For Quick Alerts
ALLOW NOTIFICATIONS  
For Daily Alerts

ನಿಮ್ಮ ಅಂದವನ್ನು ನಿಮ್ಮ ಕೈಯಾರೆ ಹಾಳು ಮಾಡಬೇಡಿ!

By Super
|

ತ್ವಚೆಯ ಆರೋಗ್ಯ ಇಂದಿನ ಫ್ಯಾಷನೇಬಲ್ ಜಗತ್ತಿಗೆ ಬಹಳ ಅಗತ್ಯ. ತ್ವಚೆ ವಯಸ್ಸಾದಂತೆ ಕಂಡರೆ ಇದರಿಂದಲೇ ನಿಮ್ಮ ವಯಸ್ಸನ್ನು ನಿರ್ಧರಿಸುವ ಜಗತ್ತು ಇಂದಿನದು. ಜೊತೆಗೆ ಇಂದಿನ ಕಾಲದ ವಿಧ ವಿಧದ ಉಡುಪುಗಳನ್ನು ತೊಡುವಾಗ ಚರ್ಮದ ಆರೋಗ್ಯ ಮತ್ತು ಹೊಳಪು ಸದಾ ಕಾಲ ಉತ್ತಮವಾಗಿರಬೇಕು. ಚರ್ಮದ ಆರೋಗ್ಯ ಉತ್ತಮವಾಗಿರಬೇಕು ಎಂದರೆ ಆಹಾರ ಮತ್ತು ಸೌಂದರ್ಯ ವರ್ಧಕ ಮತ್ತು ಕ್ರೀಮ್ ಎಲ್ಲವನ್ನೂ ಬಳಸಬೇಕಾಗಬಹುದು. ಆದರೆ ಎಲ್ಲವನ್ನೂ ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎಂಬುದರ ಬಗ್ಗೆ ತಿಳಿದುರಬೇಕು.

ಯಾರೋ ಬಳಸುತ್ತಿದ್ದಾರೆ ಎಂದ ಮಾತ್ರಕ್ಕೆ ಆ ಕ್ರೀಮ್ ನಿಮ್ಮ ಚರ್ಮಕ್ಕೂ ಸರಿ ಹೊಂದುತ್ತದೆ ಎಂದಲ್ಲ. ಎಷ್ಟೇ ದುಬಾರಿ ಕ್ರೀಮ್ ಆಗಿದ್ದರೂ ಎಲ್ಲಾ ಚರ್ಮಗಳಿಗೆ ಸರಿಹೊಂದುತ್ತದೆ ಎಂದಿಲ್ಲ. ಹಾಗಾಗಿ ನಿಮ್ಮ ಚರ್ಮಕ್ಕೆ ಸರಿಹೊಂದುವ ಮತ್ತು ಯಾವುದೇ ಅಡ್ಡ ಪರಿಣಾಮವನ್ನು ಮಾಡದ ಕ್ರೀಮ್ ಗಳನ್ನೇ ಬಳಸಿ. ಇದರ ಜೊತೆಗೆ ಇನ್ನೂ ಕೆಲವು ಅಭ್ಯಾಸಗಳು ನೀವು ಮಾಡದೇ ಇರಬೇಕಾಗಬಹುದು. ನಿಮ್ಮ ತ್ವಚೆ ಸೌಂದರ್ಯವನ್ನು ಕಾಪಾಡಲು ಮತ್ತು ನಿಮ್ಮ ಯೌವನದ ಕಳೆ ಹೆಚ್ಚಿಸಲು ಕೆಲವು ವಿಷಯಗಳನ್ನು ಗಮನದಲ್ಲಿಟ್ಟರೆ ಒಳ್ಳೆಯದು. ಆ ನಿಟ್ಟಿನಲ್ಲಿ ಇಲ್ಲಿ ಹೇಳಿರುವ ಟಿಪ್ಸ್ ನಿಮ್ಮಸಹಾಯಕ್ಕೆ ಬರುವುದು.

