For Quick Alerts
ALLOW NOTIFICATIONS  
For Daily Alerts

ತಾರುಣ್ಯವನ್ನು ಕಾಪಾಡುವ 14 ಆಹಾರಗಳು

By Super
|

ಅಕಾಲಿಕ ಮುಪ್ಪು ಸಾಮಾನ್ಯವಾಗಿ ಕಾಣುವ ಸಮಸ್ಯೆ.ದೇಹ ಸುಕ್ಕುಗಟ್ಟುವುದು,ಮುಖದಲ್ಲಿ ನೆರಿಗೆ,ಬಿಳಿ ಕೂದಲುಗಳು ಇವುಗಳೆಲ್ಲ ತಾರುಣ್ಯವನ್ನು ಮರೆಮಾಚಿಬಿಡುತ್ತವೆ.ಅಷ್ಟೇ ಏಕೆ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳದಿದ್ದಲ್ಲಿ ಮಧುಮೇಹ,ರಕ್ತದೊತ್ತಡ,ಹೃದಯ ಸಂಬಂಧಿ ಕಾಯಿಲೆಗಳು ಮನುಷ್ಯನನ್ನು ಹೈರಾಣಾಗಿಸುತ್ತವೆ.ಬ್ಯುಸಿ ಜೀವನದ ಜಂಜಾಟದ ನಡುವೆಯೂ ಅರೋಗ್ಯ ಎಂಬುದು ಬಹಳ ಮುಖ್ಯ.ಅದರೊಂದಿಗೆ ತಾರುಣ್ಯ ಕೂಡ.ತಾರುಣ್ಯವನ್ನು ಕಾಪಾಡಿಕೊಂಡು ಸದಾ ಲವಲವಿಕೆಯಿಂದ ಇರಲು ನಾವು ಬಳಸುವ ಆಹಾರಗಳ ಪಾತ್ರ ಬಹಳಷ್ಟಿದೆ ಎಂಬುದು ಮಾತ್ರ ನಿಜ.

ಆರೋಗ್ಯಕರವಾದ ಸೂಪರ್ ಆಹಾರಗಳು ಯಾವುವು ಎಂಬುದನ್ನು ಸಾಕಷ್ಟು ವರ್ಷಗಳಿಂದ ಕಂಡುಕೊಂಡಿದ್ದೇವೆ. ಆಹಾರದ ಬಗ್ಗೆ ನಾವು ಹೆಚ್ಚು ಅರ್ಥ ಮಾಡಿಕೊಂಡು ಸಾಕಷ್ಟು ಬದಲಾಗಿದ್ದೇವೆ. ಸಸ್ಯಗಳ ಆಹಾರ ರಾಸಾಯನಿಕದಿಂದ ಅರೋಗ್ಯ ಪ್ರಯೋಜನಗಳನ್ನು ಸಂಶೋಧಕರು ನೀಡಿದ್ದಾರೆ. ಈ ಆಹಾರಗಳಲ್ಲಿರುವ ಫೈಟೋಕೆಮಿಕಲ್ಸ್ ಮತ್ತು ಆಂಟಿ ಆಕ್ಸಿಡೆಂಟ್ ರೋಗಗಳನ್ನು ತಡೆಗಟ್ಟುವ ಗುಣಗಳನ್ನು ಹೊಂದಿವೆ.ಆದ್ದರಿಂದ ಈಗ ಬೇರೆಬೇರೆ ರೀತಿಯ ಆಹಾರಗಳನ್ನು ತಿನ್ನಿ ಮತ್ತು ಆರೋಗ್ಯವಾಗಿರಿ.ತಾರುಣ್ಯ ನಿಮ್ಮದಾಗಿಸಿಕೊಂಡು ಸದಾ ಲವಲವಿಕೆಯಿಂದಿರಿ.

1.ಸೇಬು/ದ್ರಾಕ್ಷಿ/ಚೆರ್ರಿ/ಸ್ಟ್ರಾ ಬೆರ್ರಿ

1.ಸೇಬು/ದ್ರಾಕ್ಷಿ/ಚೆರ್ರಿ/ಸ್ಟ್ರಾ ಬೆರ್ರಿ

ಸೇಬುವಲ್ಲಿರುವ ಫೈಬರ್ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡಲು ಸಹಕರಿಸುತ್ತದೆ ಮತ್ತು ಉಳಿದ ಹಣ್ಣುಗಳು ಕ್ಯಾನ್ಸರ್ ಸೆಲ್ಸ್ ಗಳ ವಿರುದ್ಧ ಹೋರಾಡಿ ಕ್ಯಾನ್ಸರ್ ಅನ್ನು ತಡೆಯುವ ಗುಣವನ್ನು ಹೊಂದಿದೆ.

