For Quick Alerts
ALLOW NOTIFICATIONS  
For Daily Alerts

ಮೊಡವೆ ಕಲೆ ನಿವಾರಣೆಗೆ 10 ವಿಧಾನ

|
Way To Get Clear Skin
ಮೊಡವೆ ಒಂದು ತ್ವಚೆ ಸಮಸ್ಯೆಯಾಗಲು ಕಾರಣ ಅದರಿಂದ ಉಂಟಾಗುವ ಕಲೆ. ಬರೀ ಮೊಡವೆ ಬಂದು ಹೋಗುವುದಾದರೆ ಅದರ ಬಗ್ಗೆ ಹೆಚ್ಚು ತಲೆ ಕೆಡಿಸುತ್ತಿರಲಿಲ್ಲ, ಆದರೆ ಮೊಡವೆ ಬಂದರೆ ಅದರಿಂದ ಕಲೆಗಳು ಉಂಟಾಗುತ್ತದೆ, ಕೆಲವರ ಮುಖದಲ್ಲಿ ಮೊಡವೆ ಬಂದು ಮುಖದ ಅಂದವನ್ನೇ ಕೆಡಿಸಿರುತ್ತದೆ.

ಆದ್ದರಿಂದ ಮೊಡವೆ ಕಲೆಗಳು ಉಂಟಾದರೆ ಅದನ್ನು ನಿರ್ಲಕ್ಷಿಸುವಂತೆ ಇಲ್ಲ, ಮೊಡವೆ ಕಲೆಗಳನ್ನು ಹೋಗಲಾಡಿಸಲು ಈ ಕೆಳಗಿನ ಸಲಹೆಗಳು ಸಹಕಾರಿಯಾಗುವುದು.

ಮೊಡವೆ ಕಲೆ ನಿವಾರಣೆ:

1. ತುಟಿಯ ಕೆಳಗೆ ಗಲ್ಲದಲ್ಲಿ ಕಾಣಿಸಿಕೊಳ್ಳುವ ವೈಟ್ ಹೆಡ್ಸ್‌ಗಳನ್ನು 15 ದಿನಕ್ಕೊಮ್ಮೆ ಕ್ಲೀನ್ ಮಾಡಿಕೊಳ್ಳಬೇಕು. ಈ ವೈಟ್ ಹೆಡ್ಸ್‌ಗಳೇ ಕೆನ್ನೆಯ ಮೇಲೆ ಮೊಡವೆ ಏಳಲು ಕಾರಣವಾಗುತ್ತದೆ. ಹಬೆ ತೆಗೆದುಕೊಳ್ಳುವುದು ವೈಟ್ ಹೆಡ್ಸ್ ಹೋಗಲಾಡಿಸುವ ಸುಲಭ ವಿಧಾನ. ಹಬೆ ತೆಗೆದುಕೊಂಡು ಹತ್ತಿಯಿಂದ ನಯವಾಗಿ ಉಜ್ಜಿ ತೆಗೆದರೆ ವೈಡ್ ಹೆಡ್ ಸುಲಭವಾಗಿ ನಿವಾರಣೆಯಾಗುತ್ತದೆ.

2. ಅಡುಗೆ ಸೋಡಾವನ್ನು ಮೊಡವೆ ಆದ ಜಾಗದ ಮೇಲೆ ನಯವಾಗಿ ಮಸಾಜ್ ಮಾಡಿದರೆ ಕ್ರಮೇಣ ಕಲೆ ನಿವಾರಣೆಯಾಗುತ್ತದೆ.

3. ಮೊಡವೆ ಅಥವಾ ಕಲೆಯ ಮೇಲೆ ಇಂಗು ಅಥವಾ ಗಂಧಧ ಪುಡಿಯಿಂದ ಮಸಾಜ್ ಮಾಡಿಕೊಂಡರೆ ಉತ್ತಮ ಪರಿಣಾಮ ಬೀರುತ್ತದೆ.

4. ವಾರಕ್ಕೆ 2-3 ಬಾರಿ ಟೊಮೆಟೊ ಅಥವಾ ಸೌತೆಕಾಯಿಯೊಂದಿಗೆ ನಿಂಬೆ ರಸ ಬೆರೆಸ ಮಸಾಜ್ ಮಾಡಿಕೊಂಡು 15 ನಿಮಿಷದ ನಂತರ ತೊಳೆದರೂ ಉತ್ತಮ ಪರಿಣಾಮ ನೀಡಬಹುದು. ಆದರೆ ಕೆಲವರಿಗೆ ನಿಂಬೆರಸ ಹೆಚ್ಚು ಬಳಸಿದರೆ ಗುಳ್ಳೆಗಳೂ ಏಳಬಹುದು. ಆದ್ದರಿಂದ ನಿಂಬೆ ರಸದಿಂದ ಅಲರ್ಜಿ ಉಂಟಾಗುವವರು ಈ ವಿಧಾನ ಬಳಸಬೇಡಿ.