1.ನಿಮ್ಮ ಆಹಾರವೇ ನಿಮ್ಮನ್ನು ರಚಿಸುತ್ತದೆ

1.ನಿಮ್ಮ ಆಹಾರವೇ ನಿಮ್ಮನ್ನು ರಚಿಸುತ್ತದೆ

ಹೌದು! ನೀವು ತಿನ್ನುವ ಆಹಾರವೇ ನಿಮ್ಮ ಚರ್ಮದ ಸೌಂದರ್ಯವನ್ನು ಮತ್ತು ಆರೋಗ್ಯವನ್ನು ನಿರ್ಧರಿಸುತ್ತದೆ. ನಿಮಗೆ ತೈಲಮಯ ಚರ್ಮ ಬೇಡಾ ಎಂದಿದ್ದಲ್ಲಿ ಅಂತಹ ಆಹಾರವನ್ನು ಮತ್ತು ವಿಶೇಷವಾಗಿ ಜಂಕ್ ಫುಡ್ ಅನ್ನು ಆದಷ್ಟು ದೂರವಿಡಿ. ನಿಮ್ಮ ಚರ್ಮದ ಆರೋಗ್ಯಕಾಗಿ ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸಿ.

2.ಬ್ಲೀಚಿಂಗ್ ಸಾವಧಾನಗಳು

2.ಬ್ಲೀಚಿಂಗ್ ಸಾವಧಾನಗಳು

ನಿಮಗೆ ಮನೆಯಲ್ಲಿ ಬ್ಲೀಚಿಂಗ್ ಮಾಡಿಕೊಳ್ಳಲು ಸಮಯ ಇಲ್ಲದಿದ್ದರೆ ನೀವು ಧಾರಾಳವಾಗಿ ಸೆಲೂನ್ ಗಳಿಗೆ ಭೇಟಿ ನೀಡಬಹುದು. ಆದರೆ ಅವರು ಯಾವ ತರಹದ ಬ್ಲೀಚ್ ಅನ್ನು ಉಪಯೋಗಿಸುತ್ತಾರೆ ಎಂಬ ಬಗ್ಗೆ ಎಚ್ಚರಿಕೆ ವಹಿಸಿ. ಸೆಲೂನ್ ನಲ್ಲಿನ ಜನರು ನಿಮಗೆ ಹೆಸರುಗಳ ಒಂದು ದೊಡ್ಡ ಪಟ್ಟಿಯನ್ನೇ ನೀಡುತ್ತಾರೆ. ಹಾಗೂ ಅವುಗಳಲ್ಲಿ ಅವರ ಸಂಗ್ರಹದಲ್ಲಿ ಹೆಚ್ಚಾಗಿರುವುದನ್ನೇ ನಿಮಗೆ ಸೂಚಿಸುತ್ತಾರೆ. ಹೀಗಾಗಿ ಎಚ್ಚರಿಕೆ ವಹಿಸಿ. ನಿಮ್ಮ ಚರ್ಮಕ್ಕೆ ಸರಿಹೊಂದುವ ನೀವು ಉಪಯೋಗಿಸಿರುವ ಬ್ಲೀಚ್ ಅನ್ನೇ ಬಳಸಿ.

