For Quick Alerts
ALLOW NOTIFICATIONS  
For Daily Alerts

ತ್ವಚೆಗೆ ಹಾನಿಮಾಡಬಲ್ಲ 15 ಆಹಾರಗಳು

By Hemanth P
|

ಮಹಿಳೆಯರು ಯಾವಾಗಲೂ ಸುಂದರ ಮತ್ತು ಸಮಸ್ಯೆಯಿಲ್ಲದ ಮೈಬಣ್ಣ ಬಯಸುತ್ತಾಳೆ. ಇಷ್ಟೇ ಅಲ್ಲದೆ ಅದರ ಬಗ್ಗೆ ಆಕೆಗೆ ತುಂಬಾ ಪ್ರೀತಿ, ಕಾಳಜಿ ಇರುತ್ತದೆ. ಸೌಂದರ್ಯಕ್ಕಾಗಿ ಆಕೆ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾಳೆ. ಇದಕ್ಕಾಗಿ ಆರೋಗ್ಯಕರ ಆಹಾರ ತಿನ್ನಬೇಕು. ಸಾಧ್ಯವಿದ್ದಷ್ಟು ನೀರು ಕುಡಿಯಬೇಕು, ಮಲಗಲು ತೆರಳುವ ಮೊದಲು ತ್ವಚೆ ಸ್ವಚಗೊಳಿಸಬೇಕು. ಪ್ರತಿಯೊಂದನ್ನು ಅನುಸರಿಸಿಕೊಂಡು ಹೋದರೂ ನಿಮ್ಮ ತ್ವಚೆ ಮಾತ್ರ ಪರಿಪೂರ್ಣವಾಗಿ ಕಾಣುವುದಿಲ್ಲ. ಹಲವಾರು ಮಂದಿಗೆ ಇದು ಹೀಗೇಕೆ ಎಂದು ಅಚ್ಚರಿಯಾಗುತ್ತದೆ. ನಿಮಗೆ ಇದರ ಉತ್ತರ ತಿಳಿದಿದೆಯಾ?

ನಮ್ಮ ತ್ವಚೆ ನಮ್ಮ ಆರೋಗ್ಯದ ಪ್ರತಿಫಲನವಂತೆ. ನಾವು ಪಾಲಿಸುವ ಆಹಾರ ಕ್ರಮದ ಮೇಲೆ ಇದು ಅವಲಂಬಿತವಾಗಿರುತ್ತದೆ. ಒಳ್ಳೆಯ ಆಹಾರ ಕ್ರಮವಿದ್ದರೆ ತ್ವಚೆ ಕೂಡ ಹಾಗೆ ಇರುತ್ತದೆ. ತ್ವಚೆ ಹೊಳೆಯುವಂತಾಗಿ ನಿಮಗೆ ಪ್ರಶಂಸೆಯ ಸುರಿಮಳೆಯಾಗಬಹುದು. ಕೆಲವೊಂದು ಆಹಾರಗಳನ್ನು ಸೇವಿಸುವುದರಿಂದ ಅದು ಆರೋಗ್ಯಕ್ಕೆ ಒಳ್ಳೆಯದೆಂದು ನೀವು ಓದಿರಬಹುದು. ಇದರ ಬಗ್ಗೆ ಮರುಯೋಚಿಸದೆ, ನಿಮ್ಮ ತ್ವಚೆಗೆ ಇದು ಒಳ್ಳೆಯದೇ ಎಂದು ನೋಡದೆ ಅದನ್ನು ಆಹಾರ ಕ್ರಮದಲ್ಲಿ ಅಳವಡಿಸಿರಬಹುದು. ಇದರಿಂದಾಗಿ ಹೆಚ್ಚಿನವರು ಇಂದು ಚರ್ಮದ ಅನಾರೋಗ್ಯಕ್ಕೆ ಒಳಗಾಗುತ್ತಾರೆ.