2.ಕೋಸುಗಡ್ಡೆ

2.ಕೋಸುಗಡ್ಡೆ

ಬ್ರಾಸಿಕಾ ವಿಧಕ್ಕೆ ಸಂಬಂಧಿಸಿದ ಎಲೆ ಕೋಸು,ಹೂ ಕೋಸು,ಬ್ರೋಸಲ್ಸ್ ಮೊಗ್ಗುಗಳು ಇವುಗಳಲ್ಲಿ ರೋಗ ವಿರೋಧಿ ಗುಣಗಳಿವೆ.ಬ್ರೋಕೊಲಿ ತರಕಾರಿಯಲ್ಲಿರುವ ಬೀಟಾ ಕ್ಯಾರೊಟಿನ್ ಮತ್ತು indolesglucoinnolates ,ಐಸೊಥಿಯೊಸಿಯನೆಟ್ಗಳು ಕ್ಯಾನ್ಸರ್ ಸೆಲ್ಸ್ ಅನ್ನು ಕೊಳ್ಳುವ ಗುಣವನ್ನು ಹೊಂದಿದೆ.

3.ಮೆಣಸಿನ ಕಾಯಿ/ಕಾಳು

3.ಮೆಣಸಿನ ಕಾಯಿ/ಕಾಳು

ಮೆಣಸಿನ ಕಾಯಿ ಹೊಟ್ಟೆಗೆ ಹಾನಿ ಮಾಡುತ್ತದೆ ಎಂದು ಭಾವಿಸಲಾಗಿದೆ. ಆದರೆ ತಜ್ಞರು ಈಗ ಮೆಣಸಿನ ಕಾಯಿ ಸೌಮ್ಯ ಉದ್ರೇಕಕಾರಿ ಆಗಿದ್ದು ಹುಣ್ಣುಗಳು ಮತ್ತು ಜೀವಕೋಶಗಳ ಹಾನಿಯನ್ನು ತಡೆಯುವ ಗುಣ ಇದರಲ್ಲಿದೆ ಎಂದು ಸಾಬೀತುಪಡಿಸಿದ್ದಾರೆ,ಮತ್ತು ಇದರಲ್ಲಿ ವಿಟಮಿನ್ ಸಿ,ಆಂಟಿ ಆಕ್ಸಿಡೆಂಟ್ ಗಳಿವೆ ಎನ್ನಲಾಗಿದೆ.ಚಿಲ್ಲಿಯಲ್ಲಿರುವ ಕ್ಯಾಪ್ಸಾಸಿನ್ ಆಂಟಿ ಆಕ್ಸಿಡೆಂಟ್ ಗೆ ಉತ್ಕರ್ಷಣೆ ನೀಡುವ ಮೂಲಕ ವಿಷಮುಕ್ತಗೊಳಿಸುತ್ತದೆ.

4.ಸಿಟ್ರಸ್ ಹಣ್ಣುಗಳು

4.ಸಿಟ್ರಸ್ ಹಣ್ಣುಗಳು

ಕಿತ್ತಳೆ, ಸಿಹಿ ನಿಂಬೆ, ದ್ರಾಕ್ಷಿ ಹಣ್ಣು, ನಿಂಬೆ ಇತ್ಯಾದಿ ವಿಟಮಿನ್ ಸಿ ಇಂದ ಕೂಡಿವೆ ಮತ್ತು ಅಧ್ಯಯನದ ಪ್ರಕಾರ ಇದು ಕರ್ಸಿನೋಜೆನ್ (ಕ್ಯಾನ್ಸರ್ ಸೆಲ್ಸ್)ಅನ್ನು ಒಡೆದು ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ.

5.ಬೆಳ್ಳುಳ್ಳಿ ಮತ್ತು ಈರುಳ್ಳಿ

5.ಬೆಳ್ಳುಳ್ಳಿ ಮತ್ತು ಈರುಳ್ಳಿ

ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರಿನ್ ಕಡಿಮೆ ಮಾಡಿ ರಕ್ತದಲ್ಲಿ ಒಳ್ಳೆಯ HDL ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ.ಇದು ರಕ್ತದೊತ್ತಡ ಕಡಿಮೆ ಮಾಡಿ ಪ್ರತಿಜೀವಕ ಕಣಗಳನ್ನು ಹೆಚ್ಚಿಸುತ್ತದೆ. ಅಲಿಯಂ ಅಂಶ ಗಡ್ಡೆ ಈರುಳ್ಳಿ,ಸ್ಪ್ರಿಂಗ್ ಈರುಳ್ಳಿ,ಸಣ್ಣ ಈರುಳ್ಳಿ ಗಳಲ್ಲಿ ಕೂಡ ಕಂಡು ಬರುತ್ತದೆ ಮತ್ತು ಇದು ಹೃದಯ ಮತ್ತು ಯಕೃತ್ತಿನ ಸಮಸ್ಯೆಗಳನ್ನು ನಿವಾರಿಸುತ್ತದೆ.