3.ಮೃದುವಾದ ಕರವಸ್ತ್ರವನ್ನು ಬಳಿಯಲ್ಲಿಟ್ಟುಕೊಳ್ಳಿ

3.ಮೃದುವಾದ ಕರವಸ್ತ್ರವನ್ನು ಬಳಿಯಲ್ಲಿಟ್ಟುಕೊಳ್ಳಿ

ನಿಮ್ಮ ಚರ್ಮವನ್ನು ತಿಕ್ಕುವ ಬದಲಾಗಿ ಮೃದುವಾದ ನಿಮ್ಮ ಕರವಸ್ತ್ರದಲ್ಲಿ ನಿಧಾನಕ್ಕೆ ಲಘುವಾಗಿ ತಟ್ಟಿ ಸ್ವಚ್ಛಮಾಡಿ. ಚರ್ಮ ಸ್ವಚ್ಛ ಮಾಡುವ ಕಾಗದಗಳನ್ನು ಬಳಸಿದರೂ ನಿಧಾನವಾಗಿ ಸ್ವಚ್ಛ ಮಾಡಿ. ಬೆವರು ಚರ್ಮ ರಂಧ್ರಗಳ ಮೂಲಕ ಬರುತ್ತದೆ ಆದ್ದರಿಂದ ಅವನ್ನು ಹೆಚ್ಚು ಹೆಚ್ಚು ಪ್ರಚೋದಿಸಿದಂತೆ ಬೆವರುವುದು ಹೆಚ್ಚು. ನೀವು ಹೊರಗೆ ಹೋಗಿ ದುಡಿಯುತ್ತೀರಿ ಎಂದಾದರೆ ಖಂಡಿತವಾಗಿ ಕರವಸ್ತ್ರ ಜೊತೆಗಿರಲಿ.

4.ಸನ್ ಕ್ರೀಮ್ ಅನ್ನು ಮೋಡ ಕವಿದ ದಿನಗಳಲ್ಲೂ ಬಳಸಿ

4.ಸನ್ ಕ್ರೀಮ್ ಅನ್ನು ಮೋಡ ಕವಿದ ದಿನಗಳಲ್ಲೂ ಬಳಸಿ

ಹೆಚ್ಚು ಬಿಸಿಲಿಲ್ಲದ ದಿನ ನಿಮ್ಮ ಚರ್ಮವನ್ನು ಹಾಗೆಯೇ ಬಿಟ್ಟು ಬಿಡುವ ದಿನವಲ್ಲ. ಅಂತಹ ದಿನಗಳಲ್ಲೂ ನೀವು ಚರ್ಮಕ್ಕೆ ರಕ್ಷಣೆ ಕೊಡುವುದು ಅಗತ್ಯವಾಗಿರುತ್ತದೆ. ಹಾಗಾಗಿ ಅಂತಹ ದಿನಗಳಲ್ಲೂ ಸನ್ ಕ್ರೀಮ್ ಅನ್ನು ಹಚ್ಚಿಯೇ ಹೊರಗಡೆ ಹೋಗಿ. ಇದು ನಿಮ್ಮ ಚರ್ಮವನ್ನು ನೆರಳಾತೀತ ವಿಕಿರಣಗಳಿಂದ ರಕ್ಷಿಸುತ್ತದೆ.

5.ವಿಟಮಿನ್ ಡಿ ಹೆಚ್ಚು ಸಿಗುವ ಸಮಯದಲ್ಲಿ ಹೊರಹೋಗಿ

5.ವಿಟಮಿನ್ ಡಿ ಹೆಚ್ಚು ಸಿಗುವ ಸಮಯದಲ್ಲಿ ಹೊರಹೋಗಿ

ಸೂರ್ಯನ ಬೆಳಕಿನಲ್ಲಿ ವಿಟಮಿನ್ ಡಿ ಧಾರಾಳವಾಗಿ ದೊರೆಯುತ್ತಿದ್ದು ಇದು ನಿಮ್ಮ ಚರ್ಮದ ಆರೋಗ್ಯಕ್ಕೆ ಬಹಳ ಅಗತ್ಯ. ಹೀಗಾಗಿ ಸೂರ್ಯನ ಬೆಳಕಿಗೆ ನಿಮ್ಮ ಚರ್ಮವನ್ನು ಒಡ್ಡುವುದೂ ಬಹಳ ಅಗತ್ಯ. ಬೆಳಗಿನ ಸಮಯದಲ್ಲಿ ಸೂರ್ಯನ ಬೆಳಕು ಅಷ್ಟೊಂದಿ ತೀಕ್ಷ್ಣವಾಗಿ ಇರುವುದಿಲ್ಲ ಹೀಗಾಗಿ ಅಂತಹ ಸಮಯದಲ್ಲಿ ಹೊರಗಡೆ ಒಂದು ಸುತ್ತು ತಿರುಗಾಡಿ ಬರುವುದು ಆರೋಗ್ಯಕ್ಕೆ ಮತ್ತು ಚರ್ಮಕ್ಕೂ ಬಹಳ ಅಗತ್ಯ.