ನೀವು ತೂಕ ಕಳಕೊಳ್ಳಲು ಬಯಸುವುದಾದರೆ ಹಲವಾರು ರೀತಿಯ ಆಹಾರಗಳು ಅದ್ಭುತ ರೀತಿಯಲ್ಲಿ ಕೆಲಸ ಮಾಡಬಹುದು. ಇದು ನಿಮ್ಮ ಚರ್ಮದ ಆರೋಗ್ಯಕ್ಕೆ ಒಳ್ಳೆಯದಾ ಎಂದು ತಿಳಿದುಕೊಳ್ಳಬೇಕು. ಮುಂದಿನ ಸಲ ನಿಮ್ಮ ಆಹಾರ ಪಟ್ಟಿಗೆ ಯಾವುದೇ ಆಹಾರವನ್ನು ಸೇರಿಸುವ ಮೊದಲು ಅದು ಒಳ್ಳೆಯದೇ ಅಥವಾ ಕೆಟ್ಟದೇ ಎಂದು ತಿಳಿದುಕೊಳ್ಳಿ. ತ್ವಚೆಗೆ ಹಾನಿ ಮಾಡಬಲ್ಲ 15 ಆಹಾರಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ನಿಮ್ಮ ಆಹಾರ ಕ್ರಮವನ್ನು ತಿದ್ದಿಕೊಂಡು ಸುಂದರ, ಆರೋಗ್ಯಕರ ಮತ್ತು ಹೊಳೆಯುವ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಿ.

ಆರೋಗ್ಯಕರ-ಹೊಳೆಯುವ ತ್ವಚೆಕ್ಕಾಗಿ ಕಡೆಗಣಿಸಬಹುದಾದ 15 ಆಹಾರಗಳು

ಬಿಳಿ ಬ್ರೆಡ್

ಬಿಳಿ ಬ್ರೆಡ್

ನಿಮಗೆ ಆರೋಗ್ಯಕರ ತ್ವಚೆ ಬೇಕಿದ್ದರೆ ಬಿಳಿ ಬ್ರೆಡ್ ತಿನ್ನುವುದನ್ನು ಬಿಡಬೇಕು. ಹೆಚ್ಚಿನ ಅಂಟನ್ನು ಹೊಂದಿರುವ ಇದು ನಿಮ್ಮ ತ್ವಚೆ ಮೊಡವೆಯ ಸಮಸ್ಯೆ ಎದುರಿಸುತ್ತಿದ್ದರೆ ಆಗ ಮೊಡವೆಯನ್ನು ಇಮ್ಮಡಿಗೊಳಿಸಬಹುದು.

ಸೋಯಾ ಹಾಲು

ಸೋಯಾ ಹಾಲು

ಪ್ರತಿರಕ್ಷಣೆ ಕಡಿಮೆ ಮಾಡಿ ಮತ್ತು ಉರಿಯೂತವನ್ನು ಹೆಚ್ಚಿಸುವ ಸೋಯಾ ಹಾಲು ಹಲವಾರು ಚರ್ಮ ಸಮಸ್ಯೆಗಳಿಗೆ ಮೂಲ ಕಾರಣ. ಆಹಾರದ ತಾಳ್ಮೆ ಮಟ್ಟವನ್ನು ಸುಧಾರಿಸಲು ಸೋಯಾ ಹಾಲನ್ನು ತ್ಯಜಿಸಿ.

ಚಾಕಲೇಟ್

ಚಾಕಲೇಟ್

ನೀವು ಅತಿಯಾಗಿ ಸಿಹಿ ಸೇವಿಸುತ್ತಿದ್ದರೆ, ಚಾಕಲೇಟ್ ನ್ನು ಒಮ್ಮೆಯಾದರೂ ತಿನ್ನುತ್ತೀರಲ್ಲವೇ? ಇದು ಮೊಡವೆಗಳ ವಿರುದ್ಧ ಹೋರಾಡುವ ಪ್ರತಿರಕ್ಷಣೆಯನ್ನು ಕಡಿಮೆ ಮಾಡುತ್ತದೆ.

ಕ್ಯಾಂಡಿ

ಕ್ಯಾಂಡಿ

ಹರಿಹರೆಯದವರಂತೆ ಕಾಣುವ ಸುಂದರ ತ್ವಚೆ ನಿಮಗೆ ಬೇಕಿದ್ದರೆ ಆಗ ನೀವು ಕ್ಯಾಂಡಿ ತಿನ್ನುವುದನ್ನು ನಿಲ್ಲಿಸಬೇಕು. ಈ ಬಣ್ಣದ ಸಿಹಿಯು ನಿಮ್ಮ ತ್ವಚೆಯನ್ನು ಒಣಗುವಂತೆ ಮಾಡಿ ಬೇಗನೆ ನೆರಿಗೆ ಬರುವಂತೆ ಮಾಡುತ್ತದೆ.

ಕಾಫಿ

ಕಾಫಿ

ಒಂದು ಕಪ್ ಕಾಫಿಯು ಎಲ್ಲಾ ಒತ್ತಡ ಕಡಿಮೆ ಮಾಡುತ್ತದೆ ಎನ್ನುವುದು ನಿಜವಾದರೂ ಇದರಿಂದ ನಿಮ್ಮ ತ್ವಚೆ ಒಣಗಬಹುದು. ಒಣ ತ್ವಚೆಯಿಂದ ನೆರಿಗೆ ಮತ್ತು ಕೆಲವೊಂದು ಕಲೆ ಮೂಡಬಹುದು.

