ನಿಮಗೆ ಆಪ್ತವಾಗುವುದು ಈ ಫೇಶಿಯಲ್!

By:
Subscribe to Boldsky

You Do Facial At Home Only
ತ್ವಚೆ ಹೊಳಪನ್ನು ಹೆಚ್ಚಿಸಿ ಮುಖ ಆಕರ್ಷಕವಾಗಿ ಕಾಣಲು ಬ್ಯೂಟಿ ಪಾರ್ಲರ್ ಗಳಿಗೆ ಹೋಗಿ ತುಂಬಾ ದುಡ್ಡು ಸುರಿಯಬೇಕೆಂದಿಲ್ಲ. ನಿಮ್ಮ ತ್ವಚೆ ಆರೈಕೆಯನ್ನು ನೀವೇ ಮಾಡಬಹುದಾಗಿದೆ. ಈ ಕೆಳಗಿನ ಫೇಶಿಯಲ್ ವಿಧಾನಗಳನ್ನು ಪಾಲಿಸಿದ್ದೇ ಆದರೆ ಬ್ಯೂಟಿ ಪಾರ್ಲರ್ ಗಳಿಗೆ ಹೋಗಿ ಮಾಡಿಸಿದಷ್ಟೇ ಪ್ರಯೋಜವನ್ನು ಕಾಣಬಹುದು.

ಅನೇಕ ಬಗೆಯ ಫೇಶಿಯಲ್ ಮಾಡಬಹುದಾಗಿದ್ದು ಸುಲಭವಾಗಿ ಮಾಡಬಹುದಾದ ಕೆಲ ಫೇಶಿಯಲ್ ಗಳ ರೆಸಿಪಿ ಈ ಕೆಳಗೆ ನೀಡಲಾಗಿದೆ.

1. ಬಾಳೆಹಣ್ಣಿನ ಫೇಶಿಯಲ್: 1 ಚೆನ್ನಾಗಿ ಹಣ್ಣಾದ ಬಾಳೆಹಣ್ಣು, 1 ಚಮಚ ಜೇನು, 2-3 ಚಮಚ ನಿಂಬೆರಸ, ಹಾಲಿನ ಕೆನೆ 1/2 ಚಮಚ ಇವುಗಳನ್ನು ಚೆನ್ನಾಗಿ ಬೆರೆಸಿ ಮುಖಕ್ಕೆ ಲೇಪಿಸಿಕೊಂಡು ಮಸಾಜ್ ಮಾಡಿಕೊಳ್ಳಬೇಕು. ನಂತರ 15 ನಿಮಿಷ ಬಿಟ್ಟು ಮುಖ ತೊಳೆದುಕೊಳ್ಳಬೇಕು.ಈ ಫೇಶಿಯಲ್ ನಿಂದ ತ್ವಚೆಗೆ ಅವಶ್ಯಕವಿರುವ ವಿಟಮಿನ್ ಎ, ಬಿ, ಸಿ ಮತ್ತು ಇ ದೊರೆಯುವುದರಿಂದ ತ್ವಚೆ ನುಣುಪಾಗಿ ಕಲೆ ಮುಕ್ತವಾಗಿ ಹೊಳಪನ್ನು ಹೊಂದುವುದು.

2. ವೈನ್ ಫೇಶಿಯಲ್: ಕೆಂಪು ವೈನ್ ಗೆ ಜೇನು ಬೆರೆಸಿ 15 ನಿಮಿಷ ಮಸಾಜ್ ಮಾಡಬೇಕು. ನಂತರ ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳಬೇಕು. ಈ ರೀತಿ ವಾರಕ್ಕೊಮ್ಮೆ ಮಾಡಿದರೆ ಚರ್ಮದಲ್ಲಿನ ನಿರ್ಜೀವ ಕಣಗಳನ್ನು ಹೋಗಲಾಡಿಸಿ ರಕ್ತ ಸಂಚಲನವನ್ನು ಹೆಚ್ಚಿಸುತ್ತದೆ.