6.ಧೂಮಪಾನ ಬೇಡ

6.ಧೂಮಪಾನ ಬೇಡ

ಧೂಮಪಾನ ಎಂದ ಕೂಡಲೆ ಇದು ದೇಹದ ಒಳ ಭಾಗಗಳ ಮೇಲೆ ಮಾಡುವ ಪರಿಣಾಮವೇ ನೆನಪಾಗುತ್ತದೆ. ಆದರೆ ಇದು ಚರ್ಮದ ಮೇಲೂ ಪ್ರಭಾವ ಬೀರುತ್ತದೆ. ಧೂಮಪಾನದಿಂದ ನಿಮ್ಮ ಚರ್ಮ ಬೇಗನೇ ವಯಸ್ಸಾಗುತ್ತದೆ ತನ್ನ ಹೊಳಪು ಕಳೆದುಕೊಳ್ಳುತ್ತದೆ ಹಾಗೂ ಚರ್ಮದ ಕ್ಯಾನ್ಸರ್ ಗೂ ಕಾರಣವಾಗಬಹುದು ಜೊತೆಗೆ ಕಣ್ಣಿನ ಆರೋಗ್ಯಕ್ಕೂ ಮಾರಕ.

7.ಮಲಗುವ ಮುನ್ನ ಮೇಕ್ ಅಪ್ ಅನ್ನು ತೆಗೆದು ಮಲಗಿ

7.ಮಲಗುವ ಮುನ್ನ ಮೇಕ್ ಅಪ್ ಅನ್ನು ತೆಗೆದು ಮಲಗಿ

ನಿಮ್ಮ ಚರ್ಮ ಸದಾ ಕಾಲ ಆರಾಮವಾಗಿ ಇರುವಂತೆ ನೋಡಿಕೊಳ್ಳಿ. ಮಲಗುವಾಗ ಮೇಕ್ ಅಪ್ ನೊಂದಿಗೆ ಮಲಗುವುದು ಅಷ್ಟೊಂದು ಸರಿಯಲ್ಲ. ಇದು ನಿಮ್ಮ ಚರ್ಮ ಎಣ್ಣೆಯಂತಾಗಲು ಕಾರಣವಾಗುತ್ತದೆ. ಬೆಳಗ್ಗೆ ಎದ್ದಾಗ ಆಯ್ಲೀ ಸ್ಕಿನ್ ಖಂಡಿತವಾಗಿರುತ್ತದೆ. ಹಾಗಾಗಿ ನೀವು ನಿಮ್ಮ ಕಛೇರಿ ಉಡುಪಲ್ಲಿ ಮಲಗುವುದಿಲ್ಲ ಎಂದಾದರೆ ಮೇಕ್ ಅಪ್ ನೊಂದಿಗೆ ಏಕೆ ಮಲಗುತ್ತೀರಿ.