ಉಪ್ಪು

ಉಪ್ಪು

ಉಪ್ಪು ನಿಮ್ಮ ದೈನಂದಿನ ಆಹಾರವನ್ನು ರುಚಿಯಾಗಿಸಬಹುದು. ಹೆಚ್ಚಿನ ಉಪ್ಪು ಸೇವನೆ ಒಳ್ಳೆಯದಲ್ಲ. ಸಿನೆಮಾ ನೋಡುವಾಗ ರುಚಿಕರವಾಗಿರುವ, ಹೆಚ್ಚಿನ ಉಪ್ಪಿರುವ ಪಾಪ್ ಕಾರ್ನ್ ತಿನ್ನುವ ಮೊದಲು ಎರಡೆರಡು ಸಲ ಯೋಚಿಸಿ.

ಚಿಪ್ಪು ಮೀನು

ಚಿಪ್ಪು ಮೀನು

ಅತಿಯಾದ ಐಯೋಡಿನ್ ನಿಮ್ಮ ತ್ವಚೆಗೆ ಒಳ್ಳೆಯದಲ್ಲ. ಇದರಿಂದ ನೀವು ತುಂಬಾ ಏಡಿ ಮತ್ತು ಸಿಗಡಿ ತಿನ್ನುವುದನ್ನು ನಿಲ್ಲಿಸಬೇಕು. ಇದರಲ್ಲಿ ಹೆಚ್ಚಿನ ಐಯೋಡಿನ್ ಇರುವ ಕಾರಣ ಅದು ಮೊಡವೆಗಳಿಗೆ ಕಾರಣವಾಗಬಹುದು.

ಹಾಲು

ಹಾಲು

ಇದು ಮೊಡವೆಗಳಿಗೆ ಪ್ರಮುಖ ಕಾರಣ. ತ್ವಚೆಗೆ ಹಾನಿ ಮಾಡುವಲ್ಲಿ ಹಾಲು ಸೈಲೆಂಟ್ ಕಿಲ್ಲರ್ ಪಾತ್ರವಹಿಸುತ್ತದೆ. ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿರುವ ಅಧಿಕ ಬೆಳವಣಿಗೆಯ ಅಂಶ ಮೇದೋಗ್ರಂಥಿಗಳಲ್ಲಿ ಸ್ರಾವ ಉತ್ಪಾದನೆ ಹೆಚ್ಚಿಸಿ ಮೊಡವೆಗಳಿಗೆ ಕಾರಣವಾಗಬಹುದು.

ಆಲ್ಕೋಹಾಲ್

ಆಲ್ಕೋಹಾಲ್

ನಿಯಮಿತವಾಗಿ ಆಲ್ಕೋಹಾಲ್ ಕುಡಿಯುವುದರಿಂದ ನಿಮ್ಮ ತ್ವಚೆ ಒಣಗಬಹುದು, ಇದರಿಂದ ತ್ವಚೆ ತುಂಬಾ ಮಂಕು ಮತ್ತು ಒಣಗಿದಂತೆ ಕಾಣಬಹುದು. ನಿಮ್ಮ ಚರ್ಮ ವಯಸ್ಸಾದವರಂತೆ ಕಾಣಬಹುದು. ಆಲ್ಕೋಹಾಲ್ ತ್ಯಜಿಸಿ ಮತ್ತು ನಿಮ್ಮ ತ್ವಚೆಗೆ ತೇವಾಂಶ ನೀಡಲು ಹೆಚ್ಚಿನ ನೀರು ಕುಡಿಯಿರಿ.

ಸಕ್ಕರೆ

ಸಕ್ಕರೆ

ಕೊಲಾಜನ್ ನಾಶ ಮಾಡಿ ನಿಮ್ಮ ಚರ್ಮ ಜೋಲು ಬೀಳುವಂತೆ ಮಾಡಬಹುದು. ಸಕ್ಕರೆ ನಿಮ್ಮ ನೆರಿಗೆ ಮುಕ್ತ ಚರ್ಮವನ್ನು ಹಾನಿಗೀಡುಮಾಡಬಹುದು. ಇದರಿಂದ ನಿಮ್ಮ ಚರ್ಮ ಮಂಕಾಗಿ, ಒಣಗಿ ಹೊಳಪು ಕಳಕೊಳ್ಳಬಹುದು. ಹೆಚ್ಚಿನ ಸಕ್ಕರೆ ಅಂಶವಿರುವ ಆಹಾರ ತ್ಯಜಿಸಿ.