3. ಹರ್ಬಲ್ ಫೇಶಿಯಲ್: ಜೇನಿನ ಫೇಶಿಯಲ್: ಮೊಟ್ಟೆಯ ಬಿಳಿಯನ್ನು ಚೆನ್ನಾಗಿ ಕದಡಬೇಕು. ನಂತರ ಅದಕ್ಕೆ 1 ಚಮಚ ಎಣ್ಣೆಯನ್ನು ಸೇರಿಸಬೇಕು. ಈಗ ಜೇನನ್ನು ಸೇರಿಸಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು ಅಥವಾ 1 ಚಮಚ ಜೇನು, 1 ಮೊಟ್ಟೆಯ ಬಿಳಿ, 1/2 ಚಮಚ ಬಾದಾಮಿ ಎಣ್ಣೆ, 1 ಚಮಚ ಮೊಸರು ಸೇರಿಸಿ ಮಿಶ್ರ ಮಾಡಿ ಹಚ್ಚಿದರೆ ಒಳ್ಳೆಯದು.

4. ಟೊಮೆಟೊ ಫೇಶಿಯಲ್ : ಹಣ್ಣಾದ ಟೊಮೆಟೊ ಒಂದು, 1 ಚಮಚ ನಿಂಬೆ ರಸ, ಒಂದು ಚಮಚ ಓಟ್ ಮೀಲ್ಸ್ ಇವುಗಳ ಮಿಶ್ರಣವನ್ನು ಪೇಸ್ಟ್ ರೀತಿ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಡಬೇಕು. ನಂತರ ಬಿಸಿ ನೀರಿನಿಂದ ಮುಖ ತೊಳೆಯಬೇಕು.

ಸಲಹೆ:

* 18 ರಿಂದ 30 ವಯಸ್ಸಿನವರು ತಿಂಗಳಿಗೊಮ್ಮೆ ಕ್ಲೀನ್ ಅಪ್ ಮಾಡಿಸಿಕೊಳ್ಳುವುದು, ಹರ್ಬಲ್ ಫೇಶಿಯಲ್ ಮಾಡಿಸಿಕೊಳ್ಳುವುದು ಒಳ್ಳೆಯದು. ಇದರಿಂದ ತ್ವಚೆಯಲ್ಲಿ ಮಾಯಿಶ್ಚರೈಸರ್ ಕಾಪಾಡಿಕೊಳ್ಳಬಹುದು.

* 30ರ ಆಸುಪಾಸಿನವರು ಫ್ರೂಟ್ ಫೇಶಿಯಲ್ ಮಾಡಿಕೊಳ್ಳುವುದು ಒಳ್ಳೆಯದು

* 40ರ ನಂತರ ಪಪ್ಪಾಯಿ ಹಣ್ಣುಗಳ ಫೇಶಿಯಲ್ ಒಳ್ಳೆಯದು.

* ಫೇಶಿಯಲ್ ಮಾಡುವ ಮುನ್ನ ಮುಖಕ್ಕೆ ಸ್ಟೀಮಿಂಗ್ ಕೊಟ್ಟು ನಂತರ ಫೇಶಿಯಲ್ ಮಾಡಿದರೆ ತ್ವಚೆ ಹೊಳಪು ಹೆಚ್ಚುವುದು.

* ವಯಸ್ಸು 40 ದಾಟಿದವರು ಮುಖಕ್ಕೆ ಸ್ಟೀಮಿಂಗ್ ಕೊಡದಿರುವುದು ಒಳ್ಳೆಯದು.

* ಫೇಶಿಯಲ್ ಮಾಡಿ ಮುಖ ತೊಳೆದ ಬಳಿಕ ವಿಟಮಿನ್ ಇ ಎಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಿ.

Story first published: Friday, July 13, 2012, 11:24 [IST]
English summary

You Do Facial At Home Only | Tips For Beauty | ಮನೆಯಲ್ಲಿ ಮಾಡಬಹುದು ಫೇಶಿಯಲ್ | ಸೌಂದರ್ಯಕ್ಕಾಗಿ ಕೆಲ ಸಲಹೆಗಳು

We simply spend lots of money for beauty parlor, but if you try means you can do facial at home itself, from this facial you will get same effect as beauty parlor facial.
Please Wait while comments are loading...
Subscribe Newsletter