8.ಮೇಕ್ ಅಪ್ ತೆಗೆಯುವ ಪಾಡ್ ಗಳನ್ನು ಬಳಸಿ

8.ಮೇಕ್ ಅಪ್ ತೆಗೆಯುವ ಪಾಡ್ ಗಳನ್ನು ಬಳಸಿ

ಮೇಕ್ ಅಪ್ ತೆಗೆಯಲು ಬೇರೇನಾದರೂ ರಾಸಾಯನಿಕವನ್ನು ಹಚ್ಚಿ ಉಜ್ಜಿ ತೆಗೆಯುವ ದಿನಗಳು ಈಗ ಇಲ್ಲ. ಈಗ ಮೇಕ್ ಅಪ್ ತೆಗೆಯಲು ಪಾಡ್ ಗಳು ಲಭ್ಯವಿವೆ ಇವುಗಳಿಂದ ಮೆಲ್ಲನೆ ಮುಖವನ್ನು ಒರೆಸಿದರೆ ಸಾಕು ಎಲ್ಲಾ ಮೇಕ್ ಅಪ್ ಸುಲಭವಾಗಿ ಹೋಗಿ ಬಿಡುತ್ತದೆ. ಇವು ಮೇಕ್ ಅಪ್ ತೆಗೆಯಲು ಒಳ್ಳೆಯದೇ ಆದರೂ ಇವನ್ನು ಬಳಸಿದ ಬಳಿಕ ನೀರಿನಲ್ಲಿ ನಿಮ್ಮ ಮುಖವನ್ನು ಸ್ವಚ್ಛವಾಗಿ ತೊಳೆಯಲು ನೆನಪಿಡಿ.

9.ಶೇವ್ ಮಾಡುವಾಗಿನ ಜಾಗೃತೆಗಳು

9.ಶೇವ್ ಮಾಡುವಾಗಿನ ಜಾಗೃತೆಗಳು

ಶೇವ್ ಮಾಡುವಾಗ ಶೇವ್ ಜೆಲ್ ಅಥವಾ ಕ್ರೀಮ್ ಅನ್ನು ಬಳಸುವುದನ್ನು ಮರೆಯದಿರಿ. ನೇರವಾಗಿ ರೇಜ಼ರ್ ಬಳಸುವುದು ಚರ್ಮಕ್ಕೆ ಹಾನಿಕರ. ಕೂದಲು ಬೆಳೆಯುವ ದಿಕ್ಕಿಗೆ ಮಾತ್ರ ಶೇವ್ ಮಾಡಿ ವಿರುದ್ಧ ದಿಕ್ಕಿಗೆ ಮಾಡುವುದನ್ನು ಬಿಟ್ಟು ಬಿಡಿ. ಸರಿಯಾಗಿ ಶೇವ್ ಮಾಡದಿದ್ದರೆ ಇದು ಬಹಳ ತ್ರಾಸದಾಯಕ ಎಂಬುದನ್ನು ನೆನಪಿಡಿ.

10.ಉಚಿತ ಮೇಕ್ ಅಪ್ ಗಳಿಗೆ ಮುಖ ಒಡ್ಡಬೇಡಿ

10.ಉಚಿತ ಮೇಕ್ ಅಪ್ ಗಳಿಗೆ ಮುಖ ಒಡ್ಡಬೇಡಿ

ಉಚಿತವಾಗಿ ಮೇಕ್ ಓವರ್, ಮೇಕ್ ಅಪ್ ಟಚ್ ಅಪ್ ಎನ್ನುವ ಕಡೆಗಳಲ್ಲಿ ಗಮನ ಕೊಡದೇ ಇರುವುದು ಕಷ್ಟ ಎನ್ನುವುದು ನಿಜ ಆದರೆ ಇದು ನಿಮ್ಮ ಚರ್ಮದ ಆರೋಗ್ಯಕ್ಕಾಗಿ ಅಗತ್ಯ. ಕೆಲವು ಮಾರ್ಕೆಟಿಂಗ್ ಮಾಡುವವರ ಟಾರ್ಗೆಟ್ ತಲುಪಲು ನಿಮ್ಮ ಚರ್ಮವನ್ನು ಪಣಕ್ಕೊಡ್ಡಬೇಡಿ. ಹೊಸ ಪ್ರಯೋಗಾತ್ಮಕ ವಸ್ತುಗಳು ನಿಮ್ಮ ಚರ್ಮಕ್ಕೆ ಹಾನಿಕರವಾಗುವ ಸಾಧ್ಯತೆಗಳಿವೆ.