ಸಾಲ್ಸಾ

ಸಾಲ್ಸಾ

ಇದು ಕ್ಯಾಲೋರಿ ಮುಕ್ತ ಮತ್ತು ತುಂಬಾ ರುಚಿಕರವೆಂದು ಪರಿಗಣಿಸಲಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿನೇಗರ್ ಮತ್ತು ಟೊಮೆಟೊ ಇರುವ ಕಾರಣ ಇದು ಮೊಡವೆಗಳಿಗೆ ಕಾರಣವಾಗಬಹುದು.

ಸ್ಟ್ರಾಬೆರಿ

ಸ್ಟ್ರಾಬೆರಿ

ನಿಮ್ಮ ತ್ವಚೆ ಸೂಕ್ಷ್ಮವಾಗಿದ್ದರೆ ನೀವು ಸ್ಟ್ರಾಬೆರಿ ತಿನ್ನುವುದನ್ನು ನಿಲ್ಲಿಸಬೇಕು. ವಿಟಮಿನ್ ಸಿ ಮತ್ತು ನೈಸರ್ಗಿಕ ಆಮ್ಲಗಳನ್ನು ಹೊಂದಿರುವ ಇದು ಮೂಗು ಮತ್ತು ಬಾಯಿಯ ಸುತ್ತ ಮೊಡವೆ ಮೂಡುವಂತೆ ಮಾಡುತ್ತದೆ.

ಕಡಲೆಕಾಯಿ ಬೆಣ್ಣೆ

ಕಡಲೆಕಾಯಿ ಬೆಣ್ಣೆ

ಚರ್ಮದಲ್ಲಿನ ರಂಧ್ರಗಳನ್ನು ಮುಚ್ಚಿ ಮೊಡವೆಗಳಿಗೆ ಕಾರಣವಾಗುವ ಕಡಲೆಕಾಯಿ ಬೆಣ್ಣೆಯನ್ನು ನಿಮ್ಮ ಆಹಾರ ಪಟ್ಟಿಯಿಂದ ದೂರವಿಟ್ಟರೆ ಆರೋಗ್ಯಕರ ತ್ವಚೆ ಪಡೆಯಬಹುದು. ಇದು ತುಂಬಾ ಉರಿಯೂತ ಮತ್ತು ಮೊಡವೆಗಳನ್ನು ಹೆಚ್ಚಿಸುತ್ತದೆ.

ಕೆಂಪು ಮಾಂಸ

ಕೆಂಪು ಮಾಂಸ

ಇದು ತುಂಬಾ ರುಚಿಕರ. ಆದರೆ ಕೆಂಪು ಮಾಂಸದಲ್ಲಿರುವ ಹೆಚ್ಚಿನ ಕೊಬ್ಬು ಮೊಡವೆಗಳಿಗೆ ಕಾರಣವಾಗಬಹುದು. ಇದು ತುಂಬಾ ಉರಿಯೂತ ಮತ್ತು ನಿಮ್ಮ ಸುಂದರ ಚರ್ಮಕ್ಕೆ ಹಾನಿಯುಂಟು ಮಾಡಬಹುದು.

ಗಂಟೆ ಮೆಣಸು

ಗಂಟೆ ಮೆಣಸು

ಇದು ಬಣ್ಣಬಣ್ಣದ್ದು, ಅಡುಗೆ ಮಾಡಲು ಸುಲಭ ಮತ್ತು ನಿಮ್ಮ ಅಡುಗೆಯ ರುಚಿ ಹೆಚ್ಚಿಸಬಹುದು. ಆದರೆ ವಿಟಮಿನ್ ಸಿ ಅಧಿಕವಾಗಿರುವ ಇದರಲ್ಲಿ ಉರಿಯೂತದ ಗುಣಗಳಿವೆ. ಮೊಡವೆ ರಹಿತ ತ್ವಚೆಗಾಗಿ ಆಮ್ಲವಿರುವ ಆಹಾರಗಳೊಂದಿಗೆ ಗಂಟೆ ಮೆಣಸು ಸೇವಿಸುವುದನ್ನು ತ್ಯಜಿಸಬೇಕು.

English summary

15 Foods That Can Ruin Your Skin

Women love to have a beautiful and problem free complexion. You love it, care for it and flaunt it. You would do almost anything to make it look its best. You would eat healthy, drink a lot of fluids, use the best of products and clean your skin before you go to bed.
Story first published: Thursday, December 5, 2013, 14:18 [IST]
X
Desktop Bottom Promotion