6.ಗ್ರೀನ್ ಟೀ

6.ಗ್ರೀನ್ ಟೀ

ಸಂಶೋಧನೆಯ ಮೂಲಕ ಗ್ರೀನ್ ಟೀ ಯಲ್ಲಿ ಕ್ಯಾನ್ಸರ್ ಅನ್ನು ಕೊಳ್ಳುವ ಗುಣಗಳಿವೆ ಎಂದು ತಿಳಿಸಲಾಗಿದೆ.ಕ್ಯಾಚಿನ್ಸ್ ನಲ್ಲಿ ನಿರ್ಧಿಷ್ಟವಾಗಿ ಪಾಲಿಫಿನಾಲ್ ಗಳು (ಉತ್ಕರ್ಷಣ ನಿರೋಧಕ ಒಂದು ವರ್ಗ) ಸೇರಬೇಕು,ಆಗ ಪರಿಣಾಮ ಬೀರುತ್ತದೆ.ಗ್ರೀನ್ ಟೀಯಲ್ಲಿ ಪಿತ್ತಜನಕಾಂಗ ಮತ್ತು ಹೃದಯ ರೋಗವನ್ನು ತಡೆಯುವ ಗುಣ ಇದೆ.

7. ಸೊಪ್ಪುಗಳು

7. ಸೊಪ್ಪುಗಳು

ಪಾಲಕ್,ಮೆಂತೆ ಸೊಪ್ಪು,ಅಮರ್ನತ್,ಪಾರ್ಸ್ಲೆ ,ಲೇಟ್ಯುಸ್ ಸೆಲರಿ ಇವುಗಳು ಬೀಟಾ - ಕ್ಯಾರೋಟಿನ್ ಹೊಂದಿರುವ ಉತ್ತಮ ಸೊಪ್ಪುಗಳಾಗಿವೆ. ಇವುಗಳಲ್ಲಿ ಕೆಲವು ಕ್ಯಾಲ್ಸಿಯಂ,ಕಬ್ಬಿನದಂಶ,ಫೋಲಿಕ್ ಆಮ್ಲ,ವಿಟಮಿನ್ ಸಿ ಮತ್ತು ಗ್ಲುತಾಥಿಯೊನ್ ಅಂಶಗಳಿವೆ.ಪಾಲಕ್ ಸೊಪ್ಪು ಕ್ಯಾನ್ಸರ್ ನ ವಿರುದ್ಧ ಹೋರಾಡುವ ಗುಣ ಹೊಂದಿದೆ ಎನ್ನಲಾಗಿದೆ.

8.ಓಟ್ಸ್

8.ಓಟ್ಸ್

ಓಟ್ಸ್ ಒಂದು ಉತ್ತಮ ಹೃದಯ ಔಷಧಿ ಎನ್ನಬಹುದು.ಅರ್ಧ ಕಪ್ ನಷ್ಟು ಒಣ ಓಟ್ ನುಚ್ಚು ಅಥವಾ ಒಂದು ಕಪ್ ನಷ್ಟು ಓಟ್ ಮೀಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮತ್ತು ರಕ್ತದಲ್ಲಿ ಸಕ್ಕರೆ ಅಂಶವನ್ನು ಸಮತೋಲನ ಮಾಡುವ ಗುಣವನ್ನು ಹೊಂದಿದೆ.

9.ಮೀನು

9.ಮೀನು

ಬಂಗಡೆ, ಸಾಲ್ಮನ್, ಟ್ಯೂನಾ, ಸಾರ್ಡೀನ್ಗಳು, ಹೆರ್ರಿಂಗ್, ಟ್ರೌಟ್ ಈ ಸಮುದ್ರ ಆಹಾರದಲ್ಲಿ ಒಮೆಗಾ -3 ಕೊಬ್ಬಿನ ಆಮ್ಲಗಳು ಹೆಚ್ಚಿರುತ್ತವೆ. ಇವು ಹೃದಯಾಘಾತ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟುತ್ತದೆ. ಒಮೆಗಾ - ೩ ಕೊಬ್ಬಿನಂಶ ಮಧುಮೇಹ,ಸಂಧಿವಾತ,ಕ್ಯಾನ್ಸರ್ ಸೋರಿಯಾಸಿಸ್ ಮತ್ತು ಅಲ್ಸರ್ ಗಳನ್ನೂ ತಡೆಗಟ್ಟುವ ಗುಣವನ್ನು ಹೊಂದಿದೆ.