5. ಮೊಡವೆಯ ಕಲೆ ನಿವಾರಣೆಗೆ ಹುಣಸೇ ರಸ ಅಥವಾ ಹುಳಿ ಮಜ್ಜಿಗೆ ಲೇಪಿಸಿದರೆ ಒಳ್ಳೆಯದು.

6. ನೀರಿಗೆ ಪುದೀನಾ ಎಲೆಗಳನ್ನು ಹಾಕಿ ಆ ನೀರನ್ನು ಕುದಿಸಿ ಅದರ ಹಬೆಯನ್ನು ಮುಖಕ್ಕೆ ಹಿಡಿದರೆ ಮೊಡವೆ ಕಲೆ ನಿವಾರಣೆಯಾಗುವುದು.

7. ಚಂದನ ಮತ್ತು ರೋಸ್ ವಾಟರ್ ಮಿಶ್ರ ಮಾಡಿ ಹಚ್ಚುತ್ತಾ ಬಂದರೆ ಮುಖದ ಕಲೆಗಳು ಕಡಿಮೆಯಾಗಿ ಮುಖದ ಕಾಂತಿ ಹೆಚ್ಚುತ್ತದೆ.

8. ತೆಂಗಿನೆಣ್ಣೆ, ಆಲೀವ್ ಎಣ್ಣೆ, ಲ್ಯಾವೆಂಡರ್ ಎಣ್ಣೆ ಈ ಎಣ್ಣೆಗಳಲ್ಲಿ ಯಾವುದಾದರು ಒಂದು ಎಣ್ಣೆಯನ್ನು ಹಚ್ಚುತ್ತಾ ಬಂದರೆ ಮುಖದಲ್ಲಿ ಕಲೆಗಳು ನಿವಾರಣೆಯಾಗುವುದು.

9. ವಿಟಮಿನ್ ಇ ಎಣ್ಣೆ ಅಥವಾ ಮಾತ್ರೆಯನ್ನು ಪೇಸ್ಟ್ ರೀತಿ ಮಾಡಿ ಮುಖಕ್ಕೆ ಹಚ್ಚಿದರೆ ಕಲೆಗಳೂ ಮಾಯವಾಗುತ್ತದೆ.

10. ಪ್ರತಿದಿನ ಲೋಳೆಸರ ಅಥವಾ ಅದರಿಂದ ತಯಾರಿಸಿದ ಜೆಲ್ ಬಳಸುತ್ತಿದ್ದರೆ ಮುಖದ ಕಲೆ ನಿವಾರಣೆಯಾಗವುದು.

ಸಲಹೆ:

* ಕರಿದ ಎಣ್ಣೆ ಪದಾರ್ಥಗಳನ್ನು ಮತ್ತು ಕೃತಕ ಬಣ್ಣ ಬಳಸಿ ತಯಾರಿಸಿದ ಆಹಾರವನ್ನು ಸೇವಿಸದಿದ್ದರೆ ಮೊಡವೆಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತದೆ.

* ಮಲಬದ್ಧತೆಯಾಗದಂತೆ ನೋಡಿಕೊಳ್ಳಬೇಕು. ಆಹಾರದಲ್ಲಿ ನಾರಿನಂಶ, ಒಣದ್ರಾಕ್ಷೆ, ಬಾಳೆಹಣ್ಣು, ತಂಪಿನ ಬೀಜ ಇವುಗಳು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ.

English summary

Way To Get Clear Skin | Tips To Reduce Scars | ಸ್ವಚ್ಛ ತ್ವಚೆ ಪಡೆಯಲು ಕೆಲ ಸಲಹೆಗಳು | ಮುಖದಲ್ಲಿರುವ ಕಲೆಗಳ ನಿವಾರಣೆಗೆ ಕೆಲ ಸಲಹೆಗಳು

To getting clear skin you have to fight against scars. If you are not treat pimple it will spoil your skin. There are some home remedies which will help you to get clear skin.
Story first published: Tuesday, July 3, 2012, 12:37 [IST]
X
Desktop Bottom Promotion