. ಬೆಳ್ಳಗೆ ಫಳ ಫಳ ಹೊಳೆಯುವ ಹಲ್ಲುಗಳನ್ನು ನಿಮ್ಮದಾಗಿಸಿಕೊಳ್ಳಲು, ಸ್ವಲ್ಪ ನಿಂಬೆ ಹಣ್ಣನ್ನು ತೆಗೆದುಕೊಂಡು, ಒಂದು ಚಿಟಿಕೆ ಉಪ್ಪು ಹಾಗು ಬೇಕಿಂಗ್ ಸೋಡಾವನ್ನು ಸೇರಿಸಿ ಹಲ್ಲು ಉಜ್ಜಿ .

12. ತಲೆ ಹೊಟ್ಟನ್ನು ನಿವಾರಿಸಲು

12. ತಲೆ ಹೊಟ್ಟನ್ನು ನಿವಾರಿಸಲು

ನಿಮ್ಮ ಕೂದಲಿನಲ್ಲಿನ ತುರಿಕೆ, ಒಡೆದ ಕೂದಲು ಮತ್ತು ತಲೆ ಹೊಟ್ಟಿನಿಂದಾಗಿ ಬೇಸತ್ತಿದ್ದೀರಾ? ಚಿಂತೆ ಬಿಡಿ! ನಿಂಬೆ ಹಣ್ಣು ನಿಮ್ಮ ಸಂಕೋಚ ಮತ್ತು ಚಿಂತೆಯನ್ನು ದೂರ ಮಾಡುತ್ತದೆ. ನೀವು ಬಳಸುವ ಕೊಬ್ಬರಿ ಎಣ್ಣೆಗೆ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಬೆರೆಸಿ, ಸ್ವಲ್ಪ ಹೊತ್ತು ಬಿಟ್ಟು ಆನಂತರ ಅದನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ತಲೆಯಲ್ಲಿ ತುರಿಕೆ, ಒಡೆದ ಕೂದಲು ಮತ್ತು ತಲೆಹೊಟ್ಟಿನಿಂದ ವಿಮುಕ್ತಿಯನ್ನು ಹೊಂದುವಿರಿ.

13. ನಿಮ್ಮ ಕೂದಲಿಗೆ ಹೊಳಪು ನೀಡುತ್ತದೆ

13. ನಿಮ್ಮ ಕೂದಲಿಗೆ ಹೊಳಪು ನೀಡುತ್ತದೆ

ನಿಮ್ಮ ಕೂದಲು ಮಿರಮಿರನೆ ಹೊಳೆಯಬೇಕೆ ಅಥವಾ ನಿಮ್ಮ ಕೂದಲಿಗೆ ಹಾಕಿದ ಬಣ್ಣವನ್ನು ತೆಗೆದು ಹಾಕಬೇಕೆ? ಅದಕ್ಕೆ ಅತ್ಯುತ್ತಮವಾದ ಪರಿಹಾರ ಒಂದೇ ಅದು ನಿಂಬೆ ಹಣ್ಣು. ನಿಂಬೆ ಹಣ್ಣಿನ ರಸವನ್ನು ತೆಗೆದುಕೊಂಡು ಅದನ್ನು ನಿಮ್ಮ ಕೂದಲಿಗೆ ಹಚ್ಚಿ, ಸ್ವಲ್ಪ ಹೊತ್ತು ಒಣಗಲು ಬಿಡಿ. ನಿಂಬೆ ಹಣ್ಣು ಹಚ್ಚಿದ ಭಾಗವು ಹೊಳಪಿನಿಂದ ಸ್ವಾಭಾವಿಕವಾಗಿ ಕಂಗೊಳಿಸುತ್ತದೆ. ನಿಂಬೆ ಹಣ್ಣಿನಲ್ಲಿರುವ ಸಿಟ್ರಸ್ ಆಸಿಡ್ ನಿಮ್ಮ ಕೂದಲಿನಲ್ಲಿರುವ ಬಣ್ಣ ಸ್ವಾಭಾವಿಕವಾಗಿ ತೆಳುವಾಗುವಂತೆ ಮಾಡುತ್ತದೆ.