10.ಆಲೀವ್ ಎಣ್ಣೆ

10.ಆಲೀವ್ ಎಣ್ಣೆ

ಅತಿ ಹೆಚ್ಚು ತೂಕ ಕೂಡ ಒಳ್ಳೆಯದಲ್ಲ.ಅಪರ್ಯಾಪ್ತ (MUFA)ಕೊಬ್ಬುಗಳನ್ನು ಹೊಂದಿದ ಎಣ್ಣೆ ದೇಹಕ್ಕೆ ಒಳ್ಳೆಯದು.ಆಲೀವ್ ಎಣ್ಣೆಯಲ್ಲಿ (MUFA) ಇದನ್ನು ಕಾಣಬಹುದು.

11.ಪಪ್ಪಾಯಿ ಅಥವಾ ಕ್ಯಾರೆಟ್

11.ಪಪ್ಪಾಯಿ ಅಥವಾ ಕ್ಯಾರೆಟ್

ಕೇಸರಿ ಅಥವಾ ಹಳದಿ ಬಣ್ಣದಲ್ಲಿರುವ ಯಾವುದೇ ಹಣ್ಣುಗಳು ಉದಾಹರಣೆಗೆ ಮಾವು,ಕುಂಬಳಕಾಯಿ,ಆಪ್ರಿಕಾಟ್,ಗೆಣಸು ಇವುಗಳಲ್ಲಿ ವಿಟಮಿನ್ ಸಿ ಮತ್ತು ಬೀಟಾ ಕ್ಯಾರೋಟಿನ್ ಅಧಿಕವಾಗಿ ಇರುವುದರಿಂದ ಇದು ಆರೋಗ್ಯಕ್ಕೆ ಉಪಯುಕ್ತ.ಪಪ್ಪಾಯಿ ಹಣ್ಣಿನಲ್ಲಿ ಜೀರ್ಣ ಕ್ರಿಯೆ ಸುಗಮಗೊಳಿಸುವ ಶಕ್ತಿ ಇದೆ.

12.ಸೋಯಾ ಉತ್ಪನ್ನಗಳು

12.ಸೋಯಾ ಉತ್ಪನ್ನಗಳು

ಸೋಯಾಬೀನ್,ಸೋಯಾ ಹಿಟ್ಟು,ಸೋಯಾ ಹಾಲು ಇವುಗಳಲ್ಲಿ ಕೊಬ್ಬಿನಂಶ ಕಡಿಮೆ ಇರುತ್ತದೆ ಮತ್ತು ಕ್ಯಾಲ್ಸಿಯಂ ಹೇರಳವಾಗಿ ದೊರಕುತ್ತದೆ.

13.ಟೊಮೆಟೊ

13.ಟೊಮೆಟೊ

ಕ್ಯಾನ್ಸರ್ ರೋಗ ನಿರೋಧಕ ಗುಣಗಳನ್ನು ಹೊಂದಿದ ಲೈಕೊಪೇನ್ ಮತ್ತು ಕ್ಯಾರಿಟೆನೈಡ್ ಅಂಶ ಈ ಟೊಮೆಟೊದಲ್ಲಿರುತ್ತದೆ.ಇದರಲ್ಲಿ coumaric acid ಮತ್ತು chlorogenic acid ಇರುತ್ತದೆ ಇದು ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ.

14.ಮೊಸರು

14.ಮೊಸರು

ಅಧ್ಯಯನದ ಪ್ರಕಾರ ಮೊಸರಿನಲ್ಲಿ ಇರುವ ಬ್ಯಾಕ್ಟೀರಿಯಗಳು ಜೀರ್ಣ ಕ್ರಿಯೆಗೆ ಸಹಕರಿಸುತ್ತದೆ.ಇದರಲ್ಲಿರುವ ಕ್ಯಾಲ್ಸಿಯಂ ಅಂಶ ಆಸ್ಟಿಯೊಪೊರೋಸಿಸ್ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ.

ಆದ್ದರಿಂದ ಇವೆಲ್ಲವುಗಳನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಉಪಯೋಗಿಸಿ ಮತ್ತು ತಾರುಣ್ಯ ನಿಮ್ಮದಾಗಿಸಿಕೊಳ್ಳಿ.

English summary

14 Foods that stop ageing

These foods are full of antioxidants and phytochemicals that help combat degenerative diseases. Even though it is unclear how most phytochemicals work, their beneficial effects are apparent. So for now, variety is the key and the more the better.
Story first published: Friday, August 23, 2013, 18:22 [IST]
X
Desktop Bottom Promotion