11.ಎಲ್ಲಾ ವಸ್ತುಗಳು ನಿಮಗಲ್ಲ

11.ಎಲ್ಲಾ ವಸ್ತುಗಳು ನಿಮಗಲ್ಲ

ಒಂದು ಸೌಂದರ್ಯ ವರ್ಧಕ ನಿಮ್ಮ ಚರ್ಮಕ್ಕೆ ಸರಿ ಹೊಂದುವುದಿಲ್ಲ ಎಂದಾದರೆ ಎಲ್ಲರೂ ಬಳಸುತ್ತಾರೆ ಎಂದು ನೀವೂ ಬಳಸಬೇಕಾಗಿಲ್ಲ. ಎಲ್ಲಾ ವಸ್ತುಗಳು ನಿಮ್ಮ ಚರ್ಮಕ್ಕೆ ಒಳ್ಳೆಯದಲ್ಲ. ನಿಮ್ಮ ಹೊಸ ಬಟ್ಟೆಗಳನ್ನು ಸರಿಯಾಗಿ ತೊಳೆದು ಬಳಸುವುದು ಉತ್ತಮ.

12.ಕೊನೆಯ ಕ್ಷಣದ ವಧುವಿನ ಪ್ಯಾಕೇಜ್ ಪ್ರಯೋಗಗಳು

12.ಕೊನೆಯ ಕ್ಷಣದ ವಧುವಿನ ಪ್ಯಾಕೇಜ್ ಪ್ರಯೋಗಗಳು

ವಧುವಿನ ಅಲಂಕಾರಗಳು ಸುಂದರವಾಗಿರುತ್ತವೇನೋ ನಿಜ ಆದರೆ ಕೊನೆಯ ಕ್ಷಣದ ಮೇಕ್ ಅಪ್ ಗಳು ಬೇಡ. ಸರಿಯಾಗಿ ಗೊತ್ತಿರುವ ಮತ್ತು ತರಬೇತಿ ಹೊಂದಿರುವ ಮೇಕ್ ಅಪ್ ಮಾಡುವವರಿಂದ ಮಾತ್ರ ಮೇಕ್ ಅಪ್ ಮಾಡಿಸಿಕೊಳ್ಳಿ.

13.ಸ್ಕಿನ್ ಪ್ಯಾಕ್ ಮತ್ತು ಸ್ಕ್ರಬ್ ಗಳು

13.ಸ್ಕಿನ್ ಪ್ಯಾಕ್ ಮತ್ತು ಸ್ಕ್ರಬ್ ಗಳು

ನೀವು ನಿಮ್ಮ ಮುಖದ ಮೇಲೆ ಸ್ಕ್ರಬ್ ಅಥವಾ ಪ್ಯಾಕ್ ಅನ್ನು ಬಳಸಿದ್ದೀರಿ ಎಂದಾದರೆ ಕೂಡಲೇ ಸೂರ್ಯನ ಬೆಳಕಿಗೆ ಹೊಗಬೇಡಿ. ಸ್ಕ್ರಬ್ ಅಥವಾ ಪ್ಯಾಕ್ ಅನ್ನು ಬಳಸಿದ ಬಳಿಕ ಲೋಶನ್ ಅಥವಾ ಸನ್ ಸ್ಕ್ರೀಮ್ ಬಳಸಲು ಮರೆಯದಿರಿ.

ಈ ಎಲ್ಲಾ ಅಭ್ಯಾಸಗಳು ನಿಮ್ಮಲ್ಲಿವೆ ಎಂದಾದರೆ ಇಂದಿನಿಂದಲೇ ಇವುಗಳಿಂದ ದೂರವಿರಿ. ಈ ಎಲ್ಲವನ್ನೂ ದೂರವಿಟ್ಟು ನಿಮ್ಮ ಚರ್ಮವನ್ನು ಎಂದೆಂದಿಗೂ ಆರೋಗ್ಯಕರವಾಗಿಡಿ.

English summary

13 Things Not to Do for Forever Young Skin

You will be surprised to know, that how certain habits, that might seem harmless otherwise, are ruining your skin. So, here are the 13 things that you do need to keep in mind to keep your skin young and beautiful, always!
X
Desktop Bottom Promotion