14. ಜೀರ್ಣಶಕ್ತಿಯನ್ನು ಉದ್ದೀಪನಗೊಳಿಸುತ್ತದೆ

14. ಜೀರ್ಣಶಕ್ತಿಯನ್ನು ಉದ್ದೀಪನಗೊಳಿಸುತ್ತದೆ

ಜೀರ್ಣಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಲೋಚಿಸುತ್ತಿರುವಿರಾ? ಹಾಗಾದರೆ ಅದಕ್ಕೆ ನಿಂಬೆ ಹಣ್ಣಿನ ರಸವೇ ಅತ್ಯುತ್ತಮ ಔಷಧಿ. ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆ ರಸವನ್ನು ಬೆರೆಸಿ. ಅಗತ್ಯವಾದರೆ ಸ್ವಲ್ಪ ಜೇನು ತುಪ್ಪವನ್ನು ಸಹ ಬಳಸಿ. ಈ ರಸವನ್ನು ಸೇವಿಸಿ, ಇದು ನಿಮ್ಮ ದೇಹದಲ್ಲಿರುವ ಅನಾವಶ್ಯಕ ಟಾಕ್ಸಿನ್‍ಗಳನ್ನು ಹೊಡೆದೋಡಿಸುತ್ತದೆ. ನಿಮಗೆ ತಿಳಿದಿರುವಂತೆ, ಆರೋಗ್ಯವಂತ ತ್ವಚೆಯಲ್ಲಿ, ಸೌಂದರ್ಯ ಅಡಗಿದೆ. ಜೀರ್ಣ ಶಕ್ತಿಯು ನಿಮ್ಮ ತ್ವಚೆಗೆ ಹೊಳಪನ್ನು ಒದಗಿಸುತ್ತದೆ.

15. ನಿಂಬೆ ಹಣ್ಣಿನ ಆರೋಗ್ಯಕಾರಿ ಉಪಯೋಗಗಳು

15. ನಿಂಬೆ ಹಣ್ಣಿನ ಆರೋಗ್ಯಕಾರಿ ಉಪಯೋಗಗಳು

ನಿಂಬೆ ಹಣ್ಣಿನಲ್ಲಿ ಇನ್ನಿತರ ಆರೋಗ್ಯಕಾರಿ ಉಪಯೋಗಗಳು ಅಡಗಿವೆ. ನಿಂಬೆ ಹಣ್ಣು ಅತ್ಯುತ್ತಮ ಜೀರ್ಣ ಶಕ್ತಿ ಉದ್ದೀಪಕ, ಇದರ ಜೊತೆಗೆ ಬಾಯಿ ಹುಣ್ಣು, ಎದೆಯಲ್ಲಿ ಉರಿ ಮತ್ತು ಚರ್ಮದ ತುರಿಕೆ ಮುಂತಾದ ಸಮಸ್ಯೆಗಳಿಗು ಸಹ ನಿಂಬೆ ಹಣ್ಣು ಉಪಯೋಗಕಾರಿ. ಗಾಯಗಳನ್ನು ಮಾಗಿಸಲು, ಮೂಳೆಗಳನ್ನು ಮತ್ತು ಸ್ನಾಯುಗಳನ್ನು ಹಾಗು ಇನ್ನಿತರ ಜೀವಕೋಶಗಳನ್ನು ಆರೋಗ್ಯವಂತವಾಗಿಡಲು ನಿಂಬೆ ಪ್ರಯೋಜನಕಾರಿ.

ನಿಂಬೆಹಣ್ಣು ದೇಹದಲ್ಲಿನ ಶಕ್ತಿಯನ್ನು ಪುನರ್ ಸಂಘಟಿಸಲು ಮತ್ತು ಸಂಚಯಗೊಳಿಸಲು ಭಾರೀ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ನಿಂಬೆ ಎಣ್ಣೆಯ ಸುವಾಸನೆಯನ್ನು ಆಘ್ರಾಣಿಸುವುದರಿಂದ ನಿಮ್ಮ ಮನಸ್ಸನ್ನು ಉಲ್ಲಾಸಿತಗೊಳಿಸಬಹುದು. ಜೊತೆಗೆ ಇದು ನಿಮ್ಮ ಮಾನಸಿಕ ಒತ್ತಡ ಹಾಗು ಖಿನ್ನತೆಯನ್ನು ದೂರಮಾಡುತ್ತದೆ.

English summary

15 Surprising Beauty Benefits of Lemon

Lemon has been a miracle cure since ages. So, let us look at some awesome and hidden beauty benefits that this fruit hold for your body and skin.
X
Desktop Bottom Promotion